ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರಣಜಿ ಟ್ರೋಫಿ 2022: ಸೆಮಿಫೈನಲ್ ಪಂದ್ಯಗಳ ವೇಳಾಪಟ್ಟಿ, ತಂಡಗಳು, ದಿನಾಂಕ, ಸ್ಥಳ

Ranji Trophy 2022 Semifinals: Schedule, Teams, Date, Time and Venue Details in Kannada

ಪ್ರಸಕ್ತ ನಡೆಯುತ್ತಿರುವ ರಣಜಿ ಟ್ರೋಫಿಯ ಸೆಮಿಫೈನಲ್ ಹಂತವು ಜೂನ್ 14ರಂದು ಬೆಂಗಳೂರಿನಲ್ಲಿ ಆರಂಭವಾಗಲಿದೆ. ಬಂಗಾಳ, ಮಧ್ಯಪ್ರದೇಶ, ಮುಂಬೈ ಮತ್ತು ಉತ್ತರ ಪ್ರದೇಶ ತಂಡಗಳು ಜೂನ್ 6ರಿಂದ ಜೂನ್ 10 ರವರೆಗೆ ಬೆಂಗಳೂರಿನಲ್ಲಿ ನಡೆದ ಕ್ವಾರ್ಟರ್‌ಫೈನಲ್ ಪಂದ್ಯಗಳಲ್ಲಿ ಕ್ರಮವಾಗಿ ಜಾರ್ಖಂಡ್, ಪಂಜಾಬ್, ಉತ್ತರಾಖಂಡ ಮತ್ತು ಕರ್ನಾಟಕವನ್ನು ಸೋಲಿಸಿ ಸೆಮಿಫೈನಲ್‌ಗೆ ಅರ್ಹತೆ ಪಡೆದಿವೆ.

ಬಂಗಾಳ ತಂಡವು ಮೊದಲ ಕ್ವಾರ್ಟರ್ ಫೈನಲ್‌ನಲ್ಲಿ ಜಾರ್ಖಂಡ್ ತಂಡದೊಂದಿಗಿನ ತನ್ನ ಪಂದ್ಯವನ್ನು ಡ್ರಾ ಮಾಡಿಕೊಂಡಿತು ಮತ್ತು ಮೊದಲ ಇನ್ನಿಂಗ್ಸ್ ಸ್ಕೋರ್ ಆಧಾರದ ಮೇಲೆ ಬಂಗಾಳ ಸೆಮಿಫೈನಲ್‌ಗೆ ಅರ್ಹತೆ ಗಳಿಸಿತು.

ಮುಂಬೈ ಎರಡನೇ ಕ್ವಾರ್ಟರ್‌ಫೈನಲ್‌ನಲ್ಲಿ ಉತ್ತರಾಖಂಡ ತಂಡವನ್ನು 725 ರನ್‌ಗಳ ದಾಖಲೆಯ ಅಂತರದಿಂದ ಸೋಲಿಸಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿತು. ಮೂರನೇ ಕ್ವಾರ್ಟರ್‌ಫೈನಲ್‌ನಲ್ಲಿ ಉತ್ತರ ಪ್ರದೇಶ ಕರ್ನಾಟಕವನ್ನು 5 ವಿಕೆಟ್‌ಗಳಿಂದ ಸೋಲಿಸಿದರೆ, ಮಧ್ಯಪ್ರದೇಶವು ಪಂಜಾಬ್ ವಿರುದ್ಧ ನಾಲ್ಕನೇ ಕ್ವಾರ್ಟರ್‌ಫೈನಲ್‌ನಲ್ಲಿ 10 ವಿಕೆಟ್‌ಗಳಿಂದ ಜಯ ಗಳಿಸಿತು.

ರಣಜಿ ಟ್ರೋಫಿ 2022: ಸೆಮಿಫೈನಲ್ ವೇಳಾಪಟ್ಟಿ

ರಣಜಿ ಟ್ರೋಫಿ 2022: ಸೆಮಿಫೈನಲ್ ವೇಳಾಪಟ್ಟಿ

ಸೆಮಿಫೈನಲ್ 1: ಬಂಗಾಳ ವಿರುದ್ಧ ಮಧ್ಯಪ್ರದೇಶ- ಜೂನ್ 14ರಿಂದ ಜೂನ್ 18ರವರೆಗೆ

ಸೆಮಿಫೈನಲ್ 2: ಮುಂಬೈ ವಿರುದ್ಧ ಉತ್ತರ ಪ್ರದೇಶ- ಜೂನ್ 14ರಿಂದ ಜೂನ್ 18ರವರೆಗೆ

ಬಂಗಾಳ ಮತ್ತು ಮಧ್ಯಪ್ರದೇಶ ನಡುವಿನ ಮೊದಲ ಸೆಮಿಫೈನಲ್ ಆಲೂರಿನ ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ ​​ಮೈದಾನದಲ್ಲಿ ನಡೆಯಲಿದೆ. ಪಂದ್ಯವು ಭಾರತೀಯ ಕಾಲಮಾನ ಬೆಳಗ್ಗೆ 9:30ಕ್ಕೆ ಪ್ರಾರಂಭವಾಗುತ್ತದೆ.

ಮುಂಬೈ ಮತ್ತು ಉತ್ತರ ಪ್ರದೇಶ ನಡುವಿನ ಎರಡನೇ ಸೆಮಿಫೈನಲ್ ಬೆಂಗಳೂರಿನ ಜಸ್ಟ್ ಕ್ರಿಕೆಟ್ ಅಕಾಡೆಮಿ ಮೈದಾನದಲ್ಲಿ ನಡೆಯಲಿದೆ. ಪಂದ್ಯವು ಭಾರತೀಯ ಕಾಲಮಾನ ಬೆಳಗ್ಗೆ 9:30ಕ್ಕೆ ಪ್ರಾರಂಭವಾಗುತ್ತದೆ.

ರಣಜಿ ಟ್ರೋಫಿ 2022: ಸೆಮಿಫೈನಲ್‌ಗಳನ್ನು ಎಲ್ಲಿ ವೀಕ್ಷಿಸಬಹುದು?

ರಣಜಿ ಟ್ರೋಫಿ 2022: ಸೆಮಿಫೈನಲ್‌ಗಳನ್ನು ಎಲ್ಲಿ ವೀಕ್ಷಿಸಬಹುದು?

ಇನ್ನು ಭಾರತದ ಪ್ರತಿಷ್ಠಿತ ಪ್ರಥಮ ದರ್ಜೆ (ರಣಜಿ ಟ್ರೋಫಿ) ಪಂದ್ಯಾವಳಿಯ ಫೈನಲ್ ಪಂದ್ಯ ಜೂನ್ 22ರಿಂದ ಜೂನ್ 26ರವರೆಗೆ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ.

ಎರಡೂ ಸೆಮಿಫೈನಲ್ ಪಂದ್ಯಗಳನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಲೈವ್ ಕವರೇಜ್ ಸ್ಟಾರ್ ಸ್ಪೋರ್ಟ್ಸ್ 2 ಮತ್ತು ಸ್ಟಾರ್ ಸ್ಪೋರ್ಟ್ಸ್ 2 HD ನಲ್ಲಿ ಲಭ್ಯವಿರುತ್ತದೆ. ಆನ್‌ಲೈನ್ ಪ್ರೇಕ್ಷಕರು ಡಿಸ್ನಿ+ ಹಾಟ್‌ಸ್ಟಾರ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ರಣಜಿ ಟ್ರೋಫಿ ಸೆಮಿಫೈನಲ್ ಪಂದ್ಯಗಳ ಲೈವ್ ಸ್ಟ್ರೀಮಿಂಗ್ ಅನ್ನು ವೀಕ್ಷಿಸಲು ಸಾಧ್ಯವಾಗುತ್ತದೆ. ಡಿಸ್ನಿ+ ಹಾಟ್‌ಸ್ಟಾರ್ ಕನಿಷ್ಠ ಚಂದಾದಾರಿಕೆ ಶುಲ್ಕ ತಿಂಗಳಿಗೆ 299 ರೂ. ಇದೆ.

ರಣಜಿ ಟ್ರೋಫಿ 2022: ಪೂರ್ಣ ತಂಡಗಳು

ರಣಜಿ ಟ್ರೋಫಿ 2022: ಪೂರ್ಣ ತಂಡಗಳು

ಬಂಗಾಳ ತಂಡ: ಅಭಿಮನ್ಯು ಈಶ್ವರನ್ (ನಾಯಕ), ಅಭಿಷೇಕ್ ಪೊರೆಲ್, ಆಕಾಶ್ ದೀಪ್, ರಿಟಿಕ್ ಚಟರ್ಜಿ, ಸುದೀಪ್ ಚಟರ್ಜಿ, ನೀಲಕಂಠ ದಾಸ್, ಅಭಿಷೇಕ್ ದಾಸ್, ಸುದೀಪ್ ಕುಮಾರ್ ಘರಾಮಿ, ಹಬೀಬ್ ಗಾಂಧಿ, ಕರಣ್ ಲಾಲ್, ಅನುಸ್ತುಪ್ ಮಜುಂದಾರ್, ಸಯನ್ ಮೊಂಡಲ್, ಮುಕೇಶ್ ಕುಮಾರ್, ಇಶಾನ್ ಪೊರೆಲಿಕ್, ಪ್ರದೀಪ್ , ಗೀತ್ ಪುರಿ, ಅಭಿಷೇಕ್ ರಾಮನ್, ರಿತ್ವಿಕ್ ರಾಯ್ ಚೌಧರಿ, ಕಾಜಿ ಸೈಫಿ, ಶಹಬಾಜ್ ಅಹ್ಮದ್, ಮನೋಜ್ ತಿವಾರಿ.

ಮಧ್ಯಪ್ರದೇಶ ತಂಡ: ಆದಿತ್ಯ ಶ್ರೀವಾಸ್ತವ (ನಾಯಕ), ರಜತ್ ಪಾಟಿದಾರ್, ಅನುಭವ್ ಅಗರ್ವಾಲ್, ಅಕ್ಷತ್ ರಘುವಂಶಿ, ಅರ್ಷದ್ ಖಾನ್, ಪುನೀತ್ ದಾಟೆ, ಯಶ್ ದುಬೆ, ಗೌರವ್ ಯಾದವ್, ಮಿಹಿರ್ ಹಿರ್ವಾನಿ, ಸರನ್ಶ್ ಜೈನ್, ಕುಮಾರ್ ಕಾರ್ತಿಕೇಯ, ಹಿಮಾಂಶು ಮಂತ್ರಿ, ಈಶ್ವರ್ ಪಾಂಡೆ, ಅಜಯ್ ರಮೀಜ್ ಖಾನ್ , ಪಾರ್ಥ್ ಸಹಾನಿ, ಕುಲದೀಪ್ ಸೇನ್, ಶುಮ್ಹಮ್ ಶರ್ಮಾ, ರಾಕೇಶ್ ಠಾಕೂರ್, ಪೃಥ್ವಿರಾಜ್ ಸಿಂಗ್ ತೋಮರ್, ಅವೇಶ್ ಖಾನ್, ವೆಂಕಟೇಶ್ ಅಯ್ಯರ್.

ಮುಂಬೈ vs ಉತ್ತರ ಪ್ರದೇಶ

ಮುಂಬೈ vs ಉತ್ತರ ಪ್ರದೇಶ

ಮುಂಬೈ ತಂಡ: ತನುಷ್ ಕೋಟ್ಯಾನ್, ಪೃಥ್ವಿ ಶಾ (ನಾಯಕ), ಅಮನ್ ಹಕೀಮ್ ಖಾನ್, ಅರ್ಮಾನ್ ಜಾಫರ್, ಶಶಾಂಕ್ ಅತ್ತಾರ್ಡೆ, ಮೋಹಿತ್ ಅವಸ್ತಿ, ಯಶಸ್ವಿ ಜೈಸ್ವಾಲ್, ಸರ್ಫರಾಜ್ ಖಾನ್, ಧವಳ್ ಕುಲಕರ್ಣಿ, ಶಮ್ಸ್ ಮುಲಾನಿ, ಸಿದ್ಧಾರ್ಥ್ ರಾವುತ್, ಪ್ರಶಾಂತ್ ಸೋಲಂಕಿ, ಹಾರ್ದಿಕ್ ತಮೋರ್, ಅರ್ಜುನ್ ಆದಿತ್ಯ ತಾರೆ , ರಾಯ್ಸ್ಟನ್ ಡಯಾಸ್, ಶಿವಂ ದುಬೆ, ಆಕರ್ಷಿತ್ ಗೋಮೆಲ್.

ಉತ್ತರಪ್ರದೇಶ ತಂಡ: ಜಸ್ಮರ್ ಧಂಖರ್, ಧ್ರುವ್ ಜುರೆಲ್, ಆರ್ಯನ್ ಜುಯಲ್, ಕುಲದೀಪ್ ಯಾದವ್ (ನಾಯಕ), ಅಲ್ಮಾಸ್ ಶೌಕತ್, ರಿಷಭ್ ಬನ್ಸಾಲ್, ಪ್ರಿಯಮ್ ಗಾರ್ಗ್, ಹರ್ದೀಪ್ ಸಿಂಗ್, ಮಾಧವ್ ಕೌಶಿಕ್, ಪಾರ್ಥ್ ಮಿಶ್ರಾ, ಅಕ್ಷದೀಪ್ ನಾಥ್, ಅಂಕಿತ್ ರಾಜ್‌ಪೂತ್, ಶಾನು ಸೈನಿ, ಸಮರ್ಥ್ ಸಿಂಗ್, ಸಮೀರ್ ಚೌಧರಿ , ರಿಂಕು ಸಿಂಗ್, ಯಶ್ ದಯಾಳ್, ಜೀಶನ್ ಅನ್ಸಾರಿ, ಕರಣ್ ಶರ್ಮಾ, ಶಿವಂ ಮಾವಿ, ಶಿವಂ ಶರ್ಮಾ.

Story first published: Saturday, June 11, 2022, 18:34 [IST]
Other articles published on Jun 11, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X