ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಮತ್ತೊಂದು ಮೈಲಿಗಲ್ಲು ತಲುಪಿದ ಚೇತೇಶ್ವರ ಪೂಜಾರ

Ranji Trophy: Cheteshwar Pujara Completes 12000 Runs Milestone In First-class Cricket In India

ಭಾರತ ಕ್ರಿಕೆಟ್ ತಂಡದ ಮಧ್ಯಮ ಕ್ರಮಾಂಕದ ಅನುಭವಿ ಬ್ಯಾಟ್ಸ್‌ಮನ್ ಚೇತೇಶ್ವರ ಪೂಜಾರ ಅವರು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಮತ್ತೊಂದು ಅದ್ಭುತ ಸಾಧನೆ ಮಾಡಿದ್ದು, ಭಾರತದ ನೆಲದಲ್ಲಿ 12,000 ರನ್‌ಗಳನ್ನು ಶುಕ್ರವಾರ ಪೂರ್ಣಗೊಳಿಸಿದ್ದಾರೆ.

2022-23ರ ರಣಜಿ ಟ್ರೋಫಿ ಪಂದ್ಯಾವಳಿಯ ಆಂಧ್ರಪ್ರದೇಶ ವಿರುದ್ಧದ ಮುಖಾಮುಖಿಯ ತಮ್ಮ ಎರಡನೇ ಇನ್ನಿಂಗ್ಸ್‌ನಲ್ಲಿ ಸೌರಾಷ್ಟ್ರ ತಂಡದ ಪರ ಆಡುತ್ತಿರುವಾಗ ಚೇತೇಶ್ವರ ಪೂಜಾರ ಅವರು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಭಾರತದ ನೆಲದಲ್ಲಿ 12,000 ರನ್‌ಗಳ ಹೆಗ್ಗುರುತನ್ನು ತಲುಪಿದರು.

Ranji Trophy 2022-23: ಮಯಾಂಕ್ ಅಗರ್ವಾಲ್ ದ್ವಿಶತಕ; ಕರ್ನಾಟಕ vs ಕೇರಳ ಅಂತಿಮ ಫಲಿತಾಂಶRanji Trophy 2022-23: ಮಯಾಂಕ್ ಅಗರ್ವಾಲ್ ದ್ವಿಶತಕ; ಕರ್ನಾಟಕ vs ಕೇರಳ ಅಂತಿಮ ಫಲಿತಾಂಶ

ಒಂದು ದಶಕಕ್ಕೂ ಹೆಚ್ಚು ಕಾಲ ಭಾರತ ಟೆಸ್ಟ್ ತಂಡದಲ್ಲಿ ಚೇತೇಶ್ವರ ಪೂಜಾರ ಬ್ಯಾಟಿಂಗ್ ಆಧಾರಸ್ತಂಭವಾಗಿದ್ದು, ಅವರು ತಮ್ಮ ವೃತ್ತಿಜೀವನದಲ್ಲಿ ಹಲವು ಬಾರಿ ಏರಿಳಿತ ಕಂಡಿದ್ದಾರೆ. 34 ವರ್ಷ ವಯಸ್ಸಿನ ಪೂಜಾರ ಭಾರತ ತಂಡಕ್ಕೆ ಮತ್ತೆ ತಮ್ಮ ಬಲವಾದ ಪುನರಾಗಮನವನ್ನು ಮಾಡಿದರು.

Ranji Trophy: Cheteshwar Pujara Completes 12000 Runs Milestone In First-class Cricket In India

ಸೌರಾಷ್ಟ್ರ ಪರ ಚೇತೇಶ್ವರ ಪೂಜಾರ 91 ರನ್ ಗಳಿಸಿ ಆಂಧ್ರಪ್ರದೇಶದ ವಿರುದ್ಧ ತಮ್ಮ ತಂಡದ ಗೆಲುವಿನ ಭರವಸೆಯನ್ನು ಜೀವಂತವಾಗಿರಸಲು ಪ್ರಯತ್ನಿಸಿದರು. ಆದರೂ, ಸೌರಾಷ್ಟ್ರ ತಂಡ 150 ರನ್‌ಗಳಿಂದ ಆಂಧ್ರಪ್ರದೇಶ ತಂಡದೆದುರು ಸೋಲಬೇಕಾಯಿತು.

ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಚೇತೇಶ್ವರ ಪೂಜಾರ ಆಟ ನಿರ್ಣಾಯಕ
ಭಾರತ ಟೆಸ್ಟ್ ತಂಡವು ಫೆಬ್ರವರಿ 9ರಿಂದ ಆರಂಭವಾಗುವ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಎದುರಿಸುವಾಗ, ಭಾರತ ತಂಡಕ್ಕೆ ಚೇತೇಶ್ವರ ಪೂಜಾರ ನಿರ್ಣಾಯಕ ಆಟಗಾರನಾಗಲಿದ್ದಾರೆ.

ಆಸೀಸ್ ತಂಡವನ್ನು ಎದುರಿಸಿದಾಗಲೆಲ್ಲಾ ಚೇತೇಶ್ವರ ಪೂಜಾರ ತನ್ನ ನೈಜ ಆಟವನ್ನು ಆಡಿ ತಂಡಕ್ಕೆ ಆಸರೆಯಾಗಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ 20 ಟೆಸ್ಟ್‌ಗಳಲ್ಲಿ ಚೇತೇಶ್ವರ ಪೂಜಾರ 54.08ರ ಅತ್ಯುತ್ತಮ ಸರಾಸರಿಯಲ್ಲಿ 1893 ರನ್ ಗಳಿಸಿದ್ದಾರೆ ಮತ್ತು ಅವರ ವಿರುದ್ಧ ಐದು ಶತಕ ಮತ್ತು 10 ಅರ್ಧಶತಕಗಳನ್ನು ಬಾರಿಸಿದ್ದಾರೆ.

IPL 2023: ಈ ದಿನದಂದು 16ನೇ ಐಪಿಎಲ್ ಆವೃತ್ತಿ ಆರಂಭ ಸಾಧ್ಯತೆ!IPL 2023: ಈ ದಿನದಂದು 16ನೇ ಐಪಿಎಲ್ ಆವೃತ್ತಿ ಆರಂಭ ಸಾಧ್ಯತೆ!

ಭಾರತದ ಐತಿಹಾಸಿಕ 2020-21 ಬಾರ್ಡರ್-ಗವಾಸ್ಕರ್ ಟ್ರೋಫಿ ಗೆಲುವು ಅವರ ವೃತ್ತಿಜೀವನದ ಅವಿಸ್ಮರಣೀಯ ಗೆಲುವುಗಳಲ್ಲಿ ಒಂದಾಗಿದೆ. ಶುಭ್ಮನ್ ಗಿಲ್ ಮತ್ತು ರಿಷಭ್ ಪಂತ್ ಅಬ್ಬರದ ಆಟವಾಡಿದರೆ, ಚೇತೇಶ್ವರ ಪೂಜಾರ ದೀರ್ಘಾವಧಿಯವರೆಗೆ ಬ್ಯಾಟಿಂಗ್ ಮಾಡುವ ಮೂಲಕ ಆಸ್ಟ್ರೇಲಿಯನ್ ಬೌಲರ್‌ಗಳನ್ನು ಕಾಡಿದರು.

Ranji Trophy: Cheteshwar Pujara Completes 12000 Runs Milestone In First-class Cricket In India

ಇತ್ತೀಚಿಗೆ ಬಾಂಗ್ಲಾದೇಶ ವಿರುದ್ಧದ ಟೆಸ್ಟ್‌ ಪಂದ್ಯಗಳಲ್ಲಿ ತೋರಿದ ಗಮನಾರ್ಹ ಫಾರ್ಮ್ ಅನ್ನು ಮುಂದುವರಿಸುವುದು ಮತ್ತು ಭಾರತ ತಂಡವು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಅರ್ಹತೆ ಪಡೆಯಲು ಭಾರತ ತಂಡಕ್ಕೆ ಅನುಭವಿ ಬಲಗೈ ಆಟಗಾರ ಚೇತೇಶ್ವರ ಪೂಜಾರ ಅವರ ಅಗ್ರ ಫಾರ್ಮ್ ಅಗತ್ಯವಾಗಿದೆ.

ಆಸ್ಟ್ರೇಲಿಯಾ ವಿರುದ್ಧದ ಮೊದಲ ಎರಡು ಟೆಸ್ಟ್‌ ಪಂದ್ಯಗಳಿಗೆ ಭಾರತದ ಟೆಸ್ಟ್ ತಂಡ
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಸ್ ಭರತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಜಯದೇವ್ ಉನಾದ್ಕಟ್, ಸೂರ್ಯಕುಮಾರ್ ಯಾದವ್.

Story first published: Saturday, January 21, 2023, 5:30 [IST]
Other articles published on Jan 21, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X