ಟಿ20 ಸರಣಿಗಳು ಬೇಡ್ವೇ ಬೇಡ, ವಿಶ್ವಕಪ್‌ಗೆ ಮಾತ್ರ ಟಿ20I ಸೀಮಿತವಾಗಲಿ ಎಂದ ರವಿ ಶಾಸ್ತ್ರಿ

ವಿಶ್ವ ಕ್ರಿಕೆಟ್‌ನಲ್ಲಿ ಟಿ20 ಮಾದರಿ ಅತ್ಯುನ್ನತ ಘಟ್ಟದಲ್ಲಿರುವ ಈ ಸಂದರ್ಭದಲ್ಲಿ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಹಾಗೂ ಮಾಜಿ ಕೋಚ್ ರವಿ ಶಾಸ್ತ್ರಿ ಅಚ್ಚರಿಯ ಅಭಿಪ್ರಾಯವೊಂದನ್ನು ವ್ಯಕ್ತಪಡಿಸಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಟಿ20 ಮಾದರಿಯ ಕ್ರಿಕೆಟ್‌ಅನ್ನು ಕೇವಲ ವಿಶ್ವಕಪ್‌ಗೆ ಮಾತ್ರವೇ ಸೀಮಿತಗೊಳಿಸಬೇಕು ಎಂದಿದ್ದಾರೆ ರವಿ ಶಾಸ್ತ್ರಿ. ಇದಕ್ಕೆ ತಮ್ಮದೇ ಆದ ಕಾರಣವನ್ನು ಕೂಡ ರವಿ ಶಾಸ್ತ್ರಿ ಮುಂದಿಟ್ಟಿದ್ದಾರೆ.

ಟಿ20 ಕ್ರಿಕೆಟ್ ಮಾದರಿಯಲ್ಲಿ ಸಾಕಷ್ಟು ದ್ವಿಪಕ್ಷೀಯ ಸರಣಿಗಳು ಈಗ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ರವಿ ಶಾಸ್ತ್ರೀ ಈ ಅಭಿಪ್ರಾಯವನ್ನು ಮುಂದಿಟ್ಟಿದ್ದಾರೆ. "ನಾನು ಭಾರತ ತಂಡದ ಕೋಚ್ ಆಗಿದ್ದಾರೆ ಈ ವಿಚಾರವನ್ನು ಹಂಚಿಕೊಂಡಿದ್ದೆ. ನಾನು ಇದನ್ನೆಲ್ಲಾ ನನ್ನ ಕಣ್ಣ ಮುಂದೆಯೇ ನೊಡುತ್ತಿದ್ದೇನೆ. ಟಿ20 ಕ್ರಿಕೆಟ್ ಫುಟ್ಬಾಲ್‌ನ ಮಾದರಿಯಲ್ಲಿ ನಡೆಯಬೇಕಿದೆ. ಅಂದರೆ ವಿಶ್ವಕಪ್‌ನಲ್ಲಿ ಮಾತ್ರವೇ ಟಿ20 ಮಾದರಿಯನ್ನು ಆಡಿಸಬೇಕು. ದ್ವಿಒಕ್ಷೀಯ ಸರಣಿಯಗಳನ್ನು ಯಾರು ಕೂಡ ನೆನಪಿಟ್ಟುಕೊಳ್ಳುವುದಿಲ್ಲ" ಎಂದಿದ್ದಾರೆ ರವಿ ಶಾಸ್ತ್ರಿ.

ಉಮ್ರಾನ್ ಮಲ್ಲಿಕ್‌ನನ್ನು ವಕಾರ್ ಯೂನಿಸ್‌ಗೆ ಹೋಲಿಕೆ ಮಾಡಿದ ಬ್ರೆಟ್‌ ಲೀಉಮ್ರಾನ್ ಮಲ್ಲಿಕ್‌ನನ್ನು ವಕಾರ್ ಯೂನಿಸ್‌ಗೆ ಹೋಲಿಕೆ ಮಾಡಿದ ಬ್ರೆಟ್‌ ಲೀ

ಮುಂಬರುವ ವಿಶ್ವಕಪ್ ಅಕ್ಟೋಬರ್ 16ರಿಂದ ನಡೆಯಲಿದ್ದು ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಈ ಟೂರ್ನಮೆಂಟ್‌ನ ಆತಿರ್ಥಯವನ್ನು ವಹಿಸಿಕೊಳ್ಳಲಿದೆ. ಈ ಟೂರ್ನಿಯಲ್ಲಿ 16 ತಂಡಗಳೂ ಭಾಗಿಯಾಗಲಿದ್ದು ಒಟ್ಟು 45 ಪಂದ್ಯಗಳು ಆಸ್ಟ್ರೇಲಿಯಾದ ವಿಭಿನ್ನ ತಾಣಗಳನ್ನು ನಡೆಯಲಿದೆ.

"ಕಳೆದ 6-7 ವರ್ಷಗಳಲ್ಲಿ ಭಾರತೀಯ ತಂಡದ ಕೋಚ್ ಆಗಿ ಯಾವ ಟಿ20 ಪಂದ್ಯ ಕೂಡ ನನಗೆ ನೆನಪಿನಲ್ಲಿಲ್ಲ. ವಿಶ್ವಕಪ್‌ ಪಂದ್ಯಗಳನ್ನು ಹೊರತುಪಡಿಸಿ. ಯಾವ ತಂಡ ವಿಶ್ವಕಪ್‌ಅನ್ನು ಗೆಲ್ಲುತ್ತದೆಯೇ ಆತ ತಂಡ ನೆನಪಿಟ್ಟುಕೊಳ್ಳುತ್ತದೆ. ದುರದೃಷ್ಟವಶಾತ್ ನಾವು ಗೆದ್ದಿಲ್ಲ, ಹಾಗಾಗಿ ನಮಗೆ ನೆನಪಿಲ್ಲ" ಎಂದಿದ್ದಾರೆ ರವಿ ಶಾಸ್ತ್ರಿ.

"ಎಲ್ಲಾ ದೇಶಗಳು ಕೂಡ ಫ್ರಾಂಚೈಸಿ ಕ್ರಿಕೆಟ್‌ಅನ್ನು ಆಡುತ್ತವೆ. ಎಲ್ಲಾ ದೇಶಗಳು ಕೂಡ ಫ್ರಾಂಚೈಸಿ ಕ್ರಿಕೆಟ್ ಆಡಲು ಅನುಮತಿಯನ್ನು ನೀಡುತ್ತವೆ. ಹೀಗಾಗಿ ಎರಡು ವರ್ಷಗಳಿಗೊಮ್ಮೆ ನೀವು ವಿಶ್ವಕಪ್‌ನಲ್ಲಿ ಆಡಿದರೆ ಸಾಕಾಗುತ್ತದೆ" ಎಂಬ ಅಭಿಪ್ರಾಯವನ್ನು ಮಾಜಿ ಕೋಚ್ ರವಿ ಶಾಸ್ತ್ರಿ ವ್ಯಕ್ತಪಡಿಸಿದ್ದಾರೆ.

ರವಿಶಾಸ್ತ್ರಿ ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಸುಮಾರು ನಾಲ್ಕು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಅವರ ಕೋಚಿಂಗ್‌ನಲ್ಲಿ ಭಾರತೀಯ ಕ್ರಿಕೆಟ್ ತಂಡ ಟೆಸ್ಟ್ ಕ್ರಿಕೆಟ್ ಮಾದರಿಯಲ್ಲಿ ನಂಬರ್ 1 ತಂಡವಾಗಿ ಹೊರಹೊಮ್ಮಿತ್ತು. ಅಲ್ಲದೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯಕ್ಕೆ ಅರ್ಹತೆ ಸಂಪಾದಿಸಿತ್ತು.

ರವಿ ಶಾಸ್ತ್ರಿ ಕೋಚ್ ಆಗಿದ್ದ ಸಂದರ್ಭದಲ್ಲಿ ಭಾರತ ಕ್ರಿಕೆಟ್ ತಂಡ 43 ಟೆಸ್ಟ್ ಪಂದ್ಯಗಳನ್ನು ಆಡಿದ್ದು ಅದರಲ್ಲಿ 25 ರಲ್ಲಿ ಗೆಲುವು ಸಾಧಿಸಿದ್ದರೆ 13 ರಲ್ಲಿ ಸೋಲು ಅನುಭವಿಸಿತ್ತು. ರವಿ ಶಾಸ್ತ್ರಿ ನೇತೃತ್ವದಲ್ಲಿ ಭಾರತ ಇಂಗ್ಲೆಂಡ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದೆ. 2021ರಲ್ಲಿ ಐದು ಪಂದ್ಯಗಳ ಸರಣಿಯಲ್ಲಿ ಟೀಂ ಇಂಡಿಯಾ 2-1 ಮುನ್ನಡೆ ಸಾಧಿಸಿದ್ದು ಈ ವರ್ಷ ಈ ಸರಣಿಯ ಅಂತಿಮ ಪಂದ್ಯ ನಡೆಯಲಿದೆ.

IPL 2022: ವೇಗದ ಶತಕ, ಅರ್ಧಶತಕ, ಹೆಚ್ಚು ಸಿಕ್ಸ್ ಬಾರಿಸಿದ್ದು ಇವರೇ; ಚೆನ್ನೈ, ಮುಂಬೈ ಆಟಗಾರರೇ ಇಲ್ಲ!IPL 2022: ವೇಗದ ಶತಕ, ಅರ್ಧಶತಕ, ಹೆಚ್ಚು ಸಿಕ್ಸ್ ಬಾರಿಸಿದ್ದು ಇವರೇ; ಚೆನ್ನೈ, ಮುಂಬೈ ಆಟಗಾರರೇ ಇಲ್ಲ!

IPL 2022ರಲ್ಲಿ ಕೋಟಿ ಹಣ ಬಾಚಿದ್ದವರ ಕಥೆ ಏನಾಯ್ತು | OneIndia Kannada

ರವಿ ಶಾಸ್ತ್ರಿ ಕೋಚ್ ಆಗಿದ್ದಾಗ ಭಾರತ ಸಾಧಿಸಿದ ಮತ್ತೊಂದು ದೊಡ್ಡ ಯಶಸ್ಸೆಂದರೆ ಆಸ್ಟ್ರೇಲಿಯಾದ ನೆಲದಲ್ಲಿ ಎರಡು ಬಾರಿ ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ಗೆದ್ದು ಬೀಗಿದೆ. 2019 ಹಾಗೂ 2021ರಲ್ಲಿ ಭಾರತ ಈ ಸರಣಿಯಲ್ಲಿ ಗೆಲುವು ಸಾಧಿಸಿ ಮಿಂಚಿದೆ. ರವಿ ಶಾಸ್ತ್ರಿ ಕೋಚ್ ಆಗಿದ್ದ ಸಂದರ್ಭದಲ್ಲಿ ಭಾರತ 76 ಏಕದಿನ ಪಂದ್ಯಗಳನ್ನು ಹಾಗೂ 65 ಟಿ20 ಪಂದ್ಯಗಳನ್ನು ಆಡಿದ್ದು ಈ ಪೈಕಿ 51 ಏಕದಿನ ಪಂದ್ಯದಲ್ಲಿ ಗೆಲುವು ಸಾಧಿಸಿದ್ದರೆ 43 ಟಿ20 ಪಂದ್ಯಗಳಲ್ಲಿ ಗೆಲುವು ಸಾಧಿಸಿ ಮಿಂಚಿದೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Wednesday, June 1, 2022, 21:16 [IST]
Other articles published on Jun 1, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X