ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್‌ ವೈಫಲ್ಯದ ಬೆನ್ನಲ್ಲೇ ಆಫ್ಘನ್‌ ತಂಡದ ನಾಯಕನ ಬದಲಾವಣೆ

Rashid Khan named Afghanistan captain across all formats

ಕಾಬುಲ್‌, ಜುಲೈ 12: ಪ್ರಸಕ್ತ ವಿಶ್ವಕಪ್‌ ಟೂರ್ನಿಯಲ್ಲಿ ಅತ್ಯಂತ ಹೀನಾಯ ಪ್ರದರ್ಶನ ನೀಡುವ ಮೂಲಕ ಒಂದು ಪಂದ್ಯವನ್ನು ಗೆಲ್ಲದೇ ಸ್ಪರ್ಧೆಯಿಂದ ಹೊರಬಿದ್ದ ಅಫಘಾನಿಸ್ತಾನ ತಂಡದ ನಾಯಕತ್ವದಲ್ಲಿ ಬದಲಾವಣೆಯಾಗಿದ್ದು, ಲೆಗ್‌ಸ್ಪಿನ್ನರ್‌ ರಶೀದ್‌ ಖಾನ್‌ ಟೆಸ್ಟ್‌, ಏಕದಿನ ಮತ್ತು ಟಿ20-ಐ ಮೂರೂ ಮಾದರಿಯಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ

ರಶೀದ್‌ ಖಾನ್‌ ತಂಡವನ್ನು ಮೂರೂ ಮಾದರಿಯಲ್ಲಿ ಮುನ್ನಡೆಸಲಿದ್ದು, ಮಾಜಿ ನಾಯಕ ಅಸ್ಗರ್‌ ಅಫ್ಘಾನ್‌ ಉಪ ನಾಯಕನ ಜವಾಬ್ದಾರಿ ನಿಭಾಯಿಸಲಿದ್ದಾರೆ ಎಂದು ಅಫಘಾನಿಸ್ತಾನ ಕ್ರಿಕೆಟ್‌ ಮಂಡಳಿ (ಎಸಿಬಿ) ಶುಕ್ರವಾರ ತಿಳಿಸಿದೆ.

ವಿಶ್ವಕಪ್‌ ಆರಂಭಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇರುವ ಸಂದರ್ಭದಲ್ಲಿ ಅಫಘಾನಿಸ್ತಾನ ತಂಡದ ದೀರ್ಘ ಕಾಲದ ನಾಯಕ ಅಸ್ಗರ್‌ ಅಫ್ಘಾನ್‌ ಅವರನ್ನು ನಾಯಕನ ಸ್ಥಾನದಿಂದ ಕೆಳಗಿಳಿಸಿ ಆಲ್‌ರೌಂಡರ್‌ ಗುಲ್ಬದಿನ್‌ ನೈಬ್‌ ಅವರಿಗೆ ನಾಯಕತ್ವ ನೀಡಲಾಗಿತ್ತು. ಇದಕ್ಕೆ ರಶೀದ್‌ ಖಾನ್‌ ಮತ್ತು ಮೊಹಮ್ಮದ್‌ ನಬಿ ಅವರಂತಹ ಪ್ರಮುಖ ಆಟಗಾರರೇ ಆಕ್ಷೇಪ ವ್ಯಕ್ತ ಪಡಿಸಿದ್ದರು.

 ನ್ಯೂಜಿಲೆಂಡ್‌ ವಿರುದ್ಧದ ಫೈನಲ್‌ ಕುರಿತಾಗಿ ಮಾತನಾಡಿದ ಇಂಗ್ಲೆಂಡ್‌ ನಾಯಕ! ನ್ಯೂಜಿಲೆಂಡ್‌ ವಿರುದ್ಧದ ಫೈನಲ್‌ ಕುರಿತಾಗಿ ಮಾತನಾಡಿದ ಇಂಗ್ಲೆಂಡ್‌ ನಾಯಕ!

ವಿಶ್ವಕಪ್‌ನಲ್ಲಿ ಅಫಘಾನಿಸ್ತಾನ ತಂಡ ಲೀಗ್‌ನಲ್ಲಿ ಆಡಿದ 9 ಪಂದ್ಯಗಳನ್ನೂ ಸೋತು ನಿರಾಸೆ ಅನುಭವಿಸಿತು. ಈ ನಿಟ್ಟಿನಲ್ಲಿ ನಾಯಕತ್ವದ ಬದಲಾವಣೆಯಾಗಿದ್ದು ಅಫಘಾನಿಸ್ತಾನ ಕ್ರಿಕೆಟ್‌ ತಂಡದ ಸ್ಟಾರ್‌ ಆಟಗಾರ ಆಗಿರುವ ರಶೀದ್‌ ಖಾನ್‌ ಅವರಿಗೆ ಎಸಿಬಿ ನಾಯಕನ ಜವಾಬ್ದಾರಿ ವಹಿಸಿದೆ.

ಸೆಪ್ಟೆಂಬರ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ನಡೆಯಲಿರುವ ಏಕೈಕ ಟೆಸ್ಟ್‌ ಪಂದ್ಯದಲ್ಲಿ ರಶೀದ್‌ ಖಾನ್‌ ಅಫಘಾನಿಸ್ತಾನ ತಂಡವನ್ನು ಟೆಸ್ಟ್‌ ಕ್ರಿಕೆಟ್‌ನಲ್ಲಿ ಮುನ್ನಡೆಸಲಿದ್ದಾರೆ. ಬಳಿಕ ಬಾಂಗ್ಲಾದೇಶ ಮತ್ತು ಜಿಂಬಾಬ್ವೆ ವಿರುದ್ಧದ ತ್ರಿಕೋನ ಏಕದಿನ ಸರಣಿಯಲ್ಲಿ ಒಡಿಐ ಜವಾಬ್ದಾರಿಯನ್ನೂ ನಿಭಾಯಿಸಲಿದ್ದಾರೆ. ಈ ಸರಣಿಗಳು ಭಾರತದಲ್ಲಿ ನಡೆಯಲಿವೆ. ಅಫಘಾನಿಸ್ತಾನ ತಂಡಕ್ಕೆ ಭಾರತ ಎರಡನೇ ಮನೆಯಂಗಣವಾಗಿದೆ. ಇನ್ಜು ನವೆಂಬರ್‌ 5ರಿಂದ ಡಿಸೆಂಬರ್‌ 1ರವರೆಗೆ ವೆಸ್ಟ್‌ ಇಂಡೀಸ್‌ ವಿರುದ್ಧ ತಲಾ 3 ಪಂದ್ಯಗಳ ಟಿ20 ಮತ್ತು ಒಡಿಐ ಹಾಗೂ ಏಕೈಕ ಟೆಸ್ಟ್‌ ಪಂದ್ಯದಲ್ಲೂ ಅಫಘಾನಿಸ್ತಾನ ಪೈಪೋಟಿ ನಡೆಸಲಿದೆ.

ವಿಶ್ವಕಪ್‌ ಕೂಡ ಐಪಿಎಲ್‌ ರೀತಿ ಆಗಬೇಕು ಎಂದ ವಿರಾಟ್‌ ಕೊಹ್ಲಿ!ವಿಶ್ವಕಪ್‌ ಕೂಡ ಐಪಿಎಲ್‌ ರೀತಿ ಆಗಬೇಕು ಎಂದ ವಿರಾಟ್‌ ಕೊಹ್ಲಿ!

ಇದೇ ವೇಳೆ ತಂಡದ ನೂತನ ನಾಯಕ ರಶೀದ್‌ ಖಾನ್‌ಗೆ ಮಾಜಿ ನಾಯಕ ಗುಲ್ಬದಿನ್‌ ನೈಬ್‌ ಟ್ವಿಟರ್‌ ಮೂಲಕ ಶುಭಾಶಯ ಕೋರಿದ್ದು, ಅವರೊಟ್ಟಿಗೆ ಬೆಂಬಲವಾಗಿ ತಾವು ನಿಲ್ಲುವುದಾಗಿ ಹೇಳಿದ್ದಾರೆ.

Story first published: Friday, July 12, 2019, 19:30 [IST]
Other articles published on Jul 12, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X