ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020: ಕೊಹ್ಲಿ-ಪಾಂಟಿಂಗ್ ಮಧ್ಯೆ ನಡೆದ ವಾಗ್ವಾದದ ಘಟನೆ ಬಹಿರಂಗಪಡಿಸಿದ ಆರ್ ಅಶ್ವಿನ್

Ravi Ashwin explains Virat Kohli and Ricky Ponting were involved in heated altercation on field

ಡೆಲ್ಲಿ ಕ್ಯಾಪಿಟಲ್ಸ್ ತಂಡದ ಹಿರಿಯ ಸ್ಪಿನ್ನರ್ ಆರ್ ಅಶ್ವಿನ್ ಐಪಿಎಲ್‌ನಲ್ಲಿ ನಡೆದ ಕುತೂಹಲಕಾರು ಘಟನೆಯೊಂದನ್ನು ಬಹಿರಂಗಪಡಿಸಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ನಡುವಿನ ಕದನದ ಸಂದರ್ಭದಲ್ಲಿ ಇಬ್ಬರು ದಿಗ್ಗಜರ ನಡುವೆ ವಾಗ್ವಾದ ನಡೆದಿತ್ತು ಎಂದಿದ್ದಾರೆ. ಈ ಘಟನೆಯ ಬಗ್ಗೆ ಅಶ್ವಿನ್ ವಿವರವಾಗಿ ಮಾಹಿತಿ ನೀಡಿದ್ದಾರೆ.

ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕೋಚ್ ರಿಕಿ ಪಾಂಟಿಂಗ್ ಮಧ್ಯೆಯೇ ಈ ವಾಗ್ವಾದ ನಡೆದಿತ್ತು ಎಂಬ ವಿಚಾರವನ್ನು ಅಶ್ವಿನ್ ತಿಳಿಸಿದ್ದಾರೆ. ಐಪಿಎಲ್ ಫೈನಲ್ ಪಂದ್ಯದ ಬಳಿಕ ತಮ್ಮ ಯುಟ್ಯೂಬ್ ಚಾನೆಲ್‌ನಲ್ಲಿ ಆರ್‌ ಅಶ್ವಿನ್ ಮಾತನಾಡಿದ್ದು ಘಟನೆಯನ್ನು ಬಹಿರಂಗಪಡಿಸಿದ್ದಾರೆ.

'ರೋಹಿತ್ ಯಾವತ್ತೂ ಜವಾಬ್ದಾರಿಯನ್ನು ತಲೆಗೆ ಹೊತ್ತುಕೊಳ್ಳುತ್ತಿರಲಿಲ್ಲ''ರೋಹಿತ್ ಯಾವತ್ತೂ ಜವಾಬ್ದಾರಿಯನ್ನು ತಲೆಗೆ ಹೊತ್ತುಕೊಳ್ಳುತ್ತಿರಲಿಲ್ಲ'

ಹಾಗಾದರೆ ಅಂದು ನಡೆದಿದ್ದೇನು? ಯಾವ ವಿಚಾರವಾಗಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿತ್ತು? ಮುಂದಿ ಓದಿ

ಎರಡನೇ ಮುಖಾಮುಖಿಯಲ್ಲಿ ಘಟನೆ

ಎರಡನೇ ಮುಖಾಮುಖಿಯಲ್ಲಿ ಘಟನೆ

ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ಹಾಗೂ ಆರ್‌ಸಿಬಿ ತಂಡಗಳು ಎರಡು ಬಾರಿ ಮುಖಾಮುಖಿಯಾಗಿದ್ದವು. ಮೊದಲ ಪಂದ್ಯದಲ್ಲಿ ಆರ್‌ಸಿಬಿಯನ್ನು ಡೆಲ್ಲಿ 59 ರನ್ ಗಳಿಂದ ಮಣಿಸಿತ್ತು. ಎರಡನೇ ಪಂದ್ಯದಲ್ಲಿ ಡೆಲ್ಲಿ 6 ವಿಕೆಟ್‌ಗಳ ಗೆಲುವನ್ನು ಕಂಡಿತ್ತು. ಈ ಎರಡು ಪಂದ್ಯಗಳಲ್ಲೂ ಯಾವುದೇ ವಿವಾದಗಳು ನಡೆಯಲಿಲ್ಲ. ಆದರೆ ಎರಡನೇ ಪಂದ್ಯದ ಸಂದರ್ಭದಲ್ಲಿ ಪಾಂಟಿಂಗ್ ಹಾಗೂ ಕೊಹ್ಲಿ ಮಧ್ಯೆ ವಾಗ್ವಾದ ನಡೆದಿತ್ತು.

ಅಶ್ವಿನ್ ವಿಚಾರವಾಗಿಯೇ ನಡೆಯಿತು ಚಕಮಕಿ

ಅಶ್ವಿನ್ ವಿಚಾರವಾಗಿಯೇ ನಡೆಯಿತು ಚಕಮಕಿ

ಆರ್ ಅಶ್ವಿನ್ ಈ ವಿಚಾರವನ್ನು ವಿವರಿಸಲು ಮತ್ತೊಂದು ಮುಖ್ಯ ಕಾರಣವೆಂದರೆ ಈ ಘಟನೆಗೆ ತಾವು ಸಾಕ್ಷಿಯಾಗಿದ್ದರು. ಅಶ್ವಿನ್ ವಿಚಾರದಲ್ಲೇ ಇಬ್ಬರು ಪರಸ್ಪರ ಮಾತುಗಳನ್ನು ಹಂಚಿಕೊಂಡಿದ್ದರು. ಪಂದ್ಯದ ಮಧ್ಯೆ ಅಂಗಳವನ್ನು ತೊರೆಯುವ ವೇಳೆ ಅದಕ್ಕಾಗಿ ಆರ್‌ಸಿಬಿ ಪ್ರಶ್ನಿಸಿದಾಗ ಕೋಚ್ ಪಾಂಟಿಂಗ್ ಆರ್‌ಸಿಬಿ ನಾಯಕನಿಗೆ ಪ್ರತ್ಯುತ್ತರವನ್ನು ನೀಡಿದ್ದರು ಎಂದಿದ್ದಾರೆ. ಈ ಘಟನೆ ಸ್ಟ್ರಾಟಜಿಕ್ ಟೈಮ್‌ಔಟ್‌ ವೇಳೆ ನಡೆದಿತ್ತು.

ಬಿಸಿಯೇರಿದ ಸಂದರ್ಭ

"ಓಡುವ ವೇಳೆ ನನಗೆ ಬೆನ್ನು ನೋವು ಉಂಟಾಗಿತ್ತು. ಹೀಗಾಗಿ ಅಸಾದ್ಯ ನೋವು ಕಾಣಿಸಿಕೊಂಡಿತ್ತು. ಅವರು ಎಂಆರ್‌ಐ ಸ್ಕ್ಯಾನ್‌ಗಳನ್ನು ಮಾಡಿದ್ದಾಗ ನರಗಳು ಎಳೆದುಕೊಂಡಿದ್ದು ಕಂಡುಬಂದಿತ್ತು. ಹೀಗಾಗಿ ಬೌಲಿಂಗ್ ಮುಗಿದ ನಂತರ ನಾನು ಅಂಗಳ ತೊರೆದೆ. ಇದನ್ನು ಆರ್‌ಸಿಬಿ ಪ್ರಶ್ನಿಸಿತು. ನಿಮಗೆ ತಿಳಿದಿರುವಂತೆ ರಿಕಿ ಪಾಂಟಿಂಗ್ ವಾಗ್ವಾದದಲ್ಲಿ ಸುಮ್ಮನಿರುವವರಲ್ಲ. ತಿರುಗಿ ಆರ್‌ಸಿಬಿ ನಾಯಕನಿಗೆ ನಾವು ಆ ರೀತಿ ಅಲ್ಲ ಎನ್ನುತ್ತಾ ಕೆಲ ಮಾತುಗಳನ್ನು ಹೇಳಿದರು. ಆ ಬಿಸಿಯೇರಿದ ಕ್ಷಣದಲ್ಲಿ ಇದು ನಡೆದಿತ್ತು" ಎಂದು ಅಶ್ವಿನ್ ವಿವರಿಸಿದ್ದಾರೆ.

ಕೊಹ್ಲಿಗೆ ಬೌಲಿಂಗ್ ಮಾಡುವುದು ಇಷ್ಟ

ಕೊಹ್ಲಿಗೆ ಬೌಲಿಂಗ್ ಮಾಡುವುದು ಇಷ್ಟ

ಈ ಪಂದ್ಯದಲ್ಲಿ ಆರ್ ಅಶ್ವಿನ್ ವಿರಾಟ್ ಕೊಹ್ಲಿಯನ್ನು ಮೊದಲ ಬಾರಿಗೆ ಐಪಿಎಲ್‌ನಲ್ಲಿ ಔಟ್ ಮಾಡಿದರು. ಈ ಸಂದರ್ಭದಲ್ಲಿ ಅಶ್ವಿನ್ ವಿರಾಟ್ ಕೊಹ್ಲಿಗೆ ಬೌಲಿಂಗ್ ಮಾಡುವುದು ನನಗೆ ತುಂಬಾ ಇಷ್ಟ. ನನ್ನ ವಿರುದ್ಧ ಆತ ಯಾವುದೇ ಅವಕಾಶ ತೆಗೆದುಕೊಳ್ಳುವುದಿಲ್ಲ ಎಂದಿದ್ದಾರೆ.

Story first published: Thursday, November 12, 2020, 11:07 [IST]
Other articles published on Nov 12, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X