ವಿರಾಟ್ ಕೊಹ್ಲಿ-ರವಿಶಾಸ್ತ್ರಿ ಜೋಡಿಯ ಯಶಸ್ಸಿಗೆ ಕಾರಣ ಹೇಳಿದ ಆಶಿಶ್ ನೆಹ್ರಾ

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಕೋಚ್ ರವಿ ಶಾಸ್ತ್ರಿ ಇಬ್ಬರ ಸಹಭಾಗಿತ್ವ ಟೀಮ್ ಇಂಡಿಯಾ ಪಾಲಿಗೆ ಸಾಕಷ್ಟು ಕೊಡುಗೆ ನೀಡಿದ ಎಂದು ಮಾಜಿ ವೇಗಿ ಆಶಿಸ್ ನೆಹ್ರಾ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ನಾಯಕನ ಮನಸ್ಥಿತಿಗೆ ಪೂರಕವಾಗಿ ಕೋಚ್ ಆಗಿ ರವಿ ಶಾಸ್ತ್ರಿ ಕರ್ತವ್ಯ ನಿಭಾಯಿಸುತ್ತಿದ್ದಾರೆ ಎಂದು ಮಾಜಿ ವೇಗಿ ಆಶಿಶ್ ನೆಹ್ರಾ ಹೇಳಿದ್ದಾರೆ.

ಕೋಚ್ ಆಗಿ ರವಿ ಶಾಸ್ತ್ರಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ನೀಡಿದ ಬೆಂಬಲ ಮಾಜಿ ಕೋಚ್ ಅನಿಲ್ ಕುಂಬ್ಳೆ ಹುದ್ದೆ ತ್ಯಜಿಸಿದ ನಂತರ ಸಿಗದೇ ಇದ್ದರೆ ಅದು ತುಂಬಾ ಕಠಿಣವಾಗಿರುತ್ತಿತ್ತು. ಆದರೆ ರವಿ ಶಾಸ್ತ್ರಿ ಎಲ್ಲವನ್ನೂ ನಿಭಾಯಿಸಿದರು ಎಂದು ಆಶಿಶ್ ನೆಹ್ರಾ ಹೇಳಿದ್ದಾರೆ.

ವಿಂಡೀಸ್ ವಿರುದ್ಧದ ಟಿ20 ಸರಣಿ ಮುಂದೂಡಿರುವ ನಿರ್ಧಾರ ಪ್ರಕಟಿಸಿದ ಕ್ರಿಕೆಟ್ ಆಸ್ಟ್ರೇಲಿಯಾ

ಉತ್ತಮ ಹೊಂದಾಣಿಕೆ

ಉತ್ತಮ ಹೊಂದಾಣಿಕೆ

ವಿರಾಟ್ ಕೊಹ್ಲಿ ಮತ್ತು ರವಿ ಶಾಸ್ತ್ರಿ ನಡುವಿನ ಹೊಂದಾಣಿಕೆ ಅತ್ಯುತ್ತಮವಾಗಿದೆ. ಇಬ್ಬರೂ ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ. ಆದರೆ ಈ ಜೋತೆಯಾಟವನ್ನು ಯಾವಾಗಲೂ ಕೇವಲ ಫಲಿತಾಂಶದ ಆಧಾರದಲ್ಲಿ ಮಾತ್ರವೇ ಪರಿಗಣಿಸಬಾರದು. ಕ್ರಿಕೆಟ್‌ನಲ್ಲಿ ಸಾಗುತ್ತಿರುವ ಹಾದಿಯನ್ನೂ ಪರಿಗಣಿಸಬೇಕು ಎಂದು ಆಶಿಶ್ ನೆಹ್ರಾ ಪ್ರತಿಕ್ರಿಯಿಸಿದ್ದಾರೆ.

ಕುಂಬ್ಳೆ ನಿರ್ಗಮನಕ್ಕೆ ಪ್ರತಿಕ್ರಿಯೆ

ಕುಂಬ್ಳೆ ನಿರ್ಗಮನಕ್ಕೆ ಪ್ರತಿಕ್ರಿಯೆ

ಇದೇ ಸಂದರ್ಭದಲ್ಲಿ ಆಶಿಸ್ ನೆಹ್ರಾ ಮಾಜಿ ಕೋಚ್ ಅನಿಲ್ ಕುಂಬ್ಳೆ ಹುದ್ದೆ ತೊರೆದ ಬಗ್ಗೆಯೂ ಪ್ರತಿಕ್ರಿಯಿಸಿದರು. ನಾಯಕ ವಿರಾಟ್ ಕೊಹ್ಲಿಯ ಜೊತೆಗೆ ಅಸಮರ್ಥನೀಯ ಭಿನ್ನಾಭಿಪ್ರಾಯವನ್ನು ಹೊಂದಿದ ಬಳಿಕ ಕುಂಬ್ಳೆ ಹುದ್ದೆ ತ್ಯಜಿಸಿದ ರೀತಿ ಇನ್ನಷ್ಟು ಉತ್ತಮವಾಗಿರಬಹುದಿತ್ತು ಎಂದು ಹೇಳಿದ್ದಾರೆ. ಇದೇ ಮಾತನ್ನು ಇತ್ತೀಚೆಗೆ ಸ್ವತಃ ಅನಿಲ್ ಕುಂಬ್ಳೆ ಕೂಡ ಹೇಳಿದ್ದರು.

ಶ್ರೇಷ್ಠ ಪ್ರೇರಕ ಶಾಸ್ತ್ರಿ

ಶ್ರೇಷ್ಠ ಪ್ರೇರಕ ಶಾಸ್ತ್ರಿ

ಇನ್ನು ಇದೇ ಸಂದರ್ಭದಲ್ಲಿ ನೆಹ್ರಾ ಕೋಚ್ ರವಿ ಶಾಸ್ತ್ರಿ ಶ್ರೇಷ್ಠ ಪ್ರೇರಕ ಎಂದಿದ್ದಾರೆ. ರಾಷ್ಟ್ರೀಯ ತಂಡದ ಕೋಚ್ ಆಗಿ ಅದು ಅವರ ದೊಡ್ಡ ಅಸ್ತ್ರ. ನಾಯಕ ವಿರಾಟ್ ಕೊಹ್ಲಿಗೆ ಅವರು ಅಗತ್ಯ ಅವಕಾಶವನ್ನು ನೀಡುತ್ತಾರೆ. ವಿರಾಟ್ ಕೊಹ್ಲಿಗೂ ರವಿ ಶಾಸ್ತ್ರಿ ವ್ಯಕ್ತಿತ್ವದ ಬಗ್ಗೆ ಸಂಪೂರ್ಣ ಅರಿವಿದ್ದು ಅವರಿಂದ ತಂಡಕ್ಕೆ ಏನೆಲ್ಲಾ ಪಡೆದುಕೊಳ್ಳಬಹುದೆಂಬ ಅರಿವಿದೆ ಎಂದು ನೆಹ್ರಾ ಹೇಳಿದ್ದಾರೆ.

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Tuesday, August 4, 2020, 11:11 [IST]
Other articles published on Aug 4, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X