ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ತಿವಾರಿ ತ್ರಿಶತಕ, ಶಹಬಾಜ್ ಹ್ಯಾಟ್ರಿಕ್ ವಿಕೆಟ್, ಬೆಂಗಾಲ್‌ಗೆ ಭರ್ಜರಿ ಜಯ

Ranji Trophy: Ahmed takes a hat-trick as Bengal rout Hyderabad

ಕೋಲ್ಕತ್ತಾ, ಜನವರಿ 21: ರಣಜಿ ಟ್ರೋಫಿ ಟೂರ್ನಿಯ ಹೈದರಾಬಾದ್-ಬೆಂಗಾಲ್ ಮುಖಾಮುಖಿಯಲ್ಲಿ ಬೆಂಗಾಲ್ ಆರಂಭಿಕ ಇನ್ನಿಂಗ್ಸ್‌ನಲ್ಲಿ ಮನೋಜ್ ತಿವಾರಿ ಆಕರ್ಷಕ ತ್ರಿ ಶತಕ ಬಾರಿಸಿದ್ದರು. ಅದಾಗಿ ಹೈದರಾಬಾದ್‌ ಮೊದಲ ಇನ್ನಿಂಗ್ಸ್‌ನಲ್ಲಿ ಬೆಂಗಾಲ್ ಆಲ್ ರೌಂಡರ್ ಶಹಬಾಜ್ ಅಹ್ಮದ್ ಹ್ಯಾಟ್ರಿಕ್ ವಿಕೆಟ್‌ ಪಡೆದು ಮಿಂಚಿದ್ದಾರೆ.

ನ್ಯೂಜಿಲೆಂಡ್‌ ವಿರುದ್ಧದ ಟಿ20ಐ, ಏಕದಿನ ಸರಣಿಗೆ ಭಾರತ ತಂಡ ಪ್ರಕಟನ್ಯೂಜಿಲೆಂಡ್‌ ವಿರುದ್ಧದ ಟಿ20ಐ, ಏಕದಿನ ಸರಣಿಗೆ ಭಾರತ ತಂಡ ಪ್ರಕಟ

ಮನೋಜ್‌ ತಿವಾರಿ ಅವರ ಅಜೇಯ 303 ರನ್, ಶಹಬಾಜ್ ಅಹ್ಮದ್ ಹ್ಯಾಟ್ರಿಕ್‌ ವಿಕೆಟ್‌ ಸಾಧನೆಯ ನೆರವಿನೊಂದಿಗೆ ಬೆಂಗಾಲ್ ಈ ಪಂದ್ಯದಲ್ಲಿ ಇನ್ನಿಂಗ್ಸ್‌ ಸಹಿತ 303 ರನ್ ಭರ್ಜರಿ ಜಯ ಗಳಿಸಿದೆ. ಗಮ್ಮತ್ತೆಂದರೆ ಬೆಂಗಾಲ್ ಪರ ತಿವಾರಿ ಬಾರಿಸಿದ್ದು 303 ರನ್, ಬೆಂಗಾಲ್ ಗೆದ್ದಿದ್ದೂ 303 ರನ್‌ನಿಂದ!

ಅಂಡರ್19 ವಿಶ್ವಕಪ್: ಜಪಾನ್ ವಿರುದ್ಧ ದಾಖಲೆಯ ಜಯ ಸಾಧಿಸಿದ ಟೀಮ್ ಇಂಡಿಯಾಅಂಡರ್19 ವಿಶ್ವಕಪ್: ಜಪಾನ್ ವಿರುದ್ಧ ದಾಖಲೆಯ ಜಯ ಸಾಧಿಸಿದ ಟೀಮ್ ಇಂಡಿಯಾ

ಈ ಬಾರಿಯ ಐಪಿಎಲ್ ಸೀಸನ್‌ಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಾಲಾಗಿರುವ 25ರ ಹರೆಯದ ಶಹಬಾಜ್ ಅಹ್ಮದ್‌ಗೆ ಹ್ಯಾಟ್ರಿಕ್ ವಿಕೆಟ್ ಲಭಿಸಿದ್ದು ಹೈದರಾಬಾದ್‌ ಇನ್ನಿಂಗ್ಸ್‌ನ 47 ಓವರ್‌ನಲ್ಲಿ. 46.1ನೇ ಓವರ್‌ಗೆ ಜಾವೀದ್ ಅಲಿ, 46.2ನೇ ಓವರ್‌ಗೆ ರವಿ ಕಿರಣ್ ಮತ್ತು 46.3ನೇ ಓವರ್‌ಗೆ ಕೊಲ್ಲ ಸುಮಂತ್ ವಿಕೆಟ್ ಮುರಿದು ಅಹ್ಮದ್ ಹ್ಯಾಟ್ರಿಕ್ ಸಾಧನೆ ಮೆರೆದರು.

ನ್ಯೂಜಿಲೆಂಡ್‌ನಲ್ಲಿ ರೋಹಿತ್‌ಗೆ ದೊಡ್ಡ ಸವಾಲಿನ ಸಂಗತಿಯೊಂದಿದೆ: ಸಚಿನ್ನ್ಯೂಜಿಲೆಂಡ್‌ನಲ್ಲಿ ರೋಹಿತ್‌ಗೆ ದೊಡ್ಡ ಸವಾಲಿನ ಸಂಗತಿಯೊಂದಿದೆ: ಸಚಿನ್

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಬೆಂಗಾಲ್ 635 ರನ್‌ಗೆ ಡಿಕ್ಲೇರ್ ಘೋಸಿಸಿತ್ತು. ಗುರಿ ಬೆನ್ನತ್ತಿದ ಹೈದರಾಬಾದ್ ತಂಡ, 171+161 ರನ್ ಪೇರಿಸಿ ಶರಣಾಯಿತು. ಈ ಪಂದ್ಯದಲ್ಲಿ ಶಹಬಾಜ್‌ಗೆ ಒಟ್ಟು 4+2 ವಿಕೆಟ್‌ಗಳು ಲಭಿಸಿದವು. ಅಲ್ಲದೆ ಇದೇ ಪಂದ್ಯದಲ್ಲಿ ಅಹ್ಮದ್ 49 ರನ್ ಕೊಡುಗೆ ಕೂಡ ನೀಡಿದ್ದರು.

Story first published: Wednesday, January 22, 2020, 2:30 [IST]
Other articles published on Jan 22, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X