ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅಫ್ಘಾನಿಸ್ತಾನ ಹಿಂಸಾಚಾರ: ರಶೀದ್ ಖಾನ್ ಸಂಕಷ್ಟವನ್ನು ಬಿಚ್ಚಿಟ್ಟ ಕೆವಿನ್ ಪೀಟರ್ಸನ್

Rashid Khan worried and he cant get his family out of Afghanistan says Kevin Pietersen

ಕೆಲ ದಿನಗಳಿಂದ ನೆರೆರಾಷ್ಟ್ರ ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಹಿಂಸಾಚಾರ ಮತ್ತು ಅಮಾಯಕ ಜನರ ಹತ್ಯೆಯ ಕುರಿತು ನೀವೆಲ್ಲಾ ಓದಿರುತ್ತೀರಾ. ತಾಲಿಬಾನ್ ಉಗ್ರರು ಅಫ್ಘಾನಿಸ್ತಾನದ ಸುಮಾರು 400ಕ್ಕೂ ಹೆಚ್ಚು ಜಿಲ್ಲೆಗಳನ್ನು ವಶಪಡಿಸಿಕೊಂಡಿದ್ದು ಕಾಬೂಲ್ ನಗರವನ್ನು ಸಹ ತಮ್ಮ ಕೈಗೆ ತೆಗೆದುಕೊಂಡಿದ್ದಾರೆ.

ಇಂಗ್ಲೆಂಡ್ ವಿರುದ್ಧ ಭಾರತ ಸೋತರೆ ಆ ಒಬ್ಬ ಆಟಗಾರ ತಂಡದಲ್ಲಿ ಇಲ್ಲದಿರುವುದೇ ಕಾರಣ ಎಂದ ಶೇನ್ ವಾರ್ನ್!ಇಂಗ್ಲೆಂಡ್ ವಿರುದ್ಧ ಭಾರತ ಸೋತರೆ ಆ ಒಬ್ಬ ಆಟಗಾರ ತಂಡದಲ್ಲಿ ಇಲ್ಲದಿರುವುದೇ ಕಾರಣ ಎಂದ ಶೇನ್ ವಾರ್ನ್!

ಹೀಗೆ ದಿನದಿಂದ ದಿನಕ್ಕೆ ಅಫ್ಘಾನಿಸ್ತಾನದಲ್ಲಿ ಹಿಂಸಾಚಾರ ಹೆಚ್ಚುತ್ತಿದ್ದು ಅಮಾಯಕರ ಸಾವಿನ ಸಂಖ್ಯೆ ಕೂಡ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಲೇ ಇದೆ. ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ತಾಲಿಬಾನ್ ಉಗ್ರರ ಹಿಂಸಾಚಾರದಿಂದ ಅಫ್ಘಾನಿಸ್ತಾನ ಕ್ರಿಕೆಟ್ ಹೊರತಾಗಿಲ್ಲ. ಈಗಾಗಲೇ ಕೆಲ ಕ್ರಿಕೆಟಿಗರು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದು ಬಾಂಗ್ಲಾದೇಶ ತಂಡದ ಸ್ಟಾರ್ ಆಟಗಾರ ರಶೀದ್ ಖಾನ್ ಅವರ ಕುಟುಂಬ ಇದೀಗ ಚಿಂತಾಜನಕ ಪರಿಸ್ಥಿತಿಯನ್ನು ಎದುರಿಸುತ್ತಿದೆ.

ಇಡೀ ದೇಶದ ಜನರೇ ತಾಲಿಬಾನ್ ಉಗ್ರರ ಅಟ್ಟಹಾಸಕ್ಕೆ ನಲುಗಿ ಹೋಗಿದ್ದಾರೆ ಮತ್ತು ರಶೀದ್ ಖಾನ್ ಅವರ ಕುಟುಂಬದ ಸದಸ್ಯರು ಸಹ ಅಫ್ಘಾನಿಸ್ತಾನದಲ್ಲಿ ನೆಲೆಸಿದ್ದು ಇದೀಗ ಯುಕೆಯಲ್ಲಿ ನಡೆಯುತ್ತಿರುವ ಹಂಡ್ರೆಡ್ ಕ್ರಿಕೆಟ್ ಲೀಗ್‌ನಲ್ಲಿ ಅಫ್ಘಾನಿಸ್ತಾನದ ಕ್ರಿಕೆಟಿಗ ರಶೀದ್ ಖಾನ್ ಭಾಗವಹಿಸಿದ್ದಾರೆ. ಹೀಗಾಗಿ ಸದ್ಯ ಇಂಗ್ಲೆಂಡ್‌ನಲ್ಲಿ ಹಂಡ್ರೆಡ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ನಿರತರಾಗಿರುವ ರಶೀದ್ ಖಾನ್ ತಮ್ಮ ತವರು ದೇಶವಾದ ಅಫ್ಘಾನಿಸ್ತಾನದಲ್ಲಿರುವ ತಮ್ಮ ಕುಟುಂಬ ಸದಸ್ಯರು ಹೇಗಿದ್ದಾರೆ ಮತ್ತು ಹಿಂಸಾಚಾರದಿಂದ ತಪ್ಪಿಸಿಕೊಂಡು ಸುರಕ್ಷಿತರಾಗಿದ್ದಾರಾ ಎಂಬ ಭಯ ಸದ್ಯ ರಶೀದ್ ಖಾನ್‌ನ್ನು ತೀವ್ರವಾಗಿ ಕಾಡುತ್ತಿದೆ.

'ಲಾರ್ಡ್ಸ್ ಏನು ನಿನ್ನ ಮನೆಯಲ್ಲ'; ಮೈದಾನದಲ್ಲೇ ಕಿತ್ತಾಟಕ್ಕಿಳಿದ ಕೊಹ್ಲಿ ಮತ್ತು ಆಂಡರ್‌ಸನ್‌!'ಲಾರ್ಡ್ಸ್ ಏನು ನಿನ್ನ ಮನೆಯಲ್ಲ'; ಮೈದಾನದಲ್ಲೇ ಕಿತ್ತಾಟಕ್ಕಿಳಿದ ಕೊಹ್ಲಿ ಮತ್ತು ಆಂಡರ್‌ಸನ್‌!

ಸದ್ಯ ಇಂಗ್ಲೆಂಡ್ ತಂಡದ ಮಾಜಿ ಆಟಗಾರ ಕೆವಿನ್ ಪೀಟರ್ಸನ್ ಅಫ್ಘಾನಿಸ್ತಾನದಲ್ಲಿ ರಶೀದ್ ಖಾನ್ ಕುಟುಂಬ ಎದುರಿಸುತ್ತಿರುವ ಹಿಂಸಾಚಾರದ ಸಮಸ್ಯೆಗಳ ಕುರಿತು ರಶೀದ್ ಖಾನ್ ಯಾವ ರೀತಿ ಭಯಪಡುತ್ತಿದ್ದಾರೆ ಎಂಬುದನ್ನು ಬಿಚ್ಚಿಟ್ಟಿದ್ದಾರೆ. ಹಂಡ್ರೆಡ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಟ್ರೆಂಟ್ ರಾಕೆಟ್ಸ್ ತಂಡದ ಪರ ಆಡುತ್ತಿರುವ ರಶೀದ್ ಖಾನ್ ಇಂಗ್ಲೆಂಡ್ ತಂಡದ ಮಾಜಿ ಆಟಗಾರ ಕೆವಿನ್ ಪೀಟರ್ಸನ್ ಜೊತೆ ಅಫ್ಘಾನಿಸ್ತಾನದಲ್ಲಿ ಉಂಟಾಗಿರುವ ಹಿಂಸಾಚಾರದ ಕುರಿತು ಮಾತನಾಡಿದ್ದಾರೆ ಮತ್ತು ತಮ್ಮ ಕುಟುಂಬ ಯಾವ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದೆ ಎಂಬುದರ ಕುರಿತು ಸಹ ರಶೀದ್ ಖಾನ್ ಹೇಳಿಕೊಂಡಿದ್ದಾರೆ.

ರಶೀದ್ ಖಾನ್ ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಹಿಂಸಾಚಾರದ ಕುರಿತು ತುಂಬಾನೇ ತಲೆಕೆಡಿಸಿಕೊಂಡಿದ್ದಾರೆ. ಅದರಲ್ಲಿಯೂ ಸದಾ ತಮ್ಮ ಕುಟುಂಬದ ಕುರಿತು ಯೋಚಿಸುವ ರಶೀದ್ ಖಾನ್ ತಮ್ಮ ಕುಟುಂಬ ಸದಸ್ಯರಿಗೆ ಯಾವುದೇ ರೀತಿಯ ಆಪತ್ತು ಬರದೇ ಇದ್ದರೆ ಸಾಕು ಎಂದು ಯೋಚಿಸುತ್ತಲೇ ಇರುತ್ತಾರೆ. ಇಷ್ಟೆಲ್ಲಾ ಯೋಚನೆಗಳು ತಲೆಯಲ್ಲಿದ್ದರೂ ಸಹ ಆಟದ ವಿಷಯ ಬಂದರೆ ಉತ್ತಮ ಪ್ರದರ್ಶನವನ್ನು ರಶೀದ್ ಖಾನ್ ನೀಡುತ್ತಿದ್ದಾರೆ. ವೈಯಕ್ತಿಕವಾಗಿ ಎಷ್ಟೇ ಸಮಸ್ಯೆಗಳಿದ್ದರೂ ಸಹ ಹಿಂಜರಿಯದೆ ಆಟದಲ್ಲಿ ಪಾಲ್ಗೊಂಡು ತನ್ನ ತಂಡದ ಪರ ಶ್ರಮವಹಿಸಿ ಆಟವನ್ನು ಆಡುತ್ತಿರುವ ರಶೀದ್ ಖಾನ್ ಮೇಲೆ ಗೌರವ ದುಪ್ಪಟ್ಟಾಗಿದೆ ಎಂದು ಕೆವಿನ್ ಪೀಟರ್ಸನ್ ಹೇಳಿಕೊಂಡಿದ್ದಾರೆ.

ಸಮಸ್ಯೆಯ ಸುಳಿಯಲ್ಲಿ ಭಾರತ!; ಈ ಆಟಗಾರರ ಮೇಲೆ ನಿಂತಿದೆ ಎರಡನೇ ಟೆಸ್ಟ್ ಫಲಿತಾಂಶಸಮಸ್ಯೆಯ ಸುಳಿಯಲ್ಲಿ ಭಾರತ!; ಈ ಆಟಗಾರರ ಮೇಲೆ ನಿಂತಿದೆ ಎರಡನೇ ಟೆಸ್ಟ್ ಫಲಿತಾಂಶ

ಐಪಿಎಲ್ ಅಭಿಮಾನಿಗಳಿಗೆ ಸಿಹಿ ಸುದ್ದಿ! | Oneindia Kannada

ಅಷ್ಟೇ ಅಲ್ಲದೆ ಇತ್ತೀಚೆಗಷ್ಟೇ ತಮ್ಮ ದೇಶವನ್ನು ತಾಲಿಬಾನ್ ಉಗ್ರರು ಆಕ್ರಮಿಸಿಕೊಂಡಿರುವುದರ ಕುರಿತು ಇತರ ದೊಡ್ಡ ರಾಷ್ಟ್ರಗಳ ಪ್ರಧಾನ ಮಂತ್ರಿ ಮತ್ತು ಅಧ್ಯಕ್ಷರುಗಳಲ್ಲಿ ಬೇಡಿಕೆಯನ್ನಿಟ್ಟಿದ್ದ ರಶೀದ್ ಖಾನ್ ಹೇಗಾದರೂ ಮಾಡಿ ತಮ್ಮ ಅಫ್ಘಾನಿಸ್ತಾನ ದೇಶವನ್ನು ಉಳಿಸಿಕೊಡಿ ಎಂದು ಬೇಡಿಕೊಂಡಿದ್ದರು. ಅಮಾಯಕ ಜನರು ಉಗ್ರರ ಕೈಗೆ ಸಿಕ್ಕು ಸಾವನ್ನಪ್ಪುತ್ತಿದ್ದಾರೆ, ದಿನೇದಿನೆ ಹಿಂಸಾಚಾರ ಮುಗಿಲು ಮುಟ್ಟುತ್ತಿದೆ ಹೀಗಾಗಿ ಅಫ್ಘಾನಿಸ್ತಾನಕ್ಕೆ ನಿಮ್ಮಂತಹ ದೊಡ್ಡ ರಾಷ್ಟ್ರಗಳ ಸಹಾಯ ಬೇಕು ಎಂದು ರಶೀದ್ ಖಾನ್ ಮನವಿ ಮಾಡಿಕೊಂಡಿದ್ದರು.

Story first published: Monday, August 16, 2021, 14:37 [IST]
Other articles published on Aug 16, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X