ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೀಮ್ ಇಂಡಿಯಾ ಕೋಚ್ ರವಿ ಶಾಸ್ತ್ರಿ ಸಂಬಳ ಬರೋಬ್ಬರಿ ಏರಿಕೆ!

ಟೀಮ್ ಇಂಡಿಯಾ ಕೋಚ್ ರವಿ ಶಾಸ್ತ್ರಿ ಸಂಬಳ ಏರಿಕೆ | Ravi Shastri | Oneindia Kannada
Ravi Shastri Set to Get a Massive Salary Hike in New Contract: Report

ನವದೆಹಲಿ, ಸೆಪ್ಟೆಂಬರ್ 9: ಟೀಮ್ ಇಂಡಿಯಾಕ್ಕೆ ಮುಖ್ಯಕೋಚ್ ಆಗಿ ಮರು ಆಯ್ಕೆಯಾಗಿರುವ ರವಿ ಶಾಸ್ತ್ರಿ ಅವರ ಸಂಬಳ ಸುಮಾರು 20 ಶೇ.ದಷ್ಟು ಏರಿಕೆಯಾಗಲಿದೆ. ವಾರ್ಷಿಕವಾಗಿ ಶಾಸ್ತ್ರಿ ಇನ್ನು ಸುಮಾರು 9.5ರಿಂದ 10 ಕೋಟಿ ರೂ. ಸಂಬಳ ಪಡೆಯಲಿದ್ದಾರೆ ಎಂದು ಮುಂಬೈ ಮಿರರ್ ವರದಿ ಮಾಡಿದೆ.

ವಿರಾಟ್ ಕೊಹ್ಲಿ ಬಗ್ಗೆ ಮಾತನಾಡಿದ ದಕ್ಷಿಣ ಆಫ್ರಿಕಾ ವೇಗಿ ಕಾಗಿಸೋ ರಬಾಡವಿರಾಟ್ ಕೊಹ್ಲಿ ಬಗ್ಗೆ ಮಾತನಾಡಿದ ದಕ್ಷಿಣ ಆಫ್ರಿಕಾ ವೇಗಿ ಕಾಗಿಸೋ ರಬಾಡ

ಈ ಮೊದಲ ಶಾಸ್ತ್ರಿ 8 ಕೋ.ರೂ.ನಷ್ಟು ವಾರ್ಷಿಕ ವೇತನ ಪಡೆಯುತ್ತಿದ್ದರು. ಭಾರತ ಕ್ರಿಕೆಟ್ ತಂಡದ ಇತರ ಸಿಬ್ಬಂದಿ ವೇತನವೂ ಹೆಚ್ಚಳವಾಗಲಿದ್ದು, ಬೌಲಿಂಗ್ ಕೋಚ್ ಭರತ್ ಅರುಣ್ 3.5 ಕೋ.ರೂ., ಬ್ಯಾಟಿಂಗ್ ಕೋಚ್ ವಿಕ್ರಮ್ ರಾತೋರ್ 2.5-3 ಕೋ.ರೂ. ವಾರ್ಷಿಕ ಸಂಬಳ ಪಡೆಯಲಿದ್ದಾರೆ.

ಸ್ಮಿತ್‌ ಆಟ ನೋಡಿ ಹಳೆ ವಿವಾದ ಕೆದಕಿದ ಇಂಗ್ಲೆಂಡ್ ಕ್ರಿಕೆಟರ್ಸ್ಮಿತ್‌ ಆಟ ನೋಡಿ ಹಳೆ ವಿವಾದ ಕೆದಕಿದ ಇಂಗ್ಲೆಂಡ್ ಕ್ರಿಕೆಟರ್

ರವಿ ಶಾಸ್ತ್ರಿ ಅವಧಿಯಲ್ಲಿ ಭಾರತ ತಂಡ ಉತ್ತಮ ಸಾಧನೆಯನ್ನೇ ತೋರಿದೆ. ಹೀಗಾಗಿ ಶಾಸ್ತ್ರಿ ಮುಂದಿನ 2 ವರ್ಷಗಳಿಗೆ ತಂಡಕ್ಕೆ ಕೋಚ್ ಆಗಿ ಮರು ಆಯ್ಕೆ ಆಗಿದ್ದರು. ತಂಡದ ಪ್ರದರ್ಶನವನ್ನು ಉತ್ತಮ ಸ್ಥಿತಿಯಲ್ಲೇ ಮುಂದುವರೆಸುವ ಮತ್ತು ಯುವ ಆಟಗಾರರಿಗೆ ಹೆಚ್ಚು ಅವಕಾಶ ನೀಡುವ ಗುರಿಯನ್ನು ಶಾಸ್ತ್ರಿ ಹೊಂದಿರುವುದಾಗಿ ಹೇಳಿಕೊಂಡಿದ್ದಾರೆ.

ನಿಯಮಿತ ಓವರ್‌ಗಳ ವಿಂಡೀಸ್ ತಂಡಕ್ಕೆ ಕೀರನ್ ಪೊಲಾರ್ಡ್ ನಾಯಕ?!ನಿಯಮಿತ ಓವರ್‌ಗಳ ವಿಂಡೀಸ್ ತಂಡಕ್ಕೆ ಕೀರನ್ ಪೊಲಾರ್ಡ್ ನಾಯಕ?!

ಸಂದರ್ಶನವೊಂದರಲ್ಲಿ ಮಾತನಾಡಿದ ಶಾಸ್ತ್ರಿ, 'ಸ್ಥಿರತೆಯ ಮಟ್ಟವನ್ನು ಮುಂದುವರಿಸುವ ದೃಷ್ಟಿ ನಮ್ಮದು,' ಎಂದು ಹೇಳಿದರು. 57ರ ಹರೆಯದ ಶಾಸ್ತ್ರಿ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಷಿಪ್ ಮತ್ತು 2020ರ ಟಿ20 ವರ್ಲ್ಡ್‌ಕಪ್‌ನತ್ತ ಹೆಚ್ಚು ಗಮನ ಹರಿಸಿ ಮುಂದುವರೆಯಲಿದ್ದೇವೆ ಎಂದು ತಿಳಿಸಿದ್ದಾರೆ.

Story first published: Monday, September 9, 2019, 18:56 [IST]
Other articles published on Sep 9, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X