ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Ranji Trophy 2022-23: ಹೊರಬಿದ್ದ ಮುಂಬೈ; ಕರ್ನಾಟಕ ಸೇರಿ ಕ್ವಾರ್ಟರ್ ಫೈನಲ್ ತಲುಪಿದ ಅಗ್ರ 8 ತಂಡಗಳು

Ranji Trophy 2022-23: Top 8 Teams Reached Quarter-finals Including Karnataka Team

ಅಜಿಂಕ್ಯ ರಹಾನೆ ನಾಯಕತ್ವದ ಮುಂಬೈ ತಂಡ ರಣಜಿ ಟ್ರೋಫಿ 2022-23ರ 7ನೇ ಸುತ್ತಿನ ಅಂತಿಮ ದಿನದಂದು ಮಹಾರಾಷ್ಟ್ರ ವಿರುದ್ಧ ಡ್ರಾ ಸಾಧಿಸಿದ್ದರಿಂದ ಕ್ವಾರ್ಟರ್-ಫೈನಲ್‌ಗೆ ಅರ್ಹತೆ ಪಡೆಯಲು ವಿಫಲವಾಗಿದೆ.

U-19 Women's T20 World Cup 2023: ನ್ಯೂಜಿಲೆಂಡ್ ಮಣಿಸಿ ಫೈನಲ್‌ಗೆ ಲಗ್ಗೆ ಇಟ್ಟ ಭಾರತ ವನಿತೆಯರುU-19 Women's T20 World Cup 2023: ನ್ಯೂಜಿಲೆಂಡ್ ಮಣಿಸಿ ಫೈನಲ್‌ಗೆ ಲಗ್ಗೆ ಇಟ್ಟ ಭಾರತ ವನಿತೆಯರು

ಬಿ ಗುಂಪಿನಲ್ಲಿ ನಾಲ್ಕು ತಂಡಗಳು ಕ್ವಾರ್ಟರ್-ಫೈನಲ್‌ಗೆ ಅರ್ಹತೆ ಪಡೆಯಲು 2 ತಂಡಗಳು ಪೈಪೋಟಿ ನಡೆಸುತ್ತಿದ್ದವು. ಆದರೆ, ಮುಂಬೈ ಮತ್ತು ಮಹಾರಾಷ್ಟ್ರ ಈ ಬಾರಿಯ ರಣಜಿ ಋತುವಿನಿಂದ ಲೀಗ್ ಹಂತದಲ್ಲಿಯೇ ಹೊರಬಿದ್ದಿವೆ.

ಮುಂಬೈ ಮತ್ತು ಮಹಾರಾಷ್ಟ್ರ ಎರಡೂ ತಂಡಗಳು ಕ್ವಾರ್ಟರ್-ಫೈನಲ್ ಸ್ಥಾನವನ್ನು ತಲುಪಲು ಅಬ್ಬರದ ಆಟವಾಡಿದವು. ಅಂತಿಮವಾಗಿ ಡ್ರಾನಲ್ಲಿ ಕೊನೆಗೊಂಡಿದ್ದರಿಂದ ಗುಂಪು ಹಂತದಿಂದ ಹೊರಬಿದ್ದವು.

KCC Cup 2023: ಯಾವ ತಂಡಕ್ಕೆ ಯಾರು ನಾಯಕ?; ಸುದೀಪ್ ತಂಡದಲ್ಲಿ ಯೂನಿವರ್ಸಲ್ ಬಾಸ್!KCC Cup 2023: ಯಾವ ತಂಡಕ್ಕೆ ಯಾರು ನಾಯಕ?; ಸುದೀಪ್ ತಂಡದಲ್ಲಿ ಯೂನಿವರ್ಸಲ್ ಬಾಸ್!

ಅಂತಿಮ ಇನ್ನಿಂಗ್ಸ್‌ನಲ್ಲಿ 253 ರನ್‌ಗಳನ್ನು ಬೆನ್ನಟ್ಟಿದ ಮುಂಬೈ ದಿನದಾಟವನ್ನು 195/6ಕ್ಕೆ ಮುಗಿಸಿತು. ಎರಡೂ ತಂಡಗಳು ತಮ್ಮ ಮೊದಲ ಇನ್ನಿಂಗ್ಸ್‌ನಲ್ಲಿ ತಲಾ 384 ರನ್‌ ಗಳಿಸಿದ್ದರಿಂದ, ಯಾವುದೇ ಬೋನಸ್ ಅಂಕಗಳನ್ನು ತೆಗೆದುಕೊಳ್ಳಲಾಗಲಿಲ್ಲ. ಮೊದಲ ಇನ್ನಿಂಗ್ಸ್‌ನಲ್ಲಿ ಶತಕ ಬಾರಿಸಿದ್ದ ಮುಂಬೈ ತಂಡದ ಪ್ರಸಾದ್ ಪವಾರ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

Ranji Trophy 2022-23: Top 8 Teams Reached Quarter-finals Including Karnataka Team


ಇನ್ನು ರವೀಂದ್ರ ಜಡೇಜಾ ನಾಯಕತ್ವದ ಸೌರಾಷ್ಟ್ರ ತಂಡವು ಅಂತಿಮ ಗುಂಪು ಹಂತದ ಪಂದ್ಯದಲ್ಲಿ ತಮಿಳುನಾಡು ವಿರುದ್ಧ ಸೋತಿತು. ಬಿ ಗುಂಪಿನಲ್ಲಿ ಎರಡನೇ ಸ್ಥಾನ ಪಡೆದ ಕಾರಣ ಕ್ವಾರ್ಟರ್-ಫೈನಲ್‌ಗೆ ಅರ್ಹತೆ ಗಿಟ್ಟಿಸಿತು. ಭಾರತದ ಆಲ್‌ರೌಂಡರ್ ರವೀಂದ್ರ ಜಡೇಜಾ ತಮಿಳುನಾಡು ವಿರುದ್ಧ ಬೌಲಿಂಗ್‌ನಲ್ಲಿ ಪ್ರಚಂಡ ಪ್ರದರ್ಶನ ನೀಡಿದರೂ, ಬ್ಯಾಟಿಂಗ್‌ನಲ್ಲಿ ವಿಫಲರಾದರು.

ರಣಜಿ ಟ್ರೋಫಿ 2022-23ರಲ್ಲಿ ರಣಜಿ ಕ್ವಾರ್ಟರ್-ಫೈನಲ್‌ಗೆ ಅರ್ಹತೆ ಪಡೆದ ತಂಡಗಳೆಂದರೆ,

ಎ ಗುಂಪಿನಿಂದ ಬಂಗಾಳ, ಉತ್ತರಾಖಂಡ ತಂಡಗಳು

ಬಿ ಗುಂಪಿನಿಂದ ಆಂಧ್ರಪ್ರದೇಶ, ಸೌರಾಷ್ಟ್ರ ತಂಡಗಳು

ಸಿ ಗುಂಪಿನಿಂದ ಕರ್ನಾಟಕ, ಜಾರ್ಖಂಡ್

ಡಿ ಗುಂಪಿನಿಂದ ಮಧ್ಯಪ್ರದೇಶ, ಪಂಜಾಬ್ ತಂಡಗಳು

ರಣಜಿ ಟ್ರೋಫಿ 2022-23ರ ಕ್ವಾರ್ಟರ್-ಫೈನಲ್‌ ಮುಖಾಮುಖಿ

ಬಂಗಾಳ (ಎ1) vs ಜಾರ್ಖಂಡ್ (ಸಿ2)

ಸೌರಾಷ್ಟ್ರ (ಬಿ1) vs ಪಂಜಾಬ್ (ಡಿ2)

ಕರ್ನಾಟಕ (ಸಿ1) vs ಉತ್ತರಾಖಂಡ (ಎ2)

ಮಧ್ಯಪ್ರದೇಶ (ಡಿ1) vs ಆಂಧ್ರಪ್ರದೇಶ (ಬಿ2)

Story first published: Saturday, January 28, 2023, 5:35 [IST]
Other articles published on Jan 28, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X