ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅಫ್ಘಾನ್‌ ಟಿ20 ನಾಯಕತ್ವ ನಿರಾಕರಿಸಿದ ರಶೀದ್, ಕೊಟ್ಟ ಕಾರಣ ಏನ್‌ ಗೊತ್ತಾ!?

Rashid Khan Declined Afghanistan T20 Captaincy, Says ‘I’m Better Off as Player Than Leader’

ಕಾಬೂಲ್: ಅಫ್ಘಾನಿಸ್ತಾನ ಕ್ರಿಕೆಟ್ ತಂಡದ ಮುಂಚೂಣಿ ಸ್ಪಿನ್ ಬೌಲರ್ ರಶೀದ್ ಖಾನ್ ಟಿ20 ನಾಯಕತ್ವದ ಆಫರ್ ಅನ್ನು ನಿರಾಕರಿಸಿದ್ದಾರೆ. ತಾನು ನಾಯಕನಾಗಿರುವುದಕ್ಕಿಂತ ತನ್ನ ಪ್ರದರ್ಶನದ ಕಡೆಗೆ ಹೆಚ್ಚು ಗಮನ ಹರಿಸುವುದಾಗಿ ಖಾನ್ ಹೇಳಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ರಶೀದ್, ಸನ್ ರೈಸರ್ಸ್ ಹೈದರಾಬಾದ್ ತಂಡದಲ್ಲಿ ಆಡ್ತಾರೆ.

ಐಪಿಎಲ್, ಸಿಪಿಎಲ್ ಆಡಿದ್ದೇನೆ; ಪಾಕಿಸ್ತಾನ್ ಸೂಪರ್ ಲೀಗ್ ಟಾಪ್ ಎಂದ ಆ್ಯಂಡ್ರೆ ರಸೆಲ್!ಐಪಿಎಲ್, ಸಿಪಿಎಲ್ ಆಡಿದ್ದೇನೆ; ಪಾಕಿಸ್ತಾನ್ ಸೂಪರ್ ಲೀಗ್ ಟಾಪ್ ಎಂದ ಆ್ಯಂಡ್ರೆ ರಸೆಲ್!

ತನ್ನನ್ನು ನಾಯಕನಾಗಿ ಆರಿಸುವಲ್ಲಿ ತಂಡ ತೋರಿದ ಆಸಕ್ತಿಗೆ ನಿರಾಸಕ್ತಿ ತೋರಿರುವ ರಶೀದ್ ಖಾನ್, ಮುಂಬರಲಿರುವ ವಿಶ್ವಕಪ್‌ ವೇಳೆ ನಾನು ಉತ್ತಮ ಪ್ರದರ್ಶನ ನೀಡಬೇಕಾದರೆ ನಾನು ಸಾಮಾನ್ಯ ಆಟಗಾರನಂತೆ ಇರೋದೇ ಒಳ್ಳೇದು. ನಾಯಕತ್ವ ನನ್ನ ಪ್ರದರ್ಶನ ಮೇಲೆ ಒತ್ತಡ ಬೀರಬಹುದು ಎಂದು ತಿಳಿಸಿದ್ದಾರೆ.

ಅಫ್ಘಾನಿಸ್ತಾನ್ ಕ್ರಿಕೆಟ್ ಬೋರ್ಡ್ ಇನ್ನೂ ಟಿ20 ನಾಯಕನನ್ನು ಹೆಸರಿಸಿಲ್ಲ. ಅದಕ್ಕೂ ಮುಂಚೆಯೇ ತನಗೆ ನಾಯಕತ್ವದಲ್ಲಿ ಆಸಕ್ತಿಯಿಲ್ಲ ಎಂದು ಖಾನ್ ಅಭ್ರಿಪ್ರಾಯಿಸಿದ್ದಾರೆ. 'ನಾನು ಬರಿಯ ಆಟಗಾರನಾಗಿಯೇ ಚೆನ್ನಾಗಿರುತ್ತೇನೆ ಅನ್ನೋದು ನನ್ನ ತಲೆಯಲ್ಲಿ ಸ್ಪಷ್ಟವಾಗಿದೆ,' ಎಂದು ಖಾನ್ ಹೇಳಿದ್ದಾರೆ.

ಐಪಿಎಲ್ 2022ರ ಹರಾಜಿನಲ್ಲಿ ಚೆನ್ನೈ ಉಳಿಸಿಕೊಳ್ಳಬಹುದಾದ ಆಟಗಾರರುಐಪಿಎಲ್ 2022ರ ಹರಾಜಿನಲ್ಲಿ ಚೆನ್ನೈ ಉಳಿಸಿಕೊಳ್ಳಬಹುದಾದ ಆಟಗಾರರು

ಇಎಸ್‌ಪಿಎನ್ ಕ್ರಿಕ್‌ ಇನ್ಫೋ ಜೊತೆ ಮಾತನಾಡಿದ ರಶೀದ್, 'ಬೇಕಿದ್ದಾಗ ನಾಯಕನಿಗೆ ಹೆಲ್ಪ್ ಮಾಡುತ್ತ ಉಪನಾಯಕನ ಸ್ಥಾನವೇ ನನಗೆ ಖುಷಿ ನೀಡಿದೆ. ನಾಯಕನ ಸ್ಥಾನದಿಂದ ದೂರ ಉಳಿಯೋದೇ ಒಳ್ಳೇದು. ಒಬ್ಬ ಆಟಗಾರನಾಗಿ ತಂಡಕ್ಕೆ ನನ್ನೆಲ್ಲಾ ಪ್ರದರ್ಶನ ನೀಡಲು ನಾನು ಬಯಸಿದ್ದೇನೆ,' ಎಂದು ಖಾನ್ ವಿವರಿಸಿದ್ದಾರೆ.

Story first published: Friday, June 4, 2021, 12:18 [IST]
Other articles published on Jun 4, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X