ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬೆಂಗಾಲ್ ಸೋಲಿಸಿ ಚೊಚ್ಚಲ ರಣಜಿ ಟ್ರೋಫಿ ಜಯಿಸಿದ ಸೌರಾಷ್ಟ್ರ

Ranji Trophy 2019-20: Saurashtra outclass Bengal to lift 1st-ever title

ರಾಜ್‌ಕೋಟ್‌, ಮಾರ್ಚ್ 13: ಜಯದೇವ್ ಉನಾದ್ಕತ್ ನಾಯಕತ್ವದ ಸೌರಾಷ್ಟ್ರ ತಂಡ ಚೊಚ್ಚಲ ರಣಜಿ ಟ್ರೋಫಿ ಗೆದ್ದು ಸಂಭ್ರಮಿಸಿದೆ. ಶುಕ್ರವಾರ (ಮಾರ್ಚ್‌ 13) ಮುಕ್ತಾಯಗೊಂಡ ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ಬೆಂಗಾಲ್ ಮತ್ತು ಸೌರಾಷ್ಟ್ರ ಡ್ರಾ ಸಾಧಿಸಿದ್ದವು. ಆದರೆ ಮೊದಲ ಇನ್ನಿಂಗ್ಸ್‌ನಲ್ಲಿ 44 ರನ್ ಮುನ್ನಡೆಯ ಆಧಾರದಲ್ಲಿ ಸೌರಾಷ್ಟ್ರ ಚಾಂಪಿಯನ್ ಪಟ್ಟ ಅಲಂಕರಿಸಿದೆ (ಚಿತ್ರಕೃಪೆ: ಸರ್ಕಲ್ ಆಫ್ ಕ್ರಿಕೆಟ್).

ಕೊರೊನಾ ಭೀತಿ : ಐಪಿಎಲ್‌ನಿಂದ ಕಡೆಗೂ ಬಿತ್ತು ಬಹುದೊಡ್ಡ ಬ್ರೇಕಿಂಗ್ ನ್ಯೂಸ್!ಕೊರೊನಾ ಭೀತಿ : ಐಪಿಎಲ್‌ನಿಂದ ಕಡೆಗೂ ಬಿತ್ತು ಬಹುದೊಡ್ಡ ಬ್ರೇಕಿಂಗ್ ನ್ಯೂಸ್!

ರವಿ ಬರೋತ್, ವಿಶ್ವರಾಜ್ ಜಡೇಜಾ, ಚೇತೇಶ್ವರ್ ಪೂಜಾರ, ಅರ್ಪಿತ್ ವಾಸವಾಡ ಅವರ ಚತುರ ಬ್ಯಾಟಿಂಗ್, ಜಯದೇವ್ ಉನಾದ್ಕತ್, ಧರ್ಮೇಂದ್ರ ಸಿಂಹ ಜಡೇಜಾ, ಪ್ರೇರಕ್ ಮಂಕದ್ ಉತ್ತಮ ಬೌಲಿಂಗ್ ನೆರವಿನಿಂದಿಗೆ ಸೌರಾಷ್ಟ್ರ ಮೊದಲ ಟ್ರೋಫಿ ಗೆದ್ದಿದೆ.

ಆಸ್ಟ್ರೇಲಿಯಾದ ಪ್ರಮುಖ ವೇಗಿಗೆ ಕೊರೊನಾವೈರಸ್ ಸೋಂಕು?ಆಸ್ಟ್ರೇಲಿಯಾದ ಪ್ರಮುಖ ವೇಗಿಗೆ ಕೊರೊನಾವೈರಸ್ ಸೋಂಕು?

ಇದಕ್ಕೆ ಮೊದಲು ಅಂದರೆ 1936-37ರಲ್ಲಿ ನವನಗರ್ ಹೆಸರಿನಲ್ಲಿ, 1943-44ರಲ್ಲಿ ವೆಸ್ಟರ್ನ್ ಇಂಡಿಯಾ ಹೆಸರಿನಲ್ಲಿ ಇದೇ ತಂಡ ರಣಜಿ ಟ್ರೋಫಿ ಗೆದ್ದಿದೆಯಾದರೂ ಆಗ ತಂಡದ ಹೆಸರು ಬೇರೆಯಾಗಿತ್ತು. ಆ ಲೆಕ್ಕದಲ್ಲಿ ಸೌರಾಷ್ಟ್ರ ಹೆಸರಿನಲ್ಲಿ ತಂಡ ಟ್ರೋಫಿ ಗೆದ್ದಿದ್ದು ಇದೇ ಮೊದಲು.

ಕೊರೊನಾ ಎಫೆಕ್ಟ್: ತೊಂದರೆಗೀಡಾದ ಪ್ರಮುಖ ಕ್ರೀಡಾ ಸ್ಪರ್ಧೆಗಳ ಪಟ್ಟಿಕೊರೊನಾ ಎಫೆಕ್ಟ್: ತೊಂದರೆಗೀಡಾದ ಪ್ರಮುಖ ಕ್ರೀಡಾ ಸ್ಪರ್ಧೆಗಳ ಪಟ್ಟಿ

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಸೌರಾಷ್ಟ್ರ, ಹಾರ್ವಿಕ್ ದೇಸಾಯ್ 38, ರವಿ ಬರೋತ್ 54, ವಿಶ್ವರಾಜ್ ಜಡೇಜಾ 45, ಚೇತೇಶ್ವರ್ ಪೂಜಾರ 66, ಅರ್ಪಿತ್ ವಾಸವಾಡ 106 ರನ್‌ಗಳೊಂದಿಗೆ 171.5 ಓವರ್‌ಗೆ 425 ರನ್ ಗಳಿಸಿತ್ತು. ಬೆಂಗಾಲ್ ಮೊದಲ ಇನ್ನಿಂಗ್ಸ್‌ನಲ್ಲಿ ಸುದೀಪ್ ಚಟರ್ಜೀ 81, ವೃದ್ಧಿಮಾನ್ ಸಹಾ 64, ಅನುಸ್ತೂಪ್ ಮಜುಂದಾರ್ 63 ರನ್‌ನೊಂದಿಗೆ 161 ಓವರ್‌ಗೆ 381 ರನ್ ಗಳಿಸಲಷ್ಟೇ ಶಕ್ತವಾಯ್ತು.

ಟಿ20 ವಿಶ್ವಕಪ್ ಗೆಲ್ಲುವ ಸಾಮರ್ಥ್ಯವಿರುವ 3 ತಂಡಗಳನ್ನು ಹೆಸರಿಸಿದ ಬ್ರ್ಯಾನ್ ಲಾರಾಟಿ20 ವಿಶ್ವಕಪ್ ಗೆಲ್ಲುವ ಸಾಮರ್ಥ್ಯವಿರುವ 3 ತಂಡಗಳನ್ನು ಹೆಸರಿಸಿದ ಬ್ರ್ಯಾನ್ ಲಾರಾ

ದ್ವಿತೀಯ ಇನ್ನಿಂಗ್ಸ್‌ನಲ್ಲಿ ಸೌರಾಷ್ಟ್ರ 34ನೇ ಓವರ್‌ಗೆ 4 ವಿಕೆಟ್ ನಷ್ಟದಲ್ಲಿ 105 ರನ್ ಮಾಡಿತ್ತು. ಆದರೆ ಅಲ್ಲಿಗೆ ಪಂದ್ಯದ ದಿನಗಳು ಮುಕ್ತಾಯಗೊಂಡಿದ್ದರಿಂದ ಫಲಿತಾಂಶವನ್ನು ಡ್ರಾ ಎನಿಸಿ, ಸೌರಾಷ್ಟ್ರವನ್ನು ವಿಜಯಿ ಎಂದು ಘೋಷಿಸಲಾಯ್ತು. ಬೆಂಗಾಲ್ ಇನ್ನಿಂಗ್ಸ್‌ನಲ್ಲಿ ಜಯದೇವ್ ಉನಾದ್ಕತ್ 2, ಧರ್ಮೇಂದ್ರ ಸಿಂಹ ಜಡೇಜಾ 3, ಪ್ರೇರಕ್ ಮಂಕದ್ 2 ವಿಕೆಟ್ ಪಡೆದರೆ, ಸೌರಾಷ್ಟ್ರ ಇನ್ನಿಂಗ್ಸ್‌ನಲ್ಲಿ ಬೆಂಗಾಲ್‌ನ ಆಕಾಶ್‌ದೀಪ್ 4+1 ವಿಕೆಟ್‌ ಪಡೆದು ಗಮನ ಸೆಳೆದರು.

Story first published: Friday, March 13, 2020, 16:53 [IST]
Other articles published on Mar 13, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X