ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರಣಜಿಯಲ್ಲಿ ಮತ್ತೊಂದು ದ್ವಿಶತಕ ಸಿಡಿಸಿ ಮಿಂಚಿದ ಸರ್ಫರಾಜ್ ಖಾನ್

Sarfaraz Khan follows up triple century with double ton against Himachal Pradesh in Ranji Trophy
Ranji Trophy: Sarfaraz Khan Smashes Another Double Ton

ಮುಂಬೈ ತಂಡದ ಯುವ ಆಟಗಾರ ಸರ್ಫರಾಜ್ ಖಾನ್ ಈ ಬಾರಿಯ ರಣಜಿ ಟೂರ್ನಿಯಲ್ಲಿ ಮಿಂಚು ಹರಿಸುತ್ತಿದ್ದಾರೆ. ಹಿಮಾಚಲ ಪ್ರದೇಶದ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಮುಂಬೈ ತಂಡವನ್ನು ಪ್ರತಿನಿಧಿಸುತ್ತಿರುವ ಸರ್ಫರಾಜ್ ಖಾನ್ ದ್ವಿಶತಕವನ್ನು ಸಿಡಿಸಿದ್ದಾರೆ. ಈ ಮೂಲಕ ಸರ್ಫರಾಜ್ ಖಾನ್ ಸತತ ಎರಡು ಪಂದ್ಯಗಳಲ್ಲಿ 200+ ರನ್ ಸಿಡಿಸಿದ ಸಾಧನೆ ಮಾಡಿದ್ದಾರೆ.

ಧರ್ಮಶಾಲಾದ ಹೆಚ್.ಪಿ.ಸಿ.ಎ ಸ್ಟೇಡಿಯಮ್‌ನಲ್ಲಿ ಮುಂಬೈ ಮತ್ತು ಹಿಮಾಚಲ ಪ್ರದೇಶ ತಂಡಗಳು ಮುಖಾಮುಖಿಯಾಗಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಮುಂಬೈ ತಂಡ ಆರಂಭಿಕ ಆಘಾತಕ್ಕೆ ಒಳಗಾಗಿತ್ತು. ಕೇವಲ 16/3 ರನ್ ಗಳಿಸಿ ಪರದಾಡುತ್ತಿತ್ತು. ಮುಂಬೈ ಈ ಪರಿಸ್ಥಿತಿಯಿಂದ ಹೊರ ಬರುವ ಯಾವ ಲಕ್ಷಣವು ಕಾಣಿಸಿರಲಿಲ್ಲ. ಆದರೆ ಈ ಸಂದರ್ಭದಲ್ಲಿ ಸರ್ಫರಾಜ್ ಖಾನ್ ಕ್ರೀಸ್‌ಗಿಳಿಯುತ್ತಾರೆ.

ರಣಜಿ ಟ್ರೋಫಿ: ಮುಂಬೈ ಬ್ಯಾಟ್ಸ್‌ಮನ್ ಸರ್ಫರಾಜ್ ಖಾನ್ ತ್ರಿಶತದಾಟರಣಜಿ ಟ್ರೋಫಿ: ಮುಂಬೈ ಬ್ಯಾಟ್ಸ್‌ಮನ್ ಸರ್ಫರಾಜ್ ಖಾನ್ ತ್ರಿಶತದಾಟ

ಸರ್ಫರಾಜ್ ಖಾನ್ ಮುಂಬೈ ತಂಡವನ್ನು ಮೇಲೆತ್ತುವ ಪ್ರಯತ್ನವನ್ನು ಮಾಡುತ್ತಾರೆ. ಆದರೆ ಅಷ್ಟರಲ್ಲೇ ಮುಂಬೈ ತಂಡದ ಮತ್ತೊಂದು ವಿಕೆಟ್ ಪತನವಾಗುತ್ತದೆ. ಅಲ್ಲಿಗೆ ಮುಂಬೈ 71 ರನ್‌ಗೆ 4 ವಿಕೆಟ್ ಕಳೆದುಕೊಂಡಿತ್ತು. ಆದರೆ ಬಳಿಕ ಮುಂಬೈ ನಾಯಕ ಆದಿತ್ಯ ತಾರೆ ಸರ್ಫರಾಜ್ ಖಾನ್ ಅವರನ್ನು ಕೂಡಿಕೊಂಡರು. ಅದ್ಭುತವಾಗಿ ಇನ್ನಿಂಗ್ಸ್‌ನ್ನು ಕಟ್ಟಿದರು. ಐದನೇ ವಿಕೆಟ್ ಗೆ 143ರನ್‌ಗಳ ಜೊತೆಯಾಟ ಬಂತು. ನಾಯಕ ಆದಿತ್ಯ ತಾರೆ 62 ರನ್ ಗಳಿಸಿ ಔಟಾದರು.

ಬಳಿಕ ಶುಭಮ್ ರಂಜಾನೆ ಅವರ ಜೊತೆ ಸರ್ಫರಾಜ್ ಇನ್ನಿಂಗ್ಸ್‌ ಬೆಳೆಸಿದ್ದಾರೆ. ಕೇವಲ 199 ಎಸೆತಗಳಲ್ಲಿ ದ್ವಿಶತಕದ ಗಡಿಯನ್ನು ತಲುಪಿದರು. 29 ಬೌಂಡರಿ ಮತ್ತು ಮೂರು ಸಿಕ್ಸರ್ ಸರ್ಫರಾಜ್ ಖಾನ್ ಅವರ ಈ ಇನ್ನಿಂಗ್ಸ್‌ನಲ್ಲಿ ಕೂಡಿದೆ. ದಿನದಂತ್ಯಕ್ಕೆ 372-5ರನ್ ಗಳಿಸಿ ಮುಂಬೈ ತಂಡ ಉತ್ತಮ ಸ್ಥಿತಿಯಲ್ಲಿದೆ. ಇಂದಿನ ಪಂದ್ಯ ಮಳೆಯ ಕಾರಣ ತಡವಾಗಿ ಆರಂಭವಾಗಲಿದೆ.

ಕೋಬ್‌ ಬ್ರ್ಯಾಂಟ್‌ ನಿಧನಕ್ಕೆ ಮರುಗಿದ ಕೊಹ್ಲಿ, ರೋಹಿತ್, ಬೂಮ್ರಾ, ಶ್ರೇಯಸ್ಕೋಬ್‌ ಬ್ರ್ಯಾಂಟ್‌ ನಿಧನಕ್ಕೆ ಮರುಗಿದ ಕೊಹ್ಲಿ, ರೋಹಿತ್, ಬೂಮ್ರಾ, ಶ್ರೇಯಸ್

ಇದಕ್ಕೂ ಹಿಂದಿನ ಮುಂಬೈ ಮತ್ತು ಉತ್ತರ ಪ್ರದೇಶದ ಮಧ್ಯೆ ನಡೆದ ಪಂದ್ಯದಲ್ಲಿ ಸರ್ಫರಾಜ್ ಖಾನ್ ತ್ರಿಶತಕವನ್ನು ಸಿಡಿಸಿ ಮಿಂಚಿದ್ದರು. ಭರ್ಜರಿ 301 ರನ್ ಸಿಡಿಸಿ ಮಿಂಚಿದ್ದರು. ಇದೀಗ ಮತ್ತೊಂದು ಪಂದ್ಯದಲ್ಲಿ ಭರ್ಜರಿ ಇನ್ನಿಂಗ್ಸ್‌ ಕಟ್ಟಿದ್ದಾರೆ.

Story first published: Tuesday, January 28, 2020, 11:08 [IST]
Other articles published on Jan 28, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X