ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ತಲೆಗೆ ಬಿದ್ದ ಬೌನ್ಸರ್‌ ಪೆಟ್ಟಿನಿಂದ ಚೇತರಿಸಿದ ರಶೀದ್‌ ಖಾನ್‌!

Rashid Khan recovering well, says Afghan captain Naib

ಲಂಡನ್‌, ಜೂನ್‌ 09: ಅಫಘಾನಿಸ್ತಾನದ ಸ್ಟಾರ್‌ ಲೆಗ್‌ ಸ್ಪಿನ್ನರ್‌ ರಶೀದ್‌ ಖಾನ್‌ ಫಿಟ್ನೆಸ್‌ಗೆ ಮರಳಿದ್ದು ಮುಂದಿನ ಪಂದ್ಯವನ್ನು ಆಡಲು ಸಂಪೂರ್ಣ ಫಿಟ್‌ ಆಗಿದ್ದಾರೆ ಎಂದು ನಾಯಕ ಗುಲ್ಬದಿನ್‌ ನೈಬ್‌ ಹೇಳಿದ್ದಾರೆ.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ

ನ್ಯೂಜಿಲೆಂಡ್‌ ವಿರುದ್ಧದ ಪಂದ್ಯದ ವೇಳೆ ಕಿವೀಸ್‌ನ ವೇಗಿ ಲಾಕಿ ಫರ್ಗ್ಯೂಸನ್‌ ಅವರ ಬೌನ್ಸರ್‌ನಲ್ಲಿ ತಲೆಗೆ ಪೆಟ್ಟುತಿಂದ ರಶೀದ್‌ ಖಾನ್‌ ಬಳಿಕ ಬೌಲಿಂಗ್‌ ಮಾಡಿರಲಿಲ್ಲ. ಹೀಗಾಗಿ ಸ್ಟಾರ್‌ ಲೆಗ್‌ ಸ್ಪಿನ್ನರ್‌ ಅವರ ಫಿಟ್ನೆಸ್‌ ಕುರಿತಾಗಿ ಆಫ್ಘನ್‌ ಪಾಳಯದಲ್ಲಿ ಆತಂಕ ಹೆಚ್ಚಾಗಿತ್ತು.

ಇಂಡೊ-ಆಸೀಸ್‌ ಕದನ: ನೆನಪಿನಾಳ ಕೆದಕಿದ ಸಚಿನ್‌ ತೆಂಡೂಲ್ಕರ್‌!ಇಂಡೊ-ಆಸೀಸ್‌ ಕದನ: ನೆನಪಿನಾಳ ಕೆದಕಿದ ಸಚಿನ್‌ ತೆಂಡೂಲ್ಕರ್‌!

"ಅವರು ಈಗ ಚೇತರಿಸಿದ್ದಾರೆ. ಹೊಡೆದ ಬಳಿಕ ವೈದ್ಯರು ಅವರಿಗೆ ಆಡದಂತೆ ಸೂಚಿಸಿದ್ದರಿಂದ ಬೌಲಿಂಗ್‌ ಮಾಡಲು ಮುಂದಾಗಲಿಲ್ಲ.. ಆದರೀಗ ಅವರ ಸ್ಥಿತಿ ಉತ್ತಮವಾಗುತ್ತಿದೆ. ಅವರಿಗೆ ವಿಶ್ರಾಂತಿಯ ಅಗತ್ಯವಿತ್ತು. ಮುಂದಿನ ಪಂದ್ಯದಕ್ಕೆ ಇನ್ನು ಎರಡು ದಿನಗಳ ಸಮಯವಿದ್ದು, ರಶೀದ್‌ ಸುಧಾರಿಸಲಿದ್ದಾರೆ,'' ಎಂದು ಗುಲ್ಬದಿನ್‌ ನೈಬ್‌ ಸುದ್ದಿಗಾರರಿಗೆ ತಿಳಿಸಿದ್ದಾರೆ.

ವಿಶ್ವ ದಾಖಲೆ ಬರೆದ ಮಿಚೆಲ್‌ ಸ್ಟಾರ್ಕ್‌ಗೆ ಹೊಸ ನಿಕ್‌ ನೇಮ್‌!ವಿಶ್ವ ದಾಖಲೆ ಬರೆದ ಮಿಚೆಲ್‌ ಸ್ಟಾರ್ಕ್‌ಗೆ ಹೊಸ ನಿಕ್‌ ನೇಮ್‌!

ಹೆಲ್ಮೆಟ್‌ಗೆ ಬಡಿದ ಚೆಂಡು ಬಳಿಕ ಸ್ಟಂಪ್ಸ್‌ಗೆ ತಾಗಿತ್ತು. ಬೌನ್ಸರ್‌ ಹೊಡೆತದಿಂದ ರಶೀದ್‌ ಬೆಚ್ಚಿದ್ದರು. ಬಳಿಕ ಅವರನ್ನು ಕೂಡಲೇ ಡ್ರೆಸಿಂಗ್‌ ರೂಮ್‌ಗೆ ಕರೆದೊಯ್ಯಲಾಗಿತ್ತು. ಬಳಿಕ ರಶೀದ್‌ ಅವರ ಪ್ರಜ್ಞೆ ಪರೀಕ್ಷಿಸಲಾಗಿತ್ತು. ಇದರಲ್ಲಿ ಅವರ ಸ್ಥಿತಿ ಉತ್ತಮವಾಗಿರದ ಕಾರಣ ಪಂದ್ಯದಲ್ಲಿ ಅವರು ಬೌಲಿಂಗ್‌ ಮಾಡಲು ಮುಂದಾಗಲಿಲ್ಲ. ಇದರಿಂದಾಗಿ ವಿಶ್ವಕಪ್‌ನಲ್ಲಿ ಉಳಿದ ಪಂದ್ಯಗಳಲ್ಲಿ ರಶೀದ್‌ ಆಡುತ್ತಾರೆಯೇ ಇಲ್ಲವೆ ಎಂಬ ಆತಂಕ ಶುರುವಾಗಿತ್ತು.

ವಿಶ್ವಕಪ್‌ನಲ್ಲಿ ವಿಶೇಷ ದಾಖಲೆ ಬರೆದ ಆಸೀಸ್‌ನ ನೇಥನ್‌ ಕೌಲ್ಟರ್‌ ನೈಲ್‌!ವಿಶ್ವಕಪ್‌ನಲ್ಲಿ ವಿಶೇಷ ದಾಖಲೆ ಬರೆದ ಆಸೀಸ್‌ನ ನೇಥನ್‌ ಕೌಲ್ಟರ್‌ ನೈಲ್‌!

ಅಫಘಾನಿಸ್ತಾನ ತಂಡ ಜೂನ್‌ 15ರಂದು ದಕ್ಷಿಣ ಆಫ್ರಿಕಾ ವಿರುದ್ಧ ತನ್ನ ಮುಂದಿನ ಪಂದ್ಯವನ್ನಾಡಲಿದ್ದು, ಅಲ್ಲಿ ವರೆಗೆ ರಶೀದ್‌ ಖಾನ್‌ ಮತ್ತಷ್ಟು ಪರೀಕ್ಷೆಗಳಿಗೆ ಒಳಪಡಲಿದ್ದಾರೆ ಎಂದು ನೈಬ್‌ ವಿವರಿಸಿದ್ದಾರೆ.

ಎಬಿ ಡಿ'ವಿಲಿಯರ್ಸ್‌ ಸೇವೆ ತಿರಸ್ಕರಿಸಿದ್ದಕ್ಕೆ ಕಾರಣಕೊಟ್ಟ ದಕ್ಷಿಣ ಆಫ್ರಿಕಾ!ಎಬಿ ಡಿ'ವಿಲಿಯರ್ಸ್‌ ಸೇವೆ ತಿರಸ್ಕರಿಸಿದ್ದಕ್ಕೆ ಕಾರಣಕೊಟ್ಟ ದಕ್ಷಿಣ ಆಫ್ರಿಕಾ!

"ಮುಂದಿನ ಪಂದ್ಯಕ್ಕೆ ಇನ್ನು ಒಂದು ವಾರ ಸಮಯವಿದೆ. ರಶೀದ್‌ ವಿಶ್ರಾಂತಿ ತೆಗೆದುಕೊಳ್ಳಲಿದ್ದು, ಕೆಲ ತಪಾಸಣೆಗಳಿಗಾಗಿ ಆಸ್ಪತ್ರೆಗೆ ತೆರಳಲಿದ್ದಾರೆ. ನಾವು ಅಫಘಾನಿಸ್ತಾನ ಮಂದಿ ಬಹಳ ಗಟ್ಟಿಮುಟ್ಟಾಗಿದ್ದೇವೆ. ಇವೆಲ್ಲವೂ ನಮಗೆ ಸಣ್ಣ ಸಂಗತಿ,'' ಎಂದು ನೈಬ್‌ ಹೇಳಿದ್ದಾರೆ.

Story first published: Sunday, June 9, 2019, 16:46 [IST]
Other articles published on Jun 9, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X