ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರಣಜಿ ಕ್ರಿಕೆಟ್: ಗುಜರಾತ್ ವಿರುದ್ಧ ಕರ್ನಾಟಕಕ್ಕೆ ಆರಂಭಿಕ ಆಘಾತ

Ranji cricket karnataka vs gujarat first day report priyank panchal vinay kumar

ಸೂರತ್, ಡಿಸೆಂಬರ್ 14: ಶುಕ್ರವಾರ ಆರಂಭವಾದ ರಣಜಿ ಪಂದ್ಯದಲ್ಲಿ ಆತಿಥೇಯ ಗುಜರಾತ್ ತಂಡವನ್ನು ಸಾಧಾರಣ ಮೊತ್ತಕ್ಕೆ ಕಟ್ಟಿಹಾಕುವಲ್ಲಿ ಯಶಸ್ವಿಯಾದ ಕರ್ನಾಟಕ, ಆರಂಭಿಕ ಆಘಾತ ಅನುಭವಿಸಿದೆ.

ಈ ಆವೃತ್ತಿಯಲ್ಲಿ ಇದೇ ಮೊದಲ ರಣಜಿ ಪಂದ್ಯ ಆಡುತ್ತಿರುವ ಮಯಂಕ್ ಅಗರವಾಲ್ 25 ರನ್‌ ಗಳಿಸಿ ವಿಕೆಟ್ ಒಪ್ಪಿಸಿದರೆ, ದಿನದ ಅಂತ್ಯದ ವೇಳೆಗೆ ಮತ್ತೊಬ್ಬ ಆರಂಭಿಕ ದೇಗಾ ನಿಶ್ಚಲ್ ಕೂಡ 12 ರನ್‌ಗೆ ಔಟಾದರು.

'ಚಮತ್ಕಾರಿಕ ಕ್ಯಾಚ್‌'ನಿಂದ ಹ್ಯಾಂಡ್ಸ್‌ಕಾಂಬ್ ಪೆವಿಲಿಯನ್‌ಗಟ್ಟಿದ ವಿರಾಟ್ ಕೊಹ್ಲಿ! 'ಚಮತ್ಕಾರಿಕ ಕ್ಯಾಚ್‌'ನಿಂದ ಹ್ಯಾಂಡ್ಸ್‌ಕಾಂಬ್ ಪೆವಿಲಿಯನ್‌ಗಟ್ಟಿದ ವಿರಾಟ್ ಕೊಹ್ಲಿ!

ಟಾಸ್ ಗೆದ್ದ ಆತಿಥೇಯ ತಂಡದ ನಾಯಕ ಪ್ರಿಯಾಂಕ್ ಪಾಂಚಾಲ್ ಬ್ಯಾಟಿಂಗ್ ಆಯ್ದುಕೊಂಡರು. ಜೊತೆಗೆ ನಾಯಕನಾಟ ಪ್ರದರ್ಶಿಸಿದರು.

ಆದರೆ, ಇನ್ನೊಂದು ಬದಿಯಲ್ಲಿ ಯಾವ ಆಟಗಾರನಿಂದಲೂ ಅವರಿಗೆ ಸೂಕ್ತ ಬೆಂಬಲ ಸಿಗಲಿಲ್ಲ. ಆರಂಭದಿಂದಲೇ ಗುಜರಾತ್ ವಿಕೆಟ್‌ಗಳನ್ನು ಕಳೆದುಕೊಳ್ಳತೊಡಗಿತು.

159 ರನ್‌ಗೆ ಎಂಟು ವಿಕೆಟ್ ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ ಗುಜರಾತ್‌ಗೆ ಬಾಲಂಗೋಚಿಗಳಾದ ಪಿಯೂಷ್ ಚಾವ್ಲಾ ಮತ್ತು ಪೆಹುಲ್ ಪಟೇಲ್ ಆಸರೆಯಾದರು. 9ನೇ ವಿಕೆಟ್‌ಗೆ ಇಬ್ಬರೂ 41 ರನ್ ಸೇರಿಸಿ ತಂಡವನ್ನು ಇನ್ನೂರರ ಗಡಿ ದಾಟಿಸಿದರು.

ಐಪಿಎಲ್ 2019: ಕಿಂಗ್ಸ್‌ XI ಪಂಜಾಬ್‌ ಸೇರಿಕೊಳ್ಳಲಿದ್ದಾರೆ ಗೌತಮ್ ಗಂಭೀರ್?!ಐಪಿಎಲ್ 2019: ಕಿಂಗ್ಸ್‌ XI ಪಂಜಾಬ್‌ ಸೇರಿಕೊಳ್ಳಲಿದ್ದಾರೆ ಗೌತಮ್ ಗಂಭೀರ್?!

ಕರ್ನಾಟಕದ ಪರ ನಾಯಕ ವಿನಯ್ ಕುಮಾರ್, ಪ್ರತೀಕ್ ಜೈನ್, ರೋನಿತ್ ಮೋರೆ, ಕೆ. ಗೌತಮ್ ಮತ್ತು ಶ್ರೇಯಸ್ ಗೋಪಾಲ್ ತಲಾ ಎರಡು ವಿಕೆಟ್ ಪಡೆದರು.

ನ್ಯೂಜಿಲೆಂಡ್ ಎ ವಿರುದ್ಧದ ಭಾರತ ಎ ತಂಡದ ಪ್ರವಾಸದಲ್ಲಿದ್ದ ಮಯಾಂಕ್ ಅಗರವಾಲ್ ಮತ್ತು ಕೆ. ಗೌತಮ್ ತಂಡಕ್ಕೆ ಮರಳಿದ್ದಾರೆ. ಆದರೆ, ಭಾರತ ಎ ತಂಡದ ಸರಣಿ ಜಯಕ್ಕೆ ಕಾರಣರಾಗಿದ್ದ ನಾಯಕ ಮನೀಶ್ ಪಾಂಡೆ ಈ ಪಂದ್ಯದಲ್ಲಿ ಆಡಿಲ್ಲ. ಕಳೆದ ಪಂದ್ಯದಲ್ಲಿ ಸೌರಾಷ್ಟ್ರ ವಿರುದ್ಧ ಆಡಿದ್ದ ಕರುಣ್ ನಾಯರ್ ಕೂಡ ತಂಡದಿಂದ ಹೊರಗುಳಿದಿದ್ದಾರೆ.

ಭಾರತ-ಆಸ್ಟ್ರೇಲಿಯಾ ಟೆಸ್ಟ್: ಚತುರ ಆಟ ಪ್ರದರ್ಶಿಸಿದ ಆಸೀಸ್ ಆಟಗಾರರುಭಾರತ-ಆಸ್ಟ್ರೇಲಿಯಾ ಟೆಸ್ಟ್: ಚತುರ ಆಟ ಪ್ರದರ್ಶಿಸಿದ ಆಸೀಸ್ ಆಟಗಾರರು

ಕರ್ನಾಟಕದ ಹೊಸ ಪ್ರತಿಭೆ, ವಿಕೆಟ್ ಕೀಪರ್ ಶರತ್ ಶ್ರೀನಿವಾಸ್ ರಣಜಿ ಪಾದಾರ್ಪಣೆ ಮಾಡಿದರು.

ಸಂಕ್ಷಿಪ್ತ ಸ್ಕೋರ್
ಗುಜರಾತ್: 216/10 (69.4) ಪ್ರಿಯಾಂಕ್ ಪಾಂಚಾಲ್ 74, ಪಿಯೂಷ್ ಚಾವ್ಲಾ 34, ಮೆಹುಲ್ ಪಟೇಲ್ 31*, ವಿನಯ್ ಕುಮಾರ್ 2/33, ಶ್ರೇಯಸ್ ಗೋಪಾಲ್ 2/21, ಪ್ರತೀಕ್ ಜೈನ್ 2/28

ಕರ್ನಾಟಕ: 45/2 (14.5) ಮಯಾಂಕ್ ಅಗರವಾಲ್ 25, ದೇಗಾ ನಿಶ್ಚಲ್ 12, ರವಿಕುಮಾರ್ ಸಮರ್ಥ್ 7*, ಪಿಯೂಷ್ ಚಾವ್ಲಾ 1/1, ಅರ್ಜಾನ್ ನಗ್ವಸ್ವಲ್ಲ 1/9

Story first published: Friday, December 14, 2018, 19:13 [IST]
Other articles published on Dec 14, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X