ಟಿ ಟ್ವೆಂಟಿ ವಿಶ್ವಕಪ್ ನಂತರ ಟೀಮ್ ಇಂಡಿಯಾದಲ್ಲಿ ಈ ಮೂರು ಪ್ರಮುಖ ಬದಲಾವಣೆಗಳು ಖಚಿತ

ಬಹುನಿರೀಕ್ಷಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಮುಂಬರಲಿರುವ ಅಕ್ಟೋಬರ್ 17ರಿಂದ ನವೆಂಬರ್ 14ರವರೆಗೆ ನಡೆಯಲಿದ್ದು ಕ್ರಿಕೆಟ್ ಜಗತ್ತಿನಲ್ಲಿ ಈಗಾಗಲೇ ಈ ಟೂರ್ನಿಯ ಕುರಿತು ಸಾಕಷ್ಟು ದೊಡ್ಡ ಮಟ್ಟದಲ್ಲಿ ನಿರೀಕ್ಷೆ ಹಾಗೂ ಕುತೂಹಲಗಳು ಹುಟ್ಟಿಕೊಂಡಿದ್ದು ಚರ್ಚೆಗೆ ಕಾರಣವಾಗಿದೆ.

ಕೊಹ್ಲಿಯನ್ನು ಆ ಜನ ಬೇಕಂತಲೇ ಟಾರ್ಗೆಟ್ ಮಾಡುತ್ತಿದ್ದಾರೆ; ಕಿಡಿಕಾರಿದ ಮಾಜಿ ಕ್ರಿಕೆಟಿಗಕೊಹ್ಲಿಯನ್ನು ಆ ಜನ ಬೇಕಂತಲೇ ಟಾರ್ಗೆಟ್ ಮಾಡುತ್ತಿದ್ದಾರೆ; ಕಿಡಿಕಾರಿದ ಮಾಜಿ ಕ್ರಿಕೆಟಿಗ

ಇತ್ತೀಚೆಗಷ್ಟೇ ವಿವಿಧ ದೇಶಗಳು ಅಕ್ಟೋಬರ್ ತಿಂಗಳಿನಲ್ಲಿ ಶುರುವಾಗಲಿರುವ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೆ ತಮ್ಮ ತಮ್ಮ ತಂಡಗಳನ್ನು ಘೋಷಣೆ ಮಾಡುವುದರ ಮೂಲಕ ಸಾಕಷ್ಟು ಚರ್ಚೆಗಳಿಗೆ ಕಾರಣವಾಗಿದ್ದವು. ಅದರಲ್ಲಿಯೂ ಭಾರತ ತಂಡ ಪ್ರಕಟವಾದ ನಂತರ ಚರ್ಚೆಗಳು ತುಸು ಹೆಚ್ಚಾಗಿಯೇ ನಡೆದವು ಎಂದು ಹೇಳಬಹುದು. ಹಾಗೂ ಈ ಬಹುನಿರೀಕ್ಷಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಮುಗಿದ ನಂತರ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಏಕದಿನ ಮತ್ತು ಟಿ ಟ್ವೆಂಟಿ ತಂಡಗಳ ನಾಯಕತ್ವದಿಂದ ಕೆಳಗಿಳಿಯಲಿದ್ದು ರೋಹಿತ್ ಶರ್ಮಾ ಸೀಮಿತ ಓವರ್‌ಗಳ ನಾಯಕನಾಗಲಿದ್ದಾರೆ ಎಂಬ ಸುದ್ದಿ ಇತ್ತೀಚೆಗಷ್ಟೇ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಈ ರೀತಿಯ ಸುದ್ದಿಯೊಂದು ಹರಿದಾಡಿದ ಕೂಡಲೇ ಎಚ್ಚೆತ್ತ ಬಿಸಿಸಿಐ ಟಿ ಟ್ವೆಂಟಿ ಸರಣಿ ಮುಗಿದ ನಂತರ ನಾಯಕತ್ವವನ್ನು ಬದಲಾಯಿಸುವ ಯಾವುದೇ ಪ್ರಸ್ತಾಪವನ್ನು ಬಿಸಿಸಿಐ ನಡೆಸಿಲ್ಲ ಇದೆಲ್ಲ ಸುಳ್ಳು ಸುದ್ದಿಯಷ್ಟೇ ಎಂದು ನಾಯಕತ್ವದ ಬದಲಾವಣೆಯ ಸುದ್ದಿಯನ್ನು ಬಿಸಿಸಿಐ ತಳ್ಳಿಹಾಕಿತ್ತು.

ಕೊಹ್ಲಿಯನ್ನು ಆ ಜನ ಬೇಕಂತಲೇ ಟಾರ್ಗೆಟ್ ಮಾಡುತ್ತಿದ್ದಾರೆ; ಕಿಡಿಕಾರಿದ ಮಾಜಿ ಕ್ರಿಕೆಟಿಗಕೊಹ್ಲಿಯನ್ನು ಆ ಜನ ಬೇಕಂತಲೇ ಟಾರ್ಗೆಟ್ ಮಾಡುತ್ತಿದ್ದಾರೆ; ಕಿಡಿಕಾರಿದ ಮಾಜಿ ಕ್ರಿಕೆಟಿಗ

ಇದೇ ರೀತಿ ಹಲವಾರು ದಿನಗಳಿಂದ ಟೀಮ್ ಇಂಡಿಯಾ ಹೆಡ್ ಕೋಚ್ ರವಿಶಾಸ್ತ್ರಿ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ನಂತರ ಹೆಡ್ ಕೋಚ್ ಸ್ಥಾನದಿಂದ ಕೆಳಗಿಳಿಯಲಿದ್ದು ನೂತನ ತರಬೇತುದಾರರನ ನೇಮಕವಾಗಲಿದೆ ಎನ್ನುವ ಸುದ್ದಿಗಳು ಹರಿದಾಡುತ್ತಿದ್ದು ಇದೀಗ ಬಿಸಿಸಿಐ ಬಲ್ಲ ಮೂಲಗಳು ನೀಡಿರುವ ಮಾಹಿತಿಯ ಪ್ರಕಾರ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಮುಗಿದ ನಂತರ ಟೀಮ್ ಇಂಡಿಯಾದಲ್ಲಿ ಖಚಿತವಾಗಿ ಈ ಕೆಳಕಂಡ 3 ಪ್ರಮುಖ ಬದಲಾವಣೆಗಳಾಗಲಿವೆ ಎನ್ನಲಾಗುತ್ತಿದೆ.

ಟೀಮ್ ಇಂಡಿಯಾದ ಮೂವರು ಕೋಚ್‌ಗಳ ಬದಲಾವಣೆ ಸಾಧ್ಯತೆ

ಟೀಮ್ ಇಂಡಿಯಾದ ಮೂವರು ಕೋಚ್‌ಗಳ ಬದಲಾವಣೆ ಸಾಧ್ಯತೆ

ಇದೀಗ ಬಂದಿರುವ ಬಲ್ಲ ಮೂಲಗಳ ಮಾಹಿತಿಯ ಪ್ರಕಾರ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಮುಗಿದ ನಂತರ ಟೀಮ್ ಇಂಡಿಯಾದ ಮೂವರು ತರಬೇತುದಾರರ ಬದಲಾವಣೆಯಾಗುವುದು ಖಚಿತ ಎನ್ನಲಾಗುತ್ತಿದೆ. ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಮುಗಿದ ನಂತರ ಟೀಮ್ ಇಂಡಿಯಾದ ಹೆಡ್ ಕೋಚ್ ರವಿಶಾಸ್ತ್ರಿ, ಬೌಲಿಂಗ್ ಕೋಚ್ ಭರತ್ ಅರುಣ್ ಮತ್ತು ಫೀಲ್ಡಿಂಗ್ ಕೋಚ್ ಆರ್ ಶ್ರೀಧರ್ ಈ ಮೂವರೂ ಸಹ ತಮ್ಮ ಸ್ಥಾನಗಳಿಂದ ಕೆಳಗಿಳಿಯಲಿದ್ದು ನೂತನ ತರಬೇತುದಾರರನ್ನು ಬಿಸಿಸಿಐ ಆಯ್ಕೆ ಮಾಡಲಿದೆ. ಆದರೆ ಬ್ಯಾಟಿಂಗ್ ಕೋಚ್ ಆಗಿರುವ ವಿಕ್ರಂ ರಾಥೋರ್ ಮಾತ್ರ ಸೇವೆಯಲ್ಲಿ ಮುಂದುವರಿಯಲಿದ್ದಾರೆ ಎನ್ನಲಾಗುತ್ತಿದೆ.

ಕೋಚ್ ಆಗಿ ಮುಂದುವರಿಯಲು ಶಾಸ್ತ್ರಿ ಸಹ ಸಿದ್ಧರಿಲ್ಲ

ಕೋಚ್ ಆಗಿ ಮುಂದುವರಿಯಲು ಶಾಸ್ತ್ರಿ ಸಹ ಸಿದ್ಧರಿಲ್ಲ

ಇನ್ನು ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ನಂತರ ಟೀಮ್ ಇಂಡಿಯಾದ ಹೆಡ್ ಕೋಚ್ ಸ್ಥಾನದಿಂದ ರವಿಶಾಸ್ತಿ ಕೆಳಗಿಳಿಯಲಿದ್ದಾರೆ ಎನ್ನಲಾಗುತ್ತಿದ್ದು ಕೋಚ್ ಆಗಿ ಸೇವೆ ಸಲ್ಲಿಸಲು ಸ್ವತಃ ರವಿಶಾಸ್ತ್ರಿ ಅವರಿಗೂ ಇಷ್ಟವಿಲ್ಲ ಎಂಬ ಮಾಹಿತಿ ತಿಳಿದು ಬಂದಿದೆ. ಈ ಹಿಂದೆ 2017ರಿಂದ 2019ರ ಅವಧಿಯವರೆಗೆ ತರಬೇತುದಾರನಾಗಿ ಸೇವೆಸಲ್ಲಿಸಿದ್ದ ರವಿಶಾಸ್ತ್ರಿ 2019ರ ನಂತರವೂ ಸಹ ಕೋಚ್ ಆಗಿ ಮುಂದುವರಿಯಲು ಇಚ್ಛಿಸಿ ಇಲ್ಲಿಯವರೆಗೂ ಸೇವೆ ಸಲ್ಲಿಸಿದ್ದಾರೆ. ಆದರೆ ಈ ಬಾರಿ ಪುನಃ ಕೋಚ್ ಆಗಿ ಮುಂದುವರಿಯಲು ರವಿಶಾಸ್ತ್ರಿ ಸಿದ್ಧರಿಲ್ಲ ಎನ್ನಲಾಗುತ್ತಿದೆ.

IPL ನಲ್ಲಿ ಪಾಕ್ ಆಟಗಾರರಿಗೆ ಸಿಕ್ಕ ಸಕ್ಸಸ್ ವಿರಾಟ್ ಮತ್ತು ABD ಗೆ‌ ಇನ್ನೂ ಸಿಕ್ಕಿಲ್ಲ | Oneindia Kannada
ನೂತನ ಕೋಚ್ ಆಯ್ಕೆಗೆ ಅರ್ಜಿ ಆಹ್ವಾನಿಸಲಿದೆ ಬಿಸಿಸಿಐ

ನೂತನ ಕೋಚ್ ಆಯ್ಕೆಗೆ ಅರ್ಜಿ ಆಹ್ವಾನಿಸಲಿದೆ ಬಿಸಿಸಿಐ

ಇನ್ನು ಭಾರತದ ಮೂವರು ತರಬೇತುದಾರರು ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ನಂತರ ತಮ್ಮ ಸ್ಥಾನದಿಂದ ಕೆಳಗಿಳಿಯಲಿದ್ದು, ಆ ಸ್ಥಾನಗಳಿಗೆ ನೂತನ ತರಬೇತುದಾರರನ್ನು ಆಯ್ಕೆ ಮಾಡಲು ಬಿಸಿಸಿಐ ಅರ್ಜಿಗಳನ್ನು ಆಹ್ವಾನಿಸಲಿದೆ ಎನ್ನಲಾಗುತ್ತಿದೆ. ಅರ್ಜಿಗಳನ್ನು ಸಲ್ಲಿಸಿದ ಅಭ್ಯರ್ಥಿಗಳ ವಿಶೇಷ ಸಂದರ್ಶನವನ್ನು ಮಾಡಿದ ನಂತರ ಅರ್ಹ ಅಭ್ಯರ್ಥಿಗಳನ್ನು ತರಬೇತುದಾರರಾಗಿ ನೇಮಿಸಲಾಗುವುದು ಎಂಬ ಸುದ್ದಿ ಇದೆ.

ಐಸಿಸಿ ಟಿ20 ವಿಶ್ವಕಪ್ 2021 ಊಹಿಸು
Match 22 - October 28 2021, 07:30 PM
ಆಸ್ಟ್ರೇಲಿಯಾ
ಶ್ರೀಲಂಕಾ
Predict Now

For Quick Alerts
ALLOW NOTIFICATIONS
For Daily Alerts
Story first published: Wednesday, September 15, 2021, 13:15 [IST]
Other articles published on Sep 15, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X