ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಯುನಿವರ್ಸ್ ಬಾಸ್‌ ಕ್ರಿಸ್‌ ಗೇಲ್‌ಗೆ ರಾಮ್‌ನರೇಶ್ ಸರವಣ್ ತಿರುಗೇಟು

Ramnaresh Sarwan breaks silence about Chris Gayles allegation

ಪೋರ್ಟ್ ಆಫ್‌ ಸ್ಪೇನ್, ಮೇ 1: ವೆಸ್ಟ್ ಇಂಡೀಸ್ ಬ್ಯಾಟ್ಸ್‌ಮನ್ ಕ್ರಿಸ್‌ ಗೇಲ್ ಮಾಡಿದ್ದ ಆರೋಪಕ್ಕೆ ಅವರ ಮಾಜಿ ಟೀಮ್‌ಮೇಟ್ ರಾಮ್‌ನರೇಶ್ ಸರವಣ್ ಪ್ರತಿಕ್ರಿಯಿಸಿದ್ದಾರೆ. ತಾನು ಕೆರಿಬಿಯನ್ ಪ್ರೀಮಿಯರ್ ಲೀಗ್ (ಸಿಪಿಎಲ್) ತಂಡವಾದ ಜಮೈಕಾ ತಲೈವಾಸ್‌ ತೊರೆಯಲು ಸರವಣ್ ಕಾರಣ ಎಂದು ಗೇಲ್ ಹೇಳಿದ್ದರು. ಇದಕ್ಕೆ ಸರವಣ್ ಸ್ಪಷ್ಟನೆ ನೀಡಿದ್ದಾರೆ.

ಟೆಸ್ಟ್ ರ‍್ಯಾಂಕಿಂಗ್: ನಾಲ್ಕು ವರ್ಷದ ಬಳಿಕ ಅಗ್ರಸ್ಥಾನದಿಂದ ಕೆಳಕ್ಕಿಳಿದ ಭಾರತಟೆಸ್ಟ್ ರ‍್ಯಾಂಕಿಂಗ್: ನಾಲ್ಕು ವರ್ಷದ ಬಳಿಕ ಅಗ್ರಸ್ಥಾನದಿಂದ ಕೆಳಕ್ಕಿಳಿದ ಭಾರತ

'2020ರ ಸಿಪಿಎಲ್ ಸೀಸನ್‌ನಲ್ಲಿ ಜಮೈಕಾ ತಲೈವಾಸ್ ತಂಡದಿಂದ ಕ್ರಿಸ್‌ ಗೇಲ್ ಅವರನ್ನು ತೆಗೆದಿದ್ದಕ್ಕೆ ಸಂಬಂಧಿಸಿದ ಯಾವುದೇ ನಿರ್ಧಾರದಲ್ಲಿ ನಾನು ಪಾಲ್ಗೊಂಡಿಲ್ಲ,' ಎಂದು ರಾಮ್‌ನರೇಶ್ ಸರವಣ್ ತನ್ನ ಫೇಸ್ಬುಕ್‌ ಪೇಜ್‌ನಲ್ಲಿ ಹೇಳಿಕೊಂಡಿದ್ದಾರೆ.

ತೆಲುಗು ಸಾಂಗ್ 'ಬುಟ್ಟ ಬೊಮ್ಮ'ಗೆ ಹೆಜ್ಜೆ ಹಾಕಿದ ಡೇವಿಡ್ ವಾರ್ನರ್: ವೀಡಿಯೋತೆಲುಗು ಸಾಂಗ್ 'ಬುಟ್ಟ ಬೊಮ್ಮ'ಗೆ ಹೆಜ್ಜೆ ಹಾಕಿದ ಡೇವಿಡ್ ವಾರ್ನರ್: ವೀಡಿಯೋ

'ಆ ವೀಡಿಯೋದಲ್ಲಿ ಗೇಲ್ ಸುಳ್ಳು ಆರೋಪಗಳನ್ನು ಮಾಡಿದ್ದಾರೆ. ವ್ಯಕ್ತಿಗಳ ಒಳ್ಳೆಯ ಹೆಸರು ಮತ್ತು ಖ್ಯಾತಿಗೆ ಕಳಂಕ ತಂದಿದ್ದಾರೆ,' ಎಂದು ರಾಮ್‌ನರೇಶ್ ಹೇಳಿದ್ದಾರೆ. ಆವತ್ತು ಯೂ ಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ್ದ ಗೇಲ್, ಸರವಣ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಸರವಣ್ ಅವರನ್ನು ವಿಷದ ಹಾವು, ಕೊರೊನಾಗಿಂತ ಕೆಟ್ಟ ವ್ಯಕ್ತಿ ಎಂದೆಲ್ಲ ಎಂದು ಕರೆದಿದ್ದರು.

ಕ್ರಿಕೆಟ್ ಆಸ್ಟ್ರೇಲಿಯಾದ ಗುತ್ತಿಗೆ ಕಳೆದುಕೊಂಡ ಖವಾಜ, ಸ್ಟೋನಿಸ್ಕ್ರಿಕೆಟ್ ಆಸ್ಟ್ರೇಲಿಯಾದ ಗುತ್ತಿಗೆ ಕಳೆದುಕೊಂಡ ಖವಾಜ, ಸ್ಟೋನಿಸ್

'ನಾನು ಹೆಚ್ಚಿನ ಆಕ್ರಮಣಗಳ ಕೇಂದ್ರಬಿಂದುವಾಗಿದ್ದೆ. ಗೇಲ್ ಹೇಳಿದ್ದೆಲ್ಲ ಸರಿಯೆಂದು ನಾನಿವತ್ತು ಪ್ರತಿಕ್ರಿಯಿಸುತ್ತಿಲ್ಲ. ಆದರೆ ಒಬ್ಬ ವ್ಯಕ್ತಿ ಬಗ್ಗೆ ಜನರಿಗೆ ಕೆಟ್ಟ ಅಭಿಪ್ರಾಯ ಮೂಡಬಾರದು. ಗೇಲ್ ಜೊತೆಗೆ ನಾನು ಆಡಿದ್ದೇನೆ. ಎಲ್ಲದಕ್ಕಿಂತ ಮುಖ್ಯವಾಗಿ ಆತ ನನ್ನ ಕ್ಲೋಸ್ ಫ್ರೆಂಡ್. ಈ ಆರೋಪಗಳನ್ನು ಕೇಳಿ ನನಗೆ ಶಾಕ್ ಆಯ್ತು,' ಎಂದು ರಾಮ್‌ನರೇಶ್ ಹೇಳಿಕೊಂಡಿದ್ದಾರೆ.

Story first published: Friday, May 1, 2020, 15:21 [IST]
Other articles published on May 1, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X