ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬರೋಡವನ್ನು 85 ರನ್‌ಗೆ ಆಲ್‌ಔಟ್‌ ಮಾಡಿ ಮುನ್ನಡೆ ಪಡೆದ ಕರ್ನಾಟಕ

Ranji: Karnataka Has Taken The First Innings Lead

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬರೋಡಾ ತಂಡದ ವಿರುದ್ಧ ನಡೆಯುತ್ತಿರುವ ರಣಜಿ ಪಂದ್ಯದಲ್ಲಿ ಕರ್ನಾಟಕ ಮುನ್ನಡೆಯನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಕರ್ನಾಟಕದ ಬೌಲರ್‌ಗಳು ಬರೋಡಾ ತಂಡದ ಆಟಗಾರರನ್ನು ಚಿಂದಿ ಉಡಾಯಿಸಿದ್ದು ಮೊದಲ ದಿನ ಮುನ್ನಡೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಕರ್ನಾಟಕ ತಂಡದ ಬೌಲರ್‌ಗಳ ದಾಳಿಗೆ ಬರೋಡಾ ಬ್ಯಾಟ್ಸ್‌ಮನ್‌ಗಳು ತರಗೆಲೆಗಳಂತೆ ಉದುರಿ ಹೋಗಿದ್ದಾರೆ. ಬರೋಡಾ ಬ್ಯಾಟ್ಸ್‌ಮನ್‌ಗಳನ್ನು ಕೇವಲ 85 ರನ್‌ಗಳಿಗೆ ಕಟ್ಟಿ ಹಾಕಲು ಕರ್ನಾಟಕ ಬೌಲರ್‌ಗಳು ಯಶಸ್ವಿಯಾದರು. ಈ ಮೂಲಕ ಆರಂಭದ ದಿನದ ಸಂಫೂರ್ಣ ಯಶಸ್ಸನ್ನು ಕರ್ನಾಟಕ ಪಡೆಯುವಂತೆ ಮಾಡಿದ್ದಾರೆ.

ವಿಶ್ವದ ನಂಬರ್ 1 ಬೌಲರ್ ಜಸ್ಪ್ರೀತ್ ಬೂಮ್ರಾ ಕಥೆ ಹೀಗ್ಯಾಕಾಯ್ತು?ವಿಶ್ವದ ನಂಬರ್ 1 ಬೌಲರ್ ಜಸ್ಪ್ರೀತ್ ಬೂಮ್ರಾ ಕಥೆ ಹೀಗ್ಯಾಕಾಯ್ತು?

ಆರಂಭಿಕ ಆಟಗಾರ ಅಹ್ಮದ್ ಪಠಾಣ್ ಮತ್ತು ದೀಪಕ್ ಹೂಡಾ ಹೊತುಪಡಿಸಿ ಯಾವ ಬ್ಯಾಟ್ಸ್‌ಮನ್‌ ಕೂಡ ಎರಡಂಕಿಯನ್ನು ತಲುಪುವಲ್ಲಿ ವಿಫಲರಾದರು. ಬರೊಬ್ಬರಿ ಐವರು ಆಟಗಾರರು ಶೂನ್ಯ ಸುತ್ತಿದ್ದಾರೆ. ಕರ್ನಾಟಕ ತಂಡದ ಪರವಾಗಿ ಅಭಿಮನ್ಯು ಮಿಥುನ್, ಕೃಷ್ಣಪ್ಪ ಗೌತಮ್ ತಲಾ 3 ವಿಕೆಟ್ ಪಡೆದರೆ, ಪ್ರಸಿಧ್ ಕೃ‍ಷ್ಣ 2 ವಿಕೆಟ್ ಪಡೆದರೆ ಶ್ರೇಯಸ್ ಗೋಪಾಲ್ ಒಂದು ವಿಕೆಟ್ ಕಬಳಿಸಿದರು.

ಇದಕ್ಕುತ್ತರವಾಗಿ ಕರ್ನಾಟಕ ಬ್ಯಾಟಿಂಗ್ ನಡೆಸಿದ್ದು 7 ವಿಕೆಟ್ ಕಳೆದುಕೊಂಡು 165 ರನ್‌ಗಳಿಸಿದೆ. ಈ ಮೂಲಕ ಮೊದಲ ದಿನದಲ್ಲಿ 80 ರನ್‌ಗಳ ಮುನ್ನಡೆಯನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಕರ್ನಾಟಕ ಪರವಾಗಿ ಶ್ರೀನಿವಾಸ್ ಶರತ್ ಮತ್ತು ಅಭಿಮನ್ಯು ಮಿಥುನ್ ಬ್ಯಾಟಿಂಗ್ ಮುಂದುವರಿಸಿದ್ದಾರೆ.

ಕರ್ನಾಟಕದ ಪಾಲಿಗೆ ಈ ಪಂದ್ಯ ಬಹಳ ಮಹತ್ವದ್ದಾಗಿದೆ. ಈ ಪಂದ್ಯದಲ್ಲಿ ಕನಿಷ್ಠ ಮೂರು ಅಮಕಗಳನ್ನು ಪಡೆಯಲೇ ಬೇಕಾದ ಒತ್ತಡದಲ್ಲಿದೆ ಕರ್ನಾಟಕ. ಇದು ಸಾಧ್ಯವಾದರೆ ಮಾತ್ರವೇ ಕ್ವಾರ್ಟರ್ ಫೈನಲ್ ಹಂತಕ್ಕೇರಲು ಸಾಧ್ಯ ಹೀಗಾಗಿ ಈ ಮುನ್ನಡೆ ಕರ್ನಾಟಕಕ್ಕೆ ಅನಿವಾರ್ಯವಾಗಿತ್ತು.

Story first published: Wednesday, February 12, 2020, 19:16 [IST]
Other articles published on Feb 12, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X