ಜೈಪುರ್, ಏಪ್ರಿಲ್ 27: ಜೈಪುರ್ನ ಸವಾಯ್ ಮಾನ್ಸಿಂಗ್ ಸ್ಟೇಡಿಯಂನಲ್ಲಿ ಶನಿವಾರ (ಏಪ್ರಿಲ್ 27) ನಡೆದ ಐಪಿಎಲ್ 45ನೇ ಪಂದ್ಯದಲ್ಲಿ ರೈಸರ್ಸ್ ಹೈದರಾಬಾದ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ತಂಡ 7 ವಿಕೆಟ್ ಗೆಲುವನ್ನಾಚರಿಸಿದೆ. ಈ ಗೆಲುವಿನೊಂದಿಗೆ ಆರ್ಆರ್ ಪ್ಲೇ ಆಫ್ ಪ್ರವೇಶದ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.
ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಸನ್ ರೈಸರ್ಸ್ ಹೈದರಾಬಾದ್ ಮನೀಶ್ ಪಾಂಡೆ 61 (36 ಎಸೆತ), ಡೇವಿಡ್ ವಾರ್ನರ್ 37, ಕೇನ್ ವಿಲಿಯಮ್ಸನ್ 13, ರಶೀದ್ ಖಾನ್ 17 ರನ್ ಸೇರಿಸಿದ್ದು ಬಿಟ್ಟರೆ ಉಳಿದ ಯಾರೂ 10ಕ್ಕೂ ಹೆಚ್ಚು ರನ್ ಕೂಡ ಗಳಿಸದೆ ವಿಕೆಟ್ ಒಪ್ಪಿಸಿದರು.
ಪಂದ್ಯದ Live ಸ್ಕೋರ್ ಕೆಳಗಿದೆ
ಹೈದರಾಬಾದ್ 20 ಓವರ್ಗೆ 8 ವಿಕೆಟ್ ಕಳೆದು 160 ರನ್ ಬಾರಿಸಿತು. ಎಸ್ಆರ್ಎಚ್ ಇನ್ನಿಂಗ್ಸ್ ವೇಳೆ ಆರ್ಆರ್ನ ವರುಣ್ ಆ್ಯರನ್, ಒಶಾನೆ ಥೋಮಸ್, ಶ್ರೇಯಸ್ ಗೋಪಾಲ್ ಮತ್ತು ಜಯದೇವ್ ಉನಾದ್ಕತ್ ತಲಾ 2 ವಿಕೆಟ್ ಪಡೆದು ಮಿಂಚಿದರು.
ಗುರಿ ಬೆನ್ನತ್ತಿದ ರಾಜಸ್ಥಾನ್ಗೆ ತಕ್ಕ ಮಟ್ಟಿನ ಬ್ಯಾಟಿಂಗ್ ಬೆಂಬಲ ದೊರೆಯಿತು. ಅಜಿಂಕ್ಯಾ ರಹಾನೆ 39, ಲಿಯಾಮ್ ಲಿವಿಂಗ್ಸ್ಟೋನ್ 44, ಸಂಜು ಸ್ಯಾಮ್ಸನ್ 48, ಸ್ಟೀವ್ ಸ್ಮಿತ್ 22 ರನ್ ನೆರವಿನೊಂದಿಗೆ ಆರ್ಆರ್ 19.1 ಓವರ್ಗೆ 3 ವಿಕೆಟ್ ನಷ್ಟದಲ್ಲಿ 161 ರನ್ನೊಂದಿಗೆ ವಿಜಯದ ಗೆರೆ ದಾಟಿತು.
ರಾಜಸ್ಥಾನ್ ರಾಯಲ್ಸ್ ತಂಡ: ಅಜಿಂಕ್ಯ ರಹಾನೆ, ಸಂಜು ಸ್ಯಾಮ್ಸನ್ (W), ಸ್ಟೀವನ್ ಸ್ಮಿತ್ (ಸಿ), ರಿಯಾನ್ ಪರಾಗ್, ಆ್ಯಷ್ಟನ್ ಟರ್ನರ್, ಲಿಯಾಮ್ ಲಿವಿಂಗ್ಸ್ಟೋನ್, ಸ್ಟುವರ್ಟ್ ಬಿನ್ನಿ, ಶ್ರೇಯಸ್ ಗೋಪಾಲ್, ಜಯದೇವ್ ಉನಾದ್ಕತ್, ವರುಣ್ ಆ್ಯರನ್, ಒಶೇನ್ ಥಾಮಸ್.
ಸನ್ ರೈಸರ್ಸ್ ಹೈದರಾಬಾದ್ ತಂಡ: ಡೇವಿಡ್ ವಾರ್ನರ್, ಕೇನ್ ವಿಲಿಯಮ್ಸನ್ (ಸಿ), ಮನೀಶ್ ಪಾಂಡೆ, ವಿಜಯ್ ಶಂಕರ್, ಶಕೀಬ್ ಅಲ್ ಹಸನ್, ವೃದ್ಧಿಮಾನ್ ಸಹಾ (ವಿಕೆ), ದೀಪಕ್ ಹೂಡಾ, ರಶೀದ್ ಖಾನ್, ಭುವನೇಶ್ವರ ಕುಮಾರ್, ಸಿದ್ಧಾರ್ಥ್ ಕೌಲ್, ಕೆ ಖಲೀಲ್ ಅಹ್ಮದ್.
ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ