ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರಣಜಿ ಕ್ರಿಕೆಟ್: ರೈಲ್ವೇಸ್ ವಿರುದ್ಧ ಬೃಹತ್ ಮೊತ್ತದತ್ತ ಹೆಜ್ಜೆಯಿಟ್ಟ ಕರ್ನಾಟಕ

Karnataka

ಚೆನ್ನೈನಲ್ಲಿ ನಡೆಯುತ್ತಿರುವ ಕರ್ನಾಟಕ ಮತ್ತು ರೈಲ್ವೇಸ್ ನಡುವಿನ ರಣಜಿ ಪಂದ್ಯದಲ್ಲಿ ಮೊದಲ ದಿನದಾಟದಂತ್ಯಕ್ಕೆ ಕರ್ನಾಟಕ 5 ವಿಕೆಟ್ ನಷ್ಟಕ್ಕೆ 392 ರನ್‌ ಕಲೆಹಾಕಿದೆ. ನಾಯಕ ಮನೀಷ್ ಪಾಂಡೆ ಮತ್ತು ಕೃಷ್ಣಮೂರ್ತಿ ಸಿದ್ಧಾರ್ಥ್‌ರ ಅಜೇಯ ಶತಕದ ನೆರವಿನಿಂದ ಕರ್ನಾಟಕ ಮೊದಲ ದಿನ ಬೃಹತ್ ಮೊತ್ತ ಕಲೆಹಾಕಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ 50 ರನ್‌ ಕಲೆಹಾಕುವಷ್ಟರಲ್ಲಿ ಮೊದಲೆರಡು ವಿಕೆಟ್ ಕಳೆದುಕೊಂಡಿತು. ಮಯಾಂಕ್ ಅಗರ್ವಾಲ್ ಕೇವಲ 16 ರನ್‌ಗೆ ರನೌಟ್‌ ಆದ್ರೆ, ದೇವದತ್‌ ಪಡಿಕ್ಕಲ್ 21 ರನ್‌ಗಳಿಸಿ ಯುವರಾಜ್‌ ಸಿಂಗ್‌ಗೆ ವಿಕೆಟ್ ಒಪ್ಪಿಸಿದ್ರು.

IPL 2022: ಕಗಿಸೊ ರಬಾಡಗೆ 1 ಎಸೆತಕ್ಕೆ 2.26 ಲಕ್ಷ ರೂಪಾಯಿ ಕೊಡಲಿದೆ ಪಂಜಾಬ್ ಕಿಂಗ್ಸ್‌IPL 2022: ಕಗಿಸೊ ರಬಾಡಗೆ 1 ಎಸೆತಕ್ಕೆ 2.26 ಲಕ್ಷ ರೂಪಾಯಿ ಕೊಡಲಿದೆ ಪಂಜಾಬ್ ಕಿಂಗ್ಸ್‌

ಇದ್ರ ಬೆನ್ನಲ್ಲೇ ಉತ್ತಮವಾಗಿ ಆಡ್ತಿದ್ದ ಆರ್‌ ಸಮರ್ಥ್‌ 47 ರನ್‌ಗೆ ಇನ್ನಿಂಗ್ಸ್‌ ಮುಗಿಸಿದ್ರು. ಇವರ ಇನ್ನಿಂಗ್ಸ್‌ನಲ್ಲಿ ಎಂಟು ಬೌಂಡರಿಗಳಿದ್ದವು.

ಮೊದಲೆರಡು ವಿಕೆಟ್ ಪತನದ ಬಳಿಕ ಕೃಷ್ಣಮೂರ್ತಿ ಸಿದ್ಧಾರ್ಥ್‌ ಮತ್ತು ನಾಯಕ ಮನೀಷ್ ಪಾಂಡೆ ನಾಲ್ಕನೇ ವಿಕೆಟ್‌ಗೆ ಅಮೋಘ ಜೊತೆಯಾಟದ ಮೂಲಕ ಕರ್ನಾಟಕ ತಂಡವನ್ನ ಸುಭದ್ರ ಸ್ಥಿತಿಯತ್ತ ತಲುಪಿಸಿದ್ರು. ದ್ವಿಶತಕದ ಜೊತೆಯಾಟವಾಡಿದ ಈ ಜೋಡಿ ನಾಲ್ಕನೇ ವಿಕೆಟ್‌ಗೆ 267 ರನ್‌ಗಳ ಜೊತೆಯಾಟವಾಡಿತು.

ಮನೀಷ್‌ ಪಾಂಡೆ ಏಕದಿನ ಪಂದ್ಯದ ರೀತಿಯಲ್ಲಿ ಬ್ಯಾಟ್‌ ಬೀಸಿದ್ದು, 121 ಎಸೆತಗಳಲ್ಲಿ 12 ಬೌಂಡರಿ ಮತ್ತು 10 ಅಮೋಘ ಸಿಕ್ಸರ್‌ ನೆರವಿನಿಂದ 156 ರನ್ ಸಿಡಿಸಿದ್ರು. 128.93ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿದ ಪಾಂಡೆ ಬೊಂಬಾಟ್ ಆಟ ಪ್ರದರ್ಶಿಸಿದ್ರು.

ಇನ್ನು ಪಾಂಡೆ ಜೊತೆಗೆ ಉತ್ತಮ ಆಟವಾಡಿದ ಕೃಷ್ಣಮೂರ್ತಿ ಸಿದ್ಧಾರ್ಥ್‌ 221 ಎಸೆತಗಳಲ್ಲಿ 140 ರನ್ ಕಲೆಹಾಕಿದ್ರು. ಇವರ ಇನ್ನಿಂಗ್ಸ್‌ನಲ್ಲಿ 17 ಬೌಂಡರಿ, 2 ಸಿಕ್ಸರ್ ಸಿಡಿಸಿದ್ರು.

ಮನೀಶ್ ಪಾಂಡೆ ವಿಕೆಟ್ ಪತನದ ಬಳಿಕ ವಿಕೆಟ್ ಕೀಪರ್ ಶ್ರೀನಿವಾಸ್ ಶರತ್ ಕೇವಲ ಐದು ರನ್‌ಗೆ ವಿಕೆಟ್ ಒಪ್ಪಿಸಿದ್ರು. ಮೊದಲ ದಿನದಾಟಂತ್ಯಕ್ಕೆ ಕರ್ನಾಟಕ ವಿಕೆಟ್ ನಷ್ಟಕ್ಕೆ 392 ರನ್‌ ಕಲೆಹಾಕಿದೆ. ರೈಲ್ವೇಸ್ ಪರ ಶಿವಂ ಚೌಧರಿ 2 ವಿಕೆಟ್, ಯುವರಾಜ್ ಸಿಂಗ್ ಮತ್ತು ಅವಿನಾಶ್ ಯಾದವ್ ತಲಾ 1 ವಿಕೆಟ್ ಪಡೆದರು.

Story first published: Friday, February 18, 2022, 9:41 [IST]
Other articles published on Feb 18, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X