ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ ವಿರುದ್ಧದ ಐತಿಹಾಸಿಕ ಟೆಸ್ಟ್ ಪಂದ್ಯಕ್ಕೆ ಅಫ್ಘನ್ ತಂಡ ಪ್ರಕಟ

By Mahesh
Rashid Khan, Mujeeb ur Rahman stars in Afghanistan Test squad

ಬೆಂಗಳೂರು, ಮೇ 29: ಭಾರತ ಹಾಗೂ ಅಫ್ಘಾನಿಸ್ತಾನ ನಡುವಿನ ಏಕೈಕ ಐತಿಹಾಸಿಕ ಟೆಸ್ಟ್ ಪಂದ್ಯಕ್ಕೆ ನಗರದ ಎಂ ಚಿನ್ನಸ್ವಾಮಿ ಕ್ರೀಡಾಂಗಣ ಸಜ್ಜಾಗಿದೆ. ಈ ಪಂದ್ಯಕ್ಕಾಗಿ ಅಫ್ಘಾನಿಸ್ತಾನವನ್ನು ಪ್ರಕಟಿಸಲಾಗಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ ) 2018ರಲ್ಲಿ ಮಿಂಚಿದ ಸ್ಪಿನ್ನರ್ ಗಳಾದ ರಷೀದ್ ಖಾನ್, ಮುಜೀಬ್ ಉರ್ ರೆಹ್ಮಾನ್ ಅವರು ಅಫ್ಘಾನಿಸ್ತಾನ ತಂಡದ ಸ್ಟಾರ್ ಆಟಗಾರರಾಗಿದ್ದಾರೆ. ಇವರಿಬ್ಬರ ಜತೆಗೆ ಚೈನಾಮನ್ ಜಹೀರ್ ಖಾನ್, ಎಡಗೈ ಸ್ಪಿನ್ನರ್ ಅಮೀರ್ ಹಮ್ಜಾ ಹೊಟಕ್ ಅವರು ಕೂಡಾ ಪರಿಣಾಮಕಾರಿಯಾಗಬಲ್ಲರು.

ಅಸ್ಘರ್ ಸ್ಟಾನಿಕ್ಜಾಯಿ ನೇತೃತ್ವದ ಅಫ್ಘಾನಿಸ್ತಾನ ಹಾಗೂ ಅಜಿಂಕ್ಯರಹಾನೆ ನೇತೃತ್ವದ ಭಾರತ ತಂಡದ ನಡುವೆ ಜೂನ್ 14 ರಿಂದ 18ರ ತನಕ ಪಂದ್ಯ ನಿಗದಿಯಾಗಿದೆ.

ಅಫ್ಘಾನಿಸ್ತಾನ ಇಡೀ ತಂಡದ ಅನುಭವ 205 ಪ್ರಥಮ ದರ್ಜೆ ಪಂದ್ಯಗಳಾಗಿದ್ದು ಪ್ರತಿ ಆಟಗಾರರು 13.6 ನಾಲ್ಕು ದಿನಗಳ ಪಂದ್ಯ ಸರಾಸರಿ ಆಡಿದ್ದಾರೆ ಎನ್ನಬಹುದು. ಮೊಹಮ್ಮದ್ ನಬಿ ಹಾಗೂ ಸ್ಟಾನಿಕ್ಜಾಯಿ ಅವರು ಮಾತ್ರ 20ಕ್ಕೂ ಅಧಿಕ ಪ್ರಥಮ ದರ್ಜೆ ಪಂದ್ಯವಾಡಿದ ಅನುಭವ ಹೊಂದಿದ್ದಾರೆ. ತಂಡದ ಪ್ರಮುಖ ವೇಗಿ ದಾವ್ಲಾತ್ ಜದ್ರಾನ್ ಅವರು ಗಾಯಗೊಂಡು ತಂಡದಿಂದ ಹೊರಗುಳಿದಿದ್ದಾರೆ.
ಅಫ್ಘಾನಿಸ್ತಾನ: ಅಸ್ಘರ್ ಸ್ಟಾನಿಕ್ಜಾಯಿ(ನಾಯಕ), ಮೊಹಮ್ಮದ್ ಶಹಜಾದ್, ಜಾವೇದ್ ಅಹ್ಮದಿ, ರಹ್ಮತ್ ಶಾ, ಇಹ್ಸಾನುಲ್ಲಾ ಜನತ್, ನಾಸಿರ್ ಜಮಾಲ್, ಹಶಾಮತುಲ್ಲಾ ಶಹೀದಿ, ಅಫ್ಸರ್ ಜಜಾಯಿ, ಮೊಹಮ್ಮದ್ ನಬಿ, ರಷೀದ್ ಖಾನ್, ಜಹೀರ್ ಖಾನ್, ಹಮ್ಜಾ ಹೊಟಕ್, ಸಯದ್ ಅಹ್ಮದ್ ಶಿರ್ಜಾದ್, ಯಾಮೀನ್ ಅಹ್ಮದ್ಜಾಯಿ, ವಫಾದಾರ್, ಮುಜೀಬ್ ಉರ್ ರಹ್ಮಾನ್.

ಭಾರತ : ಅಜಿಂಕ್ಯ ರಹಾನೆ (ನಾಯಕ), ರವಿಚಂದ್ರನ್ ಅಶ್ವಿನ್, ಶಿಖರ್ ಧವನ್, ರವೀಂದ್ರ ಜಡೇಜ, ಕರುಣ್ ನಾಯರ್, ಹಾರ್ದಿಕ್ ಪಾಂಡ್ಯ, ಚೇತೇಶ್ವರ್ ಪೂಜಾರ, ಕೆಎಲ್ ರಾಹುಲ್, ವೃದ್ಧಿಮಾನ್ ಸಹಾ(ವಿಕೆಟ್ ಕೀಪರ್), ಇಶಾಂತ್ ಶರ್ಮ, ಶಾರ್ದೂಲ್ ಠಾಕೂರ್, ಮುರಳಿ ವಿಜಯ್, ಕುಲದೀಪ್ ಯಾದವ್, ಉಮೇಶ್ ಯಾದವ್.

ಈ ಪೈಕಿ ವೃದ್ಧಿಮಾನ್ ಸಹಾ ಗಾಯಗೊಂಡಿದ್ದಾರೆ. ವಿರಾಟ್ ಕೊಹ್ಲಿ ಅವರು ಕೌಂಟಿ ಕ್ರಿಕೆಟ್ ಆಡದಿರುವುದರಿಂದ ಈ ಐತಿಹಾಸಿಕ ಟೆಸ್ಟ್ ಗೆ ಲಭ್ಯರಾಗಿದ್ದು, ತಂಡದಲ್ಲಿ ಕಾಣಿಸಿಕೊಳ್ಳುವರೇ ಕಾದು ನೋಡಬೇಕಿದೆ.

ಭಾರತ ವಿರುದ್ಧ ಟೆಸ್ಟ್ ಪಂದ್ಯಕ್ಕೆ ಅಫ್ಘಾನಿಸ್ತಾನ ತಂಡ

ಬಾಂಗ್ಲಾದೇಶ ವಿರುದ್ಧ ಟಿ20ಐ ಸರಣಿಗೆ ಅಫ್ಘಾನಿಸ್ತಾನ ತಂಡ ಹೀಗಿದೆ. ಡೆಹ್ರಾಡೂನ್ ನಲ್ಲಿ ಆಡಲಿರುವ ಈ ಸರಣಿಗೆ ಎಡಗೈ ವೇಗಿ ಶಾಪೂರ್ ಜದ್ರಾನ್ ಅವರು ಅಫ್ಘನ್ ತಂಡ ಸೇರಲಿದ್ದಾರೆ

Story first published: Tuesday, May 29, 2018, 19:03 [IST]
Other articles published on May 29, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X