ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರಾಂಚಿ ಟೆಸ್ಟ್: ಸ್ಪಾಟ್ ಫಿಕ್ಸಿಂಗ್‌ನಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಹೆಸರು

ಸ್ಪಾಟ್ ಫಿಕ್ಸಿಂಗ್‌ನಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಹೆಸರು | Oneindia Kannada
ranchi test Glenn Maxwell shocked and hurt spot-fixing allegations

ಸಿಡ್ನಿ, ಜುಲೈ 25: ಭಾರತದ ವಿರುದ್ಧ 2017ರ ಮಾರ್ಚ್‌ನಲ್ಲಿ ನಡೆದ ರಾಂಚಿ ಟೆಸ್ಟ್ ಪಂದ್ಯದಲ್ಲಿ ಸ್ಪಾಟ್‌ ಫಿಕ್ಸಿಂಗ್ ನಡೆದಿದೆ ಎಂದು ಆರೋಪಿಸಿರುವ ಅಲ್ ಜಜೀರಾ ವಾಹಿನಿ, ಅದರಲ್ಲಿ ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್‌ಮನ್ ಗ್ಲೆನ್ ಮ್ಯಾಕ್ಸ್‌ವೆಲ್ ಭಾಗಿಯಾಗಿದ್ದಾರೆ ಎಂದು ವರದಿ ಮಾಡಿದೆ.

ಸ್ಪಾಟ್ ಫಿಕ್ಸಿಂಗ್‌ನಲ್ಲಿ ತಮ್ಮ ಹೆಸರು ಕೇಳಿಬಂದಿರುವುದು ಆಘಾತ ಮತ್ತು ನೋವುಂಟು ಮಾಡಿದೆ ಎಂದು ಮ್ಯಾಕ್ಸ್‌ವೆಲ್ ಪ್ರತಿಕ್ರಿಯೆ ನೀಡಿದ್ದಾರೆ. ಈ ವರದಿ ಶುದ್ಧ ಸುಳ್ಳು ಎಂದು ಅವರು ಹೇಳಿದ್ದಾರೆ.

ಈ ಟೆಸ್ಟ್ ಪಂದ್ಯದಲ್ಲಿ ಮ್ಯಾಕ್ಸ್‌ವೆಲ್ ಮೊದಲ ಇನ್ನಿಂಗ್ಸ್‌ನಲ್ಲಿ 104 ರನ್ ಗಳಿಸಿದ್ದರು. ಇದು ಅವರ ಇದುವರೆಗಿನ ಏಕೈಕ ಟೆಸ್ಟ್ ಶತಕವಾಗಿದೆ.

ನಾನು ಬೆಳೆಯಲು ಧೋನಿ ಕಾರಣ: ಮಾಜಿ ಕ್ಯಾಪ್ಟನ್ ಸ್ಮರಿಸಿದ ರಿಷಬ್ನಾನು ಬೆಳೆಯಲು ಧೋನಿ ಕಾರಣ: ಮಾಜಿ ಕ್ಯಾಪ್ಟನ್ ಸ್ಮರಿಸಿದ ರಿಷಬ್

ಈ ಪಂದ್ಯದಲ್ಲಿ ಸ್ಪಾಟ್ ಫಿಕ್ಸಿಂಗ್‌ನಲ್ಲಿ ಭಾಗಿಯಾದ ಆಟಗಾರರ ಪೈಕಿ ಒಬ್ಬರು ಎಂದು ಅಲ್ ಜಜೀರಾ ವರದಿ ಆರೋಪಿಸಿದೆ.

ಟೆಸ್ಟ್‌ನಲ್ಲಿ ತಮ್ಮ ಅತ್ಯುತ್ತಮ ಪ್ರದರ್ಶನ ನೀಡಿದ ಪಂದ್ಯದಲ್ಲಿಯೇ ಸ್ಪಾಟ್ ಫಿಕ್ಸಿಂಗ್ ಮಾಡಿದ ಎಂಬ ಆರೋಪದಲ್ಲಿ ಹುರುಳಿಲ್ಲ ಎಂದು ಮ್ಯಾಕ್ಸ್‌ವೆಲ್ ಸ್ಪಷ್ಟನೆ ನೀಡಿದ್ದಾರೆ.

'ನನಗೆ ತೀವ್ರ ಆಘಾತವಾಗಿದೆ. ಜತೆಗೆ ಸ್ವಲ್ಪ ನೋವು ಕೂಡ ಆಗಿದೆ' ಎಂದು ಮ್ಯಾಕ್ಸ್‌ವೆಲ್ ಹೇಳಿದ್ದಾರೆ.

'ಸಂತೋಷ ನೆನಪುಗಳು, ಅದ್ಭುತ ನೆನಪುಗಳನ್ನು ನೀಡಿದ ಆಟದಲ್ಲಿ ಭಾಗಿಯಾದಾಗ ಇಂತಹ ಆರೋಪ ಕೇಳಿಬಂದರೆ ನೋವಾಗುವುದು ಸಹಜ' ಎಂದಿದ್ದಾರೆ.

ಕೆಪಿಎಲ್ 2018ರಿಂದ ದುಬಾರಿ ಆಟಗಾರ ಮಿಥುನ್ 'ಔಟ್'ಕೆಪಿಎಲ್ 2018ರಿಂದ ದುಬಾರಿ ಆಟಗಾರ ಮಿಥುನ್ 'ಔಟ್'

'ನನ್ನ ಮೊದಲ ಟೆಸ್ಟ್ ಶತಕ ದಾಖಲಿಸಿದ ಬಳಿಕ ಸ್ಟೀವ್ ಸ್ಮಿತ್ ಅವರನ್ನು ಅಪ್ಪಿಕೊಂಡು ಸಂಭ್ರಮಿಸಿದ ಗಳಿಗೆ ಈಗಲೂ ಕಣ್ಣಮುಂದೆ ಇದೆ. ಇಂತಹ ಆರೋಪಗಳ ಮೂಲಕ ಹೆಸರಿಗೆ ಮಸಿಬಳಿಯುವುದು ವಿನಾಶಕಾರಿ ಪ್ರವೃತ್ತಿ. ಏನೇ ಆದರೂ ಇದರಲ್ಲಿ ಯಾವ ಸತ್ಯಾಂಶವೂ ಇಲ್ಲ'.

'ಇದು ಶೇ 100ರಷ್ಟು ಅನ್ಯಾಯದ ಸಂಗತಿ. ನನ್ನ ವೃತ್ತಿಜೀವನದ ಅತ್ಯುತ್ತಮ ನೆನಪನ್ನು ಹಾಳು ಮಾಡುವುದು ಅತ್ಯಂತ ಕ್ರೂರ ಕೆಲಸ. ಇದಕ್ಕಿಂತಲೂ ಕ್ರೂರವಾದದ್ದು ಎಂದರೆ ಅವರು ವಿಶ್ವಕಪ್‌ ಗೆಲುವಿಗೂ ಮಸಿಬಳಿಯುವಂಥದ್ದು. ಈ ಎರಡೂ ನನ್ನ ವೃತ್ತಿ ಬದುಕಿನ ಅದ್ಭುತ ಗಳಿಗೆಗಳು' ಎಂದು ಮ್ಯಾಕ್ಸ್‌ವೆಲ್ ಹೇಳಿದ್ದಾರೆ.

'ನಾನು ಆಗಷ್ಟೇ ಟೆಸ್ಟ್ ತಂಡಕ್ಕೆ ಮರಳಿ ಸೇರಿಕೊಂಡಿದ್ದೆ. ಅದಕ್ಕಾಗಿ ಸಾಕಷ್ಟು ಶ್ರಮವಹಿಸಿದ್ದೆ. ಹೀಗಿರುವಾಗ ಅದನ್ನು ಹಾಳುಮಾಡಿಕೊಳ್ಳಲು ಏನಾದರೂ ಮಾಡುವುದು ನಿಜಕ್ಕೂ ಮೂರ್ಖತನದ್ದಾಗುತ್ತದೆ.

ಅವರು ಯಾವುದೇ ನಿರ್ದಿಷ್ಟ ಹೆಸರನ್ನು ಹೇಳಿಲ್ಲ. ಆದರೆ, ನಾನು ಆಡುತ್ತಿದ್ದ ಸಮಯವನ್ನು ಪ್ರಸ್ತಾಪಿಸಿದ್ದಾರೆ. ಇದನ್ನು ಸಹಿಸಿಕೊಳ್ಳುವುದು ಬಹಳ ಕಷ್ಟಕರ' ಎಂದಿದ್ದಾರೆ.

Story first published: Wednesday, July 25, 2018, 10:06 [IST]
Other articles published on Jul 25, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X