ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್ 2019 ಲೀಗ್ ಹಂತದ ನಂತರ ರೋಹಿತ್, ಸ್ಟಾರ್ಕ್ ಮಿಂಚಿಂಗ್

Rampant Rohit, sensational Starc – World Cup group stage in numbers

ಐಸಿಸಿ ಕ್ರಿಕೆಟ್ ವಿಶ್ವಕಪ್ 2019 ಲೀಗ್ ಹಂತ ಮುಗಿದು ಈಗ ಮುಂದಿನ ಹಂತದ ಪಂದ್ಯಗಳನ್ನು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಲೀಗ್ ಹಂತದ ಕೊನೆಗೆ ಭಾರತದ ಬ್ಯಾಟ್ಸ್ ಮನ್ ರೋಹಿತ್ ಶರ್ಮ ಹಾಗೂ ಆಸ್ಟ್ರೇಲಿಯಾದ ಬೌಲರ್ ಮಿಚೆಲ್ ಸ್ಟಾರ್ಕ್ ಅವರು ಅಗ್ರಸ್ಥಾನದಲ್ಲಿದ್ದಾರೆ.

ವಿಶ್ವಕಪ್​ನಲ್ಲಿ 5 ಶತಕ ಸಿಡಿಸಿರುವ ರೋಹಿತ್​ಶರ್ಮ ಅವರು ಪಂದ್ಯದಿಂದ ಪಂದ್ಯಕ್ಕೆ ಹೊಸ ದಾಖಲೆಗಳನ್ನು ಸ್ಥಾಪಿಸುತ್ತಿದ್ದಾರೆ. ಸದ್ಯ ಈ ಟೂರ್ನಮೆಂಟ್ ನ ವೈಯಕ್ತಿಕ ಗರಿಷ್ಠ ರನ್​ದಾಖಲಿಸಿದ ಆಟಗಾರ ಎನಿಸಿಕೊಂಡಿದ್ದಾರೆ.

{headtohead_cricket_3_4}

ಲೀಗ್ ಹಂತದ ಎಲ್ಲಾ ಪಂದ್ಯಗಳಲ್ಲಿ ಬ್ಯಾಟ್ ಬೀಸಿರುವ ರೋಹಿತ್ ಅವರು 8 ಇನಿಂಗ್ಸ್​ ನಲ್ಲಿ​ 5 ಶತಕ ಹಾಗೂ ಒಂದು ಅರ್ಧಶತಕದ ನೆರವಿನಿಂದ 92.43 ರನ್​ ಸರಾಸರಿಯಂತೆ 647 ರನ್​ದಾಖಲಿಸಿದ್ದಾರೆ. ರೋಹಿತ್ 98.77 ಸ್ಟ್ರೈಕ್​ರೇಟ್ ಹೊಂದಿದ್ದಾರೆ.

ದಾಖಲೆಗಳ ಸರದಾರ 'ಹಿಟ್‌ಮ್ಯಾನ್‌' ರೋಹಿತ್‌ ಶರ್ಮಾದಾಖಲೆಗಳ ಸರದಾರ 'ಹಿಟ್‌ಮ್ಯಾನ್‌' ರೋಹಿತ್‌ ಶರ್ಮಾ

ಸೆಮಿಫೈನಲ್ ಪಂದ್ಯ ಜುಲೈ 09ರಂದು ಮ್ಯಾಂಚೆಸ್ಟರ್ ನಲ್ಲಿ ನಡೆಯಲಿದ್ದು, ನ್ಯೂಜಿಲೆಂಡ್ ತಂಡವನ್ನು ಟೀಂ ಇಂಡಿಯಾ ಎದುರಿಸಲಿದೆ. ಎರಡು ದಿನಗಳ ಬಳಿಕ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ಸೆಣಸಲಿವೆ. ಜುಲೈ 14ರಂದು ಅಂತಿಮ ಹಣಾಹಣಿ ನಿಗದಿಯಾಗಿದೆ.

ಲೀಗ್ ಹಂತದ ನಂತರ ಟಾಪ್ 05 ಬ್ಯಾಟ್ಸ್ ಮನ್, ರನ್ ಸರಾಸರಿ, ಬೌಂಡರಿ, ಸಿಕ್ಸರ್, ತ್ವರಿತಗತಿ ಶತಕ, ಬೌಲರ್, ಮಿತವ್ಯಯಿ ಬೌಲರ್, ಹೆಚ್ಚು ಸಿಕ್ಸ್ ಹೊಡೆಸಿಕೊಂಡ ಬೌಲರ್, ಹೆಚ್ಚು ರನ್ ತೆತ್ತ ಬೌಲರ್ ಎಲ್ಲ ಅಂಕಿ ಅಂಶಗಳು ಇಲ್ಲಿವೆ.

ಅತಿ ಹೆಚ್ಚು ರನ್ ಗಳಿಕೆ

ಅತಿ ಹೆಚ್ಚು ರನ್ ಗಳಿಕೆ

ಅತಿ ಹೆಚ್ಚು ರನ್ ಗಳಿಕೆ
1. ರೋಹಿತ್ ಶರ್ಮ (ಭಾರತ) : 647
2. ಡೇವಿಡ್ ವಾರ್ನರ್ (ಆಸ್ಟ್ರೇಲಿಯಾ) : 638
3. ಶಕೀಬ್ ಅಲ್ ಹಸನ್ (ಬಾಂಗ್ಲಾದೇಶ) : 606
4. ಅರೋನ್ ಫಿಂಚ್ (ಆಸ್ಟ್ರೇಲಿಯಾ): 507
5. ಜೋ ರೂಟ್ (ಇಂಗ್ಲೆಂಡ್) : 500
***
ಉತ್ತಮ ಬ್ಯಾಟಿಂಗ್ ಸರಾಸರಿ
1. ಕೇನ್ ವಿಲಿಯಮ್ಸನ್ (ನ್ಯೂಜಿಲೆಂಡ್) : 96.20
2. ರೋಹಿತ್ ಶರ್ಮ (ಭಾರತ) 92.42
3. ಶಕೀಬ್ ಅಲ್ ಹಸನ್ (ಬಾಂಗ್ಲಾದೇಶ) 86.57
4. ಡೇವಿಡ್ ವಾರ್ನರ್ (ಆಸ್ಟ್ರೇಲಿಯಾ) 79.75
5. ಸಮಿಯುಲ್ಲಾ ಶಿನ್ವಾರಿ (ಅಫ್ಘಾನಿಸ್ತಾನ) 74.00

ಅತಿ ಹೆಚ್ಚು ಬೌಂಡರಿ

ಅತಿ ಹೆಚ್ಚು ಬೌಂಡರಿ

ಅತಿ ಹೆಚ್ಚು ಬೌಂಡರಿ
1. ರೋಹಿತ್ ಶರ್ಮ (ಭಾರತ) :67
2. ಡೇವಿಡ್ ವಾರ್ನರ್ (ಆಸ್ಟ್ರೇಲಿಯಾ) : 64
3. ಶಕೀಬ್ ಅಲ್ ಹಸನ್ (ಬಾಂಗ್ಲಾದೇಶ) :60
4. ಜಾನಿ ಬೈರ್ಸ್ಟೋ (ಇಂಗ್ಲೆಂಡ್) : 55
5. ಬಾಬರ್ ಅಜಮ್ (ಪಾಕಿಸ್ತಾನ) : 50
**
ಅತಿ ಹೆಚ್ಚು ಸಿಕ್ಸರ್
1. ಇಯಾನ್ ಮಾರ್ಗನ್ (ಇಂಗ್ಲೆಂಡ್) : 22
2. ಅರೋನ್ ಫಿಂಚ್ (ಆಸ್ಟ್ರೇಲಿಯಾ) : 18
3. ರೋಹಿತ್ ಶರ್ಮ (ಭಾರತ) :14
4. ಕ್ರಿಸ್ ಗೇಲ್ (ವೆಸ್ಟ್ ಇಂಡೀಸ್) : 12
5. ಜಾನಿ ಬೈರ್ಸ್ಟೋ(ಇಂಗ್ಲೆಂಡ್) :11
**

ತ್ವರಿತಗತಿ ಶತಕ(ಕಡಿಮೆ ಎಸೆತಗಳಲ್ಲಿ)

ತ್ವರಿತಗತಿ ಶತಕ(ಕಡಿಮೆ ಎಸೆತಗಳಲ್ಲಿ)

ತ್ವರಿತಗತಿ ಶತಕ(ಕಡಿಮೆ ಎಸೆತಗಳಲ್ಲಿ)
1. ಇಯಾನ್ ಮಾರ್ಗನ್ (ಇಂಗ್ಲೆಂಡ್) 57 ಎಸೆತಗಳು, ಅಪ್ಘಾನಿಸ್ತಾನ ವಿರುದ್ಧ
2. ಜೋಸ್ ಬಟ್ಲರ್ (ಇಂಗ್ಲೆಂಡ್) 75, ಪಾಕಿಸ್ತಾನ ವಿರುದ್ಧ
3. ಕಾರ್ಲೊಸ್ ಬ್ರಥ್ ವೈಟ್ (ವೆಸ್ಟ್ ಇಂಡೀಸ್) 80, ನ್ಯೂಜಿಲೆಂಡ್ ವಿರುದ್ಧ
4. ಶಕೀಬ್ ಅಲ್ ಹಸನ್ (ಬಾಂಗ್ಲಾದೇಶ) 83, ವೆಸ್ಟ್ ಇಂಡೀಸ್ ವಿರುದ್ಧ
5. ರೋಹಿತ್ ಶರ್ಮ (ಭಾರತ) 95, ಪಾಕಿಸ್ತಾನ ವಿರುದ್ಧ
***

ಉತ್ತಮ ಬೌಲರ್

ಉತ್ತಮ ಬೌಲರ್

ಉತ್ತಮ ಬೌಲರ್
1. ಮಿಚೆಲ್ ಸ್ಟಾರ್ಕ್ (ಆಸ್ಟ್ರೇಲಿಯಾ),26 ವಿಕೆಟ್
2. ಮುಸ್ತಫಿಜುರ್ ರಹ್ಮಾ (ಬಾಂಗ್ಲಾದೇಶ) 20
3. ಲಾಕಿ ಫರ್ಗುಸನ್(ನ್ಯೂಜಿಲೆಂಡ್), ಜಸ್ ಪ್ರೀತ್ ಬೂಮ್ರಾ(ಭಾರತ), ಮೊಹಮ್ಮದ್ ಅಮೀರ್ (ಪಾಕಿಸ್ತಾನ) ಹಾಗೂ ಜೊಫ್ರಾ ಆರ್ಚರ್ (ಇಂಗ್ಲೆಂಡ್) ತಲಾ 17 ವಿಕೆಟ್.
**

ಮಿತವ್ಯಯಿ ಬೌಲರ್

ಮಿತವ್ಯಯಿ ಬೌಲರ್

ಮಿತವ್ಯಯಿ ಬೌಲರ್(7 ಇನ್ನಿಂಗ್ಸ್)
1. ಕಾಲಿನ್ ಡಿ ಗ್ರಾಂಡ್ ಹೋಮ್(ನ್ಯೂಜಿಲೆಂಡ್) 4.46
2. ಮುಜೀಬ್ ಉರ್ ರಹ್ಮಾನ್ (ಅಫ್ಘಾನಿಸ್ತಾನ) 4.47
3. ಜಸ್ ಪ್ರೀತ್ ಬೂಮ್ರಾ (ಭಾರತ) 4.48
4. ಮೊಹಮ್ಮದ್ ನಬಿ (ಅಫ್ಘಾನಿಸ್ತಾನ) 4.61
5. ಬೆನ್ ಸ್ಟೋಕ್ಸ್ (ಇಂಗ್ಲೆಂಡ್) 4.65
**
ಡಾಟ್ ಬಾಲ್ಸ್
1. ಜೊಫ್ರಾ ಆರ್ಚರ್ (ಇಂಗ್ಲೆಂಡ್) 300
2. ಪ್ಯಾಟ್ ಕಮಿನ್ಸ್ (ಆಸ್ಟ್ರೇಲಿಯಾ) 295
3. ಮಿಚೆಲ್ ಸ್ಟಾರ್ಕ್ (ಆಸ್ಟ್ರೇಲಿಯಾ) 288
4. ಟ್ರೆಂಟ್ ಬೌಲ್ಟ್ (ನ್ಯೂಜಿಲೆಂಡ್) 284
5. ಕಾಗಿಸೋ ರಬಾಡಾ (ದಕ್ಷಿಣ ಆಫ್ರಿಕಾ) 273
**

ಹೆಚ್ಚು ಸಿಕ್ಸರ್ ನೀಡಿದ ಬೌಲರ್

ಹೆಚ್ಚು ಸಿಕ್ಸರ್ ನೀಡಿದ ಬೌಲರ್

ಹೆಚ್ಚು ಸಿಕ್ಸರ್ ನೀಡಿದ ಬೌಲರ್
1. ರಶೀದ್ ಖಾನ್ (ಅಫ್ಘಾನಿಸ್ತಾನ) 14
2. ಯಜುವೇಂದ್ರ ಚಹಾಲ್ (ಭಾರತ) 13
3. ಮೊಹಮ್ಮದ್ ನಬಿ (ಅಫ್ಘಾನಿಸ್ತಾನ), ಅದಿಲ್ ರಶೀದ್ (ಇಂಗ್ಲೆಂಡ್)- ತಲಾ 10
5. ಶಕೀಬ್ ಅಲ್ ಹಸನ್ (ಬಾಂಗ್ಲಾದೇಶ), ದವ್ಲತ್ ಜದ್ರಾನ್ (ಅಫ್ಘಾನಿಸ್ತಾನ), ಗ್ಲೆನ್ ಮ್ಯಾಕ್ಸ್ ವೆಲ್ (ಆಸ್ಟ್ರೇಲಿಯಾ) ತಲಾ 9 ವಿಕೆಟ್
**
ರನ್ ನೀಡಿಕೆ
1. ಮುಸ್ತಫಿಜುರ್ ರಹ್ಮಾನ್ (ಬಾಂಗ್ಲಾದೇಶ) 483
2. ಅದಿಲ್ ರಶೀದ್ (ಇಂಗ್ಲೆಂಡ್) 433
3. ಮಿಚೆಲ್ ಸ್ಟಾರ್ಕ್ (ಆಸ್ಟ್ರೇಲಿಯಾ) 432
4. ಗುಲ್ಬದಿನ್ ನೈಬ್ (ಅಫ್ಘಾನಿಸ್ತಾನ) 419
5. ಮೊಹಮ್ಮದ್ ಸೈಫುದ್ದೀನ್ (ಬಾಂಗ್ಲಾದೇಶ) 417

Story first published: Monday, July 8, 2019, 18:45 [IST]
Other articles published on Jul 8, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X