ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೀಮ್ ಇಂಡಿಯಾ ಮುಖ್ಯ ಕೋಚ್ ರವಿ ಶಾಸ್ತ್ರಿಯ ಒಪ್ಪಂದ ಶೀಘ್ರ ಕೊನೆ!

Ravi Shastris tenure as Indias Head Coach will end after T20 World Cup in UAE this year

ನವದೆಹಲಿ: ಟೀಮ್ ಇಂಡಿಯಾದ ಮುಖ್ಯ ಕೋಚ್ ರವಿ ಶಾಸ್ತ್ರಿ ಅವರ ಒಪ್ಪಂದ ಶೀಘ್ರ ಕೊನೆಗೊಳ್ಳಲಿದೆ. ಈ ವರ್ಷಾಂತ್ಯಕ್ಕೆ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ ಬಳಿಕ ಮುಖ್ಯ ಕೋಚ್ ಜವಾಬ್ದಾರಿಯಲ್ಲಿರುವ ರವಿ ಶಾಸ್ತ್ರಿಯ ಒಪ್ಪಂದ ಮುಗಿಯಲಿದೆ. ಅಂದರೆ ಅಕ್ಟೊಬರ್‌-ನವೆಂಬರ್‌ ಬಳಿಕ ಶಾಸ್ತ್ರಿಯ ಜವಾಬ್ದಾರಿ ಕೊನೆಗೊಳ್ಳಲಿದೆ.

ಐಪಿಎಲ್: ಮುಂದಿನ ಆವೃತ್ತಿಗೆ 2 ಹೊಸ ತಂಡಗಳು, ನೀಲ ನಕಾಶೆಯ ಸಂಪೂರ್ಣ ಮಾಹಿತಿಐಪಿಎಲ್: ಮುಂದಿನ ಆವೃತ್ತಿಗೆ 2 ಹೊಸ ತಂಡಗಳು, ನೀಲ ನಕಾಶೆಯ ಸಂಪೂರ್ಣ ಮಾಹಿತಿ

ಮುಖ್ಯಕೋಚ್ ಸ್ಥಾನವನ್ನು ರವಿ ಶಾಸ್ತ್ರಿ ಉಳಿಸಿಕೊಳ್ಳುತ್ತಾರಾ ಅಥವಾ ಶಾಸ್ತ್ರಿ ಜಾಗಕ್ಕೆ ಭಾರತದ ಮಾಜಿ ನಾಯಕ ರಾಹುಲ್ ದ್ರಾವಿಡ್ ಬರ್ತಾರಾ ಅನ್ನೋದು ಕುತೂಹಲ ಮೂಡಿಸಿದೆ. ಯಾಕೆಂದರೆ ಮುಖ್ಯ ಕೋಚ್ ಸ್ಥಾನಕ್ಕೆ ದ್ರಾವಿಡ್‌ ಕೂಡ ಅರ್ಜಿ ಸಲ್ಲಿಸುವ ಸಾಧ್ಯತೆಯಿದೆ.

ಶ್ರೀಲಂಕಾಕ್ಕೆ ಪ್ರವಾಸ ಹೋಗಿರುವ ಭಾರತೀಯ ತಂಡಕ್ಕೆ ರಾಹುಲ್ ದ್ರಾವಿಡ್ ಮುಖ್ಯ ಕೋಚ್ ಆಗಿ ಹೋಗಿದ್ದಾರೆ. ಇದೇ ಕಾರಣಕ್ಕೆ ಮುಂದೆ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಮುಖ್ಯ ಕೋಚ್ ಸ್ಥಾನಕ್ಕೆ ಅರ್ಜಿ ಕರೆದಾಗ ದ್ರಾವಿಡ್ ಕೂಡ ಅರ್ಜಿ ಸಲ್ಲಿಸುವ ನಿರೀಕ್ಷೆಯಿದೆ.

ಟಿ20 ವಿಶ್ವಕಪ್‌ನಲ್ಲಿ ಸ್ಥಾನ ಉಳಿಸಿಕೊಳ್ಳುವತ್ತ ಧವನ್ ಚಿತ್ತ ನೆಡಲಿದ್ದಾರೆ: ವಿವಿಎಸ್ ಲಕ್ಷ್ಮಣ್ಟಿ20 ವಿಶ್ವಕಪ್‌ನಲ್ಲಿ ಸ್ಥಾನ ಉಳಿಸಿಕೊಳ್ಳುವತ್ತ ಧವನ್ ಚಿತ್ತ ನೆಡಲಿದ್ದಾರೆ: ವಿವಿಎಸ್ ಲಕ್ಷ್ಮಣ್

ಸದ್ಯ ರವಿ ಶಾಸ್ತ್ರಿ ಮುಂದಾಳತ್ವದ ತಂಡ ಇಂಗ್ಲೆಂಡ್‌ನಲ್ಲಿದ್ದು, ಆತಿಥೇಯರ ವಿರುದ್ಧ ಭಾರತ ಐದು ಪಂದ್ಯಗಳ ಟೆಸ್ಟ್‌ ಸರಣಿ ಆಡಲಿದೆ. ಈ ಸರಣಿ ಆಗಸ್ಟ್ 4ರಿಂದ ಆರಂಭಗೊಳ್ಳಲಿದೆ. ದ್ರಾವಿಡ್ ಕೋಚ್ ಆಗಿರುವ, ಶಿಖರ್ ಧವನ್ ನಾಯಕರಾಗಿರುವ ಮತ್ತೊಂದು ತಂಡ ಶ್ರೀಲಂಕಾದಲ್ಲಿದ್ದು, ಜುಲೈ 13ರಿಂದ ಪ್ರವಾಸ ಸರಣಿ ಆಡಲಿದೆ. ಈ ಪ್ರವಾಸ ಸರಣಿಯು 3 ಏಕದಿನ ಮತ್ತು 3 ಟಿ20ಐ ಪಂದ್ಯಗಳನ್ನು ಒಳಗೊಂಡಿರಲಿದೆ.

Story first published: Monday, July 5, 2021, 15:44 [IST]
Other articles published on Jul 5, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X