ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರಶೀದ್ ಹ್ಯಾಟ್ರಿಕ್ ವಿಕೆಟ್, ಐರ್ಲೆಂಡ್‌ ವಿರುದ್ಧ ಅಫ್ಘಾನ್‌ಗೆ ಟಿ20 ಸರಣಿ

Rashid Khan hat-trick seals Afghanistan T20 sweep against Ireland

ಡೆಹ್ರಾಡೂನ್, ಫೆಬ್ರವರಿ 25: ಉತ್ತರಖಂಡದ ಡೆಹ್ರಾಡೂನ್‌ನಲ್ಲಿ ನಡೆದ ಪ್ರವಾಸಿ ಅಫ್ಘಾನಿಸ್ತಾನ ಮತ್ತು ಐರ್ಲೆಂಡ್ ತಂಡಗಳ ನಡುವಿನ 3ನೇ ಮತ್ತು ಅಂತಿಮ ಟಿ20 ಪಂದ್ಯದಲ್ಲೂ ಐರ್ಲೆಂಡ್ 32 ರನ್ ಸೋಲನುಭವಿಸುವುದರೊಂದಿಗೆ ಸರಣಿಯಲ್ಲಿ 3-0ಯ ಕ್ಲೀನ್ ಸ್ವೀಪ್ ಆಘಾತವನ್ನನುಭವಿಸಿತು. ರಶೀದ್ ಖಾನ್ ಮಾರಕ ಬೌಲಿಂಗ್ ಅಫ್ಘಾನ್‌ಗೆ ಗೆಲುವನ್ನು ತಂದಿತು.

ಭಾರತ vs ಆಸ್ಟ್ರೇಲಿಯಾ: ಟಿ20 ದಾಖಲೆ ಬರೆದ ವೇಗಿ ಜಸ್‌ಪ್ರೀತ್ ಬೂಮ್ರಾಭಾರತ vs ಆಸ್ಟ್ರೇಲಿಯಾ: ಟಿ20 ದಾಖಲೆ ಬರೆದ ವೇಗಿ ಜಸ್‌ಪ್ರೀತ್ ಬೂಮ್ರಾ

ಪಂದ್ಯದಲ್ಲಿ 27 ರನ್ನಿಗೆ 5 ವಿಕೆಟ್ ಕೆಡವಿ ಖಾನ್, ಐರ್ಲೆಂಡ್ ಸೋಲಿಗೆ ಕಾರಣವಾದರು. ಅದರಲ್ಲೂ ಕ್ರಮವಾಗಿ ಜಾರ್ಜ್ ಡಾಕ್ರೆಲ್, ಶೇನ್ ಗೆಕೆಟ್, ಸಿಮಿ ಸಿಂಗ್ ಮತ್ತು ಜೋಶುವಾ ಲಿಟಲ್ ವಿಕೆಟ್‌ಗಳನ್ನು ಪಡೆಯುವ ಮೂಲಕ ರಶೀದ್ ಹ್ಯಾಟ್ರಿಕ್ ಸಾಧನೆಗೂ ಕಾರಣವಾದರು.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಅಫ್ಘಾನಿಸ್ತಾನ ತಂಡ ಮೊಹಮ್ಮದ್ ನಬಿ 81 ರನ್ (36 ಎಸೆತ) ಕೊಡುಗೆಯೊಂದಿಗೆ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದು 210 ರನ್ ಗಳಿಸಿತ್ತು. ಗುರಿ ಬೆನ್ನಟ್ಟಿದ ಕೆವಿನ್ ಒ ಬ್ರಿಯಾನ್ 74, ಆಂಡ್ರ್ಯೂ ಬಾಲ್ಬಿರ್ನಿ 47 ರನ್ ಬೆಂಬಲದೊಂದಿಗೆ 20 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 178 ರನ್ ಪೇರಿಸಿ ಶರಣಾಯಿತು.

ಮೊದಲ ಟಿ20: ಭಾರತ ವಿರುದ್ಧ ಆಸ್ಟ್ರೇಲಿಯಾಕ್ಕೆ 3 ವಿಕೆಟ್ ರೋಚಕ ಗೆಲುವು!ಮೊದಲ ಟಿ20: ಭಾರತ ವಿರುದ್ಧ ಆಸ್ಟ್ರೇಲಿಯಾಕ್ಕೆ 3 ವಿಕೆಟ್ ರೋಚಕ ಗೆಲುವು!

ಅಫ್ಘಾನ್‌ಸ್ತಾನ್ ಪರ ರಶೀದ್ ಖಾನ್ ಬಿಟ್ಟರೆ ಜಿಯಾರ್ ರಹಮಾನ್ 2 ವಿಕೆಟ್ ಪಡೆದರು. ಐರ್ಲೆಂಡ್‌ನಿಂದ ಬಾಯ್ಡ್ ರಾಂಕಿನ್ 3 ವಿಕೆಟ್ ಉರುಳಿಸಿ ಗಮನ ಸೆಳೆದರು. ಪಂದ್ಯಶ್ರೇಷ್ಠ ಮತ್ತು ಸರಣಿ ಶ್ರೇಷ್ಠ ಎರಡೂ ಪ್ರಶಸ್ತಿಗಳು ಅಫ್ಘಾನ್ ಅನುಭವಿ ಆಟಗಾರ ಮೊಹಮ್ಮದ್ ನಬಿ ಲಭಿಸಿದ್ದು ವಿಶೇಷವೆನಿಸಿತು.

Story first published: Monday, February 25, 2019, 11:37 [IST]
Other articles published on Feb 25, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X