ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರಣಜಿ ಟ್ರೋಫಿ: ಮಿಂಚಿದ ಜಮ್ಮು ಕಾಶ್ಮೀರ ಬೌಲಿಂಗ್ ವಿಭಾಗ: ಕರ್ನಾಟಕಕ್ಕೆ ಕರುಣ್ ಶತಕದ ಆಸರೆ

Ranji 2022: Karnataka vs Jammu and Kashmir, Day 1, Karun Nair century, Highlights

ರಣಜಿ ಟ್ರೋಫಿ ಟೂರ್ನಿಯಲ್ಲಿ ಕರ್ನಾಟಕ ಹಾಗೂ ಜಮ್ಮು ಕಾಶ್ಮೀರ ತಂಡಗಳು ತಮ್ಮ ಎರಡನೇ ಪಂದ್ಯದಲ್ಲಿ ಮುಖಾಮುಖಿಯಾಗಿದ್ದು ಮೊದಲ ದಿನದಾಟದಲ್ಲಿ ತೀವ್ರ ಪೈಪೋಟಿಯ ಸ್ಪರ್ಧೆ ಕಂಡುಬಂದಿದೆ. ಬಲಾಢ್ಯ ಬ್ಯಾಟಿಂಗ್ ವಿಭಾಗವನ್ನ ಹೊಂದಿರುವ ಕರ್ನಾಟಕ ತಂಡದ ವಿರುದ್ಧ ಜಮ್ಮು ಕಾಶ್ಮೀರ ಬೌಲಿಂಗ್ ವಿಭಾಗ ಅದ್ಭುತ ಪ್ರದರ್ಶನ ನೀಡಿದ್ದು ಒಂದು ಹಂತದ ಮೇಲುಗೈ ಸಾಧಿಸಿದೆ. ಆದರೆ ಕರ್ನಾಟಕ ತಂಡಕ್ಕೆ ಅನುಭವಿ ಆಟಗಾರ ಕರುಣ್ ನಾಯರ್ ಅಜೇಯ ಶತಕ ನೆರವಾಗಿದ್ದು ಮೊದಲ ದಿನದ ಪ್ರಮುಖ ಯಶಸ್ಸಾಗಿದೆ.

ಚೆನ್ನೈನ ಐಐಟಿ ಚೆಂಪ್ಲಾಸ್ಟ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಕರ್ನಾಟಕ ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಆದರೆ ಈ ಭರವಸೆಯ ಆಟಗಾರ ದೇವದತ್ ಪಡಿಕ್ಕಲ್ ಈ ಪಂದ್ಯದಲ್ಲಿ ಕೇವಲ 8 ರನ್ ಗಳಿಸಿ ವಿಕೆಟ್ ಕಳೆದುಕೊಳ್ಳುವ ಮೂಲಕ ಜಮ್ಮು ಕಾಶ್ಮೀರ ತಂಡದ ಮೊದಲ ಮುನ್ನಡೆಗೆ ಕಾರಣವಾದರು. ಎರಡನೇ ವಿಕೆಟ್‌ಗೆ ಜೊತೆಯಾದ ಆರ್ ಸಮರ್ಥ್ ಹಾಗೂ ಕರುಣ್ ನಾಯರ್ 98 ರನ್‌ಗಳ ಮಹತ್ವದ ಜೊತೆಯಾಟದಲ್ಲಿ ಭಾಗಿಯಾದರು.

ಐಪಿಎಲ್ 2022: ಆಡಳಿತ ಮಂಡಳಿ ಸಭೆಯಲ್ಲಿ ನಿರ್ಧಾರವಾಗಲಿವೆ ಟೂರ್ನಿಯ ಈ ಪ್ರಮುಖ ಅಂಶಗಳುಐಪಿಎಲ್ 2022: ಆಡಳಿತ ಮಂಡಳಿ ಸಭೆಯಲ್ಲಿ ನಿರ್ಧಾರವಾಗಲಿವೆ ಟೂರ್ನಿಯ ಈ ಪ್ರಮುಖ ಅಂಶಗಳು

ಈ ಜೋಡಿ ಬೇರ್ಪಟ್ಟ ಬಳಿಕ ದೊಡ್ಡ ಜೊತೆಯಾಟದ ನೆರವು ಅನುಭವಿ ಕರುಣ್ ನಾಯರ್‌ಗೆ ದೊರೆಯಲಿಲ್ಲ. ಆದರೆ ಅದ್ಭುತವಾಗಿ ಜಮ್ಮು ಕಾಶ್ಮೀರ ಬೌಲಿಂಗ್ ದಾಳಿಯನ್ನು ಕರುಣ್ ಎದುರಿಸುತ್ತಾ ಸಾಗಿದರು. ಮತ್ತೊಂದು ತುದಿಯಲ್ಲಿ ವಿಕೆಟ್ ಉರುಳಿತ್ತಿದ್ದರೂ ನೆಲಕಚ್ಚಿ ನಿಂತು ಅದ್ಭುತ ಪ್ರದರ್ಶನ ನಿಡುವಲ್ಲಿ ಕರುಣ್ ನಾಯರ್ ಯಶಸ್ವಿಯಾಗಿದ್ದಾರೆ.

ಕರುಣ್ ನಾಯಕ 267 ಎಸೆತಗಳನ್ನು ಎದುರಿಸಿದ್ದು 152 ರನ್ ಗಳಿಸಿ ಎರಡನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ಈ ಇನ್ನಿಂಗ್ಸ್‌ನಲ್ಲಿ 21 ಬೌಂಡರಿ ಹಾಗೂ ಒಂದು ಸಿಕ್ಸರ್ ಸೇರಿತ್ತು. ನಾಯಕ ಮನೀಶ್ ಪಾಂಡೆ ಈ ಇನ್ನಿಂಗ್ಸ್‌ನಲ್ಲಿ ಕೇವಲ 1 ರನ್‌ಗಳಿಸಿ ವಿಕೆಟ್ ಕಳೆದುಕೊಂಡರು.

ಇನ್ನು ಈ ಪಂದ್ಯದಲ್ಲಿ ಜಮ್ಮು ಕಾಶ್ಮೀರ ತಂಡದ ಬೌಲಿಂಗ್ ವಿಭಾಗ ಸಾಂಘಿಕ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಯಿತು. ಮುಜ್ತಾಬಾ ಯೂಸೂಫ್, ಉಮ್ರಾನ್ ಮಲಿಕ್ ಹಾಗು ಪರ್ವೀಜ್ ರಸೂಲ್ ತಲಾ ಎರಡು ವಿಕೆಟ್ ಕಬಳಿಸಿದ್ದರೆ ಆಕಿಬ್ ನಬಿ ಹಾಗೂ ಅಬ್ದುಲ್ ಸಮದ್ ತಲಾ ಒಂದು ವಿಕೆಟ್ ಸಂಪಾದಿಸಿದ್ದಾರೆ. ಎರಡನೇ ದಿನದಾಟದಲ್ಲಿ ಕರ್ನಾಟಕ ಬಳಗ ಯಾವ ರೀತೊಯ ಪ್ರದರ್ಶನ ನಿಡಲಿದೆ ಎಂಬುದು ಕುತೂಹಲ ಮೂಡಿಸಿದೆ.

ಟೆನಿಸ್ ಪಂದ್ಯ ಸೋತ ಕೋಪದಲ್ಲಿ ಅಂಪೈರ್‌ ಮೇಲೆ ಹಲ್ಲೆ ಮಾಡಿದ ಅಲೆಕ್ಸಾಂಡರ್ಟೆನಿಸ್ ಪಂದ್ಯ ಸೋತ ಕೋಪದಲ್ಲಿ ಅಂಪೈರ್‌ ಮೇಲೆ ಹಲ್ಲೆ ಮಾಡಿದ ಅಲೆಕ್ಸಾಂಡರ್

ಕರ್ನಾಟಕ ಆಡುವ ಬಳಗ: ದೇವದತ್ ಪಡಿಕ್ಕಲ್, ರವಿಕುಮಾರ್ ಸಮರ್ಥ್, ಕೃಷ್ಣಮೂರ್ತಿ ಸಿದ್ಧಾರ್ಥ್, ಮನೀಶ್ ಪಾಂಡೆ (ನಾಯಕ), ಕರುಣ್ ನಾಯರ್, ಶರತ್ ಬಿಆರ್ (ವಿಕೆಟ್ ಕೀಪರ್), ಶ್ರೇಯಸ್ ಗೋಪಾಲ್, ಕೃಷ್ಣಪ್ಪ ಗೌತಮ್, ರೋನಿತ್ ಮೋರೆ, ವಿದ್ಯಾಧರ್ ಪಾಟೀಲ್, ಪ್ರಸಿದ್ಧ್ ಕೃಷ್ಣ
ಬೆಂಚ್: ವಿಜಯ್‌ಕುಮಾರ್ ವೈಶಾಕ್, ದೇಗಾ ನಿಶ್ಚಲ್, ಕೆಸಿ ಕಾರಿಯಪ್ಪ, ಜಗದೀಶ ಸುಚಿತ್, ಮುರಳೀಧರ ವೆಂಕಟೇಶ್, ಶುಭಾಂಗ್ ಹೆಗ್ಡೆ, ಅನೀಶ್ವರ್ ಗೌತಮ್, ಶ್ರೀನಿವಾಸ್ ಶರತ್

ಇನ್ಮುಂದೆ ಟೀಂ‌ ಇಂಡಿಯಾದಲ್ಲಿ‌ Ravindra Jadeja ಸ್ಥಾನ ಎಲ್ಲಿ ಗೊತ್ತಾ? | Oneindia Kannada

ಜಮ್ಮು ಕಾಶ್ಮೀರ ಆಡುವ ಬಳಗ: ಕಮ್ರಾನ್ ಇಕ್ಬಾಲ್, ಜತಿನ್ ವಾಧ್ವಾನ್, ಶುಭಂ ಪುಂಡೀರ್, ಇಯಾನ್ ದೇವ್ ಸಿಂಗ್ (ನಾಯಕ), ಅಬ್ದುಲ್ ಸಮದ್, ಪರ್ವೇಜ್ ರಸೂಲ್, ಫಾಜಿಲ್ ರಶೀದ್ (ವಿಕೆಟ್ ಕೀಪರ್), ಮುಜ್ತಾಬಾ ಯೂಸುಫ್, ಅಬಿದ್ ಮುಷ್ತಾಕ್, ಔಕಿಬ್ ನಬಿ, ಉಮ್ರಾನ್ ಮಲಿಕ್
ಬೆಂಚ್: ರಾಮ್ ದಯಾಳ್, ಉಮರ್ ನಜೀರ್ ಮಿರ್, ಆಕಾಶ್ ಚೌಧರಿ, ಸೂರ್ಯಾಂಶ್ ರೈನಾ, ಯುದ್ವೀರ್ ಸಿಂಗ್ ಚರಕ್, ಹೆನಾನ್ ನಜೀರ್ ಮಲಿಕ್, ರೋಹಿತ್ ಶರ್ಮಾ

Story first published: Friday, February 25, 2022, 9:46 [IST]
Other articles published on Feb 25, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X