ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ಶ್ರೀಲಂಕಾದ ರಂಗನಾ ಹೆರಾತ್ ವಿದಾಯ

ಕೊಲಂಬೊ, ಅಕ್ಟೋಬರ್ 22: ಶ್ರೀಲಂಕಾದ ಹಿರಿಯ ಎಡಗೈ ಸ್ಪಿನ್ನರ್ ರಂಗನಾ ಹೆರಾತ್ ತಮ್ಮ 19 ವರ್ಷದ ಸುದೀರ್ಘ ಕ್ರಿಕೆಟ್ ಪಯಣಕ್ಕೆ ವಿದಾಯ ಹೇಳಿದ್ದಾರೆ.

ನವೆಂಬರ್ 6ರಂದು ಗಾಲ್ಲೆಯಲ್ಲಿ ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಮೂರು ಟೆಸ್ಟ್ ಸರಣಿಯ ಮೊದಲ ಟೆಸ್ಟ್ ಹೆರಾತ್ ಅವರ ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನದ ಕೊನೆಯ ಪಂದ್ಯವಾಗಲಿದೆ.

ವಿಶೇಷವೆಂದರೆ 19 ವರ್ಷಗಳ ಹಿಂದೆ ಇದೇ ಗಾಲ್ಲೆ ಮೈದಾನದಲ್ಲಿಯೇ ಹೆರಾತ್ ಪದಾರ್ಪಣೆ ಮಾಡಿದ್ದರು. ಲಂಕಾ ತಂಡದಲ್ಲಿ ರಂಗಯ್ಯ ಎಂದೇ ಅವರನ್ನು ಕರೆಯಲಾಗುತ್ತಿತ್ತು.

ಶ್ರೀಲಂಕಾದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪೈಕಿ ಮುತ್ತಯ್ಯ ಮುರಳೀಧರನ್ ( 800 ವಿಕೆಟ್) ಅವರ ಬಳಿಕ ಎರಡನೆಯ ಸ್ಥಾನದಲ್ಲಿದ್ದಾರೆ. ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ನಲ್ಲಿ ಚಾಲ್ತಿಯಲ್ಲಿರುವ ಬೌಲರ್‌ಗಳ ಪೈಕಿ 430 ವಿಕೆಟ್ ಪಡೆದಿರುವ ಹೆರಾತ್, ಜೇಮ್ಸ್‌ ಆಂಡರ್ಸನ್ (564) ಮತ್ತು ಸ್ಟುವರ್ಟ್ ಬ್ರಾಡ್ (433) ಅವರ ನಂತರದ ಸ್ಥಾನದಲ್ಲಿದ್ದಾರೆ.

ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿಯೇ ಅತ್ಯಂತ ಯಶಸ್ವಿ ಎಡಗೈ ಸ್ಪಿನ್ನರ್ ಎಂಬ ಕೀರ್ತಿಯೊಂದಿಗೆ ಹೆರಾತ್ ಅಂತಾರಾಷ್ಟ್ರೀಯ ವೃತ್ತಿ ಬದುಕಿನಿಂದ ಹೊರನಡೆಯುತ್ತಿದ್ದಾರೆ.

ಸಿಂಹಳೀಯರಿಗೆ ಮಣ್ಣುಮುಕ್ಕಿಸಿದ ಆಂಗ್ಲರು: ಸರಣಿ ಗೆದ್ದ ಇಂಗ್ಲೆಂಡ್ ಸಿಂಹಳೀಯರಿಗೆ ಮಣ್ಣುಮುಕ್ಕಿಸಿದ ಆಂಗ್ಲರು: ಸರಣಿ ಗೆದ್ದ ಇಂಗ್ಲೆಂಡ್

430 ವಿಕೆಟ್‌ಗಳನ್ನು ಪಡೆದಿರುವ ಅವರು ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ನಲ್ಲಿ ರಿಚರ್ಡ್ ಹ್ಯಾಡ್ಲಿ (431), ಸ್ಟುವರ್ಟ್ ಬ್ರಾಡ್ (432) ಮತ್ತು ಕಪಿಲ್ ದೇವ್ (434) ಅವರನ್ನು ಹಿಂದಿಕ್ಕುವ ಅವಕಾಶ ಹೊಂದಿದ್ದಾರೆ.

ಮುರಳೀಧರನ್ ಛಾಯೆ

ಮುರಳೀಧರನ್ ಛಾಯೆ

1999ರಲ್ಲಿ ಹೆರಾತ್ ಟೆಸ್ಟ್‌ಗೆ ಪದಾರ್ಪಣೆ ಮಾಡಿದ್ದರು. ಆದರೆ, ಅವರು ಯಶಸ್ಸಿನ ಉತ್ತುಂಗಕ್ಕೆ ಏರಲು ಸಾಧ್ಯವಾಗಿದ್ದು ಮುರಳೀಧರನ್ ವಿದಾಯ ಹೇಳಿದ ಬಳಿಕ. ಹೆರಾತ್ 92 ಟೆಸ್ಟ್‌ಗಳ ಪೈಕಿ 1999ರ ತಮ್ಮ ಚೊಚ್ಚಲ ಪಂದ್ಯದಿಂದ ಜುಲೈ 2010ರ ಅವಧಿಯಲ್ಲಿ ಮುರಳೀಧರನ್ ನಿವೃತ್ತರಾಗುವವರೆಗೆ ಆಡಿರುವುದು 22 ಟೆಸ್ಟ್‌ಗಳನ್ನು ಮಾತ್ರ. ಇವುಗಳಲ್ಲಿ 37.88ರ ಸರಾಸರಿಯಲ್ಲಿ 71 ವಿಕೆಟ್‌ಗಳನ್ನು ಅವರು ಕಿತ್ತಿದ್ದರು.

2005ರಲ್ಲಿ ಏಕೈಕ ಟೆಸ್ಟ್ ಆಡಿದ್ದ ಅವರು, 2008ರವರೆಗೂ ತಂಡದಲ್ಲಿ ಆಡುವ ಅವಕಾಶ ಪಡೆದುಕೊಂಡಿರಲಿಲ್ಲ.

ವಿಜಯ್ ಹಜಾರೆ: ಡೆಲ್ಲಿ ಸೋಲಿಸಿ 3ನೇ ಬಾರಿಗೆ ಟ್ರೋಫಿ ಎತ್ತಿದ ಮುಂಬೈ

ಹೆರಾತ್ ಸಾಧನೆ

ಹೆರಾತ್ ಸಾಧನೆ

ಮುರಳೀಧರನ್ ಅವರ ಸ್ಥಾನ ತೆರವಾದ ಬಳಿಕ ಹೆರಾತ್ ತಂಡದಲ್ಲಿ ವಿಜೃಂಭಿಸಿದರು. ಅಂದಿನಿಂದ ಇಲ್ಲಿಯವರೆಗೆ ಶ್ರೀಲಂಕಾ ಆಡಿರುವ 81 ಟೆಸ್ಟ್‌ಗಳ ಪೈಕಿ 70 ಟೆಸ್ಟ್‌ಗಳಲ್ಲಿ ಹೆರಾತ್ ತಂಡವನ್ನು ಪ್ರತಿನಿಧಿಸಿದ್ದಾರೆ. ಇದರಲ್ಲಿ 25.98ರ ಸರಾಸರಿಯಲ್ಲಿ 359 ವಿಕೆಟ್‌ಗಳನ್ನು ಪಡೆದಿರುವುದು ಅವರ ಸಾಮರ್ಥ್ಯಕ್ಕೆ ಸಾಕ್ಷಿ.

1ನೇ ಪಂದ್ಯ ಭಾರತಕ್ಕೆ ಸುಲಭ ತುತ್ತು, ಕೊಹ್ಲಿ-ರೋಹಿತ್ ಆಟದ ಗಮ್ಮತ್ತು

ವೇಗದ ಪಿಚ್‌ನಲ್ಲಿಯೂ ಮೋಡಿ

ವೇಗದ ಪಿಚ್‌ನಲ್ಲಿಯೂ ಮೋಡಿ

ಒಂದು ಬದಿಯಿಂದ ನಿರಂತರವಾಗಿ 25-30 ಓವರ್ ಬೌಲಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದ ಹೆರಾತ್, ಶ್ರೀಲಂಕಾ ಮಾತ್ರವಲ್ಲದೆ, ಹೊರಗಿನ ವೇಗದ ಪಿಚ್‌ಗಳಲ್ಲಿಯೂ ಕರಾಮತ್ತು ಪ್ರದರ್ಶಿಸಿದ್ದರು. 2011ರ ಡಿಸೆಂಬರ್‌ನಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಶ್ರೀಲಂಕಾದ ಮೊಟ್ಟ ಮೊದಲ ಟೆಸ್ಟ್ ಗೆಲುವಿನಲ್ಲಿ 11 ವಿಕೆಟ್ ಪಡೆದ ಹೆರಾತ್ ಪ್ರಮುಖ ಪಾತ್ರ ವಹಿಸಿದ್ದರು. ಅದೇ ನಿಖರ ದಾಳಿಯನ್ನು ಮುಂದುವರಿಸಿದ್ದ ಅವರು 2012ರಲ್ಲಿ 60 ಟೆಸ್ಟ್ ವಿಕೆಟ್‌ಗಳನ್ನು ತಮ್ಮ ಖಾತೆಗೆ ಜಮಾಯಿಸಿಕೊಂಡಿದ್ದರು.

ಪಾಕ್ ವಿರುದ್ಧ ಸಾಧನೆ

ಪಾಕ್ ವಿರುದ್ಧ ಸಾಧನೆ

2014ರಲ್ಲಿ ಪಾಕಿಸ್ತಾನದ ವಿರುದ್ಧ ಕೊಲಂಬೊದಲ್ಲಿ ನಡೆದ ಟೆಸ್ಟ್‌ನಲ್ಲಿ ಅವರ ಜೀವಮಾನದ ಶ್ರೇಷ್ಠ ಸಾಧನೆ ದಾಖಲಾಗಿದೆ. ಮೊದಲ ಇನ್ನಿಂಗ್ಸ್‌ನಲ್ಲಿ 9 ವಿಕೆಟ್ ಪಡೆದಿದ್ದ ಹೆರಾತ್, ಎರಡನೆಯ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ಪಡೆದು ಪಂದ್ಯದಲ್ಲಿ 184 ರನ್‌ಗೆ 14 ವಿಕೆಟ್ ಕಬಳಿಸಿದ್ದರು. ಪಾಕಿಸ್ತಾನದ ವಿರುದ್ಧ ಅವರು ಅತಿ ಹೆಚ್ಚು ಯಶಸ್ವಿ ಎನಿಸಿದ್ದು, 230 ವಿಕೆಟ್‌ಗಳನ್ನು ಪಾಕ್ ವಿರುದ್ಧವೇ ಪಡೆದಿದ್ದಾರೆ.

40 ವರ್ಷದ ಹೆರಾತ್ ಅವರಿಗೆ ಫಿಟ್ನೆಸ್ ಬಹುದೊಡ್ಡ ಸಮಸ್ಯೆಯಾಗಿತ್ತು. ಕಳೆದ ವರ್ಷ ಭಾರತದ ವಿರುದ್ಧದ ಸರಣಿಯಲ್ಲಿ ಮೂರನೇ ಪಂದ್ಯದಲ್ಲಿ ಆಡಲು ಸಾಧ್ಯವಾಗಿರಲಿಲ್ಲ. 2015ರಲ್ಲಿ ಅವರ ಏಕದಿನ ಕ್ರಿಕೆಟ್‌ನಿಂದ ದೂರವಾಗಿದ್ದರು.

430 ವಿಕೆಟ್

430 ವಿಕೆಟ್

92 ಟೆಸ್ಟ್ ಪಂದ್ಯಗಳ 168 ಇನ್ನಿಂಗ್ಸ್‌ಗಳಲ್ಲಿ 12,022 ರನ್ ನೀಡಿರುವ ಅವರು, 430 ವಿಕೆಟ್ ಪಡೆದುಕೊಂಡಿದ್ದಾರೆ. 34 ಬಾರಿ ಐದು ವಿಕೆಟ್ ಮತ್ತು 9 ಬಾರಿ ಹತ್ತು ವಿಕೆಟ್ ಸಾಧನೆ ಮಾಡಿದ್ದಾರೆ. ಬ್ಯಾಟಿಂಗ್‌ನಲ್ಲಿ 14.48ರ ಸರಾಸರಿಯಲ್ಲಿ 1680 ರನ್ ಗಳಿಸಿದ್ದು, 80 ರನ್ ಗರಿಷ್ಠ ಸಾಧನೆಯಾಗಿದೆ.

ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಅವರು ಅಷ್ಟೊಂದು ಯಶಸ್ವಿ ಬೌಲರ್ ಎನಿಸಿಕೊಳ್ಳಲಿಲ್ಲ. 71 ಏಕದಿನ ಪಂದ್ಯಗಳಲ್ಲಿ 74 ವಿಕೆಟ್‌ಗಳನ್ನು ಪಡೆದುಕೊಂಡಿದ್ದರೆ, 17 ಟಿ20 ಪಂದ್ಯಗಳಲ್ಲಿ 18 ವಿಕೆಟ್‌ಗಳನ್ನು ಪಡೆದಿದ್ದಾರೆ.

Story first published: Monday, October 22, 2018, 12:54 [IST]
Other articles published on Oct 22, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X