ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರಣಜಿ ಕ್ರಿಕೆಟ್: ರೈಲ್ವೇಸ್ ಎದುರು ಹಳಿ ತಪ್ಪಿದ ಕರ್ನಾಟಕ

ಶಿವಮೊಗ್ಗ, ಡಿಸೆಂಬರ್ 22: ಶಿವಮೊಗ್ಗದ ನವುಲೆ ಕ್ರಿಕೆಟ್ ಮೈದಾನದಲ್ಲಿ ಶನಿವಾರ ಆರಂಭವಾದ ರಣಜಿ ಕ್ರಿಕೆಟ್‌ನಲ್ಲಿ ರೈಲ್ವೇಸ್ ತಂಡದ ವಿರುದ್ಧ ಆತಿಥೇಯ ಕರ್ನಾಟಕದ ಸಂಕಷ್ಟಕ್ಕೆ ಸಿಲುಕಿದೆ.

ರೈಲ್ವೇಸ್ ಬೌಲರ್‌ಗಳ ಎದುರು ಮಂಕಾದ ಕರ್ನಾಟಕದ ಬ್ಯಾಟ್ಸ್‌ಮನ್‌ಗಳು ಮಲೆನಾಡಿನ ಚಳಿ ಚಳಿಯ ವಾತಾವರಣದಲ್ಲಿ ರನ್ ಗಳಿಸಲು ಪರದಾಡಿದರು.

ಶಿವಮೊಗ್ಗದಲ್ಲಿ ರಣಜಿ ಪಂದ್ಯ: ಕರ್ನಾಟಕ ಹಾಗೂ ರೈಲ್ವೇಸ್ ಹಣಾಹಣಿ

ದೇಗಾ ನಿಶ್ಚಲ್ ಮತ್ತು ಕೆ. ಸಿದ್ಧಾರ್ಥ್ ಅವರ ಹೋರಾಟದ ಬ್ಯಾಟಿಂಗ್‌ನಿಂದಾಗಿ ರಾಜ್ಯ ತಂಡ ಮೊದಲ ದಿನ ಗೌರವ ಉಳಿಸಿಕೊಳ್ಳಲು ಸಾಧ್ಯವಾಯಿತು.

Ranji cricket shimoga karnataka vs railways first day report

ನಾಯಕ ವಿನಯ್ ಕುಮಾರ್ ಅನುಪಸ್ಥಿತಿಯಲ್ಲಿ ಅನುಭವಿ ಮನೀಶ್ ಪಾಂಡೆ ರಾಜ್ಯ ತಂಡವನ್ನು ಮುನ್ನಡೆಸುತ್ತಿದ್ದಾರೆ.

ಟಾಸ್ ಗೆದ್ದ ರೈಲ್ವೇಸ್ ಬೌಲಿಂಗ್ ಆಯ್ದುಕೊಂಡಿತು. ತಂಡದ ನಾಯಕ ಅರಿಂದಮ್ ಘೋಷ್ ಆಯ್ಕೆಯನ್ನು ಬೌಲರ್‌ಗಳು ಸಮರ್ಥಿಸಿಕೊಂಡರು. ತಂಡದ ಮೊತ್ತ 17 ಆಗುವ ವೇಳೆಗೆ ನಾಯಕ ಮನೀಶ್ ಪಾಂಡೆ, ಆರ್ ಸಮರ್ಥ್ ಮತ್ತು ದೇವದತ್ ಪಡಿಕ್ಕಲ್ ಪೆವಿಲಿಯನ್ ಸೇರಿದ್ದರು.

ನಾಲ್ಕನೆಯ ವಿಕೆಟ್‌ಗೆ ಆರಂಭಿಕ ಆಟಗಾರ ದೇಗಾ ನಿಶ್ಚಲ್ ಮತ್ತು ಕೆ. ಸಿದ್ಧಾರ್ಥ್ ಶತಕದ ಜೊತೆಯಾಟ ನೀಡಿ ತಂಡಕ್ಕೆ ಜೀವ ತುಂಬಿದರು. ಇಬ್ಬರೂ ಅರ್ಧಶತಕದ ಕೊಡುಗೆ ನೀಡಿದರು.

ಆದರೆ, ನಿಶ್ಚಲ್ ಔಟಾಗುತ್ತಿದ್ದಂತೆಯೇ ಕರ್ನಾಟಕದ ಬ್ಯಾಟಿಂಗ್ ಮತ್ತೆ ಹಳಿತಪ್ಪಿತು. ತಂಡದ ಮೊತ್ತ 159 ಆಗಿದ್ದಾಗ ಸಿದ್ಧಾರ್ಥ್ ಕೂಡ ಕೆಟ್ಟ ಹೊಡೆತಕ್ಕೆ ಔಟಾದರು. ಶ್ರೇಯಸ್ ಗೋಪಾಲ್, ಕೆ. ಗೌತಮ್, ಅಭಿಮನ್ಯು ಮಿಥುನ್ ಮತ್ತು ರೋನಿತ್ ಮೋರೆ ವಿಕೆಟ್ ಒಪ್ಪಿಸುವುದರಲ್ಲಿ ಆತುರ ತೋರಿದರು.

Ranji cricket shimoga karnataka vs railways first day report

ಕೊನೆಯಲ್ಲಿ ವಿಕೆಟ್ ಕೀಪರ್ ಶ್ರೀನಿವಾಸ್ ಶರತ್ ಅವರ ಜೊತೆಗೂಡಿದ ಕೊನೆಯ ಕ್ರಮಾಂಕದ ಬ್ಯಾಟ್ಸ್‌ಮನ್‌ ಪ್ರಸಿದ್ಧ ಕೃಷ್ಣ 21 ಎಸೆತಗಳನ್ನು ಎದುರಿಸಿ ಮೊದಲ ದಿನವೇ ಆಲೌಟ್ ಆಗುವುದರಿಂದ ತಪ್ಪಿಸಿದರು.

ಸಂಕ್ಷಿಪ್ತ ಸ್ಕೋರ್
ಕರ್ನಾಟಕ: 208/9 (89) ಕೆ. ಸಿದ್ಧಾರ್ಥ್ 69, ದೇಗಾ ನಿಶ್ಚಲ್ 52, ಶ್ರೀನಿವಾಸ್ ಶರತ್ 28*, ಶ್ರೇಯಸ್ ಗೋಪಾಲ್ 20, ಅವಿನಾಶ್ ಯಾದವ್ 3/43, ಎಸಿಪಿ ಮಿಶ್ರಾ 3/57, ಕರಣ್ ಠಾಕೂರ್ 2/41
*ರೈಲ್ವೇಸ್ ವಿರುದ್ಧ ಪಂದ್ಯ

Story first published: Monday, December 24, 2018, 12:32 [IST]
Other articles published on Dec 24, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X