ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರಣಜಿ ಫೈನಲ್: ಮಧ್ಯಪ್ರದೇಶ ಭರ್ಜರಿ ಬ್ಯಾಟಿಂಗ್, ಯಶ್ ದುಬೆ ಹಾಗೂ ಶುಭಂ ಶರ್ಮಾ ಸೆಂಚುರಿ ದಾಖಲು

Madhya pradesh

ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ರಣಜಿ ಫೈನಲ್ ಪಂದ್ಯದಲ್ಲಿ ಮುಂಬೈ ಮೊತ್ತಕ್ಕೆ ಉತ್ತರವಾಗಿ ಮಧ್ಯಪ್ರದೇಶ ತಿರುಗೇಟು ನೀಡಿದ್ದು ಮೂರನೇ ದಿನದಾಟದಂತ್ಯಕ್ಕೆ 3 ವಿಕೆಟ್ ನಷ್ಟಕ್ಕೆ 368 ರನ್ ದಾಖಲಿಸಿದೆ.

ಮುಂಬೈ ಮೊದಲ ಇನ್ನಿಂಗ್ಸ್ ನೀಡಿರುವ 374 ರನ್‌ಗಳಿಗೆ ಉತ್ತರವಾಗಿ ಸೊಗಸಾದ ಬ್ಯಾಟಿಂಗ್ ನಡೆಸಿರುವ ಮಧ್ಯಪ್ರದೇಶ ಬ್ಯಾಟರ್‌ಗಳು ಮೂರನೇ ದಿನದಾಟದಲ್ಲಿ ಸಂಪೂರ್ಣ ಮೇಲುಗೈ ಸಾಧಿಸಿದರು. ಓಪನರ್ ಯಶ್ ದುಬೆ ಮತ್ತು ಶುಭಂ ಎಸ್. ಶರ್ಮಾ ಬೊಂಬಾಟ್ ಬ್ಯಾಟಿಂಗ್ ನೆರವಿನಿಂದ 300ರ ಗಡಿದಾಟಲು ಸಾಧ್ಯವಾಗಿದೆ. ಆರ್‌ಸಿಬಿ ಪರ ಸೂಪರ್ ಬ್ಯಾಟಿಂಗ್ ಪ್ರದರ್ಶಿಸಿದ ರಜತ್ ಪಾಟೀದಾರ್ ಕೂಡ ಉತ್ತಮ ಆಟವಾಡಿದ್ದಾರೆ.

ಯಶ್ ದುಬೆ, ಶುಭಂ ಶರ್ಮಾ ಭರ್ಜರಿ ಶತಕ

ಯಶ್ ದುಬೆ, ಶುಭಂ ಶರ್ಮಾ ಭರ್ಜರಿ ಶತಕ

ಮಧ್ಯ ಪ್ರದೇಶ ಪರ ಓಪನಿಂಗ್ ಬ್ಯಾಟರ್ ಯಶ್ ದುಬೆ ಅತ್ಯಂತ ತಾಳ್ಮೆಯುತ ಇನ್ನಿಂಗ್ಸ್‌ ಕಟ್ಟಿದ್ದಾರೆ. ವಿಕೆಟ್ ಕೀಪರ್ ಬ್ಯಾಟರ್ ಹಿಮಾಂಶು ಮಂತ್ರಿ 31ರನ್‌ಗೆ ತುಷಾರ್ ದೇಶಪಾಂಡೆಗೆ ವಿಕೆಟ್ ಒಪ್ಪಿಸಿದ ಬಳಿಕ ಎರಡನೇ ವಿಕೆಟ್‌ಗೆ ಜೊತೆಯಾದ ಯಶ್ ದುಬೆ ಮತ್ತು ಶುಭಂ ಎಸ್. ಶರ್ಮಾ ದ್ವಿಶತಕದ ಜೊತೆಯಾಟವಾಡಿದರು.

336 ಎಸೆತಗಳಲ್ಲಿ 14 ಬೌಂಡರಿ ಸಹಿತ 133 ರನ್ ಕಲೆಹಾಕಿದ ಯಶ್ ದುಬೆ ತಂಡದ ಪ್ರಮುಖ ರನ್‌ ಸ್ಕೋರರ್ ಆಗಿ ಕಾಣಿಸಿಕೊಂಡಿದ್ದಾರೆ. ಇನ್ನು ಮತ್ತೊಂದು ಬದಿಯಲ್ಲಿ ಉತ್ತಮ ಆಟವಾಡಿದ ಶುಭಂ ಎಸ್‌. ಶರ್ಮಾ 215 ಎಸೆತಗಳಲ್ಲಿ 116 ರನ್ ಸಿಡಿಸುವ ಮೂಲಕ ತಂಡಕ್ಕೆ ಆಧಾರವಾದ್ರು. ಶುಭಂ ಇನ್ನಿಂಗ್ಸ್‌ನಲ್ಲಿ 15 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡಿತ್ತು.

T20 ವಿಶ್ವಕಪ್ 2022: ಭಾರತಕ್ಕೆ ಕೊಹ್ಲಿ, ರೋಹಿತ್ ಹೊರತುಪಡಿಸಿ ಈ ಮೂವರ ಪಾತ್ರ ಬಹಳ ಮುಖ್ಯ

ರಜತ್ ಪಾಟೀದಾರ್ ಅಜೇಯ ಅರ್ಧಶತಕ, ಇನ್ನು 6ರನ್‌ಗಳಷ್ಟೇ ಬಾಕಿ

ರಜತ್ ಪಾಟೀದಾರ್ ಅಜೇಯ ಅರ್ಧಶತಕ, ಇನ್ನು 6ರನ್‌ಗಳಷ್ಟೇ ಬಾಕಿ

ಮಧ್ಯಪ್ರದೇಶ ಪರ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಮೂವರು ಬ್ಯಾಟರ್‌ಗಳಲ್ಲಿ ರಜತ್ ಪಾಟೀದಾರ್ ಕೂಡ ಒಬ್ಬರು. ಐಪಿಎಲ್ 2022ರ ಸೀಸನ್‌ನಲ್ಲಿ ಆರ್‌ಸಿಬಿ ಪರ ಉತ್ತಮ ಆಟವಾಡಿದ ಪಾಟೀದಾರ್, ರಣಜಿಯಲ್ಲೂ ತಮ್ಮ ಅಮೋಘ ಫಾರ್ಮ್ ಮುಂದುವರಿಸಿದ್ದಾರೆ. 106 ಎಸೆತಗಳಲ್ಲಿ ಅಜೇಯ 67 ರನ್ ಕಲೆಹಾಕಿರುವ ರಜತ್ ಪಾಟೀದಾರ್ 13 ಬೌಂಡರಿಗಳನ್ನು ಸಿಡಿಸಿದರು. ಪಾಟೀದಾರ್‌ಗೆ ಸಾಥ್ ಕೊಟ್ಟ ನಾಯಕ ಆದಿತ್ಯ ಶ್ರೀವಾಸ್ತವ ಅಜೇಯ 11 ರನ್ ಕಲೆಹಾಕಿ ನಾಲ್ಕನೇ ದಿನದಾಟಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.

ಲೀಸೆಸ್ಟರ್‌ಶೈರ್ ಟೆಸ್ಟ್: ಕೈಹಿಡಿದ ಮಾಜಿ ಆರ್‌ಸಿಬಿ ಆಟಗಾರ; ಭಾರತದ ಪರ ಅರ್ಧಶತಕ ಬಾರಿಸಿದ್ದು ಈತನೊಬ್ವನೇ

ಉಭಯ ತಂಡಗಳ ಪ್ಲೇಯಿಂಗ್ 11

ಉಭಯ ತಂಡಗಳ ಪ್ಲೇಯಿಂಗ್ 11

ಮುಂಬೈ
ಪೃಥ್ವಿ ಶಾ(ನಾಯಕ), ಯಶಸ್ವಿ ಜೈಸ್ವಾಲ್, ಅರ್ಮಾನ್ ಜಾಫರ್, ಸುವೇದ್ ಪರ್ಕರ್, ಸರ್ಫರಾಜ್ ಖಾನ್, ಹಾರ್ದಿಕ್ ತಮೋರ್(ವಿಕೆಟ್ ಕೀಪರ್), ಶಮ್ಸ್ ಮುಲಾನಿ, ತನುಷ್ ಕೋಟ್ಯಾನ್, ಧವಲ್ ಕುಲಕರ್ಣಿ, ತುಷಾರ್ ದೇಶಪಾಂಡೆ, ಮೋಹಿತ್ ಅವಸ್ತಿ

ಮಧ್ಯಪ್ರದೇಶ
ಯಶ್ ದುಬೆ, ಹಿಮಾಂಶು ಮಂತ್ರಿ(ವಿಕೆಟ್ ಕೀಪರ್), ಶುಭಂ ಎಸ್ ಶರ್ಮಾ, ರಜತ್ ಪಾಟಿದಾರ್, ಆದಿತ್ಯ ಶ್ರೀವಾಸ್ತವ(ನಾಯಕ), ಅಕ್ಷತ್ ರಘುವಂಶಿ, ಸರನ್ಶ್ ಜೈನ್, ಕುಮಾರ್ ಕಾರ್ತಿಕೇಯ, ಅನುಭವ್ ಅಗರ್ವಾಲ್, ಗೌರವ್ ಯಾದವ್, ಪಾರ್ಥ್ ಸಹಾನಿ

Story first published: Friday, June 24, 2022, 19:49 [IST]
Other articles published on Jun 24, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X