ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನಂ.1 ಲೆಗ್‌ ಸ್ಪಿನ್ನರ್‌ ರಶೀದ್‌ ಖಾನ್‌ ಹೆಗಲೇರಿದ ಅಪಕೀರ್ತಿ!

ICC World Cup 2019 : ಹಿಗ್ಗಾ ಮುಗ್ಗಾ ಹೊಡೆಸಿಕೊಂಡ ಅಫಘಾನಿ ಬೌಲರ್..! | Oneindia Kannada
Rashid Khan 1st spinner to give away 100 runs in an ODI

ಮ್ಯಾಂಚೆಸ್ಟರ್‌, ಜೂನ್‌ 18: ಏಕದಿನ ಕ್ರಿಕೆಟ್‌ನಲ್ಲಿ ನಂ.3 ಮತ್ತು ಟಿ20 ಕ್ರಿಕೆಟ್‌ನಲ್ಲಿ ನಂ.1 ಬೌಲರ್‌ ಆಗಿರುವ ಅಫಘಾನಿಸ್ತಾನ ತಂಡದ ಲೆಗ್‌ ಸ್ಪಿನ್ನರ್‌ ರಶೀದ್‌ ಖಾನ್‌, ಏಕದಿನ ಕ್ರಿಕೆಟ್‌ ಪಂದ್ಯವೊಂದರಲ್ಲಿ 100 ರನ್‌ಗಳನ್ನು ಬಿಟ್ಟುಕೊಟ್ಟ ವಿಶ್ವದ ಮೊದಲ ಸ್ಪಿನ್‌ ಬೌಲರ್‌ ಎಂಬ ಅಪಕೀರ್ತಿಗೆ ಗುರಿಯಾಗಿದ್ದಾರೆ.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ

ಇಲ್ಲಿನ ಓಲ್ಡ್‌ ಟ್ರಾಫರ್ಡ್‌ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಇಂಗ್ಲೆಂಡ್‌ ವಿರುದ್ಧದ ವಿಶ್ವಕಪ್‌ ಪಂದ್ಯದಲ್ಲಿ ಅಫಘಾನಿಸ್ತಾನದ ಸ್ಪಿನ್ನರ್‌ ರಶೀದ್‌ ಖಾನ್‌ 9 ಓವರ್‌ಗಳನ್ನು ಎಸೆದು ಯಾವುದೇ ವಿಕೆಟ್‌ ಪಡೆಯಲಾಗದೆ ಬರೋಬ್ಬರಿ 110 ರನ್‌ಗಳನ್ನು ಬಿಟ್ಟುಕೊಟ್ಟರು.

'ಹಿಟ್‌ಮ್ಯಾನ್‌' ರೋಹಿತ್‌ ವಿಶ್ವದಾಖಲೆಯನ್ನು ಮುರಿದ ಐಯಾನ್‌ ಮಾರ್ಗನ್‌!'ಹಿಟ್‌ಮ್ಯಾನ್‌' ರೋಹಿತ್‌ ವಿಶ್ವದಾಖಲೆಯನ್ನು ಮುರಿದ ಐಯಾನ್‌ ಮಾರ್ಗನ್‌!

ಇಂಗ್ಲೆಂಡ್‌ ತಂಡದ ಬ್ಯಾಟ್ಸ್‌ಮನ್‌ ಹಾಗೂ ನಾಯಕ ಐಯಾನ್‌ ಮಾರ್ಗನ್‌, ಕೇವಲ 71 ಎಸೆತಗಳಲ್ಲಿ 148 ರನ್‌ಗಳನ್ನು ಸಿಡಿಸಿ ಆಫ್ಘನ್‌ ಬೌಲರ್‌ಗಳನ್ನು ಚೆಂಡಾಡಿದ್ದರು. ಇದರಲ್ಲಿ ರಶೀದ್‌ ಖಾನ್‌ ಅವರ ಬೌಲಿಂಗ್‌ನಲ್ಲೇ ಮಾರ್ಗನ್‌ ಹೆಚ್ಚು ರನ್‌ ಗಳಿಸಿದರು ಎಂಬುದು ವಿಶೇಷ. ರಶೀದ್‌ ತಮ್ಮ 9 ಓವರ್‌ಗಳಲ್ಲಿ 11 ಸಿಕ್ಸ್‌ ಮತ್ತು ಮೂರು ಫೋರ್‌ಗಳನ್ನು ಬಿಟ್ಟುಕೊಟ್ಟಿದ್ದಾರೆ.

ವೆಸ್ಟ್‌ ಇಂಡೀಸ್‌ ವಿರುದ್ಧದ ಭರ್ಜರಿ ಗೆಲುವಿನ ಬಳಿಕ ಶಾಕಿಬ್‌ ಹೇಳಿದ್ದಿದು!ವೆಸ್ಟ್‌ ಇಂಡೀಸ್‌ ವಿರುದ್ಧದ ಭರ್ಜರಿ ಗೆಲುವಿನ ಬಳಿಕ ಶಾಕಿಬ್‌ ಹೇಳಿದ್ದಿದು!

ಅಂದಹಾಗೆ ಏಕದಿನ ಕ್ರಿಕೆಟ್‌ ಪಂದ್ಯವೊಂದರಲ್ಲಿ ಅತಿ ಹೆಚ್ಚು ರನ್‌ಗಳನ್ನು ಬಿಟ್ಟುಕೊಟ್ಟ ಬೌಲರ್‌ಗಳ ಪಟ್ಟಿಯಲ್ಲೂ ರಶೀದ್‌ ಖಾನ್‌ ಎರಡನೇ ಸ್ಥಾನ ಪಡೆದಿದ್ದಾರೆ. ರಶೀದ್‌ ತಮ್ಮ ಪಾಲಿನ ಇನ್ನೊಂದು ಓವರ್‌ ಬೌಲ್‌ ಮಾಡಿ 3ಕ್ಕೂ ಹೆಚ್ಚು ರನ್‌ ಬಿಟ್ಟುಕೊಟ್ಟಿದ್ದರೆ, ಈ ಪಟ್ಟಿಯಲ್ಲೂ ಅಗ್ರಸ್ಥಾನ ಪಡೆಯುವಂತಾಗುತ್ತಿತ್ತು. ಇನ್ನು ಏಕದಿನ ಕ್ರಿಕೆಟ್‌ ಇತಿಹಾಸದಲ್ಲಿ ಈವರೆಗೆ ಒಟ್ಟು 12 ಬೌಲರ್‌ಗಳು 100+ ರನ್‌ಗಳನ್ನು ಬಿಟ್ಟುಕೊಟ್ಟ ಅಪಖ್ಯಾತಿ ಹೊಂದಿದ್ದಾರೆ.

ಒಡಿಐ ಕ್ರಿಕೆಟ್‌ ಪಂದ್ಯವೊಂದರಲ್ಲಿ ಅತಿ ಹೆಚ್ಚು ರನ್‌ಗಳನ್ನು ಬಿಟ್ಟುಕೊಟ್ಟ ಐವರು ಅಗ್ರಮಾನ್ಯ ಬೌಲರ್‌ಗಳ ವಿವರ ಇಲ್ಲಿದೆ.

1. ಮೈಕ್‌ ಲೂಯಿಸ್‌ (0-113)

1. ಮೈಕ್‌ ಲೂಯಿಸ್‌ (0-113)

ವರ್ಷ: 2006
ತಂಡ: ಆಸ್ಟ್ರೇಲಿಯಾ
ಎದುರಾಳಿ: ದಕ್ಷಿಣ ಆಫ್ರಿಕಾ
ಸ್ಥಳ: ಜೊಹಾನ್ಸ್‌ಬರ್ಗ್‌

2. ರಶೀದ್‌ ಖಾನ್‌ (0-110)

2. ರಶೀದ್‌ ಖಾನ್‌ (0-110)

ವರ್ಷ: 2019
ತಂಡ: ಅಫಘಾನಿಸ್ತಾನ
ಎದುರಾಳಿ: ಇಂಗ್ಲೆಂಡ್‌
ಸ್ಥಳ: ಮ್ಯಾಂಚೆಸ್ಟರ್‌

3. ವಹಾಬ್‌ ರಿಯಾಝ್‌ (0-110)

3. ವಹಾಬ್‌ ರಿಯಾಝ್‌ (0-110)

ವರ್ಷ: 2016
ತಂಡ: ಪಾಕಿಸ್ತಾನ
ಎದುರಾಳಿ: ಇಂಗ್ಲೆಂಡ್‌
ಸ್ಥಳ: ನಾಟಿಂಗ್‌ಹ್ಯಾಮ್‌

4. ಭುವನೇಶ್ವರ್‌ ಕುಮಾರ್‌ (1-106)

4. ಭುವನೇಶ್ವರ್‌ ಕುಮಾರ್‌ (1-106)

ವರ್ಷ: 2015
ತಂಡ: ಭಾರತ
ಎದುರಾಳಿ: ದಕ್ಷಿಣ ಆಫ್ರಿಕಾ
ಸ್ಥಳ: ಮುಂಬೈ

5. ನುವಾನ್‌ ಪ್ರದೀಪ್‌ (0-106)

5. ನುವಾನ್‌ ಪ್ರದೀಪ್‌ (0-106)

ವರ್ಷ: 2017
ತಂಡ: ಶ್ರೀಲಂಕಾ
ಎದುರಾಳಿ: ಭಾರತ
ಸ್ಥಳ: ಮೊಹಾಲಿ

Story first published: Tuesday, June 18, 2019, 22:19 [IST]
Other articles published on Jun 18, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X