ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರಣಜಿ ಟ್ರೋಫಿ: ಬರೋಡಾ ಎದುರು ಪೃಥ್ವಿ ಸ್ಫೋಟಕ ದ್ವಿಶತಕ ಶೋ!

Ranji Trophy: Prithvi Shaw makes statement with destructive double ton

ವಡೋದರಾ, ಡಿಸೆಂಬರ್ 11: ದ್ವಿಶತಕ ಬಾರಿಸುವ ಮೂಲಕ ತಾನು ಫಾರ್ಮ್‌ಗೆ ಮರಳಿರುವ ಸಂದೇಶವನ್ನು ಮುಂಬೈ ಆಟಗಾರ ಪೃಥ್ವಿ ಶಾ ರವಾನಿಸಿದ್ದಾರೆ. ಗುಜರಾತ್‌ನ ವಡೋದರಾದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಎಲೈಟ್ ಗ್ರೂಪ್ 'ಬಿ' ಪಂದ್ಯದಲ್ಲಿ ಶಾ, ಬರೋಡಾ ವಿರುದ್ಧ 200+ ರನ್ ಬಾರಿಸಿದ್ದಾರೆ.

ಕ್ರಿಕೆಟ್‌, ಸೆಕ್ಸ್‌ ವೇಳೆ ಹೇಳಬಹುದಾದ ಪೋಲಿ ವಾಕ್ಯಗಳ ಟ್ವೀಟ್‌ಗಳು ವೈರಲ್!ಕ್ರಿಕೆಟ್‌, ಸೆಕ್ಸ್‌ ವೇಳೆ ಹೇಳಬಹುದಾದ ಪೋಲಿ ವಾಕ್ಯಗಳ ಟ್ವೀಟ್‌ಗಳು ವೈರಲ್!

ಉದ್ದೀಪನ ಮದ್ದು ಸೇವನೆ ನಿಯಮ ಉಲ್ಲಂಘಿಸಿದ ಕಾರಣಕ್ಕಾಗಿ ಪೃಥ್ವಿ, ಹಿಂದಿನ ದಿನಾಂಕ ಆಧಾರದಲ್ಲಿ ಬಿಸಿಸಿಐನಿಂದ 8 ತಿಂಗಳ ನಿಷೇಧಕ್ಕೀಡಾಗಿದ್ದರು. ಉದ್ದೀಪನ ಮದ್ದು ಪರೀಕ್ಷೆಯ ವೇಳೆ ಪೃಥ್ವಿ ದೇಹದಲ್ಲಿ ನಿಷೇಧಿತ ಟೆರ್ಬುಟಾಲಿನ್ ಮದ್ದಿನಂಶ ಕಂಡುಬಂದಿತ್ತು.

ಐಪಿಎಲ್ 2020:ಉತ್ತಮ ಮೊತ್ತಕ್ಕೆ ಹರಾಜಾಗುವ ವೆಸ್ಟ್‌ ಇಂಡೀಸ್‌ನ 4 ಆಟಗಾರರು ಇವರು!ಐಪಿಎಲ್ 2020:ಉತ್ತಮ ಮೊತ್ತಕ್ಕೆ ಹರಾಜಾಗುವ ವೆಸ್ಟ್‌ ಇಂಡೀಸ್‌ನ 4 ಆಟಗಾರರು ಇವರು!

ಭಾರತ vs ವೆಸ್ಟ್ ಇಂಡೀಸ್, 3ನೇ ಟಿ20, Live ಸ್ಕೋರ್‌ಕಾರ್ಡ್

1
46123

ಕೆಮ್ಮಿಗೆ ಯಥೇಚ್ಛವಾಗಿ ಸಿರಪ್ ತೆಗೆದುಕೊಂಡಿದ್ದರಿಂದ ಪೃಥ್ವಿ ದೇಹದಲ್ಲಿ ಮದ್ದಿನಂಶ ಪತ್ತೆಯಾಗಿತ್ತು. ಹೀಗಾಗಿ ಉದಯೋನ್ಮುಖ ಆಟಗಾರ ಶಾ ನಿಷೇಧ ಶಿಕ್ಷೆಗೆ ಗುರಿಯಾಗಿದ್ದರು.

ಸ್ಫೋಟಕ ಬ್ಯಾಟಿಂಗ್

ಸ್ಫೋಟಕ ಬ್ಯಾಟಿಂಗ್

ನಿಷೇಧ ಮುಗಿಯುತ್ತಲೇ ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯಲ್ಲಿ ಆಡಿದ್ದ ಶಾ, ಅಸ್ಸಂ ವಿರುದ್ಧದ ಪಂದ್ಯದಲ್ಲಿ ಮುಂಬೈ ಪರ 32 ಎಸೆತಗಳಿಗೆ ಅರ್ಧ ಶತಕ ಸಿಡಿಸಿ ಗಮನ ಸೆಳೆದಿದ್ದರು. ಇದೀಗ ಮತ್ತೆ ಸಂಪೂರ್ಣ ಫಾರ್ಮ್‌ಗೆ ಮರಳಿರುವುದನ್ನು ಸಾರಿರುವ ಪೃಥ್ವಿ ರಣಜಿಯಲ್ಲಿ ಈ ಬಾರಿ 179 ಎಸೆತಗಳಿಗೆ 202 ರನ್ ಸಿಡಿಸಿದ್ದಾರೆ.

ರಹಾನೆ, ಮುಲಾನಿ, ಠಾಕೂರ್ ಅರ್ಧ ಶತಕ

ರಹಾನೆ, ಮುಲಾನಿ, ಠಾಕೂರ್ ಅರ್ಧ ಶತಕ

ವಡೋದರದ ರಿಲಯನ್ಸ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಬರೋಡಾ vs ಮುಂಬೈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಮುಂಬೈ, ಮೊದಲ ಇನ್ನಿಂಗ್ಸ್‌ನಲ್ಲಿ ಶಾ 66, ಅಜಿಂಕ್ಯ ರಹಾನೆ 79, ಶಮ್ಸ್ ಮುಲಾನಿ 89, ಶಾರ್ದೂಲ್ ಠಾಕೂರ್ 64 ರನ್‌ನೊಂದಿಗೆ 106.4 ಓವರ್‌ಗೆ 431 ರನ್ ಮಾಡಿತ್ತು.

ಕೇದಾರ್ ಭರ್ಜರಿ ಬ್ಯಾಟಿಂಗ್

ಕೇದಾರ್ ಭರ್ಜರಿ ಬ್ಯಾಟಿಂಗ್

ಮೊದಲ ಇನ್ನಿಂಗ್ಸ್ ಆಡಿದ ಬರೋಡಾ, ಆರಂಭಿಕ ಬ್ಯಾಟ್ಸ್‌ಮನ್ ಕೇದಾರ್ ದೇವಧರ್ 160, ವಿಷ್ಣು ಸೋಲಂಕಿ 48 ರನ್‌ನೊಂದಿಗೆ 70.1 ಓವರ್‌ಗೆ 307 ರನ್ ಪೇರಿಸಿ 124 ರನ್ ಹಿನ್ನಡೆ ಅನುಭವಿಸಿತು. ಬರೋಡಾ ಮೊದಲ ಇನ್ನಿಂಗ್ಸ್‌ನಲ್ಲಿ ಮುಂಬೈಯ ಶಮ್ಸ್ ಮುಲಾನಿ 6 ವಿಕೆಟ್‌ನೊಂದಿಗೆ ಗಮನ ಸೆಳೆದರು.

ಸೂರ್ಯಕುಮಾರ್ ಅಜೇಯ ಶತಕ

ಸೂರ್ಯಕುಮಾರ್ ಅಜೇಯ ಶತಕ

ದ್ವಿತೀಯ ಇನ್ನಿಂಗ್ಸ್‌ನಲ್ಲೂ ಮುಂಬೈ ಉತ್ತಮ ರನ್ ಗಳಿಸಿದೆ. ಪೃಥ್ವಿ ಶಾ 202, ಜಯ್ ಗೋಕುಲ್ ಬಿಷ್ತಾ 68, ನಾಯಕ ಸೂರ್ಯಕುಮಾರ್ ಯಾದವ್ ಅಜೇಯ 102 ರನ್ (70 ಎಸೆತ) ನೊಂದಿಗೆ 66.2 ಓವರ್‌ಗೆ 4 ವಿಕೆಟ್ ನಷ್ಟದಲ್ಲಿ 409 ರನ್ ಬಾರಿಸಿ ಡಿಕ್ಲೇರ್ ಘೋಷಿಸಿತ್ತು.ಮುಂಬೈ 431+409 ರನ್, ಬರೋಡಾ 307+224 ರನ್ ಮಾಡಿತು (ಮುಂಬೈಗೆ 309 ರನ್ ಜಯ).

Story first published: Thursday, December 12, 2019, 22:43 [IST]
Other articles published on Dec 12, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X