ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರಣಜಿ ಫೈನಲ್: ಮಧ್ಯಪ್ರದೇಶ ವಿರುದ್ಧ ಟಾಸ್ ಗೆದ್ದ ಮುಂಬೈ ಬ್ಯಾಟಿಂಗ್ ಆಯ್ಕೆ, ಪ್ಲೇಯಿಂಗ್ 11

Mumbai vs Madhya pradesh

ಬೆಂಗಳೂರಿನ ಎಂ. ಚಿನ್ನಸ್ವಾಮಿ ಮೈದಾನದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ಮುಂಬೈ ತಂಡವು ಟಾಸ್‌ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದೆ. ಮಧ್ಯಪ್ರದೇಶ ವಿರುದ್ಧದ ಪಂದ್ಯದಲ್ಲಿ ಪೃಥ್ವಿ ಶಾ ಪಡೆ ಉತ್ತಮ ಆರಂಭ ಪಡೆದು ಬೃಹತ್ ಮೊತ್ತ ಕಲೆಹಾಕುವ ಲೆಕ್ಕಾಚಾರ ಹಾಕಿಕೊಂಡಿದೆ.

ಮುಂಬೈ ಕಳೆದ ಸೆಮಿಫೈನಲ್‌ನಲ್ಲಿ ಆಡಿದ ತಂಡವನ್ನೇ ಫೈನಲ್‌ನಲ್ಲಿ ಆಡಿಸುತ್ತಿದ್ದು, ಯಾವುದೇ ಬದಲಾವಣೆ ಮಾಡಿಕೊಂಡಿಲ್ಲ. ಆದ್ರೆ ಮಧ್ಯಪ್ರದೇಶ ತಂಡದಲ್ಲಿ ಒಂದು ಬದಲಾವಣೆ ಆಗಿದೆ.

ಸೆಮಿಫೈನಲ್ ಪಂದ್ಯದಲ್ಲಿ ಆದಿತ್ಯ ಶ್ರೀವಾಸ್ತವ ನಾಯಕತ್ವದ ಮಧ್ಯಪ್ರದೇಶ ತಂಡವು ಬೆಂಗಾಲ್ ವಿರುದ್ಧ ಗೆದ್ದು ಫೈನಲ್ ಪ್ರವೇಶಿಸಿತು. ಇನ್ನು ಮತ್ತೊಂದು ಸೆಮಿಫೈನಲ್‌ನಲ್ಲಿ ಉತ್ತರ ಪ್ರದೇಶ ವಿರುದ್ಧ ಬೃಹತ್ ಮೊತ್ತ ಕಲೆಹಾಕಿದ ಮುಂಬೈ ತಂಡವು ಇನ್ನಿಂಗ್ಸ್ ಮುನ್ನಡೆ ಸಾಧಿಸಿ ಫೈನಲ್‌ ಟಿಕೆಟ್ ಪಡೆದಿತ್ತು.

ಪಿಚ್ ರಿಪೋರ್ಟ್
ಬೆಂಗಳೂರು ಪಿಚ್ ಯಾವಾಗಲೂ ಉತ್ತಮವಾಗಿರುತ್ತವೆ. ಸಾಕಷ್ಟು ಹುಲ್ಲು ಇರುವುದರಿಂದ, ಐದು ದಿನಗಳವರೆಗೆ ಪಿಚ್ ಅನ್ನು ಹಿಡಿದಿಟ್ಟುಕೊಳ್ಳುವುದು. ಹುಲ್ಲಿನಿಂದಾಗಿ ಮೊದಲ ಎರಡು ದಿನ ಬ್ಯಾಟಿಂಗ್‌ಗೆ ತುಂಬಾ ಚೆನ್ನಾಗಿರುತ್ತೆ. ಆರಂಭದಲ್ಲಿ ಬೌನ್ಸ್ ಮತ್ತು ಕೆಲವು ಸೀಮ್ ಚಲನೆ ಇರುತ್ತದೆ. ಇದು ಫೈನಲ್ ಆಗಿರುವುದರಿಂದ ಮುಂಬೈ ಮೊದಲು ಬ್ಯಾಟಿಂಗ್ ಮಾಡಲು ಮುಂದಾಗಿದೆ.

ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್

ಮುಂಬೈ
ಪೃಥ್ವಿ ಶಾ(ನಾಯಕ), ಯಶಸ್ವಿ ಜೈಸ್ವಾಲ್, ಅರ್ಮಾನ್ ಜಾಫರ್, ಸುವೇದ್ ಪರ್ಕರ್, ಸರ್ಫರಾಜ್ ಖಾನ್, ಹಾರ್ದಿಕ್ ತಮೋರ್(ವಿಕೆಟ್ ಕೀಪರ್), ಶಮ್ಸ್ ಮುಲಾನಿ, ತನುಷ್ ಕೋಟ್ಯಾನ್, ಧವಲ್ ಕುಲಕರ್ಣಿ, ತುಷಾರ್ ದೇಶಪಾಂಡೆ, ಮೋಹಿತ್ ಅವಸ್ತಿ

ರಕ್ಷಿತ್ ಶೆಟ್ಟಿ ಸಿನಿಮಾದಲ್ಲಿ ವಿರಾಟ್ ಕೊಹ್ಲಿ ಆಕ್ಟಿಂಗ್!! ಇದು ಸಾಧ್ಯಾನಾ?? | *Cricket | OneIndia Kannada

ಮಧ್ಯಪ್ರದೇಶ
ಯಶ್ ದುಬೆ, ಹಿಮಾಂಶು ಮಂತ್ರಿ(ವಿಕೆಟ್ ಕೀಪರ್), ಶುಭಂ ಎಸ್ ಶರ್ಮಾ, ರಜತ್ ಪಾಟಿದಾರ್, ಆದಿತ್ಯ ಶ್ರೀವಾಸ್ತವ(ನಾಯಕ), ಅಕ್ಷತ್ ರಘುವಂಶಿ, ಸರನ್ಶ್ ಜೈನ್, ಕುಮಾರ್ ಕಾರ್ತಿಕೇಯ, ಅನುಭವ್ ಅಗರ್ವಾಲ್, ಗೌರವ್ ಯಾದವ್, ಪಾರ್ಥ್ ಸಹಾನಿ

Story first published: Wednesday, June 22, 2022, 14:52 [IST]
Other articles published on Jun 22, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X