ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರಣಜಿ ಟ್ರೋಫಿ ಕ್ವಾರ್ಟರ್‌ಫೈನಲ್‌: ಕರ್ನಾಟಕ vs ಉತ್ತರ ಪ್ರದೇಶ ಪಂದ್ಯದ ಪ್ರಿವ್ಯೂ, ಸ್ಕ್ವಾಡ್, ಹವಾಮಾನ

Karnataka vs UP match

ಜೂನ್ 6ರಂದು (ಸೋಮವಾರ) ಕರ್ನಾಟಕ ತಂಡವು ಮೂರನೇ ಕ್ವಾಟರ್ ಫೈನಲ್‌ ಪಂದ್ಯದಲ್ಲಿ ಉತ್ತರ ಪ್ರದೇಶವನ್ನು ಎದುರಿಸಲಿದೆ. ಈ ಪಂದ್ಯವು ಆಲೂರಿನ ಕೆಎಸ್‌ಸಿಎ ಕ್ರಿಕೆಟ್‌ ಗ್ರೌಂಡ್‌ನಲ್ಲಿ ನಡೆಯಲಿದ್ದು, ಪಂದ್ಯವು ಸಾಕಷ್ಟು ಜಿದ್ದಾಜಿದ್ದಿನಲ್ಲಿ ಕೂಡಿರಲಿದೆ.

ಬೆಂಗಳೂರಿನಲ್ಲಿಯೇ ರಣಜಿ ಟ್ರೋಫಿ ಟ್ರೋಫಿ 2021-22 ನಾಕೌಟ್ ಪಂದ್ಯಗಳು ನಡೆಯಲಿದ್ದು, ಆಲೂರಿನ ಕೆಎಸ್‌ಸಿಎ ಗ್ರೌಂಡ್‌ನಲ್ಲೇ ಎರಡು, ಮೂರು ಮತ್ತು ನಾಲ್ಕನೇ ಕ್ವಾರ್ಟರ್‌ ಫೈನಲ್‌ಗಳು ಒಂದೇ ಸಮಯದಲ್ಲಿ ಜರುಗಲಿದೆ. ಇನ್ನು ಮೊದಲ ಕ್ವಾರ್ಟರ್‌ ಫೈನಲ್ ಪಂದ್ಯವು ಬೆಂಗಾಳ ಮತ್ತು ಜಾರ್ಖಂಡ್‌ನಲ್ಲಿ ಜಸ್ಟ್ ಕ್ರಿಕೆಟ್ ಅಕಾಡೆಮಿಯಲ್ಲಿ ನಡೆಯಲಿದೆ.

ಎರಡನೇ ಕ್ವಾರ್ಟರ್‌ ಫೈನಲ್‌ನಲ್ಲಿ ಮುಂಬೈ ವರ್ಸಸ್ ಉತ್ತರಾಖಂಡ, ಮೂರನೇ ಕ್ವಾರ್ಟರ್ ಫೈನಲ್ ಕರ್ನಾಟಕ ವರ್ಸಸ್ ಉತ್ತರಪ್ರದೇಶ, ನಾಲ್ಕನೇ ಕ್ವಾರ್ಟರ್‌ಫೈನಲ್‌ನಲ್ಲಿ ಪಂಜಾವ್ ವರ್ಸಸ್ ಮಧ್ಯಪ್ರದೇಶ ಮುಖಾಮುಖಿಯಾಗಲಿವೆ.

ತಂಡಗಳು, ಕ್ವಾರ್ಟರ್‌ಫೈನಲ್ ಲೈನ್-ಅಪ್‌ಗಳು

ತಂಡಗಳು, ಕ್ವಾರ್ಟರ್‌ಫೈನಲ್ ಲೈನ್-ಅಪ್‌ಗಳು

ಎಲೈಟ್ ಗ್ರೂಪ್‌ಗಳ ಏಳು ಟಾಪರ್‌ಗಳು - ಮಧ್ಯಪ್ರದೇಶ, ಬಂಗಾಳ, ಕರ್ನಾಟಕ, ಮುಂಬೈ, ಉತ್ತರಾಖಂಡ, ಪಂಜಾಬ್ ಮತ್ತು ಉತ್ತರ ಪ್ರದೇಶ ಲೀಗ್ ಹಂತದಿಂದ ನೇರವಾಗಿ ಕ್ವಾರ್ಟರ್‌ಫೈನಲ್‌ಗೆ ಅರ್ಹತೆ ಪಡೆದಿವೆ.

ಏತನ್ಮಧ್ಯೆ, ಪ್ಲೇಟ್-ಗ್ರೂಪ್ ವಿಜೇತ ನಾಗಾಲ್ಯಾಂಡ್ ವಿರುದ್ಧ ಪ್ರಿ ಕ್ವಾರ್ಟರ್ ಫೈನಲ್ ಗೆಲುವಿನ ನಂತರ ಜಾರ್ಖಂಡ್ ಕೊನೆಯ ಎಂಟರಲ್ಲಿ ತನ್ನ ಸ್ಥಾನವನ್ನು ಗಳಿಸಿತು.

ಪ್ರತಿಷ್ಠಿತ ದೇಶೀಯ ಟೂರ್ನಮೆಂಟ್ ರಣಜಿ ಟ್ರೋಫಿ 2021-22 ನಾಕೌಟ್ ಪಂದ್ಯಗಳಿಗೆ ಸಿದ್ಧಗೊಂಡಿರುವ ಕರ್ನಾಟಕ ಮತ್ತ ಉತ್ತರ ಪ್ರದೇಶ ಸ್ಕ್ವಾಡ್‌ ಈ ಕೆಳಗಿದೆ.

ಕರ್ನಾಟಕ ರಣಜಿ ಸ್ಕ್ವಾಡ್‌

ಕರ್ನಾಟಕ ರಣಜಿ ಸ್ಕ್ವಾಡ್‌

ಮನೀಶ್ ಪಾಂಡೆ (ನಾಯಕ), ಸಮರ್ಥ್ ಆರ್ (ಉಪ ನಾಯಕ), ಮಯಾಂಕ್ ಅಗರ್ವಾಲ್, ದೇವದತ್ ಪಡಿಕ್ಕಲ್, ಕರುಣ್ ನಾಯರ್, ಸಿದ್ಧಾರ್ಥ್ ಕೆ ವಿ, ನಿಶ್ಚಲ್ ಡಿ, ಶರತ್ ಶ್ರೀನಿವಾಸ್ (ವಿಕೆಟ್‌ ಕೀಪರ್‌), ಶರತ್ ಬಿ ಆರ್ (ವಿಕೆಟ್‌ ಕೀಪರ್‌), ಶ್ರೇಯಸ್ ಗೋಪಾಲ್, ಗೌತಮ್ ಕೆ, ಶುಭಾಂಗ ಹೆಗಡೆ, ಸುಚಿತ್ ಜೆ, ಕಾರ್ಯಪ್ಪ ಕೆ ಸಿ, ರೋನಿತ್ ಮೋರೆ, ಕೌಶಿಕ್ ವಿ, ವೈಶಾಕ್ ವಿ, ವೆಂಕಟೇಶ ಎಂ, ವಿದ್ವತ್ ಕಾವೇರಪ್ಪ, ಕಿಶನ್ ಎಸ್ ಬೇಡರೆ

ಗುಜರಾತ್ ಟೈಟನ್ಸ್‌ ನಾಯಕ ಹಾರ್ದಿಕ್ ಪಾಂಡ್ಯಗೆ ದುಬಾರಿ ಗಿಫ್ಟಿ ನೀಡಿದ ಉದ್ಯಮಿ: ವಿವಾದ ಸೃಷ್ಟಿ

ಉತ್ತರ ಪ್ರದೇಶ ಸ್ಕ್ವಾಡ್‌

ಉತ್ತರ ಪ್ರದೇಶ ಸ್ಕ್ವಾಡ್‌

ಕುಲದೀಪ್ ಯಾದವ್ (ನಾಯಕ), ಅಲ್ಮಾಸ್ ಶೌಕತ್, ರಿಷಭ್ ಬನ್ಸಾಲ್, ಪ್ರಿಯಮ್ ಗಾರ್ಗ್, ಹರ್ದೀಪ್ ಸಿಂಗ್, ಜಸ್ಮರ್ ಧನಕರ್, ಧ್ರುವ ಜುರೆಲ್, ಆರ್ಯನ್ ಜುಯಲ್, ಮಾಧವ್ ಕೌಶಿಕ್, ಪಾರ್ಥ್ ಮಿಶ್ರಾ, ಅಕ್ಷದೀಪ್ ನಾಥ್, ಪ್ರಿನ್ಸ್ ಯಾದವ್, ಅಂಕಿತ್ ರಾಜ್‌ಪೂತ್, ಶಾನು ಸೈನಿ, ಸಮರ್ಥ್ ಸಿಂಗ್, ಸಮೀರ್ ಚೌಧರಿ , ಶಿವಂ ಶರ್ಮಾ, ರಿಂಕು ಸಿಂಗ್, ಯಶ್ ದಯಾಳ್, ಜೀಶನ್ ಅನ್ಸಾರಿ, ಆಕಿಬ್ ಖಾನ್ , ಸೌರಭ್ ಕುಮಾರ್, ಕರಣ್ ಶರ್ಮಾ

ದೀಪಕ್ ಚಹರ್ ಮದುವೆಗೆ ಟೀಮ್ ಇಂಡಿಯಾ ಆಟಗಾರರ ಜತೆ ಬಂದಿದ್ರಾ ಪಾಕ್‌ ಆಟಗಾರ? ಇಲ್ಲಿದೆ ಸತ್ಯಾಂಶ

ಬೆಂಗಳೂರಿನ ಹವಾಮಾನ

ಬೆಂಗಳೂರಿನ ಹವಾಮಾನ

ಜೂನ್‌ನಲ್ಲಿ ರಣಜಿ ಟ್ರೋಫಿ ಮೊದಲ ಹಂತದ ಪಂದ್ಯಗಳ ಅಭೂತಪೂರ್ವ ಮುಕ್ತಾಯಕ್ಕೆ ಸಾಕ್ಷಿಯಾದ ಬಳಿಕ, ಬೆಂಗಳೂರಿನಲ್ಲಿ ನಾಕೌಟ್‌ ಪಂದ್ಯಗಳಿಗೆ ಮಳೆ ಅಡೆತಡೆಯಾಗುವ ನಿರೀಕ್ಷೆಯಿದೆ. ಪಂದ್ಯಗಳು ಬೆಳಿಗ್ಗೆ 9.30ಕ್ಕೆ ಆರಂಭವಾಗಲಿದ್ದು, ಜೂನ್ 6 ರಿಂದ 10 ರವರೆಗೆ ನಡೆಯಲಿರುವ ಕ್ವಾರ್ಟರ್‌ಫೈನಲ್‌ಗಳ ಪಂದ್ಯದ ದಿನಗಳಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಯಿದೆ.

ಅಭಿಮಾನಿಗಳಿಗೆ ವೀಕ್ಷಣೆಗೆ ಅವಕಾಶವಿದೆಯೇ?

ಅಭಿಮಾನಿಗಳಿಗೆ ವೀಕ್ಷಣೆಗೆ ಅವಕಾಶವಿದೆಯೇ?

ಬಿಸಿಸಿಐ ಹೊರಡಿಸಿದ ಅಧಿಕೃತ ಪ್ರಕಟಣೆಯ ಪ್ರಕಾರ, ಬಯೋ ಬಬಲ್ ಭದ್ರತೆಯಲ್ಲಿ ನಾಕೌಟ್‌ಗಳನ್ನು ಆಡುವುದರಿಂದ ಪ್ರೇಕ್ಷಕರಿಗೆ ಕ್ರೀಡಾಂಗಣಕ್ಕೆ ಪ್ರವೇಶವಿಲ್ಲ.

"ಬಯೋ ಸೆಕ್ಯೂರ್ ಪ್ರೋಟೋಕಾಲ್ ಅಡಿಯಲ್ಲಿ ರಾಜ್ಯ ಮತ್ತು ಆರೋಗ್ಯ ನಿಯಂತ್ರಣ ಪ್ರಾಧಿಕಾರಗಳು ನಿಗದಿಪಡಿಸಿದ ನಿಯಮಗಳ ಭಾಗವಾಗಿ ಪ್ರೇಕ್ಷಕರ ಉಪಸ್ಥಿತಿಯನ್ನು ನಿಷೇಧಿಸಲಾಗಿದೆ." ಎಂದು ಬಿಸಿಸಿಐ ತಿಳಿಸಿದೆ.

ಸೆಮಿಫೈನಲ್ ಮುಖಾಮುಖಿ ಹೇಗಿರಲಿದೆ?

ಸೆಮಿಫೈನಲ್ ಮುಖಾಮುಖಿ ಹೇಗಿರಲಿದೆ?

ಕ್ವಾರ್ಟರ್‌ಫೈನಲ್ 1 (ಬಂಗಾಳ/ಜಾರ್ಖಂಡ್) ವಿಜೇತರು ಕ್ವಾರ್ಟರ್‌ಫೈನಲ್ 4 (ಪಂಜಾಬ್/ಮಧ್ಯಪ್ರದೇಶ) ವಿಜೇತರನ್ನು ಮೊದಲ ಸೆಮಿಫೈನಲ್‌ನಲ್ಲಿ ಎದುರಿಸುತ್ತಾರೆ. ಅಂತೆಯೇ, ಕ್ವಾರ್ಟರ್‌ಫೈನಲ್ 2 (ಮುಂಬೈ/ಉತ್ತರಾಖಂಡ) ವಿಜೇತರು ಕ್ವಾರ್ಟರ್‌ಫೈನಲ್ 3 (ಕರ್ನಾಟಕ/ಉತ್ತರ ಪ್ರದೇಶ) ವಿಜೇತರನ್ನು ಎರಡನೇ ಸೆಮಿಫೈನಲ್‌ನಲ್ಲಿ ಎದುರಿಸುತ್ತಾರೆ.

Story first published: Sunday, June 5, 2022, 17:06 [IST]
Other articles published on Jun 5, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X