ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರಣಜಿ ಟ್ರೋಫಿ: ಜಾರ್ಖಡ್ ವಿರುದ್ಧ ಶತಕ ಬಾರಿಸಿದ ಪಶ್ಚಿಮ ಬಂಗಾಳದ ಕ್ರೀಡಾ ಸಚಿವ

Ranji Trophy 2022: West Bengals Sports Minister Manoj Tiwary Scored Century Against Jharkhand

ಬೆಂಗಳೂರಿನಲ್ಲಿ ನಡೆಯುತ್ತಿರುವ ಜಾರ್ಖಂಡ್ ವಿರುದ್ಧದ ರಣಜಿ ಟ್ರೋಫಿ ಕ್ವಾರ್ಟರ್‌ಫೈನಲ್ ಹಣಾಹಣಿಯ ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತ ಕ್ರಿಕೆಟಿಗ ಮನೋಜ್ ತಿವಾರಿ ಶುಕ್ರವಾರ ಬಂಗಾಳದ ಪರವಾಗಿ ಶತಕ ಬಾರಿಸಿದ್ದಾರೆ.

ಪಶ್ಚಿಮ ಬಂಗಾಳ ರಾಜ್ಯದ ಯುವ ವ್ಯವಹಾರಗಳು ಮತ್ತು ಕ್ರೀಡಾ ಖಾತೆಯ ರಾಜ್ಯ ಸಚಿವರೂ ಆಗಿರುವ ಮನೋಜ್ ತಿವಾರಿ, 152 ಎಸೆತಗಳಲ್ಲಿ 14 ಬೌಂಡರಿ ಮತ್ತು ಒಂದು ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಮೂರಂಕಿ ರನ್ ಗಳಿಸಿದರು. ಬಂಗಾಳ ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ 4 ವಿಕೆಟ್‌ಗೆ 129 ರನ್ ಗಳಿಸಿದ್ದಾಗ ಮನೋಜ್ ತಿವಾರಿ 5ನೇ ದಿನದಂದು ಬ್ಯಾಟಿಂಗ್‌ಗೆ ಇಳಿದರು.

ರಣಜಿಯಲ್ಲಿ ವಿಶ್ವದಾಖಲೆ: 9 ಬ್ಯಾಟರ್‌ಗಳಿಂದ ಐತಿಹಾಸಿಕ ಸಾಧನೆ: 129 ವರ್ಷಗಳ ವಿಶ್ವದಾಖಲೆ ಮುರಿದ ಬಂಗಾಳರಣಜಿಯಲ್ಲಿ ವಿಶ್ವದಾಖಲೆ: 9 ಬ್ಯಾಟರ್‌ಗಳಿಂದ ಐತಿಹಾಸಿಕ ಸಾಧನೆ: 129 ವರ್ಷಗಳ ವಿಶ್ವದಾಖಲೆ ಮುರಿದ ಬಂಗಾಳ

ನಂತರ ಮನೋಜ್ ತಿವಾರಿ ಮತ್ತು ಅಭಿಷೇಕ್ ಪೊರೆಲ್ ಐದನೇ ವಿಕೆಟ್‌ಗೆ 72 ರನ್‌ಗಳನ್ನು ಜೊತೆಯಾಟವಾಡಿದರು. ನಂತರ 34 ರನ್‌ ಗಳಿಸಿದ ಪೊರೆಲ್ ಅವರು ಶಹಬಾಜ್ ನದೀಮ್ ಬೌಲಿಂಗ್‌ನಲ್ಲಿ ಔಟಾದರು. ಅಂತಿಮವಾಗಿ ಕ್ರೀಡಾ ಸಚಿವ ಮತ್ತು ಬಂಗಾಳ ಬ್ಯಾಟ್ಸ್‌ಮನ್ ಮನೋಜ್ ತಿವಾರಿ 136 ರನ್ ಗಳಿಸಿ ರನ್ ಔಟ್ ಆದರು.

ಕ್ವಾರ್ಟರ್ ಫೈನಲ್ ಪಂದ್ಯ ಡ್ರಾನಲ್ಲಿ ಅಂತ್ಯ

ಕ್ವಾರ್ಟರ್ ಫೈನಲ್ ಪಂದ್ಯ ಡ್ರಾನಲ್ಲಿ ಅಂತ್ಯ

ಈ ಲೇಖನ ಬರೆಯುವ ವೇಳೆಗೆ ಬಂಗಾಳ ತಂಡ 7 ವಿಕೆಟ್ ನಷ್ಟಕ್ಕೆ 318 ರನ್ ಗಳಿಸಿದ್ದು, ಶಹಬಾಜ್ ಅಹ್ಮದ್ 46 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಬಂಗಾಳ ಮತ್ತು ಜಾರ್ಖಂಡ್ ನಡುವಿನ ಕ್ವಾರ್ಟರ್ ಫೈನಲ್ ಪಂದ್ಯ ಡ್ರಾನಲ್ಲಿ ಅಂತ್ಯವಾಗಿದ್ದು, ಮೊದಲ ಇನ್ನಿಂಗ್ಸ್ ಮುನ್ನಡೆಯ ಆಧಾರದ ಮೇಲೆ ಬಂಗಾಳ ತಂಡ ಸೆಮಿಫೈನಲ್ ತಲುಪಿದೆ.

ಇಬ್ಬರು ಶತಕ, ಏಳು ಜನ ಅರ್ಧ ಶತಕ

ಇಬ್ಬರು ಶತಕ, ಏಳು ಜನ ಅರ್ಧ ಶತಕ

ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ್ದ ಬಂಗಾಳ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 7 ವಿಕೆಟ್‌ಗೆ 773 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು. ಸುದೀಪ್ ಕುಮಾರ್ ಘರಾಮಿ ಮತ್ತು ಅನುಸ್ತುಪ್ ಮಜುಂದಾರ್ ಶತಕ ಗಳಿಸಿದರೆ, ಕ್ರೀಡಾ ಸಚಿವ ಮನೋಜ್ ತಿವಾರಿ ಸೇರಿದಂತೆ ಇತರ ಏಳು ಬ್ಯಾಟ್ಸ್‌ಮನ್‌ಗಳು ತಲಾ ಅರ್ಧಶತಕ ಗಳಿಸಿ, ರಣಜಿ ಟ್ರೋಫಿಯಲ್ಲಿ ದಾಖಲೆ ನಿರ್ಮಿಸಿದರು.

243 ರನ್‌ಗಳ ಬೃಹತ್ ಜೊತೆಯಾಟ

243 ರನ್‌ಗಳ ಬೃಹತ್ ಜೊತೆಯಾಟ

ಆರಂಭಿಕರಾದ ಅಭಿಷೇಕ್ ರಾಮನ್ (61) ಮತ್ತು ನಾಯಕ ಅಭಿಮನ್ಯು ಈಶ್ವರನ್ (65) ಮೊದಲ ವಿಕೆಟ್‌ಗೆ 132 ರನ್ ಜೊತೆಯಾಟದ ಮೂಲಕ ಬಂಗಾಳಕ್ಕೆ ಉತ್ತಮ ಆರಂಭ ನೀಡಿದ್ದರು. ಈಶ್ವರನ್ ಅವರು ಸುಶಾಂತ್ ಮಿಶ್ರಾ ಬೌಲಿಂಗ್‌ನಲ್ಲಿ ವಿಕೆಟ್ ಕಳೆದುಕೊಂಡು ನಿರ್ಗಮಿಸಿದರು.

ಆನಂತರ ಸುದೀಪ್ ಕುಮಾರ್ ಘರಾಮಿ ಅವರು ಮಜುಂದಾರ್ ಅವರೊಂದಿಗೆ 243 ರನ್‌ಗಳ ಬೃಹತ್ ಜೊತೆಯಾಟ ನೀಡಿದ್ದರಿಂದ ಬಂಗಾಳವು ಪ್ರಾಬಲ್ಯವನ್ನು ಮುಂದುವರೆಸಿತು, ಮಜುಂದಾರ್ ಅವರು ಅನುಕುಲ್ ರಾಯ್ ಬೌಲಿಂಗ್‌ನಲ್ಲಿ 117 ರನ್ ಗಳಿಸಿದ್ದಾಗ ಔಟಾದರು. ಸುದೀಪ್ ಕುಮಾರ್ ಘರಾಮಿ 186 ರನ್ ಗಳಿಸಿ ಜಾರ್ಖಂಡ್‌ಗೆ ದುಸ್ವಪ್ನವಾಗಿ ಕಾಡಿದರು.

ಈ ಸ್ಟಾರ್ ಪ್ಲೇಯರ್ಸ್ ಗೆ ಐಪಿಎಲ್ ಆಡೋಕೆ ಮನಸ್ಸು ಇಲ್ವಂತೆ ! | Oneindia Kannada
ಜಾರ್ಖಂಡ್ ಪರ ಸುಶಾಂತ್ ಮಿಶ್ರಾ ಮೂರು ವಿಕೆಟ್

ಜಾರ್ಖಂಡ್ ಪರ ಸುಶಾಂತ್ ಮಿಶ್ರಾ ಮೂರು ವಿಕೆಟ್

ಘರಾಮಿ ಔಟಾದ ನಂತರ, ಮನೋಜ್ ತಿವಾರಿ, ಅಭಿಷೇಕ್ ಪೊರೆಲ್, ಶಹಬಾಜ್ ಅಹ್ಮದ್, ಸಯಾನ್ ಮೊಂಡಾಲ್ ಮತ್ತು ಆಕಾಶ್ ದೀಪ್ ಎಲ್ಲರೂ ಅರ್ಧಶತಕಗಳನ್ನು ಗಳಿಸಿ ಬಂಗಾಳವನ್ನು ಬೃಹತ್ ಮೊತ್ತಕ್ಕೆ ಕೊಂಡೊಯ್ದರು.

ಜಾರ್ಖಂಡ್ ಪರ ಸುಶಾಂತ್ ಮಿಶ್ರಾ ಮೂರು ವಿಕೆಟ್ ಪಡೆದರೆ, ಶಬಾಜ್ ನದೀಮ್ ಎರಡು ವಿಕೆಟ್ ಪಡೆದರು. ಪ್ರತ್ಯುತ್ತರವಾಗಿ ಜಾರ್ಖಂಡ್ ತಂಡವು 298 ರನ್‌ಗಳಿಗೆ ಆಲೌಟ್ ಆಯಿತು, ವಿರಾಟ್ ಸಿಂಗ್ ಅಜೇಯ 113 ರನ್‌ಗಳೊಂದಿಗೆ ಗರಿಷ್ಠ ಸ್ಕೋರರ್ ಆಘಿ ಮಿಂಚಿದರು.

Story first published: Friday, June 10, 2022, 16:38 [IST]
Other articles published on Jun 10, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X