ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರಣಜಿ ಟ್ರೋಫಿ: ಕರ್ನಾಟಕ vs ಮುಂಬೈ ಪಂದ್ಯಕ್ಕಾಗಿ ತಂಡಗಳು ಪ್ರಕಟ

Ranji Trophy: Ajinkya Rahane, Prithvi Shaw to play against Karnataka

ಬೆಂಗಳೂರು, ಜನವರಿ 1: ಟೆಸ್ಟ್ ಸ್ಪೆಶಾಲಿಷ್ಟ್ ಅಜಿಂಕ್ಯ ರಹಾನೆ ಮತ್ತು ಯುವ ಬ್ಯಾಟ್ಸ್‌ಮನ್ ಪೃಥ್ವಿ ಶಾ ಕರ್ನಾಟಕದ ವಿರುದ್ಧದ ರಣಜಿ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ. ಕರ್ನಾಟಕ vs ಮುಂಬೈ ಕುತೂಹಲಕಾರಿ ಪಂದ್ಯ 2020ರ ಜನವರಿ 3ರಂದು ಮುಂಬೈಯ ಬಾಂದ್ರಾ ಕರ್ಲಾ ಕಾಂಪ್ಲೆಕ್ಸ್‌ನಲ್ಲಿ ನಡೆಯಲಿದೆ. ಕರ್ನಾಟಕ ತಂಡವನ್ನು ಕರುಣ್ ನಾಯರ್ ಮುನ್ನಡೆಸಲಿದ್ದಾರೆ.

ಭಾರತ vs ಶ್ರೀಲಂಕಾ ಟಿ20 ಸರಣಿಯ ವೇಳಾಪಟ್ಟಿ ಮತ್ತು ಸಂಪೂರ್ಣ ಮಾಹಿತಿಭಾರತ vs ಶ್ರೀಲಂಕಾ ಟಿ20 ಸರಣಿಯ ವೇಳಾಪಟ್ಟಿ ಮತ್ತು ಸಂಪೂರ್ಣ ಮಾಹಿತಿ

ಕರ್ನಾಟಕ ಮತ್ತು ಮುಂಬೈ ಎರಡೂ ತಂಡಗಳು ಪ್ರಮುಖ ಪಂದ್ಯಕ್ಕಾಗಿ 15 ಜನ ಆಟಗಾರರಿರುವ ತಂಡಗಳನ್ನು ಪ್ರಕಟಿಸಿವೆ. ಶಾ ಮತ್ತು ರಹಾನೆ ಇಬ್ಬರೂ ಬರೋಡಾ ಮತ್ತು ರೈಲ್ವೇಸ್ ವಿರುದ್ಧದ ಹಿಂದಿನ ಎರಡೂ ಪಂದ್ಯಗಳಲ್ಲಿ ಆಡಿದ್ದರು. ಅದರಲ್ಲೂ ಪೃಥ್ವಿ ಶಾ ಬರೋಡಾ ವಿರುದ್ಧ ದ್ವಿಶತಕ ಬಾರಿಸಿ ಗಮನ ಸೆಳೆದಿದ್ದರು.

ವರ್ಷಾಂತ್ಯಕ್ಕೆ ಟೆಸ್ಟ್‌ ಕ್ರಿಕೆಟ್‌ನಲ್ಲೂ ನಂಬರ್ 1 ಆಗಿಯೇ ಮುಂದುವರಿದ ವಿರಾಟ್ ಕೊಹ್ಲಿವರ್ಷಾಂತ್ಯಕ್ಕೆ ಟೆಸ್ಟ್‌ ಕ್ರಿಕೆಟ್‌ನಲ್ಲೂ ನಂಬರ್ 1 ಆಗಿಯೇ ಮುಂದುವರಿದ ವಿರಾಟ್ ಕೊಹ್ಲಿ

ಮುಂಬೈ ಮತ್ತು ಕರ್ನಾಟಕ ತಂಡಗಳು ಎಲೈಟ್ ಗ್ರೂಪ್ 'ಎ' ಮತ್ತು 'ಬಿ'ಯಲ್ಲಿದ್ದು, ಕರ್ನಾಟಕ ತಂಡ ಆಡಿರುವ 3 ಪಂದ್ಯಗಳಲ್ಲಿ 1ರಲ್ಲಿ ಗೆದ್ದು 2ರಲ್ಲಿ ಡ್ರಾ ಸಾಧಿಸಿದೆ. ಇನ್ನು ಮುಂಬೈ 2ರಲ್ಲಿ 1 ಗೆದ್ದು 1 ಪಂದ್ಯ ಸೋತಿದೆ. ಬಲಿಷ್ಠ ತಂಡಗಳ ಈ ಕದನ ಬೆಳಗ್ಗೆ 9.30 amಗೆ ಆರಂಭಗೊಳ್ಳಲಿದೆ.

ದಾನಿಶ್ ಕನೆರಿಯಾ ಪ್ರಕರಣ ಪಾಕಿಸ್ತಾನದ ನೈಜ ಬಣ್ಣವನ್ನು ತೋರಿಸಿದೆ; ಗೌತಮ್ ಗಂಭೀರ್ದಾನಿಶ್ ಕನೆರಿಯಾ ಪ್ರಕರಣ ಪಾಕಿಸ್ತಾನದ ನೈಜ ಬಣ್ಣವನ್ನು ತೋರಿಸಿದೆ; ಗೌತಮ್ ಗಂಭೀರ್

ಮುಂಬೈ ತಂಡ: ಸೂರ್ಯಕುಮಾರ್ ಯಾದವ್ (ಕ್ಯಾಪ್ಟನ್) ಆದಿತ್ಯ ತಾರೆ (ವೈಸ್ ಕ್ಯಾಪ್ಟನ್), ಅಜಿಂಕ್ಯ ರಹಾನೆ, ಪೃಥ್ವಿ ಶಾ, ಸರ್ಫರಾಜ್ ಖಾನ್, ಶುಭಮ್ ರಂಜನೆ, ಆಕಾಶ್ ಪಾರ್ಕರ್, ಸಿದ್ಧೇಶ್ ಲಾಡ್, ಶಮ್ಸ್ ಮುಲಾನಿ, ವಿನಾಯಕ್ ಭೋಯಿರ್, ಶಶಾಂಕ್ ಅತ್ತಾರ್ಡೆ, ರಾಯ್‌ಸ್ಟನ್ ಡಯಾಸ್, ತುಷಾರ್ ದೇಶಪಾಂಡೆ, ದೀಪಕ್ ಶೆಟ್ಟಿ, ಏಕನಾಥ್ ಕೆರ್ಕರ್.

ಅಂತರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ ಆಸ್ಟ್ರೇಲಿಯಾ ಕ್ರಿಕೆಟರ್ಅಂತರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ ಆಸ್ಟ್ರೇಲಿಯಾ ಕ್ರಿಕೆಟರ್

ಕರ್ನಾಟಕ ತಂಡ: ಕರುಣ್ ನಾಯರ್ (ಸಿ), ದೇವದತ್ ಪಡಿಕ್ಕಲ್, ದೇಗಾ ನಿಶ್ಚಲ್, ರವಿಕುಮಾರ್ ಸಮರ್ಥ್, ಶರತ್ ಬಿ.ಆರ್, ಅಭಿಷೇಕ್ ರೆಡ್ಡಿ, ರೋಹನ್ ಕದಮ್, ಶ್ರೇಯಸ್ ಗೋಪಾಲ್ (ವಿಸಿ), ಜಗದೀಶ ಸುಚಿತ್, ಅಭಿಮನ್ಯು ಮಿಥುನ್, ವಿ ಕೌಶಿಕ್, ಪ್ರತೀಕ್ ಜೈನ್, ರೋನಿತ್ ಮೋರೆ, ಶರತ್ ಶ್ರೀನಿವಾಸ್, ಪ್ರವೀಣ್ ದೂಬೆ.

Story first published: Wednesday, January 1, 2020, 9:16 [IST]
Other articles published on Jan 1, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X