ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರಣಜಿ ಟ್ರೋಫಿ ಇತಿಹಾಸದಲ್ಲಿ ವಾಸಿಮ್ ಜಾಫರ್ ಮತ್ತೊಂದು ದಾಖಲೆ!

Ranji Trophy: Wasim Jaffer becomes first batsman to score 12,000 runs

ನಾಗ್ಪುರ್, ಫೆಬ್ರವರಿ 4: ಅನುಭವಿ ಬ್ಯಾಟ್ಸ್‌ಮನ್ ವಾಸಿಮ್ ಜಾಫರ್, ರಣಜಿ ಟ್ರೋಫಿ ಇತಿಹಾಸದಲ್ಲಿ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದ್ದಾರೆ. ರಣಜಿಯಲ್ಲಿ 12,000 ರನ್ ಪೂರೈಸಿದ ಮೊದಲ ಕ್ರಿಕೆಟಿಗನೆಂಬ ದಾಖಲೆಗೆ ಜಾಫರ್ ಕಾರಣರಾಗಿದ್ದಾರೆ. ವಿದರ್ಭ ಮತ್ತು ಕೇರಳ ನಡುವಿನ ಪಂದ್ಯದಲ್ಲಿ ವಿದರ್ಭ ಪ್ರತಿನಿಧಿಸಿದ್ದ ವಾಸಿಮ್ ಈ ಸಾಧನೆ ಮೆರೆದಿದ್ದಾರೆ.

ನ್ಯೂಜಿಲೆಂಡ್ ಏಕದಿನ, ಟೆಸ್ಟ್ ಸರಣಿಯಿಂದ ರೋಹಿತ್ ಶರ್ಮಾ ಹೊರಕ್ಕೆ!ನ್ಯೂಜಿಲೆಂಡ್ ಏಕದಿನ, ಟೆಸ್ಟ್ ಸರಣಿಯಿಂದ ರೋಹಿತ್ ಶರ್ಮಾ ಹೊರಕ್ಕೆ!

ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಶನ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಎಲೈಟ್‌ ಗ್ರೂಪ್‌ 'ಎ' ಮತ್ತು 'ಬಿ' 8ನೇ ಸುತ್ತಿನ ಪಂದ್ಯದಲ್ಲಿ 57 ರನ್ ಬಾರಿಸುವ ಮೂಲಕ ಜಾಫರ್ 12,000 ರನ್ ಪೂರೈಸಿಕೊಂಡರು. ಈ ಸೀಸನ್ ಆರಂಭಕ್ಕೂ ಮುನ್ನ ಜಾಫರ್‌ ಹೆಸರಿನಲ್ಲಿ 11,775 ರಣಜಿ ರನ್‌ಗಳು ದಾಖಲಾಗಿದ್ದವು.

ಭಾರತ vs ನ್ಯೂಜಿಲೆಂಡ್ ಏಕದಿನ ಸರಣಿ: ಪಂದ್ಯಕ್ಕೂ ಮುನ್ನ ತಿಳಿದುಕೊಳ್ಳಲೇ ಬೇಕಾದ ಮಾಹಿತಿಭಾರತ vs ನ್ಯೂಜಿಲೆಂಡ್ ಏಕದಿನ ಸರಣಿ: ಪಂದ್ಯಕ್ಕೂ ಮುನ್ನ ತಿಳಿದುಕೊಳ್ಳಲೇ ಬೇಕಾದ ಮಾಹಿತಿ

1996/97ರ ಸೀಸನ್‌ನಲ್ಲಿ ರಣಜಿಗೆ ಪಾದಾರ್ಪಣೆ ಮಾಡಿದ್ದ ಬಲಗೈ ಬ್ಯಾಟ್ಸ್‌ಮನ್ ಇಲ್ಲೀವರೆಗೆ ಒಟ್ಟು 150 ರಣಜಿ ಪಂದ್ಯಗಳನ್ನು ಆಡಿದ್ದಾರೆ, ಒಟ್ಟು 40 ಶತಕಗಳನ್ನು ಬಾರಿಸಿದ್ದಾರೆ. ಇದೂ ರಣಜಿಯಲ್ಲಿ ದಾಖಲೆಯಾಗಿ ಗುರುತಿಸಿಕೊಂಡಿದೆ. ಅಷ್ಟೇ ಅಲ್ಲ, ರಣಜಿಯಲ್ಲಿ 11,000 ರನ್ ಪೂರೈಸಿದ ಮೊದಲ ಬ್ಯಾಟ್ಸ್‌ಮನ್ (2018ರಲ್ಲಿ) ಆಗಿಯೂ ಜಾಫರ್ ಗಮನ ಸೆಳೆದಿದ್ದರು.

ಭಾರತ ವಿರುದ್ಧದ ಏಕದಿನ ಸರಣಿಗೂ ಮುನ್ನ ನ್ಯೂಜಿಲೆಂಡ್ ಗೆ ಆಘಾತಭಾರತ ವಿರುದ್ಧದ ಏಕದಿನ ಸರಣಿಗೂ ಮುನ್ನ ನ್ಯೂಜಿಲೆಂಡ್ ಗೆ ಆಘಾತ

ಭಾರತ ಪರ 31 ಟೆಸ್ಟ್ ಪಂದ್ಯಗಳನ್ನಾಡಿರುವ 41ರ ಹರೆಯದ ಜಾಫರ್ 34.10ರ ಸರಾಸರಿಯಂತೆ, 1944 ರನ್ ಗಳಿಸಿದ್ದಾರೆ. ಇದರಲ್ಲಿ 5 ಶತಕಗಳು ಮತ್ತು 11 ಅರ್ಧ ಶತಕಗಳೂ ಸೇರಿವೆ. ಜೊತೆಗೆ ಟೆಸ್ಟ್‌ನಲ್ಲಿ 2 ಬಾರಿ ದ್ವಿಶತಕ ಬಾರಿಸಿದ ದಾಖಲೆಯೂ ಜಾಫರ್ ಹೆಸರಿನಲ್ಲಿದೆ. ವಾಸಿಮ್, ವೆಸ್ಟ್ ಇಂಡೀಸ್‌ ವಿರುದ್ಧ 212 ರನ್, ಪಾಕಿಸ್ತಾನ ವಿರುದ್ಧ 202 ರನ್ ಗಳಿಸಿದ್ದರು.

Story first published: Tuesday, February 4, 2020, 15:45 [IST]
Other articles published on Feb 4, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X