ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರಣಜಿ 2022ರ ನಾಕೌಟ್‌ನಲ್ಲಿ ಕಣಕ್ಕಿಳಿದಿದ್ದಾರೆ ಭಾರತದ ಈ ನಾಲ್ಕು ಸ್ಟಾರ್ ಆಟಗಾರರು

Ranji 2022: Four popular cricketers who are playing in ongoing Ranji Trophy 2022 knockouts

ಭಾರತದ ಪ್ರತಿಷ್ಠಿತ ದೇಶೀಯ ಕ್ರಿಕೆಟ್ ಟೂರ್ನಿ ರಣಜಿ ಟ್ರೋಫಿಯ ನಾಕೌಟ್ ಹಂತದ ಪಂದ್ಯಗಳು ಪ್ರಸ್ತುತ ನಡೆಯುತ್ತಿದೆ. ಬೆಂಗಳೂರಿನಲ್ಲಿ ಎಲ್ಲಾ ನಾಕೌಟ್ ಪಂದ್ಯಗಳು ನಡೆಯುತ್ತಿದ್ದು ಆಲೂರಿನ ಕೆಎಸ್‌ಸಿಎ ಮೈದಾನದಲ್ಲಿ ಈ ಪಂದ್ಯಗಳು ನಡೆಯುತ್ತಿದೆ. ಎರಡು ವರ್ಷಗಳ ಬಳಿಕ ರಣಜಿ ಟೂರ್ನಿ ನಡೆಯುತ್ತಿದ್ದು ಇದೀಗ ನಾಕವಟ್ ಹಂತವನ್ನು ತಲುಪಿದೆ. ಮೊದಲ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬೆಂಗಾಲ್ ಹಾಗೂ ಜಾರ್ಖಂಡ್ ಮುಖಾಮುಖಿಯಾಗಿದ್ದರೆ ಮುಂಬೈ ಹಾಗೂ ಉತ್ತರಾಖಂಡ್ ಎರಡನೇ ಕ್ವಾರ್ಟರ್ ಫೈನಲ್‌ನಲ್ಲಿ, ಕರ್ನಾಟಕ ಹಾಗೂ ಉತ್ತರ ಪ್ರದೇಶ ಮೂರನೇ ಕ್ವಾರ್ಟರ್‌ಫೈನಲ್‌ನಲ್ಲಿ ಹಾಗೂ ಪಂಜಾಬ್ ಹಾಗೂ ಮಧ್ಯ ಪ್ರದೇಶಗಳು ನಾಲ್ಕನೇ ಕ್ವಾರ್ಟರ್‌ಫೈನಲ್‌ನಲ್ಲಿ ಸೆಣೆಸಾಟವನ್ನು ನಡೆಸುತ್ತಿದೆ. ಇಲ್ಲಿ ಗೆದ್ದ ತಂಡ ಗಳು ಸೆಮಿಫೈನಲ್‌ಗೆ ಪ್ರವೇಶ ಪಡೆಯಲಿದೆ.

ಈ ನಾಕೌಟ್ ಹಂತದಲ್ಲಿ ರಾಷ್ಟ್ರೀಯ ತಂಡದಲ್ಲಿ ಛಾಪು ಮೂಡಿಸಿರುವ ಆಟಗಾರರು ಕೂಡ ಭಾಗಿಯಾಗಿದ್ದಾರೆ. ಈ ಬಾರಿಯ ರಣಜಿ ಟೂರ್ನಿಯ ನಾಕೌಟ್ ಹಂತದಲ್ಲಿ ನಾಲ್ವರು ಸ್ಟಾರ್ ಆಟಗಾರರು ತಮ್ಮ ತಮ್ಮ ರಾಜ್ಯಗಳನ್ನು ಪ್ರತಿನಿಧಿಸುತ್ತಿದ್ದಾರೆ. ಅದರಲ್ಲಿ ಇಬ್ಬರು ಆಟಗಾರರು ಕರ್ನಾಟಕ ತಂಡದ ಆಟಗಾರರು ಎಂಬುದು ವಿಶೇಷ. ಹಾಗಾದರೆ ಆ ನಾಲ್ವರು ಆಟಗಾರರು ಯಾರು? ಮುಂದೆ ಓದಿ..

IND vs SA ಟಿ20 ಸರಣಿ: ಕೆಎಲ್ ರಾಹುಲ್ ನಾಯಕತ್ವದ ಕುರಿತು ಸುರೇಶ್ ರೈನಾ ಹೇಳಿದ್ದೇನು?IND vs SA ಟಿ20 ಸರಣಿ: ಕೆಎಲ್ ರಾಹುಲ್ ನಾಯಕತ್ವದ ಕುರಿತು ಸುರೇಶ್ ರೈನಾ ಹೇಳಿದ್ದೇನು?

ಶುಬ್ಮನ್ ಗಿಲ್

ಶುಬ್ಮನ್ ಗಿಲ್

ಈ ಬಾರಿಯ ರಣಜಿ ಟೂರ್ನಿಯ ನಾಕೌಟ್ ಹಂತದಲ್ಲಿ ಆಡುತ್ತಿರುವವ ಪ್ರಖ್ಯಾತ ಆಟಗಾರರ ಪೈಕಿ ಶುಬ್ಮನ್ ಗಿಲ್ ಕೂಡ ಒಬ್ಬರು. ಈ ನಾಕೌಟ್‌ನಲ್ಲಿ ಆಡುತ್ತಿರುವ ಆಟಗಾರರ ಪೈಲಿ ಮುಂದಿನ ಇಂಗ್ಲೆಂಡ್ ಪ್ರವಾಸಕ್ಕೆ ಆಯ್ಕೆಯಾಗಿರುವ ಏಕೈಕ ಆಟಗಾರನಾಗಿದ್ದಾರೆ ಶುಬ್ಮನ್ ಗಿಲ್. ಭಾರತ ತಂಡದ ಪ್ರಮುಖ ಆಟಗಾರನಾಗಿ ಗುರುತಿಸಿಕೊಂಡಿರುವ ಗಿಲ್ ಇತ್ತೀಚೆಗಷ್ಟೇ ಅಂತ್ಯವಾಗಿರುವ ಐಪಿಎಲ್‌ನಲ್ಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ತಂಡದ ಭಾಗವಾಗಿದ್ದರು.

ಮಯಾಂಕ್ ಅಗರ್ವಾಲ್

ಮಯಾಂಕ್ ಅಗರ್ವಾಲ್

ಕರ್ನಾಟಕ ತಂಡದ ಪ್ರಮುಖ ಆಟಗಾರ ಮಯಾಂಕ್ ಅಗರ್ವಾಲ್ ಭಾರತ ಟೆಸ್ಟ್ ತಂಡದ ಪ್ರಮುಖ ಸದಸ್ಯನಾಗಿ ಗುರುತಿಸಿಕೊಂಡಿರುವ ಆಟಗಾರ. ಆದರೆ ಇತ್ತಚೆಗಷ್ಟೇ ಅವರು ಭಾರತ ಟೆಸ್ಟ್ ತಂಡದಿಂದ ಹೊರಬಿದ್ದಿದ್ದಾರೆ. ವಿದೇಶಿ ಮೈದಾನಗಳಲ್ಲಿ ಮಯಾಂಕ್ ಅಗರ್ವಾಲ್ ರನ್ ಗಳಿಸಲು ಒದ್ದಾಟ ನಡೆಸಿದ್ದರು. ಜುಲೈ ತಿಂಗಳಿನಲ್ಲಿ ಭಾರತ ಇಂಗ್ಲೆಂಡ್‌ಗೆ ಪ್ರವಾಸ ಕೈಗೊಂಡು ಒಂದು ಟೆಸ್ಟ ಪಂದ್ಯವನ್ನು ಆಡಲಿದೆ. ಒಂದೇ ಪಂದ್ಯವಾಗಿರುವ ಕಾರಣ ಮಯಾಂಕ್‌ಗೆ ಈ ಪ್ರವಾಸದಲ್ಲಿ ಅವಕಾಶ ದೊರೆತಿಲ್ಲ. ಉತ್ತರ ಪ್ರದೇಶದ ವಿರುದ್ಧ ಕರ್ನಾಟಕ ಕ್ವಾರ್ಟರ್‌ಫೈನಲ್ ಪಂದ್ಯವನ್ನು ಆಡುತ್ತಿದ್ದು ಈ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಮಯಾಂಕ್ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದಾರೆ.

ಪೃಥ್ವಿ ಶಾ

ಪೃಥ್ವಿ ಶಾ

ಈ ಬಾರಿಯ ರಣಜಿ ನಾಕೌಟ್‌ನಲ್ಲಿ ಭಾಗಿಯಾಗಿರುವ ಮತ್ತೋರ್ವ ಜನಪ್ರಿಯ ಆಟಗಾರ ಪೃಥ್ವಿ ಶಾ. ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನಿಡುತ್ತಿದ್ದರೂ ಪೃರ್ಥವಿ ಶಾಗೆ ಭಾರತ ತಂಡದಲ್ಲಿ ಹೆಚ್ಚಿನ ಅವಕಾಶಗಳು ದೊರೆಯುತ್ತಿಲ್ಲ. ರಣಜಿಯಲ್ಲಿ ಮುಂಬೈ ತಂಡವನ್ನು ಶಾ ಮುನ್ನಡೆಸುತ್ತಿದ್ದಾರೆ. ಕ್ವಾರ್ಟರ್‌ಫೈನಲ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಪೃಥ್ಬಿ ಶಾ ಉತ್ತಮ ಪ್ರದರ್ಶನ ನೀಡಲು ವಿಫಲವಾಗಿದ್ದರೂ ತಂಡದಿಂದ ಉತ್ತಮ ಪ್ರದರ್ಶನ ವ್ಯಕ್ತವಾಗುತ್ತಿದೆ.

ಮನೀಶ್ ಪಾಂಡೆ

ಮನೀಶ್ ಪಾಂಡೆ

ಕರ್ನಾಟಕ ಕಂಡ ಪ್ರತಿಭಾನ್ವಿತ ಆಟಗಾರರ ಪೈಕಿ ಮನೀಶ್ ಪಾಂಡೆ ಕೂಡ ಒಬ್ಬರು. ಆದರೆ ಪ್ರಸ್ತುತ ಭಾರತದ ಎಲ್ಲಾ ಮಾದರಿಯ ತಂಡದಿಂದಲೂ ಮನೀಶ್ ಪಾಂಡೆ ಸ್ಥಾನವನ್ನು ಕಳೆದುಕೊಂಡಿದ್ದಾರೆ. ಐಪಿಎಲ್‌ನಲ್ಲಿಯೂ ಮಂಕಾಗಿದ್ದು ಆಡುವ ಬಳಗದಲ್ಲಿ ಸ್ಥಾನ ಪಡೆಯಲು ಪರದಾಡುತ್ತಿದ್ದಾರೆ. ಹೀಗಾಗಿ ಈ ಬಾರಿಯ ರಣಜಿ ಆವೃತ್ತಿ ಮನೀಶ್ ಒಪಾಂಡೆಗೆ ಬಹಳ ಪ್ರಮುಖವಾಗಿದೆ. ಕರ್ನಾಟಕ ತಂಡದ ನಾಯಕನಾಗಿರುವ ಮನೀಶ್ ಮೊದಲ ಇನ್ನಿಂಗ್ಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಲು ವಿಫಲವಾಗಿದ್ದಾರೆ. ಕರ್ನಾಟಕ ತಂಡದ ಕ್ವಾರ್ಟರ್‌ಫೈನಲ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದು ವೈಯಕ್ತಿಕವಾಗಿಯೂ ಮನೀಶ್ ಪಾಂಡೆ ಮುಂದಿನ ಇನ್ನಿಂಗ್ಸ್ ಹಾಗೂ ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡುವ ನಿರೀಕ್ಷೆಯಿದೆ.

Story first published: Tuesday, June 7, 2022, 15:05 [IST]
Other articles published on Jun 7, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X