ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರಣಜಿ 2022 ಕ್ವಾ. ಫೈನಲ್: ಅಲ್ಪ ಮೊತ್ತಕ್ಕೆ ಕುಸಿದ ಕರ್ನಾಟಕ: ಉ. ಪ್ರದೇಶ ಗೆಲುವಿಗೆ ಸಾಧಾರಣ ಗುರಿ ನಿಗದಿ

Ranji Trophy 2022 Quarterfinals, UP need 213 runs to win against Karnataka

ಉತ್ತರ ಪ್ರದೇಶ ವಿರುದ್ಧ ನಡೆಯುತ್ತಿರುವ ರಣಜಿ ಕ್ವಾರ್ಟರ್‌ಫೈನಲ್ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿಯೂ ಕರ್ನಾಟಕ ತಂಡದ ಬ್ಯಾಟರ್‌ಗಳು ವೈಫಲ್ಯ ಅನುಭವಿಸಿದ್ದಾರೆ. ಉತ್ತರ ಪ್ರದೇಶ ತಂಡದ ಬೌಲರ್‌ಗಳ ದಾಳಿಗೆ ಪ್ರತ್ಯುತ್ತರ ನೀಡಲು ವಿಫಲವಾದ ಕರ್ನಾಟಕ ದಾಂಡಿಗರು ಒಬ್ಬರ ನಂತರ ಮತ್ತೊಬ್ಬರಂತೆ ಫೆವಿಲಿಯನ್ ಪರೇಡ್ ನಡೆಸಿದರು ಇದರ ಪರಿಣಾಮವಾಗಿ ಕರ್ನಾಟಕ ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 114 ರನ್‌ಗಳಿಗೆ ಆಲೌಟ್ ಆಗಿದೆ. ಈ ಮೂಲಕ ಉತ್ತರ ಪ್ರದೇಶ ತಂಡಕ್ಕೆ 213 ರನ್‌ಗಳ ಸಾಧಾರಣ ಗುರಿಯನ್ನು ನಿಗದಿಪಡಿಸಿದೆ.

ಸೆಮಿ ಫೈನಲ್ ಹಂತಕ್ಕೇರಬೇಕಾದರೆ ಉತ್ತರ ಪ್ರದೇಶ ವಿರುದ್ಧದ ಈ ನಿರ್ಣಾಯಕ ಪಂದ್ಯವನ್ನು ಗೆಲ್ಲಲೇಬೇಕಿದೆ. ಹೀಗಾಗಿ ಎರಡನೇ ಇನ್ನಿಂಗ್ಸ್‌ನಲ್ಲಿ ಮೊದಲ ಇನ್ನಿಂಗ್ಸ್‌ಗಿಂತಲೂ ಬಿಗುವಿನ ದಾಳಿಯನ್ನು ಕರ್ನಾಟಕ ಬೌಲರ್‌ಗಳು ನಡೆಸಬೇಕಿದೆ. ಹಾಗಿದ್ದರೆ ಮಾತ್ರವೇ ಕರ್ನಾಟಕಕ್ಕೆ ಗೆಲುವಿನ ಅವಕಾಶ ಇರಲಿದೆ. ಮೂರನೇ ದಿನದಾಟಬಾಗಿರುವ ಕಾರಣ ಸಾಕಷ್ಟು ಸಮಯಾವಕಾಶಗಳು ಎರಡೂ ತಂಡಗಳಿಗೆ ಇದೆ.

IND vs SA ಟಿ20 ಸರಣಿ: ಕೆಎಲ್ ರಾಹುಲ್ ನಾಯಕತ್ವದ ಕುರಿತು ಸುರೇಶ್ ರೈನಾ ಹೇಳಿದ್ದೇನು?IND vs SA ಟಿ20 ಸರಣಿ: ಕೆಎಲ್ ರಾಹುಲ್ ನಾಯಕತ್ವದ ಕುರಿತು ಸುರೇಶ್ ರೈನಾ ಹೇಳಿದ್ದೇನು?

ಮೊದಲ ಇನ್ನಿಂಗ್ಸ್‌ನಲ್ಲಿ ಸಾಧಾರಣ ಮೊತ್ತ

ಮೊದಲ ಇನ್ನಿಂಗ್ಸ್‌ನಲ್ಲಿ ಸಾಧಾರಣ ಮೊತ್ತ

ಇನ್ನು ಈ ಪಂದ್ಯದಲ್ಲಿ ಮೊದಲಿಗೆ ಬ್ಯಾಟಿಂಗ್ ನಡೆಸಿದ ಕರ್ನಾಟಕ ತಂಡ ಆರ್ ಸಮರ್ಥ್ ಹಾಗೂ ಶ್ರೇಯಸ್ ಗೋಪಾಲ್ ಅವರ ಅರ್ಧ ಶತಕದ ನೆರವಿನಿಂದ 253 ರನ್‌ಗಳ ಸಾಧಾರಣ ಮೊತ್ತವನ್ನು ಕಲೆಹಾಕಿತ್ತು. ಇದಕ್ಕೆ ಪ್ರತಿಯಾಗಿ ಬ್ಯಾಟಿಂಗ್ ಮಾಡಿದ ಉತ್ತರ ಪ್ರದೇಶ ಕೂಡ ಕರ್ನಾಟಕ ಬೌಲರ್‌ಗಳ ದಾಳಿಗೆ ತತ್ತರಿಸಿತ್ತು. ಮೊದಲ ಇನ್ನಿಂಗ್ಸ್‌ನಲ್ಲಿ ಯುಪಿ ಕೇವಲ 155 ರನ್‌ಗಳ ಮೊತ್ತವನ್ನು ಕಲೆಹಾಕಲು ಮಾತ್ರವೇ ಯಶಸ್ವಿಯಾಯಿತು. ಈ ಮೂಲಕ ಕರ್ನಾಟಕ ತಂಡ ಅಮೂಲ್ಯ 98 ರನ್‌ಗಳ ಮುನ್ನಡೆ ಪಡೆದುಕೊಂಡಿತು.

ಎರಡನೇ ಇನ್ನಿಂಗ್ಸ್‌ನಲ್ಲಿ ಸಂಪೂರ್ಣ ವೈಫಲ್ಯ

ಎರಡನೇ ಇನ್ನಿಂಗ್ಸ್‌ನಲ್ಲಿ ಸಂಪೂರ್ಣ ವೈಫಲ್ಯ

ಆದರೆ ಎರಡನೇ ಇನ್ನಿಂಗ್ಸ್‌ನಲ್ಲಿ ಕರ್ನಾಟಕದ ದಾಂಡಿಗರು ಮತ್ತೊಮ್ಮೆ ವೈಫಲ್ಯವನ್ನ ಅನುಭವಿಸಿದ್ದಾರೆ. ಯಾವೊಬ್ಬ ಆಟಗಾರ ಕೂಡ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನೆಲೆಯೂರಲು ಸಾಧ್ಯವಾಗಲೇ ಇಲ್ಲ.ವಿಕೆಟ್ ಕೀಪರ್ ಶ್ರೀನಿವಾಸ್ ಶರತ್ ಅವರ 23 ರನ್‌ಗಳ ಕೊಡುಗೆ ತಂಡದ ಹೈಯೆಸ್ಟ್ ಸ್ಕೋರ್ ಎನಿಸಿಕೊಂಡಿದೆ. ಹೀಗಾಗಿ 213 ರನ್‌ಗಳ ಸಾಧಾರಣ ಗುರಿಯನ್ನು ಕರ್ನಾಟಕ ಉತ್ತರ ಪ್ರದೇಶ ತಂಡದ ಮುಂದಿಟ್ಟಿದೆ.

ಇತ್ತಂಡಗಳ ಆಡುವ ಬಳಗ

ಇತ್ತಂಡಗಳ ಆಡುವ ಬಳಗ

ಕರ್ನಾಟಕ ಆಡುವ ಬಳಗ: ಮಯಾಂಕ್ ಅಗರ್ವಾಲ್, ರವಿಕುಮಾರ್ ಸಮರ್ಥ್, ಕರುಣ್ ನಾಯರ್, ಮನೀಶ್ ಪಾಂಡೆ (ನಾಯಕ), ಕೃಷ್ಣಮೂರ್ತಿ ಸಿದ್ಧಾರ್ಥ್, ಶ್ರೀನಿವಾಸ್ ಶರತ್ (ವಿಕೆಟ್ ಕೀಪರ್), ಶ್ರೇಯಸ್ ಗೋಪಾಲ್, ಕೃಷ್ಣಪ್ಪ ಗೌತಮ್, ರೋನಿತ್ ಮೋರೆ, ವಿಧ್ವತ್ ಕಾವೇರಪ್ಪ, ವಿಜಯ್ ಕುಮಾರ್ ವೈಶಾಕ್
ಬೆಂಚ್: ದೇಗಾ ನಿಶ್ಚಲ್, ಕೆ ಸಿ ಕಾರಿಯಪ್ಪ, ದೇವದತ್ತ್ ಪಡಿಕ್ಕಲ್, ವಿ ಕೌಶಿಕ್, ಮುರಳೀಧರ ವೆಂಕಟೇಶ್, ಜಗದೀಶ ಸುಚಿತ್, ಕಿಶನ್ ಬೇಡರೆ, ಶುಭಾಂಗ್ ಹೆಗ್ಡೆ, ಶರತ್ ಬಿಆರ್

ಉತ್ತರ ಪ್ರದೇಶ ಆಡುವ ಬಳಗ: ಸಮರ್ಥ್ ಸಿಂಗ್, ಪ್ರಿಯಂ ಗಾರ್ಗ್, ಪ್ರಿನ್ಸ್ ಯಾದವ್, ರಿಂಕು ಸಿಂಗ್, ಆರ್ಯನ್ ಜುಯಲ್, ಕರಣ್ ಶರ್ಮಾ (ನಾಯಕ), ಧ್ರುವ್ ಜುರೆಲ್ (ವಿಕೆಟ್ ಕೀಪರ್), ಶಿವಂ ಮಾವಿ, ಅಂಕಿತ್ ರಾಜ್‌ಪೂತ್, ಯಶ್ ದಯಾಳ್, ಸೌರಭ್ ಕುಮಾರ್
ಬೆಂಚ್: ಅಲ್ಮಾಸ್ ಶೌಕತ್, ಕುಲದೀಪ್ ಯಾದವ್, ಜೀಶನ್ ಅನ್ಸಾರಿ, ಶಾನು ಸೈನಿ, ಸಮೀರ್ ಚೌಧರಿ, ಮಾಧವ್ ಕೌಶಿಕ್, ಹರ್ದೀಪ್ ಸಿಂಗ್, ರಿಷಭ್ ಬನ್ಸಾಲ್, ಪಾರ್ಥ್ ಮಿಶ್ರಾ, ಆಕಿಬ್ ಖಾನ್, ಶಿವಂ ಶರ್ಮಾ, ಜಸ್ಮರ್ ಧಂಖರ್, ಅಕ್ಷದೀಪ್ ನಾಥ್

Story first published: Wednesday, June 8, 2022, 11:15 [IST]
Other articles published on Jun 8, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X