ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರಣಜಿ ಟ್ರೋಫಿ: ತಮಿಳುನಾಡು ವಿರುದ್ಧ ರೋಚಕ ಕದನ ಗೆದ್ದ ಕರ್ನಾಟಕ!

Karnataka won against Tamil Nadu all thanks to Krishnappa Gowtham | RANAJI TROPHY | KARNATAKA
Ranji Trophy 2019-20: Karnataka beat Tamil Nadu by 26 runs

ದಿಂಡಿಗಲ್, ಡಿಸೆಂಬರ್ 12: ಕೃಷ್ಣಪ್ಪ ಗೌತಮ್ ಅವರ ದಾಖಲೆಯ ಬೌಲಿಂಗ್ ಸಾಧನೆಯ ನೆರವಿನಿಂದ, ರಣಜಿ ಟ್ರೋಫಿ ಮೊದಲ ಸುತ್ತಿನ ಪಂದ್ಯದಲ್ಲಿ ತಮಿಳುನಾಡು ವಿರುದ್ಧ ಕರ್ನಾಟಕ ತಂಡ 26 ರನ್ ರೋಚಕ ಜಯ ಗಳಿಸಿದೆ. ಗೌತಮ್ 6+8 ವಿಕೆಟ್‌ಗಳೊಂದಿಗೆ ಕರ್ನಾಟಕದ ಗೆಲುವಿನ ಹೀರೋ ಆಗಿ ಮಿನುಗಿದರು.

ಪಂತ್ ಮತ್ತೆ ವಿಫಲ, ಸ್ಥಾನ ಪಡೆಯಲು ಸಫಲ; ಇದು ಯಾರ ಕೃಪಾಕಟಾಕ್ಷದ ಫಲಪಂತ್ ಮತ್ತೆ ವಿಫಲ, ಸ್ಥಾನ ಪಡೆಯಲು ಸಫಲ; ಇದು ಯಾರ ಕೃಪಾಕಟಾಕ್ಷದ ಫಲ

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಕರ್ನಾಟಕ ತಂಡ, ಮಯಾಂಕ್ ಅಗರ್ವಾಲ್ 43, ದೇವದತ್ ಪಡಿಕ್ಕಲ್ 78, ಪವನ್ ದೇಶಪಾಂಡೆ 65, ಕೃಷ್ಣಪ್ಪ ಗೌತಮ್ 51 ರನ್‌ನೊಂದಿಗೆ 110.4 ಓವರ್‌ನಲ್ಲಿ 336 ಮಾಡಿತು. ತಮಿಳುನಾಡಿನ ಕೃಷ್ಣಮೂರ್ತಿ ವಿಘ್ನೇಶ್ 2, ಆರ್ ಅಶ್ವಿನ್ 4, ಮಣಿಮಾರನ್ ಸಿದ್ಧಾರ್ಥ್ 2 ವಿಕೆಟ್‌ನೊಂದಿಗೆ ಗಮನ ಸೆಳೆದರು.

ವಿಶ್ವದಾಖಲೆಗಾಗಿ ಅಫ್ರಿದಿ, ಗೇಲ್ ಸಾಲು ಸೇರಿದ ಹಿಟ್‌ಮ್ಯಾನ್ ರೋಹಿತ್!ವಿಶ್ವದಾಖಲೆಗಾಗಿ ಅಫ್ರಿದಿ, ಗೇಲ್ ಸಾಲು ಸೇರಿದ ಹಿಟ್‌ಮ್ಯಾನ್ ರೋಹಿತ್!

ಮೊದಲ ಇನ್ನಿಂಗ್ಸ್‌ಗೆ ಇಳಿದ ತಮಿಳುನಾಡು, ಅಭಿನವ್ ಮುಕುಂದ್ 47, ಮುರಳಿ ವಿಜಯ್ 32, ದಿನೇಶ್ ಕಾರ್ತಿಕ್ 113 ಗಮನಾರ್ಹ ರನ್‌ನೊಂದಿಗೆ 109.3 ಓವರ್‌ಗೆ 307 ರನ್‌ ಪೇರಿಸಿತು. ಈ ವೇಳೆ ಕೆ ಗೌತಮ್ 6 (110 ರನ್), ರೋನಿತ್ ಮೋರೆ 2, ವಿ ಕೌಶಿಕ್ ಮತ್ತು ಶ್ರೇಯಸ್ ಗೋಪಾಲ್ ತಲಾ 1 ವಿಕೆಟ್ ಪಡೆದರು.

ರಣಜಿ ಟ್ರೋಫಿ: ಬರೋಡಾ ಎದುರು ಪೃಥ್ವಿ ಸ್ಫೋಟಕ ದ್ವಿಶತಕ ಶೋ!ರಣಜಿ ಟ್ರೋಫಿ: ಬರೋಡಾ ಎದುರು ಪೃಥ್ವಿ ಸ್ಫೋಟಕ ದ್ವಿಶತಕ ಶೋ!

ದ್ವಿತೀಯ ಇನ್ನಿಂಗ್ಸ್‌ನಲ್ಲಿ ಕರ್ನಾಟಕ ಅಂಥ ಬ್ಯಾಟಿಂಗ್ ತೋರಲಿಲ್ಲ. ಪಡಿಕ್ಕಲ್ 39, ದೇಶಪಾಂಡೆ 20, ಶರತ್ ಬಿಆರ್ 28, ಡೇವಿಡ್ ಮಾಥಿಯಾಸ್ 22, ಕೆ ಗೌತಮ್ 22 ರನ್ ಕೊಡುಗೆಯೇ ಹೆಚ್ಚೆನಿಸಿತು. ರಾಜ್ಯ ತಂಡ 151 ರನ್‌ಗೆ ಇನ್ನಿಂಗ್ಸ್‌ ಮುಗಿಸಿತು. ಆರ್ ಅಶ್ವಿನ್ 4, ಕೆ ವಿಘ್ನೇಶ್‌ಗೆ 3 ವಿಕೆಟ್‌ ಲಭಿಸಿತು.

ಅತಿಹೆಚ್ಚು ಗೂಗಲ್ ಸರ್ಚ್ ಮಾಡಿದ ಆಟಗಾರ ಯಾರು ಗೊತ್ತಾ?ಅತಿಹೆಚ್ಚು ಗೂಗಲ್ ಸರ್ಚ್ ಮಾಡಿದ ಆಟಗಾರ ಯಾರು ಗೊತ್ತಾ?

ದ್ವಿತೀಯ ಇನ್ನಿಂಗ್ಸ್‌ನಲ್ಲಿ ತಮಿಳುನಾಡಿಗೆ 181 ಗುರಿ ನೀಡಲಾಗಿದ್ದರಿಂದ ತಮಿಳುನಾಡು ಗೆಲ್ಲುವ ಮುನ್ಸೂಚನೆ ನೀಡಿತ್ತು. ಆದರೆ ಕೆ ಗೌತಮ್ ಅವರ ಮಾರಕ ಬೌಲಿಂಗ್, ಎದುರಾಳಿಯ ಗೆಲುವಿನೋಟಕೆ ಬ್ರೇಕ್ ಒತ್ತಿತು. ಅಭಿನವ್ ಮುಕುಂದ್ 42, ಮುರುಗನ್ ಅಶ್ವಿನ್ ಅಜೇಯ 23, ಎಂ ಸಿದ್ಧಾರ್ಥ್ 20 ರನ್ ಗಳಿಸಿದ್ದೇ ಹೆಚ್ಚು. ತಮಿಳುನಾಡು 154 ರನ್‌ಗೆ ಶರಣಾಯಿತು. ಕೆ ಗೌತಮ್ 60 ರನ್‌ಗೆ ಬರೋಬ್ಬರಿ 8 ವಿಕೆಟ್‌ ಉರುಳಿಸಿ ಕರ್ನಾಟಕದ ಗೆಲುವಿಗೆ ಕಾರಣರಾದರು.

Story first published: Thursday, December 12, 2019, 18:59 [IST]
Other articles published on Dec 12, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X