ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರಣಜಿ: ಸೌರಾಷ್ಟ್ರ ವಿರುದ್ಧ ಕರ್ನಾಟಕಕ್ಕೆ ಪಾಂಡೆ, ಶ್ರೇಯಸ್, ಶರತ್ ಆಸರೆ

RanjiTrophy: Half-centuries by Manish Pandey, Shreyas Gopal

ಬೆಂಗಳೂರು, ಜನವರಿ 24: ಬೆಂಗಳೂರಿನ ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ 2ನೇ ಸೆಮಿಫೈನಲ್ ಪಂದ್ಯದಲ್ಲಿ ಆತಿಥೇಯ ಕರ್ನಾಟಕ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ ಗುರುವಾರ (ಜನವರಿ 24) ಮೊದಲ ದಿನದಾಟದ ಅಂತ್ಯಕ್ಕೆ 9 ವಿಕೆಟ್ ಕಳೆದು 264 ರನ್ ಗಳಿಸಿದೆ.

ಸ್ಮೃತಿ ಶತಕ, ನ್ಯೂಜಿಲ್ಯಾಂಡ್ ವಿರುದ್ಧ ಭಾರತದ ಮಹಿಳೆಯರಿಗೆ 9 ವಿಕೆಟ್ ಜಯಸ್ಮೃತಿ ಶತಕ, ನ್ಯೂಜಿಲ್ಯಾಂಡ್ ವಿರುದ್ಧ ಭಾರತದ ಮಹಿಳೆಯರಿಗೆ 9 ವಿಕೆಟ್ ಜಯ

ಟಾಸ್ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಮನೀಶ್ ಪಾಂಡೆ ಬಳಗಕ್ಕೆ ಆರಂಭಿಕ ಆಟಗಾರರಾದ ರವಿಕುಮಾರ್ ಸಮರ್ಥ್ (0), ಮಯಾಂಕ್ ಅಗರ್ವಾಲ್ (2) ರನ್ ಬೆಂಬಲ ದೊರೆಯಲಿಲ್ಲ. ಕೃಷ್ಣ ಮೂರ್ತಿ ಸಿದ್ಧಾರ್ಥ್ ಮತ್ತು ಕರುಣ್ ನಾಯರ್ ಕೂಡ ಬೇಗನೆ ಔಟ್ ಆಗಿದ್ದರಿಂದ ರಾಜ್ಯ ತಂಡ ಭೀತಿಗೆ ಒಳಗಾಯಿತು.

ಆದರೆ ತಂಡದ ನೆರವಿಗೆ ನಾಯಕ ಮನೀಷ್ ನಿಂತರು. 62 ರನ್ ಬಾರಿಸಿದ ಪಾಂಡೆ ಜಯದೇವ್ ಉನಾದ್ಕತ್‌ಗೆ ವಿಕೆಟ್ ನೀಡಿದರು. ಅನಂತರ ಬಂದ ಶ್ರೇಯಸ್ ಗೋಪಾಲ್‌ ಕೂಡ 87 ರನ್ ಸೇರಿಸಿದ್ದರಿಂದ ಕರ್ನಾಟಕ ಕೊಂಚ ಚೇತರಿಕೆ ಕಂಡಿತು.

ನ್ಯೂಜಿಲೆಂಡ್ ವಿರುದ್ಧದ ಕೊನೆ 2 ಪಂದ್ಯಕ್ಕೆ ವಿರಾಟ್ ಕೊಹ್ಲಿ ಅಲಭ್ಯನ್ಯೂಜಿಲೆಂಡ್ ವಿರುದ್ಧದ ಕೊನೆ 2 ಪಂದ್ಯಕ್ಕೆ ವಿರಾಟ್ ಕೊಹ್ಲಿ ಅಲಭ್ಯ

ಗುರುವಾರ (ಜನವರಿ 24) ದಿನದಾಟದ ಅಂತ್ಯಕ್ಕೆ 7ನೇ ಕ್ರಮಾಂಕದಲ್ಲಿ ಬ್ಯಾಟ್ ಕೈಗೆತ್ತಿಕೊಂಡ ಶ್ರೀನಿವಾಸ್ ಶರತ್ 74 ರನ್, ಅಂತಿಮ ಬ್ಯಾಟ್ಸ್ಮನ್ ರೋನಿತ್ ಮೋರೆ (0) ಕ್ರೀಸ್‌ನಲ್ಲಿದ್ದಾರೆ. ಕರ್ನಾಟಕ 90 ಓವರ್‌ ಮುಕ್ತಾಯಕ್ಕೆ 9 ವಿಕೆಟ್ ಕಳೆದು 264 ರನ್ ಪೇರಿಸಿದೆ. ಕರ್ನಾಟಕ ಇನ್ನಿಂಗ್ಸ್‌ ವೇಳೆ ಸೌರಾಷ್ಟ್ರದ ಉನಾದ್ಕತ್ 4, ಕಮಲೇಶ್ ಮಕ್ವಾನ 3 ವಿಕೆಟ್‌ನೊಂದಿಗೆ ಪಾರಮ್ಯ ಮೆರೆದರು.

Story first published: Thursday, January 24, 2019, 17:34 [IST]
Other articles published on Jan 24, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X