ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬಾಂಗ್ಲಾದೇಶ ಪ್ರವಾಸಕ್ಕೆ ಅಫ್ಘಾನಿಸ್ತಾನ ತಂಡಕ್ಕೆ ರಶೀದ್ ಖಾನ್ ನಾಯಕ

Rashid Khan to captain Afghanistan in Bangladesh tour

ಕಾಬುಲ್, ಆಗಸ್ಟ್ 21: ಬಾಂಗ್ಲಾದೇಶ ಪ್ರವಾಸ ಸರಣಿಯ ವೇಳೆ ಅಫ್ಘಾನಿಸ್ತಾನ ಕ್ರಿಕೆಟ್ ತಂಡವನ್ನು ಸ್ಟಾರ್ ಸ್ಪಿನ್ನರ್ ರಶೀದ್ ಖಾನ್ ಮುನ್ನಡೆಸಲಿದ್ದಾರೆ. ಅಫ್ಘಾನಿಸ್ತಾನ ಕ್ರಿಕೆಟ್ ಬೋರ್ಡ್ ಈ ವಿಚಾರವನ್ನು ಮಂಗಳವಾರ (ಆಗಸ್ಟ್ 20) ತಿಳಿಸಿದೆ.

ಕೆಪಿಎಲ್ 2019: ಬೆಂಗಳೂರು ಬ್ಲಾಸ್ಟರ್ಸ್ ಮಣಿಸಿದ ಶಿವಮೊಗ್ಗ ಲಯನ್ಸ್ಕೆಪಿಎಲ್ 2019: ಬೆಂಗಳೂರು ಬ್ಲಾಸ್ಟರ್ಸ್ ಮಣಿಸಿದ ಶಿವಮೊಗ್ಗ ಲಯನ್ಸ್

ಕಳೆದ ತಿಂಗಳು ಇಂಗ್ಲೆಂಡ್ ಮತ್ತು ವೇಲ್ಸ್‌ನಲ್ಲಿ ನಡೆದಿದ್ದ ವಿಶ್ವಕಪ್‌ ಟೂರ್ನಿಯಲ್ಲಿ ಅಫ್ಘಾನಿಸ್ತಾನ ತಂಡ ಒಂದೂ ಪಂದ್ಯವನ್ನು ಗೆದ್ದಿರಲಿಲ್ಲ. ಗುಲ್ಬಾದಿನ ನೈನ್ ಆ ಟೂರ್ನಿಯಲ್ಲಿ ನಾಯಕತ್ವ ವಹಿಸಿದ್ದರು. ವಿಶ್ವಕಪ್ ಮುಕ್ತಾಯಗೊಳ್ಳುತ್ತಲೇ ಅಫ್ಘಾನ್ ಕ್ರಿಕೆಟ್‌ ತಂಡದಲ್ಲಿ ನಾಯಕನ ಬದಲಾವಣೆಯಾಗಿತ್ತು.

ಬಾಂಗ್ಲಾದೇಶಕ್ಕೆ ಪ್ರವಾಸ ಕೈಗೊಳ್ಳಲಿರುವ ಅಫ್ಘಾನ್, ಸೆಪ್ಟೆಂಬರ್ 5-9ರಂದು ಆತಿಥೇಯರ ವಿರುದ್ಧ ಏಕಮಾತ್ರ ಟೆಸ್ಟ್ ಆಡಲಿದೆ. ಆ ಬಳಿಕ ಬಾಂಗ್ಲಾ-ಅಫ್ಘಾನ್ ಮತ್ತು ಜಿಂಬಾಬ್ವೆ ನಡುವೆ ಟಿ20 ತ್ರಿಕೋನ ಸರಣಿ ಪಂದ್ಯಗಳು ನಡೆಯಲಿವೆ.

ನಿಷೇಧದ ಪ್ರಮಾಣ ಇಳಿಕೆ: ವೇಗಿ ಶ್ರೀಶಾಂತ್‌ಗೆ 'ಜೀವದಾನ'ನಿಷೇಧದ ಪ್ರಮಾಣ ಇಳಿಕೆ: ವೇಗಿ ಶ್ರೀಶಾಂತ್‌ಗೆ 'ಜೀವದಾನ'

ಏಕಮಾತ್ರ ಟೆಸ್ಟ್‌ಗೆ ಅಫ್ಘಾನ್ ತಂಡ: ರಶೀದ್ ಖಾನ್ (ಸಿ), ಇಹ್ಸನುಲ್ಲಾ ಜನತ್, ಜಾವಿದ್ ಅಹ್ಮದಿ, ಇಬ್ರಾಹಿಂ ಖದ್ರಾನ್, ರಹಮತ್ ಷಾ, ಹಶ್ಮತುಲ್ಲಾ ಶಾಹಿದಿ, ಅಸ್ಗರ್ ಅಫಘಾನ್, ಇಕ್ರಮ್ ಅಲಿಖಿಲ್, ಮೊಹಮ್ಮದ್ ನಬಿ, ಖೈಸ್ ಅಹ್ಮದ್, ಸಯ್ಯದ್ ಅಹ್ಮದ್ ಶಿರ್ಜಾದ್, ಯಾಮಿನ್ ಅಹ್ಮಾದ್, ಝಹೀರ್ ಖಾನ್ ಪಕ್ತೀನ್, ಅಫ್ಸರ್ ಝಝಯ್, ಶಪೂರ್ ಝದ್ರನ್.

ತ್ರಿಕೋನ ಟಿ20ಗೆ ಅಫ್ಘಾನ್ ತಂಡ: ರಶೀದ್ ಖಾನ್ (ಸಿ), ಅಸ್ಗರ್ ಅಫಘಾನ್, ಮೊಹಮ್ಮದ್ ನಬಿ, ಹಜರತುಲ್ಲಾ ಝಝಾಯ್, ನಜೀಬ್ ತಾರಕೈ, ರಹಮಾನುಲ್ಲಾ ಗುರ್ಬಾಜ್, ಮುಜೀಬ್ ಉರ್ ರಹಮಾನ್, ಶಫಿಕುಲ್ಲಾ ಶಫಾಕ್, ನಜೀಬ್ ಖಾದ್ರಾನ್, ಶಾಹಿದುಲ್ಲಾ ಕಮಲ್, ಕರೀಮ್ ಜನತ್, ಗುಲ್ಬಾದೀನ್ ನೈಬ್, ಫರೀದ್ ಅಹ್ಮದ್ ಮಲಿಕ್, ಶರಾಫುದ್ದೀನ್ ಅಶ್ರಫ್, ಫಜಲ್ ನಯಾಜೈ, ದೌಲತ್ ಝದ್ರನ್ ಮತ್ತು ನವೀನ್ ಉಲ್ ಹಕ್.

Story first published: Wednesday, August 21, 2019, 10:51 [IST]
Other articles published on Aug 21, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X