ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮೋರೆ, ಶ್ರೇಯಸ್ ದಾಳಿಗೆ ಛತ್ತೀಸ್ ಗಢ ತತ್ತರ: ಕರ್ನಾಟಕಕ್ಕೆ ಭರ್ಜರಿ ಜಯ

ಆಲೂರು (ಬೆಂಗಳೂರು), ಜನವರಿ 2: ಆಲೂರು ಕ್ರೀಡಾಂಗಣದಲ್ಲಿ ನಡೆದ ರಣಜಿ ಟ್ರೋಫಿ ಪಂದ್ಯದಲ್ಲಿ ಆತಿಥೇಯ ಕರ್ನಾಟಕ, ಛತ್ತೀಸ್ ಗಢ ವಿರುದ್ಧ 198 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ.

ಪಂದ್ಯದ ಕೊನೆಯ ದಿನವಾದ ಬುಧವಾರ ಗೆಲ್ಲಲು 355 ರನ್‌ಗಳ ಗುರಿ ಬೆನ್ನತ್ತಿದ ಛತ್ತೀಸ್ ಗಢ, ವೇಗಿ ರೋನಿತ್ ಮೋರೆ ಮತ್ತು ಲೆಗ್ ಸ್ಪಿನ್ನರ್ ಶ್ರೇಯಸ್ ಗೋಪಾಲ್ ಅವರ ದಾಳಿಗೆ ಕುಸಿದು ಕೇವಲ 156 ರನ್‌ಗಳಿಗೆ ಸರ್ವಪತನಗೊಂಡು ಸೋಲೊಪ್ಪಿಕೊಂಡಿತು.

ಮೂರನೇ ದಿನದ ಅಂತ್ಯಕ್ಕೆ 113 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡಿದ್ದ ಕರ್ನಾಟಕ, ನಾಲ್ಕನೆಯ ದಿನದ ಆಟ ಆರಂಭವಾಗಿ ಕೆಲ ಹೊತ್ತಿನಲ್ಲಿಯೇ ಶ್ರೇಯಸ್ ಗೋಪಾಲ್ ವಿಕೆಟ್ ಕಳೆದುಕೊಂಡಿತು. ಅರ್ಧಶತಕ ಗಳಿಸಿ ಅಜೇಯರಾಗಿ ಉಳಿದಿದ್ದ ಮನೀಶ್ ಪಾಂಡೆ ಬಿರುಸಿನ ಆಟವಾಡಿ ಅದನ್ನು ಶತಕವಾಗಿ ಪರಿವರ್ತಿಸಿದರು.

ಐಸಿಸಿ Ranking: ಟೆಸ್ಟ್‌ನಲ್ಲಿ ಭಾರತ ಫಸ್ಟು, ಟಿ20ಯಲ್ಲಿ ಪಾಕಿಸ್ತಾನ ಬೆಸ್ಟು! ಐಸಿಸಿ Ranking: ಟೆಸ್ಟ್‌ನಲ್ಲಿ ಭಾರತ ಫಸ್ಟು, ಟಿ20ಯಲ್ಲಿ ಪಾಕಿಸ್ತಾನ ಬೆಸ್ಟು!

ಅವರಿಗೆ ಸಾಥ್ ನೀಡಿದ ಕೆ. ಗೌತಮ್ 43 ರನ್‌ಗಳ ಜೊತೆಯಾಟ ನೀಡಿದರು. ಬಳಿಕ ಅಭಿಮನ್ಯು ಮಿಥುನ್ 17 ಎಸೆತಗಳಲ್ಲಿ 33 ರನ್ ಚಚ್ಚಿ ತಂಡದ ಮೊತ್ತವನ್ನು ಇನ್ನೂರರ ಗಡಿ ದಾಟಿಸಿದರು. 219 ರನ್‌ಗಳಿಗೆ ಏಳು ವಿಕೆಟ್ ಕಳೆದುಕೊಂಡಿದ್ದ ಸಂದರ್ಭದಲ್ಲಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡ ನಾಯಕ ಮನೀಶ್ ಪಾಂಡೆ ಎದುರಾಳಿಗೆ 355 ರನ್‌ ಗುರಿ ನೀಡಿದರು.

ಅವನೀಶ್-ಅಮನ್ದೀಪ್ ಜೊತೆಯಾಟ

ಕಠಿಣ ಗುರಿ ಇದ್ದಿದ್ದರಿಂದ ಡ್ರಾ ಮಾಡಿಕೊಳ್ಳುವ ಯೋಜನೆಯೊಂದಿಗೆ ಎರಡನೆಯ ಇನ್ನಿಂಗ್ಸ್ ಶುರುಮಾಡಿದ ಛತ್ತೀಸ್ ಗಢಕ್ಕೆ ಮಿಥುನ್ ಮತ್ತು ರೋನಿತ್ ಮೋರೆ ಆಘಾತ ನೀಡಿದರು. 42 ರನ್‌ಗೆ ಎರಡು ವಿಕೆಟ್ ಕಳೆದುಕೊಂಡಿದ್ದ ತಂಡಕ್ಕೆ ಅವನೀಶ್ ಧಲಿವಾಲ್ ಮತ್ತು ಅಮನ್ದೀಪ್ ಖರೆ ಆಸರೆಯಾದರು. ಇಬ್ಬರೂ ಸುಮಾರು 30 ಓವರ್‌ ಕಾಲ ವಿಕೆಟ್ ಬೀಳದಂತೆ ನೋಡಿಕೊಂಡು ಆತಿಥೇಯರಲ್ಲಿ ಕಳವಳ ಮೂಡಿಸಿದ್ದರು. ಈ ಜೋಡಿಯ 65 ರನ್‌ಗಳ ಜೊತೆಯಾಟವನ್ನು ಶ್ರೇಯಸ್ ಗೋಪಾಲ್ ಮುರಿದರು.

ಸಿಡ್ನಿ ಟೆಸ್ಟ್ ಪಂದ್ಯಕ್ಕಾಗಿ ಟೀಂ ಇಂಡಿಯಾದ ಸಂಭಾವ್ಯ XI

ಶ್ರೇಯಸ್, ಮೋರೆ ದಾಳಿ

ಶ್ರೇಯಸ್, ಮೋರೆ ದಾಳಿ

ಬಳಿಕ ಛತ್ತೀಸ್ ಗಢದ ಪತನದ ಹಾದಿ ಆರಂಭವಾಯಿತು. ನಾಲ್ಕು ಓವರ್‌ಗಳಲ್ಲಿ ಅವನೀಶ್ ಕೂಡ ಶ್ರೇಯಸ್‌ಗೆ ವಿಕೆಟ್ ಒಪ್ಪಿಸಿದರು. ಬಳಿಕ ಅಶುತೋಷ್ ಸಿಂಗ್ ಹೊರತುಪಡಿಸಿ ಉಳಿದ ಯಾವ ಬ್ಯಾಟ್ಸ್‌ಮನ್‌ಗಳೂ ಕರ್ನಾಟಕದ ಬೌಲಿಂಗ್ ದಾಳಿಯನ್ನು ಎದುರಿಸುವ ಛಾತಿ ತೋರಿಸಲಿಲ್ಲ. 39 ರನ್ ಸೇರಿಸುವಷ್ಟರಲ್ಲಿ ಕೊನೆಯ ಏಳು ವಿಕೆಟ್‌ಗಳನ್ನು ಛತ್ತೀಸ್ ಗಢ ಕಳೆದುಕೊಂಡಿತು.

ಸಿಡ್ನಿ ಟೆಸ್ಟ್ ಪಂದ್ಯಕ್ಕೆ ರವಿಚಂದ್ರನ್ ಅಶ್ವಿನ್ ಅಲಭ್ಯ

ರೋನಿತ್ ಮೋರೆ ಪಂದ್ಯ ಶ್ರೇಷ್ಠ

ಎರಡೂ ಇನ್ನಿಂಗ್ಸ್‌ಗಳಿಂದ ಒಂಬತ್ತು ವಿಕೆಟ್ ಪಡೆದ ರೋನಿತ್ ಮೋರೆ ಪಂದ್ಯ ಶ್ರೇಷ್ಠ ಗೌರವಕ್ಕೆ ಪಾತ್ರರಾದರು. ವಿನಯ್ ಕುಮಾರ್ ಅವರಿಂದ ನಾಯಕತ್ವದ ಹೊಣೆಯನ್ನು ವಹಿಸಿಕೊಂಡಿರುವ ಮನೀಶ್ ಪಾಂಡೆ ಅವರಿಗೆ ಇದು ಸತತ ಎರಡನೆಯ ಗೆಲುವು. ಈ ಪಂದ್ಯದಿಂದ ರಾಜ್ಯ ತಂಡಕ್ಕೆ ಆರು ಅಂಕಗಳು ದೊರೆತಿವೆ. ಈ ಮೂಲಕ ಕರ್ನಾಟಕ ಎಲೈಟ್ ಎ ಗುಂಪಿನಲ್ಲಿ 27 ಅಂಕಗಳೊಂದಿಗೆ ಎರಡನೆಯ ಸ್ಥಾನವನ್ನು ಪಡೆದುಕೊಂಡಿದೆ.

ಕರ್ನಾಟಕ ಸ್ಕೋರ್

418 & 129/7 (49.3) ಮನೀಶ್ ಪಾಂಡೆ 102* ಅಭಿಮನ್ಯು ಮಿಥುನ್ 33*, ಶ್ರೇಯಸ್ ಗೋಪಾಲ್ 22, ಪಂಕಜ್ ಕುಮಾರ್ ರಾವ್ 67/4, ಅಜಯ್ ಜಾಧವ್ ಮಂಡಲ್ 30/1

ಛತ್ತೀಸ್ ಗಢ ಸ್ಕೋರ್

ಛತ್ತೀಸ್ ಗಢ ಸ್ಕೋರ್

283 & 156/10 (57) ಅವನೀಶ್ ಧಲಿವಾಲ್ 61, ಅಮನ್ದೀಪ್ ಖರೆ 35, ಅಶುತೋಷ್ ಶಿಂಗ್ 16* ರೋನಿತ್ ಮೋರೆ 35/4, ಶ್ರೇಯಸ್ ಗೋಪಾಲ್ 44/4, ಅಭಿಮನ್ಯು ಮಿಥುನ್ 16/1

Story first published: Wednesday, January 2, 2019, 18:20 [IST]
Other articles published on Jan 2, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X