ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬ್ಯಾಟ್‌ ಕೆಳಗಿಡುವ ಮುನ್ನ ಆಕರ್ಷಕ ಶತಕ ಬಾರಿಸಿದ ಗೌತಮ್ ಗಂಭೀರ್!

Ranji Trophy 2018-19: Gambhir scores ton in farewell game

ರಾಜ್‌ಕೋಟ್, ಡಿಸೆಂಬರ್ 8: ವಿಶ್ವಕಪ್ ಹೀರೋ ಗೌತಮ್ ಗಂಭೀರ್ ಅವರು ಎಲ್ಲಾ ಮದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಆದರೆ ಬ್ಯಾಟ್‌ ಕೆಳಗಿಡುವ ಮುನ್ನ ಗಂಭೀರ್ ಆಕರ್ಷಕ ಶತಕ ಬಾರಿಸಿದ್ದಾರೆ. ಆಂಧ್ರ ಮತ್ತು ದೆಹಲಿ ನಡುವಿನ ರಣಜಿ ಪಂದ್ಯದೊಂದಿಗೆ ಗಂಭೀರ್ ಆಟ ಮುಗಿಸುತ್ತಿದ್ದಾರೆ.

ದೆಹಲಿ ಸುಲ್ತಾನ ಗಂಭೀರ ವದನ ಗೌತಮ ತ್ರಿವಿಕ್ರಮದೆಹಲಿ ಸುಲ್ತಾನ ಗಂಭೀರ ವದನ ಗೌತಮ ತ್ರಿವಿಕ್ರಮ

ದೆಹಲಿಯ ಫಿರೋಜ್‌ ಶಾ ಕೋಟ್ಲಾ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಎಲೈಟ್ ಗ್ರೂಪ್ 'ಬಿ'ಯ 5ನೇ ಸುತ್ತಿನ ಪಂದ್ಯದಲ್ಲಿ ಗೌತಮ್ ಗಂಭೀರ್ ವೃತ್ತಿ ಜೀವನ ಅಪರೂಪದ ಕ್ಷಣಕ್ಕೆ ಸಾಕ್ಷಿ ಹೇಳಿದರು. ಆಂಧ್ರ ವಿರುದ್ಧ ದೆಹಲಿಯನ್ನು ಪ್ರತಿನಿಧಿಸಿದ್ದ ಗಂಭೀರ್ ಆಕರ್ಷಕ ಶತಕ (112 ರನ್) ಬಾರಿಸಿ, ಶೋಯೆಬ್ ಖಾನ್‌ಗೆ ವಿಕೆಟ್ ಒಪ್ಪಿಸಿದರು.

ಕೆಕೆಆರ್ ಮಾಜಿ ನಾಯಕ ಗಂಭೀರ್‌ಗೆ ವಿಶೇಷ ಸಂದೇಶ ಕಳುಹಿಸಿದ ಶಾರೂಖ್ಕೆಕೆಆರ್ ಮಾಜಿ ನಾಯಕ ಗಂಭೀರ್‌ಗೆ ವಿಶೇಷ ಸಂದೇಶ ಕಳುಹಿಸಿದ ಶಾರೂಖ್

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಆಂಧ್ರ ಮೊದಲ ಇನ್ನಿಂಗ್ಸ್ ನಲ್ಲಿ ರಿಕಿ ಬುಯಿ ಶತಕ (187 ರನ್) ನೊಂದಿಗೆ 121 ಓವರ್‌ ನಲ್ಲಿ ಎಲ್ಲಾ ವಿಕೆಟ್ ಕಳೆದು 390 ರನ್ ಪೇರಿಸಿತ್ತು. ಇನ್ನಿಂಗ್ಸ್‌ಗೆ ಇಳಿದಿರುವ ಡೆಲ್ಲಿ, ಗಂಭೀರ್ ಶತಕದೊಂದಿಗೆ 144 ಓವರ್‌ನಲ್ಲಿ 7 ವಿಕೆಟ್ ಕಳೆದು 409 ರನ್ ಪೇರಿಸುವುದರೊಂದಿಗೆ ಮುನ್ನಡೆಯಲ್ಲಿದೆ.

ಎರಡು ವಿಶ್ವಕಪ್ ವಿಜೇತ ತಂಡದಲ್ಲಿದ್ದ ಗಂಭೀರ್ ಅವರು ಎರಡು ವಿಶ್ವಕಪ್ ಫೈನಲ್ ಪಂದ್ಯದಲ್ಲೂ ಅರ್ಧಶತಕ ಬಾರಿಸಿ, ತಂಡವನ್ನು ಜಯದ ಹೊಸ್ತಿಲಿಗೆ ತಂದವರು. 2011ರ ವಿಶ್ವಕಪ್ ನಲ್ಲಿ 97ರನ್ ಬಾರಿಸಿದರು, ವಿಶ್ವ ಟಿ20 ಫೈನಲ್ ನಲ್ಲಿ 75ರನ್ ಗಳಿಸಿದ್ದರು.

Story first published: Saturday, December 8, 2018, 22:31 [IST]
Other articles published on Dec 8, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X