ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ದೇಶೀಯ ಕ್ರಿಕೆಟ್‌ಗೆ ಮುಹೂರ್ತ ನಿಗದಿ: ಜನವರಿ 5ರಿಂದ ರಣಜಿ ಟೂರ್ನಿ ಆರಂಭ

Ranji Trophy will starts from Jan 5 with changed format: full details

ದೇಶೀಯ ಕ್ರಿಕೆಟ್‌ನ ಟೂರ್ನಿಗಳಿಗೆ ಬಿಸಿಸಿಐ ದಿನಾಂಕಗಳನ್ನು ನಿಗದಿ ಪಡಿಸಿದೆ. 2021-22ರ ಆವೃತ್ತಿಯ ರಣಜಿ ಟ್ರೋಫಿ ಟೂರ್ನಿ ಜನವರಿ 5 ರಿಂದ ಮಾರ್ಚ್ 20ರ ಮಧ್ಯೆ ಆಯೋಜನೆ ಮಾಡಲು ಬಿಸಿಸಿಐ ನಿರ್ಧರಿಸಿದೆ. ಕೊರೊನಾವೈರಸ್‌ನ ಕಾರಣದಿಂದಾಗಿ ಕಳೆದ ಆವೃತ್ತಿಯ ರಣಜಿ ಟೂರ್ನಿಯನ್ನು ಬಿಸಿಸಿಐ ನಡೆಸಿರಲಿಲ್ಲ. ಸೀಮಿತ ಓವರ್‌ಗಳ ಟೂರ್ನಿಯನ್ನು ಮಾತ್ರವೇ ಆಯೋಜಿಸಲು ಬಿಸಿಸಿಐ ನಿರ್ಧಿಸಿತ್ತು. 38 ತಂಡಗಳು ಭಾಗಿಯಾಗಲಿರುವ ಈ ಟೂರ್ನಿ ಸುದೀರ್ಘ ಅವಧಿಯಲ್ಲಿ ನಡೆಯುವ ಕಾರಣದಿಂದಾಗಿ ಬಯೋಬಬಲ್ ವ್ಯವಸ್ಥೆ ಏರ್ಪಡಿಸಲು ಎದುರಾಗಬಹುದಾಗಿದ್ದ ಸವಾಲನ್ನು ದೃಷ್ಟಿಯಲ್ಲಿಟ್ಟುಕೊಂಡು ರಣಜಿ ಟೂರ್ನಿಯನ್ನು ಆಯೋಜನೆ ಮಾಡಿರಲಿಲ್ಲ. ಈಗ ರಣಜಿ ಟ್ರೋಫಿಯನ್ನು ಮತ್ತೊಮ್ಮೆ ಆಯೋಜನೆ ಮಾಡಲು ಬಿಸಿಸಿಐ ದಿನಾಂಕ ನಿಗದಿಪಡಿಸಿದೆ.

ಇನ್ನು ದೇಶೀಯ ಕ್ರಿಕೆಟ್‌ನ ಚುಟುಕು ಸಮರಕ್ಕೂ ದಿನಾಂಕವನ್ನು ಬಿಸಿಸಿಐ ಘೋಷಿಸಿದೆ. ಅಕ್ಟೋಬರ್ 27ರಿಂದ ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿಯ ಮೂಲಕ ಈ ಬಾರಿಯ ದೇಶೀಯ ಕ್ರಿಕೆಟ್ ಋತು ಆರಂಭವಾಗಲಿದೆ. ಐಪಿಎಲ್‌ನಲ್ಲಿ ಆಡುವ ಆಟಗಾರರಿಗೆ ಅವಕಾಶ ದೊರೆಯುವ ನಿಟ್ಟಿನಲ್ಲಿ ಐಪಿಎಲ್ 14ನೇ ಆವೃತ್ತಿಯ ಎರಡನೇ ಚರಣದ ಪಂದ್ಯಗಳು ಮುಕ್ತಾಯದ ಬಳಿಕವೇ ಈ ಟೂರ್ನಿಯನ್ನು ಆಯೋಜಿಸಲಾಗಿದೆ.

ಇನ್ನು ದೇಶೀಯ ಕ್ರಿಕೆಟ್‌ನ ಏಕದಿನ ಕ್ರಿಕೆಟ್ ಟೂರ್ನಿಯಾಗಿರುವ ವಿಜಯ್ ಹಜಾರೆ ಟ್ರೋಫಿ ಡಿಸೆಂಬರ್ 1 ರಿಂದ ಆರಂಭವಾಗಲಿದ್ದು ಡಿಸೆಂಬರ್ 29ರಂದು ಫೈನಲ್ ಪಂದ್ಯ ನಡೆಯಲಿದೆ. ಇನ್ನು ಈ ಬಾರಿ ಮಹಿಳೆಯರ ಏಕದಿನ ಟೂರ್ನಿಯನ್ನು ಮೊದಲ ಬಾರಿ ಆಡಿಸಲಾಗುತ್ತಿದ್ದು ಅಕ್ಟೋಬರ್ 20ರಿಂದ ನವೆಂಬರ್ 20ರ ಅವಧಿಯಲ್ಲಿ ಈ ಟೂರ್ನಿ ನಡೆಯಲಿದೆ.

ದೇಶೀಯ ಕ್ರಿಕೆಟ್‌ನ ಸಂಪೂರ್ಣ ವೇಳಾಪಟ್ಟಿ:

ಅಂಡರ್ 19 ಮಹಿಳೆಯರ ವೇಳಾಪಟ್ಟಿ (ಏಕದಿನ ಕ್ರಿಕೆಟ್): ಸೆಪ್ಟೆಂಬರ್ 20 ರಿಂದ ಅಕ್ಟೋಬರ್ 18

ಪುರುಷರ ಅಂಡರ್ 19 (ವಿನೂ ಮಂಕಡ್ ಟ್ರೋಫಿ-ಏಕದಿನ ಕ್ರಿಕೆಟ್): ಸೆಪ್ಟೆಂಬರ್ 20 ರಿಂದ ಅಕ್ಟೋಬರ್ 18

ಪುರುಷರ ಚಾಲೆಂಜರ್ ಟ್ರೋಫಿ (ಅಂಡರ್-19): ಅಕ್ಟೋಬರ್ 26 ರಿಂದ ನವೆಂಬರ್ 9

ಮಹಿಳಾ ಚಾಲೆಂಜರ್ ಟ್ರೋಫಿ (ಅಂಡರ್-19): ಅಕ್ಟೋಬರ್ 25 ರಿಂದ ನವೆಂಬರ್ 6

ಸೈಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿ: ಅಕ್ಟೋಬರ್ 27 ರಿಂದ ನವೆಂಬರ್ 22

ಸೀನಿಯರ್ ಮಹಿಳೆಯರ ಏಕದಿನ: ಅಕ್ಟೋಬರ್ 20 ರಿಂದ ನವೆಂಬರ್ 20

ಪುರುಷರ ಸ್ಟೇಟ್ ಎ ಏಕದಿನ: ನವೆಂಬರ್ 9 ರಿಂದ ಡಿಸೆಂಬರ್ 10

ವಿಜಯ್ ಹಜಾರೆ ಟ್ರೋಫಿ (ಪುರುಷರ ಏಕದಿನ): ಡಿಸೆಂಬರ್ 1 ರಿಂದ ಡಿಸೆಂಬರ್ 29

ಸೀನಿಯರ್ ಮಹಿಳಾ ಚಾಲೆಂಜರ್ ಟ್ರೋಫಿ: ನವೆಂಬರ್ 26 ರಿಂದ ಡಿಸೆಂಬರ್ 8

ರಣಜಿ ಟ್ರೋಫಿ: ಜನವರಿ 5 ರಿಂದ ಮಾರ್ಚ್ 20

ಕೂಚ್ ಬೆಹಾರ್ ಟ್ರೋಫಿ (ಪುರುಷರ ಅಂಡರ್-19): ನವೆಂಬರ್ 21 ರಿಂದ ಫೆಬ್ರವರಿ 2

ಕರ್ನಲ್ ಸಿಕೆ ನಾಯ್ಡು ಟ್ರೋಫಿ (ಅಂಡರ್-25): ಜನವರಿ 6 ರಿಂದ ಏಪ್ರಿಲ್ 2

ಸೀನಿಯರ್ ಮಹಿಳಾ ಟಿ20: ಫೆಬ್ರವರಿ 20 ರಿಂದ ಮಾರ್ಚ್ 23

ವಿಜಯ್ ಮರ್ಚೆಂಟ್ ಟ್ರೋಫಿ (ಬಾಲಕರ ಅಂಡರ್-16): ನವೆಂಬರ್-ಡಿಸೆಂಬರ್

Joe Root ಪ್ರಕಾರ ಮುಂದಿನ 3 ಪಂದ್ಯಗಳು ಹೀಗೆಯೇ ಇರಲಿದೆ | Oneindia Kannada

ರಣಜಿ ಟ್ರೋಫಿ, ವಿಜಯ್ ಹಜಾರೆ ಟ್ರೋಫಿ ಮತ್ತು ಸೈಯದ್ ಮುಷ್ತಾಕ್ ಅಲಿ ಟ್ರೋಫಿಯನ್ನು ಒಳಗೊಂಡಿರುವ ಹಿರಿಯ ಪುರುಷರ ಟೂರ್ನಮೆಂಟ್‌ಗಳಲ್ಲಿ 38 ತಂಡಗಳು ಭಾಗವಹಿಸುತ್ತವೆ. ಇವುಗಳನ್ನು ಆರು ಗುಂಪುಗಳಾಗಿ ವಿಂಗಡಿಸಲಾಗಿದೆ. ತಲಾ ಆರು ತಂಡಗಳಿರುವ ಐದು ಎಲೈಟ್ ಗುಂಪುಗಳು ಮತ್ತು ಎಂಟು ತಂಡಗಳನ್ನು ಹೊಂದಿರುವ ಒಂದು ಪ್ಲೇಟ್ ಗುಂಪು ಇರುತ್ತದೆ. ಅಂಡರ್ 25 ವಿಭಾಗದಲ್ಲಿ ತಲಾ ಆರು ತಂಡಗಳ ಐದು ಎಲೈಟ್ ಗುಂಪುಗಳು ಮತ್ತು ಏಳು ತಂಡಗಳ ಒಂದು ಪ್ಲೇಟ್ ಗುಂಪು ಇರುತ್ತದೆ.

Story first published: Friday, August 20, 2021, 10:05 [IST]
Other articles published on Aug 20, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X