ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೋಚ್‌ ಸ್ಥಾನದಿಂದ ನಿರ್ಗಮಿಸಿದ ರವಿಶಾಸ್ತ್ರಿ: ಪ್ರಮುಖ ಸಾಧನೆಗಳು ಇಲ್ಲಿದೆ

Ravi Shastri Major Achievements As Team India Head Coach: Details Here

ಒಂದು ಕಡೆ ಟಿ20 ನಾಯಕತ್ವ ಸ್ಥಾನದಿಂದ ವಿರಾಟ್‌ ಕೊಹ್ಲಿ ಕೆಳಗಿಳಿದರೆ, ಮತ್ತೊಂದು ಕಡೆ ಕೋಚ್ ರವಿಶಾಸ್ತ್ರಿ ಟೀಮ್ ಇಂಡಿಯಾದ ಕೋಚ್ ಆಗಿ ತಮ್ಮ ಅವಧಿಯನ್ನು ಮುಕ್ತಾಯಗೊಳಿಸಿದರು. ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಸೂಪರ್ 12 ಹಂತದಲ್ಲೇ ಭಾರತದ ಅಭಿಯಾನ ಅಂತ್ಯಗೊಂಡ ಬಳಿಕ ಮುಖ್ಯ ಕೋಚ್ ರವಿಶಾಸ್ತ್ರಿ ವಿದಾಯದ ಭಾಷಣ ಮಾಡಿದರು.

2017ರಲ್ಲಿ ಟೀಮ್ ಇಂಡಿಯಾ ಮುಖ್ಯ ಕೋಚ್ ಆಗಿ ಆಯ್ಕೆಗೊಂಡ ರವಿಶಾಸ್ತ್ರಿ ಭಾರತವನ್ನು ಅಭೂತಪೂರ್ವ ಎತ್ತರದ ಸ್ಥಾನಕ್ಕೆ ಕೊಂಡೊಯ್ದರು. ಅವರ ಮಾರ್ಗದರ್ಶನದಲ್ಲಿ ಟೀಮ್ ಇಂಡಿಯಾ ಮಾಡಿರುವ ಸಾಧನೆಗಳು ಒಂದೆರಡಲ್ಲ. ಹೀಗಾಗಿ ಶಾಸ್ತ್ರಿ ಸಾಧನೆಯನ್ನು ಗುರುತಿಸಿ ಅವರಿಗೆ ಬೀಳ್ಕೊಡಲಾಗಿದೆ.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಹಂಚಿಕೊಂಡ ವೀಡಿಯೊದಲ್ಲಿ, ವಿದಾಯದ ಭಾಷಣ ಮಾಡಿರುವ ರವಿಶಾಸ್ತ್ರಿ ಪ್ರಸ್ತುತ ಭಾರತದ ತಂಡವು ಅತ್ಯುತ್ತಮ ತಂಡಗಳಲ್ಲಿ ಒಂದಾಗಿದೆ ಎಂದು ಶ್ಲಾಘಿಸಿದ್ದಾರೆ. ಜೊತೆಗೆ ತಂಡವು ಅವರ ನಿರೀಕ್ಷೆಗಳನ್ನು ಮೀರಿ ಪ್ರದರ್ಶನ ತೋರಿದೆ ಎಂದು ಹೇಳಿದರು.

"ಹುಡುಗರೇ, ನೀವು ತಂಡವಾಗಿ ಆಡಿದ ರೀತಿಯು ನನ್ನ ನಿರೀಕ್ಷೆಗಳನ್ನು ಮೀರಿದೆ. ಕಳೆದ ಕೆಲವು ವರ್ಷಗಳಿಂದ, ನೀವು ಜಗತ್ತಿನಾದ್ಯಂತ, ಎಲ್ಲಾ ಫಾರ್ಮೆಟ್‌ಗಳಿಗೆ ಹೋಗಿ, ಮತ್ತು ಎಲ್ಲರನ್ನು ಸೋಲಿಸಿ ಆಟ ಆಡಿದ ಶ್ರೇಷ್ಠ ತಂಡಗಳಲ್ಲಿ ನೀವು ಒಬ್ಬರು'' ಎಂದು 59 ವರ್ಷ ವಯಸ್ಸಿನ ರವಿಶಾಸ್ತ್ರಿ ಹೇಳಿದರು.

"ಇದು ಕೇವಲ ಅತ್ಯುತ್ತಮ ಭಾರತೀಯ ಕ್ರಿಕೆಟ್ ತಂಡವಲ್ಲ, ಇದು ಕಳೆದ 5-6 ವರ್ಷಗಳಿಂದ ಆಟವನ್ನು ಆಡಿದ ವಿಶ್ವದ ಶ್ರೇಷ್ಠ ತಂಡಗಳಲ್ಲಿ ಒಂದಾಗಿದೆ. ಏಕೆಂದರೆ ಫಲಿತಾಂಶಗಳನ್ನು ನೋಡಬೇಕಾಗಿದೆ. ನಾವು ಈ ಅವಧಿಯಲ್ಲಿ 1-2 ಐಸಿಸಿ ಟ್ರೋಫಿಗಳನ್ನು ಗೆಲ್ಲಬಹುದಿತ್ತು ಆದರೆ ಸಾಧ್ಯವಾಗಿಲ್ಲ. ಆದರೆ ನಿಮಗೆ ಇನ್ನೊಂದು ಅವಕಾಶ ಸಿಗುತ್ತದೆ. ಮುಂದಿನ ಅವಕಾಶ ಬಂದಾಗ ನೀವು ಬುದ್ಧಿವಂತರಾಗಿ ಮತ್ತು ಹೆಚ್ಚು ಅನುಭವಿಗಳಾಗಿರುತ್ತೀರಿ" ಎಂದು ರವಿಶಾಸ್ತ್ರಿ ಹೇಳಿದರು.

42 ತಿಂಗಳುಗಳ ಕಾಲ ನಂಬರ್ 1 ಟೆಸ್ಟ್‌ ತಂಡ

42 ತಿಂಗಳುಗಳ ಕಾಲ ನಂಬರ್ 1 ಟೆಸ್ಟ್‌ ತಂಡ

ಶಾಸ್ತ್ರಿ ಅವರು 2017 ರಲ್ಲಿ ಪೂರ್ಣ ಸಮಯದ ತರಬೇತುದಾರರಾಗಿ ಅಧಿಕಾರ ವಹಿಸಿಕೊಂಡ ನಂತರ ಭಾರತವನ್ನು ಅಭೂತಪೂರ್ವ ಎತ್ತರಕ್ಕೆ ಕೊಂಡೊಯ್ದರು. ಆಸ್ಟ್ರೇಲಿಯಾವನ್ನು ಅವರ ಅಂಗಳದಲ್ಲಿ ಎರಡು ಬಾರಿ ಸೋಲಿಸುವುದರಿಂದ ಹಿಡಿದು 42 ತಿಂಗಳುಗಳ ಕಾಲ ಟೆಸ್ಟ್ ರ್ಯಾಂಕಿಂಗ್‌ನಲ್ಲಿ ಪ್ರಾಬಲ್ಯ ಸಾಧಿಸುವವರೆಗೆ ತಂಡವು ಉತ್ತಮ ಸಾಧನೆಗಳನ್ನು ಮಾಡಿದೆ.

ರವಿಶಾಸ್ತ್ರಿ ಮಾರ್ಗದರ್ಶನದಲ್ಲಿ ಭಾರತದ ಸಾಧನೆಗಳು

ರವಿಶಾಸ್ತ್ರಿ ಮಾರ್ಗದರ್ಶನದಲ್ಲಿ ಭಾರತದ ಸಾಧನೆಗಳು

ರವಿಶಾಸ್ತ್ರಿ ನಾಯಕತ್ವದಲ್ಲಿ ಭಾರತ 183 ಪಂದ್ಯಗಳಲ್ಲಿ 118 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಭಾರತದ ಮುಖ್ಯ ಕೋಚ್ ಆಗಿ ಶಾಸ್ತ್ರಿ ಅವರ ಕ್ಯಾಬಿನೆಟ್‌ನಲ್ಲಿ ಯಾವುದೇ ಐಸಿಸಿ ಟ್ರೋಫಿ ಇಲ್ಲದಿದ್ದರೂ, ಶಾಸ್ತ್ರಿ ಅಡಿಯಲ್ಲಿ ಟೀಮ್ ಇಂಡಿಯಾ ಜಗತ್ತಿನ ಯಾವುದೇ ಭಾಗದಲ್ಲಿ ಸ್ಥಿರವಾದ ಕ್ರಿಕೆಟ್ ಆಡುವ ತಂಡವಾಗಿಸುವಲ್ಲಿ ಯಶಸ್ವಿಯಾದರು.

ಕೋಚ್ ಆಗಿ ರವಿಶಾಸ್ತ್ರಿ ಪ್ರಮುಖ ಸಾಧನೆಗಳು

ಕೋಚ್ ಆಗಿ ರವಿಶಾಸ್ತ್ರಿ ಪ್ರಮುಖ ಸಾಧನೆಗಳು

* ಶ್ರೀಲಂಕಾವನ್ನು ಮೂರು ಫಾರ್ಮೆಟ್‌ನಲ್ಲಿ 9-0 ಅಂತರದಲ್ಲಿ ಸೋಲಿಸಿರುವುದು

* 2018ರ ಏಷ್ಯಾ ಕಪ್

* ಆಸ್ಟ್ರೇಲಿಯಾದಲ್ಲಿ 2019 ಮತ್ತು 2020ರ ಬಾರ್ಡರ್ ಗವಾಸ್ಕರ್ ಟ್ರೋಫಿ ಗೆಲುವು

* ಇಂಗ್ಲೆಂಡ್ ವಿರುದ್ಧ ಐದು ಟೆಸ್ಟ್‌ ಪಂದ್ಯಗಳ ಸರಣಿಯಲ್ಲಿ 2-1ರ ಮುನ್ನಡೆ

* ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್‌ ಸರಣಿ ಗೆಲುವು

* ದಕ್ಷಿಣ ಆಫ್ರಿಕಾದಲ್ಲಿ ಮೊದಲ ಬಾರಿಗೆ ಏಕದಿನ ಸರಣಿ ಗೆಲುವು

* ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕ, ಐರ್ಲೆಂಡ್, ಇಂಗ್ಲೆಂಡ್, ನ್ಯೂಜಿಲೆಂಡ್ , ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿ ಗೆಲುವು

ಕೋಚ್ ಆಗಿ ರವಿಶಾಸ್ತ್ರಿ ಕೊನೆಯ ಮಾತುಗಳು

ಕೋಚ್ ಆಗಿ ರವಿಶಾಸ್ತ್ರಿ ಕೊನೆಯ ಮಾತುಗಳು

"ನನಗೆ ಜೀವನದಲ್ಲಿ ಅತ್ಯಂತ ಮುಖ್ಯವಾದ ವಿಷಯವೆಂದರೆ ನೀವು ಏನು ಸಾಧಿಸುತ್ತೀರಿ ಎಂಬುದರ ಬಗ್ಗೆ ಅಲ್ಲ, ನೀವು ಏನನ್ನು ಜಯಿಸುತ್ತೀರಿ ಎಂಬುದು. ಹಾಗಾಗಿ ಕಳೆದ ಎರಡು ವರ್ಷಗಳಲ್ಲಿ ನೀವು ಏನು ಅನುಭವಿಸಿದ್ದೀರಿ ಎಂಬುದು (ಕೋವಿಡ್ ಅಡೆತಡೆಗಳು), ಹಾಗೂ ಕಷ್ಟಗಳನ್ನ ಎದುರಿಸಿ ನೀವು ಎಲ್ಲದರ ಮೂಲಕ ಹೋಗುತ್ತೀರಿ ಮತ್ತು ಮನಸ್ಸಿನಲ್ಲಿ ಮತ್ತಷ್ಟು ಗಟ್ಟಿಯಾಗುತ್ತೀರಿ. ಇದರ ಜೊತೆಗೆ ಉನ್ನತ ಮಟ್ಟದಲ್ಲಿ ಆಟವನ್ನು ಆಡಲು ಮತ್ತು ಸ್ಪರ್ಧಿಸಲು ಸಿದ್ಧರಾಗಿರಿ. ಇದು ಭಾರತೀಯ ಕ್ರಿಕೆಟ್ ತಂಡದ ಬಗ್ಗೆ ನಾನು ಇಷ್ಟಪಡುವ ಅತ್ಯುತ್ತಮ ವಿಷಯ" ಎಂದು ರವಿಶಾಸ್ತ್ರಿ ತಮ್ಮ ಮಾತು ಮುಕ್ತಾಯಗೊಳಿಸಿದರು.

ವಿರಾಟ್ & ರವಿಶಾಸ್ತ್ರಿ ಜೋಡಿ ಕ್ರಿಕೆಟ್ ಇತಿಹಾಸದಲ್ಲಿ ಸಾಧಿಸಿದ್ದೇನು? | Oneindia Kannada
ಕೊಹ್ಲಿ-ಶಾಸ್ತ್ರಿ ನಡುವೆ ಉತ್ತಮ ಸಂಬಂಧವಿತ್ತು

ಕೊಹ್ಲಿ-ಶಾಸ್ತ್ರಿ ನಡುವೆ ಉತ್ತಮ ಸಂಬಂಧವಿತ್ತು

ವಿರಾಟ್ ಕೊಹ್ಲಿ ಹಾಗೂ ಕೋಚ್ ರವಿಶಾಸ್ತ್ರಿ ನಡುವೆ ಉತ್ತಮ ಬಾಂಡಿಂಗ್ ಇರುವುದನ್ನು ಕ್ರಿಕೆಟ್ ಜಗತ್ತು ಕಂಡಿದೆ. ಕಳೆದ ಕೆಲವು ವರ್ಷಗಳಿಂದ ಶಾಸ್ತ್ರಿ ಮತ್ತು ಕೊಹ್ಲಿ ನೇತೃತ್ವದಲ್ಲಿ ಟೀಮ್ ಇಂಡಿಯಾದಲ್ಲಿ ಹೊಸ ಸಂಸ್ಕೃತಿ ನಿರ್ಮಾಣಗೊಂಡಿದೆ. ಜೊತೆಗೆ ಅವರು ತಂಡದಲ್ಲಿ ಹೋರಾಟದ ಮನೋಭಾವವನ್ನು ತುಂಬಿದ್ದಾರೆ.

Story first published: Tuesday, November 9, 2021, 18:18 [IST]
Other articles published on Nov 9, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X