ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

15 ವರ್ಷಗಳ ಹಿಂದಿನ ವಿಶ್ವದಾಖಲೆ ಮುರಿಯಲಿದ್ದಾರೆ ರಶೀದ್ ಖಾನ್

Rashid Khan on cusp of history, set to break 15-year-old record

ಕಾಬೂಲ್, ಸೆಪ್ಟೆಂಬರ್ 4: ಅಫ್ಘಾನಿಸ್ತಾನ ತಂಡದ ಲೆಗ್ ಸ್ಪಿನ್ನರ್ ರಶೀದ್ ಖಾನ್ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅಪರೂಪದ ದಾಖಲೆ ಮುರಿಯುವುದರಲ್ಲಿದ್ದಾರೆ. ಬಾಂಗ್ಲಾದೇಶಕ್ಕೆ ಪ್ರವಾಸ ಕೈಗೊಳ್ಳಲಿರುವ ಅಫ್ಘಾನಿಸ್ತಾನ ತಂಡ, ಗುರುವಾರ (ಸೆಪ್ಟೆಂಬರ್ 5) ಆತಿಥೇಯರ ವಿರುದ್ಧ ಏಕಮಾತ್ರ ಟೆಸ್ಟ್ ಆಡಲಿದೆ. ಈ ವೇಳೆ ರಶೀದ್ ಹೆಸರಿನಲ್ಲಿ ದಾಖಲೆ ಸೇರಿಕೊಳ್ಳಲಿದೆ.

'ಅವನ ಆಟ ನೋಡಲು ಖುಷಿ' ಅಂತ ತೆಂಡೂಲ್ಕರ್ ಹೇಳಿದ್ಯಾರಿಗೆ ಗೊತ್ತಾ?!'ಅವನ ಆಟ ನೋಡಲು ಖುಷಿ' ಅಂತ ತೆಂಡೂಲ್ಕರ್ ಹೇಳಿದ್ಯಾರಿಗೆ ಗೊತ್ತಾ?!

ಬಾಂಗ್ಲಾದ ಚತ್ತೊಗ್ರಾಮ್‌ನಲ್ಲರುವ ಝಹೂರ್ ಅಹ್ಮದ್ ಚೌಧರಿ ಸ್ಟೇಡಿಯಂನಲ್ಲಿ ಬಾಂಗ್ಲಾ-ಅಫ್ಘಾನ್ ಟೆಸ್ಟ್ ಪಂದ್ಯ ನಡೆಯಲಿದ್ದು, ಅಫ್ಘಾನ್ ತಂಡವನ್ನು ರಶೀದ್ ಖಾನ್ ಮುನ್ನಡೆಸಲಿದ್ದಾರೆ. ಹೀಗಾಗಿ ವಿಶ್ವ ದಾಖಲೆ ನಿರ್ಮಾಣವಾಗಲಿದೆ.

ಇಂಪಾಗಿ ಕೊಳಲು ಬಾರಿಸಿದ ಕ್ರಿಕೆಟರ್ ಶಿಖರ್ ಧವನ್: ವೈರಲ್ ವಿಡಿಯೋಇಂಪಾಗಿ ಕೊಳಲು ಬಾರಿಸಿದ ಕ್ರಿಕೆಟರ್ ಶಿಖರ್ ಧವನ್: ವೈರಲ್ ವಿಡಿಯೋ

ಟೆಸ್ಟ್ ಕ್ರಿಕೆಟ್‌ನಲ್ಲಿ ರಾಷ್ಟ್ರೀಯ ತಂಡವನ್ನು ಮುನ್ನಡೆಸಿದ ಅತೀ ಕಿರಿಯ ನಾಯಕನಾಗಿ ರಶೀದ್ ಖಾನ್ ಇಲ್ಲಿ ದಾಖಲೆ ನಿರ್ಮಿಸಲಿದ್ದಾರೆ.

ತೈಬು ಹೆಸರಿನಲ್ಲಿ ದಾಖಲೆ

ತೈಬು ಹೆಸರಿನಲ್ಲಿ ದಾಖಲೆ

ಅತೀ ಕಿರಿಯ ಆಟಗಾರನಾಗಿದ್ದು ಟೆಸ್ಟ್ ನಾಯಕತ್ವ ವಹಿಸಿದ್ದ ವಿಶ್ವದಾಖಲೆ ಜಿಂಬಾಬ್ವೆಯ ಟಟೆಂಡಾ ತೈಬು ಹೆಸರಿನಲ್ಲಿದೆ. ಜಿಂಬಾಬ್ವೆಯ ಹರಾರೆಯಲ್ಲಿ 2004ರಲ್ಲಿ ಶ್ರೀಲಂಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಟಟೆಂಡಾ ನಾಯಕತ್ವ ವಹಿಸಿದ್ದಾಗ ಅವರಿಗೆ 20 ವರ್ಷ, 358 ದಿನ ವಯಸ್ಸಾಗಿತ್ತು.

15 ವರ್ಷಗಳ ದಾಖಲೆ ಬದಿಗೆ

15 ವರ್ಷಗಳ ದಾಖಲೆ ಬದಿಗೆ

ಗುರುವಾರದ ಪಂದ್ಯದಲ್ಲಿ ರಶೀದ್ ಖಾನ್ ಅಫ್ಘಾನ್ ನಾಯಕನಾಗಿ ಮೈದಾನಕ್ಕಿಳಿದರೆ ಟಟೆಂಡಾ ಹೆಸರಿನಲ್ಲಿರುವ ಸುಮಾರು 15 ವರ್ಷಗಳ ಹಿಂದಿನ ದಾಖಲೆ ಮುರಿದು ಹೋಗಲಿದೆ. ಈಗ 20 ವರ್ಷ 350 ದಿನ ವಯಸ್ಸಾಗಿರುವ ರಶೀದ್ ಖಾನ್, ಟಟೆಂಡಾ ಅವರಿಗಿಂತ 7 ದಿನ ಕಿರಿಯ ನಾಯಕನಾಗಿ ದಾಖಲೆ ನಿರ್ಮಿಸಲಿದ್ದಾರೆ.

ದ್ವಿತೀಯ ಸ್ಥಾನದಲ್ಲಿ ಭಾರತೀಯ

ದ್ವಿತೀಯ ಸ್ಥಾನದಲ್ಲಿ ಭಾರತೀಯ

ಟೆಸ್ಟ್ ಕ್ರಿಕೆಟ್‌ನಲ್ಲಿ ರಾಷ್ಟ್ರೀಯ ತಂಡವನ್ನು ಮುನ್ನಡೆಸಿದ ಅತೀಯ ಕಿರಿಯ ನಾಯಕರ ಸಾಲಿನಲ್ಲಿ ಸದ್ಯ ಭಾರತದ ಮನ್ಸೂರ್ ಅಲಿ ಖಾನ್ ಪಟೌಡಿ ದ್ವಿತೀಯ ಸ್ಥಾನದಲ್ಲಿ ಇದ್ದಾರೆ. 21 ವರ್ಷ 77 ದಿನ ವಯಸ್ಸಿನವರಾಗಿದ್ದಾಗ ಪಟೌಡಿ ಟೆಸ್ಟ್ ಪಂದ್ಯವೊಂದರಲ್ಲಿ ಭಾರತ ತಂಡದ ನಾಯಕತ್ವ ವಹಿಸಿದ್ದರು.

ವಾಕರ್ ಯೂನಿಸ್ 3ನೇ

ವಾಕರ್ ಯೂನಿಸ್ 3ನೇ

ಇನ್ನು ಅತೀ ಕಿರಿಯ ಟೆಸ್ಟ್ ನಾಯಕರ ಸಾಲಿನಲ್ಲಿ ಪಾಕಿಸ್ತಾನ ತಂಡದ ವಾಕರ್ ಯೂನಿಸ್ ತೃತೀಯ (22 ವರ್ಷ, 15 ದಿನ), ದಕ್ಷಿಣ ಆಫ್ರಿಕಾದ ಗ್ರೇಮ್ ಸ್ಮಿತ್ 4ನೇ (22 ವರ್ಷ, 82 ದಿನ), ಬಾಂಗ್ಲಾ ದೇಶದ ಶಕೀಬ್ ಅಲ್ ಹಸನ್ 5ನೇ (22 ವರ್ಷ, 115 ದಿನ) ಸ್ಥಾನ ಪಡೆದುಕೊಂಡಿದ್ದಾರೆ.

Story first published: Wednesday, September 4, 2019, 17:22 [IST]
Other articles published on Sep 4, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X