ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Ranji Trophy 2023: ಕ್ವಾರ್ಟರ್ ಫೈನಲ್‌ನಲ್ಲಿ ಉತ್ತರಾಖಂಡ ವಿರುದ್ಧ ಗೆಲುವಿನತ್ತ ದಾಪುಗಾಲಿಟ್ಟ ಕರ್ನಾಟಕ

Ranji Trophy 2022-23: Karnataka Edging Towards Win Against Uttarakhand In Quarter-finals

ಫೆಬ್ರವರಿ 2ರ ಗುರುವಾರದಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಉತ್ತರಾಖಂಡ ವಿರುದ್ಧದ ರಣಜಿ ಟ್ರೋಫಿ ಕ್ವಾರ್ಟರ್‌ಫೈನಲ್‌ನ ಮೂರನೇ ದಿನದಾಟದ ಅಂತ್ಯಕ್ಕೆ ಕರ್ನಾಟಕ ತಂಡವು ಉತ್ತರಾಖಂಡ ವಿರುದ್ಧ ಮೇಲುಗೈ ಸಾಧಿಸಿದ್ದು, ನಾಲ್ಕನೇ ದಿನದಾಟದಲ್ಲಿ ದೊಡ್ಡ ಗೆಲವಿಗೆ ಏಳು ವಿಕೆಟ್‌ಗಳ ಅಗತ್ಯವಿದೆ.

ಕ್ವಾರ್ಟರ್ ಫೈನಲ್‌ನ ಮೊದಲ ಇನಿಂಗ್ಸ್‌ನಲ್ಲಿ ಕರ್ನಾಟಕ 606 ರನ್‌ಗಳನ್ನು ಪೇರಿಸಿದ ನಂತರ, 490 ರನ್‌ಗಳ ಕರ್ನಾಟಕವು ಮುನ್ನಡೆ ಸಾಧಿಸಿತು. ತನ್ನ ಎರಡನೇ ಆರಂಭಿಸಿದ ಉತ್ತರಾಖಂಡ ತಂಡ ಮೂರನೇ ದಿನದಂತ್ಯಕ್ಕೆ ಮೂರು ವಿಕೆಟ್‌ಗಳಿಗೆ 106 ರನ್‌ ಗಳಿಸಿದ್ದು, 384 ರನ್‌ಗಳ ಹಿನ್ನಡೆಯಲ್ಲಿದೆ.

IND vs AUS Test Series: ಆಸೀಸ್‌ನ ಈ ಸ್ಪಿನ್ನರ್ ವಿರುದ್ಧ ಕೊಹ್ಲಿ ಆಕ್ರಮಣಕಾರಿಯಾಗಬೇಕು; ಇರ್ಫಾನ್ ಪಠಾಣ್IND vs AUS Test Series: ಆಸೀಸ್‌ನ ಈ ಸ್ಪಿನ್ನರ್ ವಿರುದ್ಧ ಕೊಹ್ಲಿ ಆಕ್ರಮಣಕಾರಿಯಾಗಬೇಕು; ಇರ್ಫಾನ್ ಪಠಾಣ್

ನಾಲ್ಕನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿರುವ ದಿಕ್ಷಾಂಶು ನೇಗಿ 65 ಎಸೆತಗಳಲ್ಲಿ 27 ರನ್ ಮತ್ತು ಸ್ವಪ್ನಿಲ್ ಸಿಂಗ್ 58 ಎಸೆತಗಳಲ್ಲಿ 27 ರನ್ ಗಳಿಸಿ ನಾಲ್ಕನೇ ವಿಕೆಟ್‌ಗೆ ಮುರಿಯದ 50 ರನ್‌ಗಳ ಜೊತೆಯಾಟ ನೀಡಿದ್ದಾರೆ. ಕರ್ನಾಟಕ ಪರ ವಿದ್ವತ್ ಕಾವೇರಪ್ಪ 10 ಓವರ್‌ಗಳಲ್ಲಿ 22 ರನ್ ನೀಡಿ 2 ವಿಕೆಟ್ ಪಡೆದು ಮಿಂಚಿದರು.

ಇದಕ್ಕೂ ಮುನ್ನ ಎರಡನೇ ದಿನದಾಟದ ಅಂತ್ಯಕ್ಕೆ 5 ವಿಕೆಟ್‌ಗೆ 474 ರನ್ ಗಳಿಸಿದ್ದ ಕರ್ನಾಟಕ ತಂಡ ಮೂರನೇ ದಿನದಾಟದಲ್ಲಿ ಬ್ಯಾಟಿಂಗ್ ಮುಂದುವರೆಸಿ, 606 ರನ್‌ಗಳಿಗೆ ಆಲೌಟ್ ಆಯಿತು.

Ranji Trophy 2022-23: Karnataka Edging Towards Win Against Uttarakhand In Quarter-finals

ಶತಕವೀರ ಶ್ರೇಯಸ್ ಗೋಪಾಲ್ 288 ಎಸೆತಗಳಲ್ಲಿ 16 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ ಅಜೇಯ 161 ರನ್ ಬಾರಿಸಿದರು. ಇದು ಅವರ ಅತ್ಯುನ್ನತ ಪ್ರಥಮ ದರ್ಜೆ ಸ್ಕೋರ್ ಆಗಿದೆ. ಈ ಹಿಂದೆ ಅಜೇಯ 150 ರನ್ ಗಳಿಸಿದ್ದರು.

ಇನ್ನು ಶ್ರೇಯಸ್ ಗೋಪಾಲ್‌ಗೆ ಸಾಥ್ ನೀಡಿದ ಕೃಷ್ಣಪ್ಪ ಗೌತಮ್ 70 ಎಸೆತಗಳಲ್ಲಿ 4 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 39 ರನ್ ಬಾರಿಸಿದರು. ಶರತ್ ಬಿಆರ್ ಕೂಡ 33 ರನ್ ಗಳಿಸಿದರು.

Ranji Trophy 2022-23: Karnataka Edging Towards Win Against Uttarakhand In Quarter-finals

ಆದರೆ, ನಿಧಾನಗತಿ ಬ್ಯಾಟಿಂಗ್ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನೆರೆದಿದ್ದ ನೂರಾರು ಶಾಲಾ ಮಕ್ಕಳಿಗೆ ಬೇಸರ ತರಿಸಿತು. ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಶಾಲಾಮಕ್ಕಳು "ನಮಗೆ ಸಿಕ್ಸರ್ ಬೇಕು' ಎಂದು ಘೋಷಣೆ ಕೂಗುತ್ತಿದ್ದರು. ಆಗ ಕೆ. ಗೌತಮ್ ಒಂದು ಸಿಕ್ಸರ್ ಬಾರಿಸಿ ರಂಜಿಸಿದರು. ಕೆಎಸ್‌ಸಿಎ ಆಡಳಿತ ಮಂಡಳಿಯಿಂದ ಚಹಾ, ಬಿಸ್ಕೆಟ್‌ಗಳನ್ನು ಶಾಲಾಮಕ್ಕಳು ಮತ್ತು ಕ್ರಿಕೆಟ್ ಅಭಿಮಾನಿಗಳಿಗೆ ವಿತರಿಸಲಾಯಿತು.

Ranji Trophy: ಮಯಾಂಕ್, ಸಮರ್ಥ್ ಅರ್ಧಶತಕ; ಕ್ವಾರ್ಟರ್‌ಫೈನಲ್‌ನಲ್ಲಿ ಉತ್ತರಾಖಂಡ ವಿರುದ್ಧ ಕರ್ನಾಟಕ ಮೇಲುಗೈRanji Trophy: ಮಯಾಂಕ್, ಸಮರ್ಥ್ ಅರ್ಧಶತಕ; ಕ್ವಾರ್ಟರ್‌ಫೈನಲ್‌ನಲ್ಲಿ ಉತ್ತರಾಖಂಡ ವಿರುದ್ಧ ಕರ್ನಾಟಕ ಮೇಲುಗೈ

ಇನ್ನೂ ಎರಡು ದಿನಗಳ ಆಟ ಬಾಕಿ ಇದ್ದು, ಪ್ರವಾಸಿ ಉತ್ತರಾಖಂಡ 384 ರನ್‌ಗಳ ರನ್ ಮೀರಿ ಕರ್ನಾಟಕಕ್ಕೆ ಗೆಲುವಿನ ಗುರಿ ನೀಡಬೇಕಿದೆ. ಕರ್ನಾಟಕ ಗೆದ್ದರೂ ಅಥವಾ ಡ್ರಾ ಮಾಡಿಕೊಂಡರೂ ಸೆಮಿಪೈನಲ್‌ಗೆ ಪ್ರವೇಶ ಪಡೆಯಲಿದೆ.

Story first published: Thursday, February 2, 2023, 21:02 [IST]
Other articles published on Feb 2, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X