ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರಣಜಿ ಫೈನಲ್: ಸರ್ಫರಾಜ್ ಖಾನ್ ಶತಕ, ಮುಂಬೈ 374 ರನ್‌ಗಳಿಗೆ ಆಲೌಟ್‌

Sarfaraz khan
Ranji trophy Finals ಪಂದ್ಯದಲ್ಲಿ Sarfraz Khan ಸೂಪರ್ ಆಟ | *Cricket | OneIndia Kannda

ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯುತ್ತಿರುವ ರಣಜಿ ಫೈನಲ್ ಪಂದ್ಯದಲ್ಲಿ ಮುಂಬೈ ತಂಡವು ಮೊದಲ ಇನ್ನಿಂಗ್ಸ್‌ 374 ರನ್‌ಗಳಿಗೆ ಆಲೌಟ್ ಆಗಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಪೃಥ್ವಿ ಶಾ ಪಡೆ ಎರಡನೇ ದಿನದಾಟದ ಮೊದಲ ಸೆಷನ್‌ನಲ್ಲಿ ಉಳಿದ ಐದು ವಿಕೆಟ್ ಕಳೆದುಕೊಂಡು 126ರನ್ ಸೇರಿಸಿತು.

ಮೊದಲ ದಿನದಾಟದಂತ್ಯಕ್ಕೆ 5 ವಿಕೆಟ್ ನಷ್ಟಕ್ಕೆ 248 ರನ್ ಕಲೆಹಾಕಿದ್ದ ಮುಂಬೈ ಪರ ಭರ್ಜರಿ ಫಾರ್ಮ್‌ನಲ್ಲಿರುವ ಸರ್ಫರಾಜ್ ಖಾನ್ ಅಬ್ಬರದ ಶತಕ ಸಿಡಿಸಿದ್ರು. ಈ ಮೂಲಕ ಮುಂಬೈ ತಂಡವು ಹೋರಾಟದ ಮೊತ್ತವನ್ನ ಕಲೆಹಾಕಲು ಸಾಧ್ಯವಾಗಿದೆ.

ಸರ್ಫರಾಜ್ ಖಾನ್ ಬೊಂಬಾಟ್ ಶತಕ

ಸರ್ಫರಾಜ್ ಖಾನ್ ಬೊಂಬಾಟ್ ಶತಕ

ಮೊದಲ ದಿನದಾಟದಲ್ಲಿ 125 ಎಸೆತಗಳ ಎದುರಿಸಿ ಅಜೇಯ 40 ರನ್ ಕಲೆಹಾಕಿ ಎರಡನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದ ಸರ್ಫರಾಜ್‌ ಖಾನ್ ಎರಡನೇ ದಿನದಾಟದಲ್ಲಿ ತಮ್ಮ ಅಮೋಘ ಆಟವನ್ನ ಮುಂದುವರಿಸಿದ್ರು. ಮೊದಲ ದಿನದಾಟದಲ್ಲಿ ಯಶಸ್ವಿ ಜೈಸ್ವಾಲ್ ಜೊತೆಗೂಡಿ ಉತ್ತಮ ಆಟವಾಡಿದ್ದ ಸರ್ಫರಾಜ್, ಕೆಳಕ್ರಮಾಂಕದ ಬ್ಯಾಟರ್‌ಗಳ ಜೊತೆಗೂಡಿ ತಂಡದ ಮೊತ್ತವನ್ನ ಹೆಚ್ಚಿಸಿದ್ರು.

243 ಎಸೆತಗಳಲ್ಲಿ 55.14ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿರುವ ಸರ್ಫರಾಜ್ ಖಾನ್ 134 ರನ್ ಸಿಡಿಸಿ ಗೌರವ್ ಯಾದವ್‌ಗೆ ವಿಕೆಟ್ ಒಪ್ಪಿಸಿದ್ರು. ಸರ್ಫರಾಜ್ ಇನ್ನಿಂಗ್ಸ್‌ನಲ್ಲಿ 13 ಸೊಗಸಾದ ಬೌಂಡರಿ ಮತ್ತು 2 ಭರ್ಜರಿ ಸಿಕ್ಸರ್ ಒಳಗೊಂಡಿತ್ತು.

ಮುಂಬೈ ಪರ 134ರನ್‌ಗಳಿಸಿ ಔಟಾದ ಕೊನೆಯ ಬ್ಯಾಟರ್ ಇವರಾಗಿದ್ದು, ಇನ್ನಿಂಗ್ಸ್‌ದುದ್ದಕ್ಕೂ ಉತ್ತಮ ಆಟವಾಡಿ ಮಿಂಚಿದ್ದಾರೆ.

Ind vs Eng: ಭಾರತ ವಿರುದ್ಧ ಆಡಲಿದ್ದಾರೆ ಪೂಜಾರ, ಪಂತ್, ಬುಮ್ರಾ, ಪ್ರಸಿದ್ಧ್ ಕೃಷ್ಣ!

374 ರನ್‌ ಕಲೆಹಾಕಿರುವ ಮುಂಬೈ

374 ರನ್‌ ಕಲೆಹಾಕಿರುವ ಮುಂಬೈ

ಮೊದಲ ಇನ್ನಿಂಗ್ಸ್‌ನಲ್ಲಿ ಮುಂಬೈ 374ರನ್‌ಗಳನ್ನ ಕಲೆಹಾಕಿದೆ. ಮೊದಲ ದಿನದಲ್ಲಿ 5 ವಿಕೆಟ್ ನಷ್ಟಕ್ಕೆ 248 ರನ್ ಕಲೆಹಾಕಿದ್ದ ಮುಂಬೈ ಪರ ಸರ್ಫರಾಜ್ ಖಾನ್ 134, ಶಮ್ಸ್ ಮುಲಾನಿ 12, ತನುಷ್ ಕೋಟಿಯನ್ 15, ಧವಳ್ ಕುಲಕರ್ಣಿ 1, ತುಷಾರ್ ದೇಶಪಾಂಡೆ 6, ಮೋಹಿತ್ ಅವಸ್ತಿ 7ರನ್ ಕಲೆಹಾಕಿದರು. ಇದಕ್ಕೂ ಮೊದಲು ಮೊದಲ ದಿನದಾಟದಲ್ಲಿ ಪೃಥ್ವಿ ಶಾ 47 , ಯಶಸ್ವಿ ಜೈಸ್ವಾಲ್ 163 ಎಸೆತಗಳಲ್ಲಿ 78 ರನ್ ಕಲೆಹಾಕಿದ್ದರು.

ಮಧ್ಯಪ್ರದೇಶ ಪರ ಗೌರವ್ ಯಾದವ್ 4, ಅನುಭವ್ ಅಗರ್ವಾಲ್ 3, ಸುರಾನ್ಷ್‌ ಜೈನ್ 2, ಕುಮಾರ್ ಕಾರ್ತಿಕೇಯ 1 ವಿಕೆಟ್ ಪಡೆದು ಮಿಂಚಿದರು. 374 ರನ್‌ಗಳನ್ನ ಬೆನ್ನತ್ತಿರುವ ಮಧ್ಯಪ್ರದೇಶ ತನ್ನ ಮೊದಲ ಇನ್ನಿಂಗ್ಸ್‌ ಬ್ಯಾಟಿಂಗ್ ಆರಂಭಿಸಿದೆ.

ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 15 ವರ್ಷ ಪೂರೈಸಿದ ರೋಹಿತ್ ಶರ್ಮಾ; ವಿಶೇಷ ಪತ್ರ ಬರೆದ ಹಿಟ್‌ಮ್ಯಾನ್

ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್

ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್

ಮುಂಬೈ
ಪೃಥ್ವಿ ಶಾ(ನಾಯಕ), ಯಶಸ್ವಿ ಜೈಸ್ವಾಲ್, ಅರ್ಮಾನ್ ಜಾಫರ್, ಸುವೇದ್ ಪರ್ಕರ್, ಸರ್ಫರಾಜ್ ಖಾನ್, ಹಾರ್ದಿಕ್ ತಮೋರ್(ವಿಕೆಟ್ ಕೀಪರ್), ಶಮ್ಸ್ ಮುಲಾನಿ, ತನುಷ್ ಕೋಟ್ಯಾನ್, ಧವಲ್ ಕುಲಕರ್ಣಿ, ತುಷಾರ್ ದೇಶಪಾಂಡೆ, ಮೋಹಿತ್ ಅವಸ್ತಿ

ಮಧ್ಯಪ್ರದೇಶ
ಯಶ್ ದುಬೆ, ಹಿಮಾಂಶು ಮಂತ್ರಿ(ವಿಕೆಟ್ ಕೀಪರ್), ಶುಭಂ ಎಸ್ ಶರ್ಮಾ, ರಜತ್ ಪಾಟಿದಾರ್, ಆದಿತ್ಯ ಶ್ರೀವಾಸ್ತವ(ನಾಯಕ), ಅಕ್ಷತ್ ರಘುವಂಶಿ, ಸರನ್ಶ್ ಜೈನ್, ಕುಮಾರ್ ಕಾರ್ತಿಕೇಯ, ಅನುಭವ್ ಅಗರ್ವಾಲ್, ಗೌರವ್ ಯಾದವ್, ಪಾರ್ಥ್ ಸಹಾನಿ

Story first published: Thursday, June 23, 2022, 14:19 [IST]
Other articles published on Jun 23, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X