ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮುಂಬೈಯನ್ನು ಮಣಿಸಿ ರಣಜಿಯಲ್ಲಿ 200ನೇ ವಿಜಯಮಾಲೆ ಧರಿಸಿದ ಕರ್ನಾಟಕ

Ranji 2019-20: Karnataka Won The Match Against Mumbai

ರಣಜಿಯಲ್ಲಿ ಕರ್ನಾಟಕ ತಂಡ ಮತ್ತೊಂದು ಗೆಲುವನ್ನು ದಾಖಲಿಸಿದೆ. ಬಲಿಷ್ಟ ಮುಂಬೈ ತಂಡವನ್ನು ಭರ್ಜರಿಯಾಗಿ ಸೋಲಿಸಿದ ಕರ್ನಾಟಕ 6 ಅಂಕಗಳನ್ನು ಬುಟ್ಟಿಗೆ ಹಾಕಿಕೊಂಡಿದೆ. ಮುಂಬೈನ ಬಂದ್ರಾ ಕುರ್ಲಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೂರನೇ ದಿನಕ್ಕೆ ಮೂಂಬೈ ನೀಡಿದ್ದ ಗುರಿಯನ್ನು ಬೆನ್ನತ್ತುವಲ್ಲಿ ಯಶಸ್ವಿಯಾಗಿದೆ.

ಈ ಗೆಲುವಿನ ಮೂಲಕ ಕರ್ನಾಟಕ ತಂಡ ರಣಜಿಯಲ್ಲಿ 200ನೇ ಗೆಲುವನ್ನುವ ಸಾಧಿಸಿದೆ. ರಣಜಿಯಲ್ಲಿ ಲೀ ಮೈಲುಗಲ್ಲನ್ನು ದಾಟಿರುವ ಮತ್ತೊಂದು ತಂಡವಂದರೆ ಅದು ಮುಂಬೈ ಮಾತ್ರ. ಈ ಮೂಲಕ ರಣಜಿ ಟೂರ್ನಿಯಲ್ಲಿ 200 ಗೆಲುವನ್ನು ಸಾಧಿಸಿದ 2 ನೇ ತಂಡ ಎಂಬ ಹೆಗ್ಗಳಿಕೆ ಕರ್ನಾಟಕದ್ದಾಗಿದೆ.

ರಣಜಿ ಟ್ರೋಫಿ: ಮುಂಬೈ ವಿರುದ್ಧ ಕರ್ನಾಟಕ ಮಾರಕ ಬೌಲಿಂಗ್ ದಾಳಿರಣಜಿ ಟ್ರೋಫಿ: ಮುಂಬೈ ವಿರುದ್ಧ ಕರ್ನಾಟಕ ಮಾರಕ ಬೌಲಿಂಗ್ ದಾಳಿ

ಬೌಲರ್‌ಗಳಿಗೆ ಸಹಕಾರಿಯಾಗಿದ್ದ ಪಿಚ್‌ನಲ್ಲಿ ಮುಂಬೈ ತಂಡ ಮೊದಲು ಬ್ಯಾಟಿಂಗ್ ಮಾಡಿ 194 ರನ್‌ಗಳಿಗೆ ಆಲ್‌ಔಟ್‌ ಆಯ್ತು. 77 ರನ್‌ಗಳಿಸಿದ ನಾಯಕ ಸೂರ್ಯಕುಮಾರ್‌ ಯಾದವ್ ಬಿಟ್ಟು ಉಳಿದ ಯಾವ ಬ್ಯಾಟ್ಸ್‌ಮನ್‌ಗಳು ಕೂಡ ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರಲಿಲ್ಲ. ಕರ್ನಾಟಕ ಪರವಾಗಿ ಕೌಶಿಕ್ 3 ವಿಕೆಟ್ ಕಿತ್ತು ಯಶಸ್ವಿ ಬೌಲರ್ ಎನಿಸಿದರೆ ಅಭಿಮನ್ಯು ಮಿಥುನ್, ರೋನಿತ್ ಮೋರೆ, ಪ್ರತೀಕ್ ಜೈನ್ ತಲಾ 2 ವಿಕೆಟ್ ಕಿತ್ತು ಮುಂಬೈಯನ್ನು ಬೇಗನೆ ಕಟ್ಟಿಹಾಕುವಲ್ಲಿ ಯಶಸ್ವಿಯಾದರು.

ಬಳಿಕ ಬ್ಯಾಟಿಂಗ್‌ಗೆ ಇಳಿದ ಕರ್ನಾಟಕ ಮೊದಲ ಇನ್ನಿಂಗ್ಸ್‌ನಲ್ಲ 218 ರನ್ ಗಳಿಸಿ ಆಲ್‌ಔಟ್‌ ಆಗಿತ್ತು. ಈ ಮೂಲಕ ಕರ್ನಾಟಕ ಮೊದಲ ಇನ್ನಿಂಗ್ಸ್‌ನಲ್ಲಿ 24 ರನ್‌ಗಳ ಅಲ್ಪ ಮುನ್ನಡೆಯನ್ನು ಪಡೆದುಕೊಂಡಿತು. ಕರ್ನಾಟಕ ಪರವಾಗಿ ರವಿಕುಮಾರ್ ಸಮರ್ಥ್ 86 ರನ್ ಗಳಿಸಿ ಮಿಂಚಿದರು. ಇನ್ಯಾವ ಬ್ಯಾಟ್ಸ್‌ಮನ್ ಕೂಡ ಅರ್ಧಶತಕವನ್ನೂ ದಾಖಲಿಸುವಲ್ಲಿ ವಿಫಲರಾದರು. ಮೊದಲ ಇನ್ನಿಂಗ್ಸ್‌ನಲ್ಲಿ ಮುಂಬೈ ಪರವಾಗಿ ಶಶಾಂಕ್ ಅತ್ತಾರ್ಡೆ 5 ವಿಕೆಟ್‌ ಪಡೆಯುವಲ್ಲಿ ಯಶಸ್ವಿಯಾದರು.

ಕೊಹ್ಲಿ ಕಂಡರೆ ಲಂಕಾಗೆ ನಡುಕ; 12 ವರ್ಷದಲ್ಲಿ ಗೆದ್ದಿಲ್ಲ ಒಂದೇ ಒಂದು ಸರಣಿ!ಕೊಹ್ಲಿ ಕಂಡರೆ ಲಂಕಾಗೆ ನಡುಕ; 12 ವರ್ಷದಲ್ಲಿ ಗೆದ್ದಿಲ್ಲ ಒಂದೇ ಒಂದು ಸರಣಿ!

ಇದಕ್ಕುತ್ತರವಾಗಿ ಎರಡನೇ ಬ್ಯಾಟ್‌ ಬೀಸಲು ಬಂದ ಮುಂಬೈ ಕೇವಲ 149 ರನ್‌ಗಳಿಗೆ ಆಲ್‌ಔಟ್‌ ಆಯ್ತು. ಮುಂಬೈ ಪರವಾಗಿ ಸರ್ಫರಾಜ್ ಖಾನ್ ಮಾತ್ರ 71 ರಬ್ ಬಾರಿಸಿದ್ದರೆ ಉಳಿದೆಲ್ಲಾ ಬ್ಯಾಟ್ಸ್‌ಮನ್‌ಗಳು ಅಲ್ಪ ಮೊತ್ತಕ್ಕೆ ವಿಕೆಟ್‌ ಒಪ್ಪಿಸಿದರು. ಈ ಮೂಲಕ ಕರ್ನಾಟಕ ತಂಡಕ್ಕೆ ಮುಂಬೈ ಕೇವಲ 125 ರನ್‌ಗಳ ಗುರಿಯನ್ನು ನೀಡಿತು. ಇದನ್ನು ಬೆನ್ನಟ್ಟಿದ ಕರ್ನಾಟಕ ತಂಡ 5 ವಿಕೆಟ್ ಕಳೆದುಕೊಂಡು ಗುರಿತಲುಪುವಲ್ಲಿ ಯಶಸ್ವಿಯಾಯಿತು. ಈ ಮೂಲಕ ಕರ್ನಾಟಕ ತಂಡ ಭರ್ಜರಿ ಗೆಲುವನ್ನು ದಾಖಲಿಸುವಲ್ಲಿ ಯಶಸ್ವಿಯಾಯಿತು. ಎರಡನೇ ಇನ್ನಿಂಗ್ಸ್‌ನಲ್ಲಿ ಕರ್ನಾಟಕ ಪರವಾಗಿ ದೇವ್‌ದತ್ ಪಡಿಕಲ್ ಅರ್ಧ ಶತಕ ದಾಖಲಿಸಿ ಮಿಂಚಿದರೆ ರವಿ ಕುಮಾರ್ ಸಮರ್ಥ್ 34 ರನ್‌ಗಳಿಸಿ ಉತ್ತಮ ಸಾಥ್ ನೀಡಿದರು. ಎರಡೂ ಇನ್ನಿಂಗ್ಸ್‌ನಲ್ಲಿ ಮಿಂಚಿದ ರವಿ ಕುಮಾರ್ ಸಮರ್ಥ್ ಪಂದ್ಯಶ್ರೇಷ್ಟ ಪ್ರಶಸ್ತಿಗೆ ಭಾಜನರಾದರು.

Story first published: Sunday, January 5, 2020, 14:16 [IST]
Other articles published on Jan 5, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X