ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Ranji Trophy 2023: ಕ್ವಾ. ಫೈನಲ್‌ನಲ್ಲಿ ಕರ್ನಾಟಕ vs ಉತ್ತರಾಖಂಡ್ ಮುಖಾಮುಖಿ: 3ನೇ ದಿನದ Live score

Ranji Trophy 2022-23: Quarterfinals Karnataka vs Uttarakhand, day 3 Live score

ರಣಜಿ ಟ್ರೋಫಿಯಲ್ಲಿ ಕರ್ನಾಟಕ ಹಾಗೂ ಉತ್ತರಾಖಂಡ್ ತಂಡಗಳು ಕ್ವಾರ್ಟರ್‌ಫೈನಲ್‌ನಲ್ಲಿ ಸೆಣೆಸಾಡುತ್ತಿದ್ದು ಮೂರನೇ ದಿನದ ಆಟ ಆರಂಭವಾಗಿದೆ. ಮೊದಲ ಎರಡು ದಿನಗಳಲ್ಲಿಯೂ ಕರ್ನಾಟಕ ಅಮೋಘ ಪ್ರದರ್ಶನ ನೀಡಿದ್ದು 3ನೇ ದಿನದಲ್ಲಿಯೂ ತನ್ನ ಬಿಗಿಹಿಡಿತ ಮುಂದುವರಿಸುವುದರಲ್ಲಿ ಅನುಮಾನವಿಲ್ಲ. ಕರ್ನಾಟಕದ ಬ್ಯಾಟಿಂಗ್ ವಿಭಾಗದ ಬಹುತೇಕ ಎಲ್ಲಾ ಆಟಗಾರರು ಕೂಡ ಅಮೋಘ ಪ್ರದರ್ಶನ ನೀಡಿದ್ದು ತಂಡ ಬೃಹತ್ ಮೊತ್ತ ಗಳಿಸಿ ಮುನ್ನುಗ್ಗುತ್ತಿದೆ.

ಇನ್ನು ಕರ್ನಾಟಕದ ಅಗ್ರ ಕ್ರಮಾಂಕದ ನಾಲ್ವರು ಆಟಗಾರರು ಕೂಡ ಅರ್ಧಶತಕ ಸಿಡಿಸಿದ್ದಾರೆ. ಆರಂಭಿಕ ಆಟಗಾರರಾದ ಆರ್ ಸಮರ್ಥ್ ಹಾಗೂ ಮಯಾಂಕ್ ಅಗರ್ವಾಲ್ ಕ್ರಮವಾಗಿ 82 ಹಾಘೂ 83 ರನ್‌ಗಳನ್ನು ಗಳಿಸಿದ್ದರೆ ನಂತರ ಕಣಕ್ಕಿಳಿದ ದೇವದತ್ ಪಡಿಕ್ಕಲ್ ಕಾಗೂ ನಿಕಿನ್ ಜೋಸ್ 69 ರನ್ ಹಾಗೂ 62 ರನ್‌ಗಳನ್ನು ಗಳಿಸಿ ವಿಕೆಟ್ ಕಳೆದುಕೊಂಡರು. ಇನ್ನು ಮಧ್ಯಮ ಕ್ರಮಾಂಕದ ಆಟಗಾರ ಶ್ರೇಯಸ್ ಗೋಪಾಲ್ ಅಮೋಘ ಶತಕ ಸಿಡಿಸಿ ಮುನ್ನುಗ್ಗುತ್ತಿದ್ದಾರೆ. ಕರ್ನಾಟಕ ಈಗಾಗಲೇ 400ಕ್ಕೂ ಅಧಿಕ ರನ್‌ಗಳ ಮುನ್ನಡೆ ಸಾಧಿಸಿ ಪಂದ್ಯವನ್ನು ಸಂಪೂರ್ಣವಾಗಿ ತನ್ನ ಹಿಡಿತದಲ್ಲಿಟ್ಟುಕೊಂಡಿದೆ.

Live ಸ್ಕೋರ್‌ಹೀಗಿದೆ

IND vs NZ 3rd T20: ಕಿವೀಸ್ ವಿರುದ್ಧ ಶತಕ ಬಾರಿಸಿ ವಿರಾಟ್ ಕೊಹ್ಲಿ ದಾಖಲೆ ಮುರಿದ ಶುಭ್ಮನ್ ಗಿಲ್IND vs NZ 3rd T20: ಕಿವೀಸ್ ವಿರುದ್ಧ ಶತಕ ಬಾರಿಸಿ ವಿರಾಟ್ ಕೊಹ್ಲಿ ದಾಖಲೆ ಮುರಿದ ಶುಭ್ಮನ್ ಗಿಲ್

ಇನ್ನು ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿದ ಮಯಾಂಕ್ ಅಗರ್ವಾಲ್ ನಾಯಕತ್ವದ ಕರ್ನಾಟಕ ಪ್ರವಾಸಿ ಉತ್ತರಾಖಂಡ ತಂಡದ ವಿರುದ್ಧ ಬೌಲಿಂಗ್‌ನಲ್ಲಿ ಸಂಪೂರ್ಣ ಹಿಡಿತ ಸಾಧಿಸಿತು. 55.4 ಓವರ್‌ಗಳಲ್ಲಿ ಕೇವಲ 116 ರನ್‌ಗಳಿಗೆ ಆಲೌಟ್ ಮಾಡುವ ಮೂಲಕ ಪಂದ್ಯವನ್ನು ಸಂಪೂರ್ಣವಾಗಿ ತನ್ನ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಯಿತು. ಕರ್ನಾಟಕದ ಪರವಾಗಿ ವೇಗಿ ಮುರಳೀಧರ ವೆಂಕಟೇಶ್ 5 ವಿಕೆಟ್‌ಗಳನ್ನು ಪಡೆದು ತಂಡದ ಮೇಲುಗೈಗೆ ಪ್ರಮುಖ ಕಾರಣವಾಗಿದ್ದಾರೆ. ಅದಾದ ಬಳಿಕ ಬ್ಯಾಟಿಂಗ್‌ನಲ್ಲಿಯೂ ಕರ್ನಾಟಕ ಪರಾಕ್ರಮಗೈಯುವಲ್ಲಿ ಯಶಸ್ವುಯಾಗಿದೆ.

ಕರ್ನಾಟಕ ಆಡುವ ಬಳಗ ಹೀಗಿದೆ: ರವಿಕುಮಾರ್ ಸಮರ್ಥ್, ಮಯಾಂಕ್ ಅಗರ್ವಾಲ್ (ನಾಯಕ), ದೇವದತ್ ಪಡಿಕ್ಕಲ್, ನಿಕಿನ್ ಜೋಸ್, ಮನೀಶ್ ಪಾಂಡೆ, ಮುರಳೀಧರ ವೆಂಕಟೇಶ್, ಶರತ್ ಬಿಆರ್ (ವಿಕೆಟ್ ಕೀಪರ್), ಕೃಷ್ಣಪ್ಪ ಗೌತಮ್, ಶ್ರೇಯಸ್ ಗೋಪಾಲ್, ವಿಜಯ್ ಕುಮಾರ್ ವೈಶಾಕ್, ವಿಧ್ವತ್ ಕಾವೇರಪ್ಪ
ಬೆಂಚ್: ಶುಭಾಂಗ್ ಹೆಗ್ಡೆ, ವಾಸುಕಿ ಕೌಶಿಕ್, ರೋನಿತ್ ಮೋರೆ, ಶ್ರೀನಿವಾಸ್ ಶರತ್, ಕೃಷ್ಣಮೂರ್ತಿ ಸಿದ್ಧಾರ್ಥ್, ವಿಶಾಲ್ ಓನಾಟ್
ಉತ್ತರಾಖಂಡ್ ಆಡುವ ಬಳಗ: ಆದಿತ್ಯ ತಾರೆ (ವಿಕೆಟ್ ಕೀಪರ್), ಜಿವಾನ್‌ಜೋತ್ ಸಿಂಗ್ (ನಾಯಕ), ಕುನಾಲ್ ಚಂದೇಲಾ, ಅಖಿಲ್ ರಾವತ್, ಅವನೀಶ್ ಸುಧಾ, ಅಭಯ್ ನೇಗಿ, ಸ್ವಪ್ನಿಲ್ ಸಿಂಗ್,
ದಿಕ್ಷಾಂಶು ನೇಗಿ, ಮಯಾಂಕ್ ಮಿಶ್ರಾ, ದೀಪಕ್ ಧಾಪೋಲಾ, ನಿಖಿಲ್ ಕೊಹ್ಲಿ
ಬೆಂಚ್: ಪ್ರಿಯಾಂಶು ಖಂಡೂರಿ, ಆರ್ಯನ್ ಶರ್ಮಾ, ಅಗ್ರಿಮ್ ತಿವಾರಿ, ರಾಜನ್ ಕುಮಾರ್, ಆಕಾಶ್ ಮಧ್ವಲ್, ಹಿಮಾಂಶು ಬಿಷ್ತ್

Story first published: Thursday, February 2, 2023, 11:33 [IST]
Other articles published on Feb 2, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X